
ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಮತ್ತು ‘ಸ್ಪಿರಿಟ್’ ಚಿತ್ರತಂಡದ ನಡುವಿನ ಕಿತ್ತಾಟ ಮುಂದುವರಿದಿದೆ. ನಿರ್ದೇಶಕ ಸಂದೀಪ್ ರೆಡ್ಡಿ ವಂಗಾ ಅವರ ಸಹೋದರ ಪ್ರಣಯ್ ರೆಡ್ಡಿ ನೀಡಿದ ಹೇಳಿಕೆಗೆ ದೀಪಿಕಾ ಪರೋಕ್ಷವಾಗಿ ತಿರುಗೇಟು ನೀಡಿದ್ದಾರೆ. ವಂಗಾ ಸಹೋದರರ ವಿರುದ್ಧ ಹರಿಹಾಯ್ದ ಲೇಖನವನ್ನು ಲೈಕ್ ಮಾಡುವ ಮೂಲಕ ಪರೋಕ್ಷವಾಗಿತಮ್ಮ ಅಸಮಾಧಾನವನ್ನು ಹೊರಹಾಕಿದ್ದಾರೆ. ಇದು ಚಿತ್ರರಂಗದಲ್ಲಿ ದೊಡ್ಡ ಮಟ್ಟದ ಚರ್ಚೆಗೆ ಗ್ರಾಸವಾಗಿದೆ.
ಸ್ಪಿರಿಟ್ ಸಿನಿಮಾದಿಂದ ದೀಪಿಕಾ ಹೊರಬರಲು ಸಂಭಾವನೆ ಮತ್ತು ಸಮಯದ ಕೊರತೆ ಕಾರಣ ಎಂದು ಪ್ರಣಯ್ ರೆಡ್ಡಿ ಹೇಳಿದ್ದಾರೆ. ದೀಪಿಕಾ ಶೇಕಡಾ 10 ರಷ್ಟು ಲಾಭದ ಪಾಲು ಕೇಳಿದ್ದರು. ಈ ಬೇಡಿಕೆ ನಮಗೆ ಸೂಕ್ತವೆನಿಸಲಿಲ್ಲ. ಹಾಗಾಗಿ ಬೇರೆ ನಟಿಯ ಹುಡುಕಾಟ ಆರಂಭಿಸಿದೆವು ಎಂದು ತಿಳಿಸಿದ್ದಾರೆ.
Deepika likes a post calling out Sandeep reddy vanga
by
u/Holiday-Version-3226 in
BollyBlindsNGossip
ಸಿನಿಮಾದ ಕಥೆ ಮತ್ತು ಪಾತ್ರಗಳ ವಿವರವನ್ನು ದೀಪಿಕಾ ಲೀಕ್ ಮಾಡಿದ್ದಾರೆ ಎಂದು ಪ್ರಣಯ್ ಗಂಭೀರ ಆರೋಪ ಮಾಡಿದ್ದಾರೆ. ಆಂತರಿಕ ವಿಚಾರಗಳನ್ನು ಹೊರಗೆ ಬಹಿರಂಗಪಡಿಸಿದ್ದು ನಮಗೆ ಬೇಸರ ತಂದಿದೆ. ಈ ನಡವಳಿಕೆಯಿಂದ ನಮಗೆ ತುಂಬಾ ತೊಂದರೆಯಾಗಿದೆ ಎಂದು ಅವರು ಮಾಧ್ಯಮದ ಮುಂದೆ ಹೇಳಿಕೊಂಡಿದ್ದಾರೆ.
ಇದನ್ನೂ ಓದಿ: ‘ಸ್ಪಿರಿಟ್’ ಸಿನಿಮಾದಿಂದ ದೀಪಿಕಾ ಪಡುಕೋಣೆ ಹೊರ ನಡೆದಿದ್ದಕ್ಕೆ ಕೊನೆಗೂ ಅಸಲಿ ಕಾರಣ ಬಯಲು
ಸಾಮಾಜಿಕ ಜಾಲತಾಣದ ಪೋಸ್ಟ್ ಒಂದಕ್ಕೆ ದೀಪಿಕಾ ಲೈಕ್ ಒತ್ತಿದ್ದಾರೆ. ‘ಹೀರೋಗಳು ಲಾಭದ ಪಾಲು ಕೇಳಿದರೆ ಶಿಸ್ತು ಎನ್ನಲಾಗುತ್ತದೆ. ಅದೇ ಬೇಡಿಕೆಯನ್ನು ಮಹಿಳೆ ಇಟ್ಟರೆ ತೊಂದರೆ ಕೊಡುವವಳು ಎಂದು ಕರೆಯಲಾಗುತ್ತದೆ. ನಟಿಯೊಬ್ಬಳು ಬೇಡ ಎಂದಿದ್ದಕ್ಕೆ ಪುರುಷ ಅಹಂಗೆ ಪೆಟ್ಟು ಬಿದ್ದಿದೆ’ ಎಂದು ಆ ಪೋಸ್ಟ್‌ನಲ್ಲಿ ಬರೆಯಲಾಗಿತ್ತು. ಈ ಪೋಸ್ಟ್ ಅನ್ನು ದೀಪಿಕಾ ಇಷ್ಟಪಟ್ಟು ಲೈಕ್ ಮಾಡಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.