ಗ್ಲಾಮರಸ್ ಉಡುಗೆ ತೊಟ್ಟು ಗಣೇಶೋತ್ಸವದಲ್ಲಿ ಭಾಗಿಯಾದ ನಟಿ ದಿಶಾ: ಟೀಕೆ

ದಿಶಾ ಪಟಾನಿ ಬಾಲಿವುಡ್​​ನ ಬಲು ಗ್ಲಾಮರಸ್ ನಟಿ. ತಮ್ಮನ್ನು ತಾವು ಗ್ಲಾಮರಸ್ ಆಗಿ ತೋರ್ಪಡಿಸಿಕೊಳ್ಳಲು ಅವರು ತುಸುವೂ ಹಿಂಜರಿಯುವುದಿಲ್ಲ. ತಮ್ಮ ಇನ್​​ಸ್ಟಾಗ್ರಾಂ ಖಾತೆಯಲ್ಲಿ ತಮ್ಮ ಬಿಕಿನಿ ಚಿತ್ರಗಳಿಂದ ಹಿಡಿದು ಹಲವು ಗ್ಲಾಮರಸ್ ಚಿತ್ರಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಖಾಸಗಿ ಕಾರ್ಯಕ್ರಮಗಳಲ್ಲಿಯೂ ಗ್ಲಾಮರಸ್ ಆಗಿ ಕಾಣಿಸಿಕೊಳ್ಳುತ್ತಾರೆ. ಆದರೆ ಇದೇ ಕಾರಣಕ್ಕೆ ಇದೀಗ ಟೀಕೆಗೆ ಗುರಿಯಾಗಿದ್ದಾರೆ ನಟಿ.

ಗ್ಲಾಮರಸ್ ಉಡುಗೆ ತೊಟ್ಟು ಗಣೇಶೋತ್ಸವದಲ್ಲಿ ಭಾಗಿಯಾದ ನಟಿ ದಿಶಾ: ಟೀಕೆ
Disha Paani

Updated on: Sep 15, 2026 | 4:59 PM

ಬಾಲಿವುಡ್ ನಟಿಯರು ತಮ್ಮನ್ನು ತಾವು ಗ್ಲಾಮರಸ್ ಆಗಿ ಪ್ರೆಸೆಂಟ್ ಮಾಡಿಕೊಳ್ಳಲು ಬಯಸುತ್ತಾರೆ. ಅವರ ವೃತ್ತಿಗೆ, ಪ್ರಚಾರಕ್ಕೆ ತಕ್ಕ ಮಟ್ಟಿಗೆ ಅದು ನೆರವು ನೀಡುತ್ತದೆಯೆಂಬುದು ಅವರ ನಂಬಿಕೆ. ಆದರೆ ಕೆಲವು ಸಂದರ್ಭಗಳಿಗೆ ಕೆಲ ಅಲಿಖಿತ ಉಡುಪು ಸಂಹಿತೆಗಳು ಇರುತ್ತವೆ. ಅವುಗಳನ್ನು ಮೀರಿದಾಗ ಟೀಕೆ, ವಿರೋಧಗಳು ವ್ಯಕ್ತವಾಗುತ್ತವೆ. ಅದೇ ರೀತಿಯ ಟೀಕೆಯನ್ನು ಈಗ ಬಾಲಿವುಡ್ ನಟಿ ದಿಶಾ ಪಟಾನಿ ಎದುರಿಸುತ್ತಿದ್ದಾರೆ. ಬಾಲಿವುಡ್​​ನ ಗ್ಲಾಮರಸ್ ನಟಿಯಾದ ದಿಶಾ ಪಟಾನಿ, ಇದೀಗ ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

ದೇವಸ್ಥಾನಗಳಿಗೆ ಹೋಗುವಾಗ ಅಥವಾ ಧಾರ್ಮಿಕ ಕಾರ್ಯಗಳಿಗೆ ಹೋಗುವಾಗ ಗ್ಲಾಮರಸ್ ಅಲ್ಲದ, ಸಾಂಪ್ರದಾಯಿಕ ಉಡುಗೆಗಳನ್ನು ಧರಿಸಿ ಹೋಗುವುದು ರೂಢಿ. ಆದರೆ ನಟಿ ದಿಶಾ ಪಟಾನಿ ಇತ್ತೀಚೆಗೆ ಗಣೇಶ ಚತುರ್ಥಿ ಪೂಜಾ ಕಾರ್ಯಕ್ರಮದಲ್ಲಿ ಭಾಗಿ ಆಗಿದ್ದರು. ಪೂಜೆಗೆ ಅವರು ಸೀರೆಯನ್ನೇ ಧರಿಸಿ ಬಂದಿದ್ದರು, ಆದರೆ ಅವರನ್ನು ಸೀರೆಯನ್ನು ಬಲು ಗ್ಲಾಮರಸ್ ಆಗಿ ಧರಿಸಿ ಹೋಗಿದ್ದು, ಚಿತ್ರಗಳು ಮತ್ತು ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.

ಮುಖೇಶ್ ಅಂಬಾನಿ ಅವರ ಮುಂಬೈನ ನಿವಾಸ ಅಂಟಿಲಿಯಾದಲ್ಲಿ ನಿನ್ನೆ (ಸೆಪ್ಟೆಂಬರ್ 14) ಗಣೇಶ ಚತುರ್ಥಿ ಆಚರಣೆಯಲ್ಲಿ ಹಲವಾರು ಬಾಲಿವುಡ್ ಸೆಲೆಬ್ರಿಟಿಗಳು, ರಾಜಕಾರಣಿಗಳು ಭಾಗಿ ಆಗಿದ್ದರು. ನಟಿ ದಿಶಾ ಪಟಾಣಿ ಸಹ ಈ ಪೂಜಾ ಕಾರ್ಯಕ್ರಮದಲ್ಲಿ ಭಾಗಿ ಆಗಿದ್ದರು. ಅವರು ಧರಿಸಿದ್ದ ಉಡುಪು ತುಸು ‘ರಿವೀಲಿಂಗ್’ ಆಗಿತ್ತು. ಇದು ನೆಟ್ಟಿಗರ ಅಸಮಾಧಾನಕ್ಕೆ ಕಾರಣವಾಗಿದ್ದು, ಈ ಬಗ್ಗೆ ಹಲವರು ಸಾಮಾಜಿಕ ಜಾಲತಾಣದಲ್ಲಿ ಟೀಕೆ ಮಾಡಿದ್ದು, ನಟಿಗೆ ಸಂಸ್ಕಾರದ ಪಾಠ ಹೇಳುವ ಯತ್ನ ಮಾಡಿದ್ದಾರೆ.

ಇದನ್ನೂ ಓದಿ:ದಿಶಾ ಸಾಲಿಯನ್ ಪ್ರಕರಣ: ಸಿಬಿಐ ತನಿಖೆಗೆ ಆದೇಶಿಸಿದ ಬಾಂಬೆ ಹೈಕೋರ್ಟ್

ಭಕ್ತಿಪೂರ್ವಕವಾದ ಕಾರ್ಯಕ್ರಮದಲ್ಲಿ ತಮ್ಮನ್ನು ತಾವು ಪ್ರಸ್ತುತಪಡಿಸಿಕೊಳ್ಳುವ ಸರಿಯಾದ ರೀತಿ ಇದಲ್ಲ ಎಂದು ಅನೇಕರು ಕಾಮೆಂಟ್ ಮಾಡಿದ್ದಾರೆ. ಇನ್ನು ಕೆಲವರು ದಿಶಾ ಅವರಿಗೆ ಸಾಮಾನ್ಯ ಜ್ಞಾನವಿಲ್ಲ ಧಾರ್ಮಿಕ ಕಾರ್ಯಕ್ರಮಗಳಲ್ಲಿ ತಮ್ಮನ್ನು ತಾವು ಹೇಗೆ ತೋರ್ಪಡಿಸಿಕೊಳ್ಳಬೇಕು ಎಂಬುದು ತಿಳಿದಿಲ್ಲ ಎಂದು ಟೀಕೆ ಮಾಡಿದ್ದಾರೆ. ಪ್ರತಿಯೊಂದು ಕಾರ್ಯಕ್ರಮದಲ್ಲಿಯೂ ಗ್ಲಾಮರಸ್ ಆಗಿ ಕಾಣಿಸಿಕೊಳ್ಳುವ ಅಗತ್ಯ ಇರುವುದಿಲ್ಲ ಎಂದು ಕೆಲವರು ಬುದ್ಧಿವಾದ ಹೇಳಿದ್ದಾರೆ.

ಅಂಬಾನಿ ಅವರ ಮನೆಯಲ್ಲಿ ನಡೆದ ಪೂಜಾ ಕಾರ್ಯಕ್ರಮದಲ್ಲಿ ಬಾಲಿವುಡ್‌ನ ಸ್ಟಾರ್​​ಗಳಾದ ಸಲ್ಮಾನ್ ಖಾನ್, ಕತ್ರಿನಾ ಕೈಫ್ , ವಿಕ್ಕಿ ಕೌಶಲ್, ಕಿಯಾರಾ ಅಡ್ವಾಣಿ ಮತ್ತು ಸಿದ್ಧಾರ್ಥ್ ಮಲ್ಹೋತ್ರಾ, ಜೆನಿಲಿಯಾ ಮತ್ತು ರಿತೇಶ್, ಸೈಫ್ ಅಲಿ ಖಾನ್ ಮತ್ತು ಕರೀನಾ ಕಪೂರ್ ಇನ್ನೂ ಅನೇಕ ಸೆಲೆಬ್ರಿಟಿಗಳು ಭಾಗವಹಿಸಿದ್ದರು.

ನಟಿ ದಿಶಾ ಇತ್ತೀಚೆಗೆ ‘ಅವಾರಪನ್ 2’ ಚಿತ್ರದಲ್ಲಿ ಕಾಣಿಸಿಕೊಂಡಿದ್ದರು ಆ ಸಿನಿಮಾ ಹಿಟ್ ಆಗಿದೆ. ಹಾಲಿವುಡ್​​ಗೆ ಸಹ ದಿಶಾ ಪದಾರ್ಪಣೆ ಮಾಡಿದ್ದು, ಅವರ ಮೊದಲ ಹಾಲಿವುಡ್ ಸಿನಿಮಾ ಶೀಘ್ರವೇ ಬಿಡುಗಡೆ ಆಗಲಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us