ಗನ್​ನಿಂದ ಕಾಲಿಗೆ ಶೂಟ್ ಮಾಡಿಕೊಂಡ ನಟ ಗೋವಿಂದ, ಐಸಿಯುಗೆ ದಾಖಲು; ನಡೆದಿದ್ದು ಏನು?

ಇದು ಆಕಸ್ಮಿಕವಾಗಿ ನಡೆದಿರೋ ಘಟನೆ. ಬುಲೆಟ್ ಫೈಯರ್ ಆಗಿದ್ದು, ಅವರ ಕಾಲಿಗೆ ತಾಗಿದೆ. ಮುಂಜನೆ 5 ಗಂಟೆ ಸುಮಾರಿಗೆ ಈ ಅವಘಡ ಸಂಭವಿಸಿದೆ. ಅವರನ್ನು ಅಂಧೇರಿಯ ಕೃತಿ ಕೇರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ.

ಗನ್​ನಿಂದ ಕಾಲಿಗೆ ಶೂಟ್ ಮಾಡಿಕೊಂಡ ನಟ ಗೋವಿಂದ, ಐಸಿಯುಗೆ ದಾಖಲು; ನಡೆದಿದ್ದು ಏನು?
ಗೋವಿಂದ

Updated on: Oct 01, 2024 | 10:08 AM

ನಟ ಗೋವಿಂದ ಅವರು ತಮ್ಮದೇ ಗನ್​ನಿಂದ ಕಾಲಿಗೆ ಶೂಟ್ ಮಾಡಿಕೊಂಡಿದ್ದಾರೆ. ಮುಂಬೈನಲ್ಲಿರುವ ಅವರ ಮನೆಯಲ್ಲಿ ಈ ಘಟನೆ ನಡೆದಿದೆ. ಮುಂಜಾನೆ 5 ಗಂಟೆ ಸುಮಾರಿಗೆ ಈ ಘಟನೆ ಸಂಭವಿಸಿದೆ. ಸದ್ಯ ಅವರನ್ನು ಮುಂಬೈನ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಇದು ಆಕಸ್ಮಿಕವಾಗಿ ನಡೆದಿರೋ ಘಟನೆ. ಗನ್​ನಿಂದ ಫೈಯರ್ ಆದ ಬುಲೆಟ್ , ಅವರ ಕಾಲಿಗೆ ತಾಗಿದೆ. ಮುಂಜನೆ 5 ಗಂಟೆ ಸುಮಾರಿಗೆ ಈ ಅವಘಡ ಸಂಭವಿಸಿದೆ. ಅವರನ್ನು ಅಂಧೇರಿಯ ಕೃತಿ ಕೇರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ.

ಇದನ್ನೂ ಓದಿ: ಬೇರೆ ಧರ್ಮಕ್ಕೆ ಮತಾಂತರಗೊಂಡರಾ ಗೋವಿಂದ್ ಸೊಸೆ? ಮೌನ ಮುರಿದ ನಟಿ ರಾಗಿಣಿ

ಗುಂಡಿನ ಶಬ್ದ ಕೇಳಿದ ಬಳಿಕ ಪೊಲೀಸರು ತಕ್ಷಣ ಸ್ಥಳಕ್ಕೆ ಧಾವಿಸಿದ್ದಾರೆ. ಸದ್ಯ ಗೋವಿಂದ ಅವರ ಗನ್​ನ ವಶಕ್ಕೆ ಪಡೆಯಲಾಗಿದ್ದು, ತನಿಖೆ ನಡೆಸುತ್ತಿದ್ದಾರೆ.  ‘ನಟ ಹಾಗೂ ಶಿವಸೇನಾ ಮುಖ್ಯಸ್ಥ ಗೋವಿಂದ ಕೋಲ್ಕತ್ತಾ ತೆರಳಲು ರೆಡಿ ಆಗುತ್ತಿದ್ದರು. ಅವರು ತಮ್ಮ ಪರವಾನಗಿ ಗನ್​ನ ಇಟ್ಟುಕೊಳ್ಳುತ್ತಿದ್ದರು. ಅದು ಅವರ ಕೈ ತಪ್ಪಿದ್ದು, ಬುಲೆಟ್​ ಸಿಡಿದಿದೆ. ಅವರ ಕಾಲಿಗೆ ಗುಂಡು ತಾಗಿದೆ. ವೈದ್ಯರು ಬುಲೆಟ್​ನ ತೆಗೆದಿದ್ದಾರೆ. ಅವರು ಆಸ್ಪತ್ರೆಯಲ್ಲಿ ಇದ್ದು, ಆರೋಗ್ಯ ಸ್ಥಿರವಾಗುತ್ತಿದೆ’ ಎಂದು ಗೋವಿಂದ ಅವರ ಮ್ಯಾನೇಜರ್ ಶಶಿ ಸಿನ್ಹಾ ಹೇಳಿದ್ದಾರೆ.

ಗೋವಿಂದ ಅವರು ಬಾಲಿವುಡ್​ನಲ್ಲಿ ಹಲವು ಸೂಪರ್ ಹಿಟ್ ಚಿತ್ರಗಳನ್ನು ನೀಡಿದ್ದಾರೆ. ಅವರಿಗೆ ಹಿಂದಿ ಚಿತ್ರರಂಗದಲ್ಲಿ ಸಾಕಷ್ಟು ಬೇಡಿಕೆ ಇತ್ತು. ಆದರೆ, ಈಗ ಮೊದಲಿನ ಬೇಡಿಕೆ ಉಳಿದಿಲ್ಲ. ಅವರು ಚಿತ್ರರಂಗದಲ್ಲಿ ಅಷ್ಟಾಗಿ ಆ್ಯಕ್ಟೀವ್ ಆಗಿಲ್ಲ. ಅಲ್ಲೊಂದು ಇಲ್ಲೊಂದು ಬ್ರ್ಯಾಂಡ್​ಗಳನ್ನು ಪ್ರಚಾರ ಮಾಡಿಕೊಂಡು ಸಮಯ ಕಳೆಯುತ್ತಿದ್ದಾರೆ.

‘ಕೂಲಿ ನಂಬರ್ 1’, ‘ಹಸೀನಾ ಮಾನ್ ಜಾಯೇಗಿ’, ‘ಸ್ವರ್ಗ್’, ‘ಸಾಜನ್ ಚಲೇ ಸಸುರಾಲ್’, ‘ರಾಜಾ ಬಾಬು’ ‘ರಾಜಾಜಿ’, ‘ಪಾರ್ಟ್ನರ್’ ಸಿನಿಮಾಗಳ ಮೂಲಕ ನಟಿಸಿ ಗಮನ ಸೆಳೆದಿದ್ದಾರೆ. ಅವರು ಕೊನೆಯದಾಗಿ ಕಾಣಿಸಿಕೊಂಡಿದ್ದು ‘ರಂಗೀಲ ರಾಜ’ ಸಿನಿಮಾದಲ್ಲಿ. ಈ ಚಿತ್ರ 2019ರಲ್ಲಿ ರಿಲೀಸ್ ಆಯಿತು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 9:38 am, Tue, 1 October 24

ರಾಜೇಶ್ ದುಗ್ಗುಮನೆ

ರಾಜೇಶ್​ ಹೆಗಡೆಯವರು ಪತ್ರಿಕೋದ್ಯಮಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us