ಬೇರೆ ಧರ್ಮಕ್ಕೆ ಮತಾಂತರಗೊಂಡರಾ ಗೋವಿಂದ್ ಸೊಸೆ? ಮೌನ ಮುರಿದ ನಟಿ ರಾಗಿಣಿ

‘ನಾನು ಇತ್ತೀಚೆಗೆ ಅಭಿಮಾನಿಗಳ ಪೋಸ್ಟ್​ಗಳನ್ನು ರೀಪೋಸ್ಟ್ ಮಾಡುತ್ತಿದ್ದೇನೆ. ನಾನು ಇಂದು ಈ ಹಂತಕ್ಕೆ ಬಂದಿದ್ದೇನೆ ಎಂದರೆ ಅದಕ್ಕೆ ಅಭಿಮಾನಿಗಳೇ ಕಾರಣ. ಆದರೆ, ಇದರಿಂದಲೇ ತೊಂದರೆ ಆಗುತ್ತದೆ ಎಂದು ನಾನು ಭಾವಿಸಿರಲಿಲ್ಲ. ನನ್ನ ಅಸ್ಮಿತತೆ ಬಗ್ಗೆಯೇ ಪ್ರಶ್ನೆ ಏಳುವಂತಾಗಿದೆ’ ಎಂದಿದ್ದಾರೆ ರಾಗಿಣಿ.

ಬೇರೆ ಧರ್ಮಕ್ಕೆ ಮತಾಂತರಗೊಂಡರಾ ಗೋವಿಂದ್ ಸೊಸೆ? ಮೌನ ಮುರಿದ ನಟಿ ರಾಗಿಣಿ
ರಾಗಿಣಿ
Follow us
 ಶ್ರೀಲಕ್ಷ್ಮೀ ಎಚ್
| Updated By: ರಾಜೇಶ್ ದುಗ್ಗುಮನೆ

Updated on: May 04, 2024 | 11:16 AM

ನಟಿ ರಾಗಿಣಿ ಖನ್ನಾ (Ragini Khanna) ಅವರು ‘ಸಸುರಾಲ್ ಗೇಂಡಾ ಫೂಲ್’ ಮತ್ತು ‘ಭಾಸ್ಕರ್ ಭಾರ್ತಿ’ ಧಾರಾವಾಹಿ ಮೂಲಕ ಫೇಮಸ್ ಆದವರು. ಅವರು ಬಾಲಿವುಡ್​ನ ಖ್ಯಾತ ನಟ ಗೋವಿಂದ್ ಅವರ ಸೊಸೆ ಕೂಡ ಹೌದು. ಅವರು ಹಿಂದೂ ಧರ್ಮಕ್ಕೆ ಮತಾಂತರಗೊಂಡಿದ್ದಾರೆ ಎನ್ನುವ ಸುದ್ದಿ ಹರಿದಾಡಿದೆ. ಆದರೆ, ಇದನ್ನು ರಾಗಿಣಿ ಖನ್ನಾ ಸುಳ್ಳು ಎಂದಿದ್ದಾರೆ. ಈ ರೀತಿ ಆಗಲು ಅವರು ಮಾಡಿದ ಎಡವಟ್ಟು ಕಾರಣ ಎಂದು ಹೇಳಿದ್ದಾರೆ.

ದೈನಿಕ್ ಭಾಸ್ಕರ್​ಗೆ ನೀಡಿದ ಸಂದರ್ಶನ ಒಂದರಲ್ಲಿ ಅವರು ಮಾತನಾಡಿದ್ದಾರೆ. ‘ನಾವು ಕಲಾವಿದರಾಗಿರುವುದರಿಂದ ಹೆಚ್ಚು ಎಚ್ಚರಿಕೆಯಿಂದ ಇರಬೇಕು. ಆ ಒಂದು ಘಟನೆಯಿಂದ ನಾನು ಈ ವಿಚಾರ ಕಲಿತಿದ್ದೇನೆ. ನಾನು ಇತ್ತೀಚೆಗೆ ಅಭಿಮಾನಿಗಳ ಪೋಸ್ಟ್​ಗಳನ್ನು ರೀಪೋಸ್ಟ್ ಮಾಡುತ್ತಿದ್ದೇನೆ. ನಾನು ಇಂದು ಈ ಹಂತಕ್ಕೆ ಬಂದಿದ್ದೇನೆ ಎಂದರೆ ಅದಕ್ಕೆ ಅಭಿಮಾನಿಗಳೇ ಕಾರಣ. ಆದರೆ, ಇದರಿಂದಲೇ ತೊಂದರೆ ಆಗುತ್ತದೆ ಎಂದು ನಾನು ಭಾವಿಸಿರಲಿಲ್ಲ. ನನ್ನ ಅಸ್ಮಿತತೆ ಬಗ್ಗೆಯೇ ಪ್ರಶ್ನೆ ಏಳುವಂತಾಗಿದೆ’ ಎಂದಿದ್ದಾರೆ ಅವರು.

‘ನಾನು ಕ್ರೈಸ್ತ ಧರ್ಮಕ್ಕೆ ಮತಾಂತರಗೊಳ್ಳುತ್ತೇನೆ ಎನ್ನುವ ಫೇಕ್ ಪೋಸ್ಟ್​ನ ಅಭಿಮಾನಿಯೋರ್ವ ಪೋಸ್ಟ್ ಮಾಡಿದ್ದ. ಅಷ್ಟೇ ಅಲ್ಲ ಕೊಲಾಬರೇಷನ್​ಗೆ ರಿಕ್ವೆಸ್ಟ್ ಕೂಡ ಕಳುಹಿಸಿದ್ದ. ತಪ್ಪಾಗಿ ನಾನು ಅದನ್ನು ಅಸ್ಸೆಪ್ಟ್ ಮಾಡಿದೆ. ನಾನು ಮತಾಂತರಗೊಂಡ ಬಗ್ಗೆ ಮಾತನಾಡುತ್ತಿರುವ ಫೇಕ್ ಪೋಸ್ಟ್ ಮಾಡಿದ್ದ. ಇದು ಸಂಪೂರ್ಣವಾಗಿ ಸುಳ್ಳು. ನಾನು ಅದನ್ನು ರಿಪೋರ್ಟ್ ಮಾಡಿದ್ದೇನೆ’ ಎಂದಿದ್ದಾರೆ ಅವರು.

‘ನನಗೆ ಲಕ್ಷಾಂತರ ಅಭಿಮಾನಿಗಳು ಇದ್ದಾರೆ. ಯಾರೋ ಒಬ್ಬವನು ಮಾಡಿದ ತಪ್ಪಿನಿಂದ ನಾನು ನನ್ನ ಎಲ್ಲಾ ಅಭಿಮಾನಿಗಳನ್ನು ದೂಷಿಸಲಾರೆ. ನನ್ನ ಅಭಿಮಾನಿಗಳು ನನಗೆ ತುಂಬಾನೇ ನಿಷ್ಠಾವಂತರಾಗಿದ್ದಾರೆ. ಹೀಗಾಗಿ ನಾನು ಅವರನ್ನು ಗೌರವಿಸುತ್ತೇನೆ’ ಎಂದಿದ್ದಾರೆ.

ಇದನ್ನೂ ಓದಿ: ರಾಗಿಣಿ ದ್ವಿವೇದಿ ಹೊಸ ಫೋಟೋ ಶೂಟ್​ಗೆ ಫಿದಾ ಆದ ಫ್ಯಾನ್ಸ್

ವಿಡಿಯೋದಲ್ಲಿ ಏನಿತ್ತು?

‘ನಾನು ರಾಗಿಣಿ ಖನ್ನಾ. ನಾನು ಹಿಂದೂ ಧರ್ಮವನ್ನು ತ್ಯಜಿಸಿ ಕ್ರಿಶ್ಚಿಯನ್ ಧರ್ಮವನ್ನು ಸ್ವೀಕರಿಸಿದ್ದೇನೆ. ಆದರೆ ಈಗ ನಾನು ಕಟ್ಟಾ ಹಿಂದೂ ಆಗಿಬಿಟ್ಟಿದ್ದೇನೆ. ನಾನು ಹಿಂದೂ ಸಂಪ್ರದಾಯಸ್ಥನಾಗುವತ್ತ ಸಾಗಿದ್ದೇನೆ’ ಎಂದು ಅವರು ಹೇಳಿದ್ದರು.

ಹಿರಿತೆರೆ..

ರಾಗಿಣಿ ಅವರು 2008ರಲ್ಲಿ ಕಿರುತೆರೆ ಪ್ರವೇಶಿಸಿದರು. ‘ರಾಧಾ ಕಿ ಬೇಟಿಯಾ ಕುಚ್ ಕರ್​ದಿಕಾಯೇಂಗಿ’ ಧಾರಾವಾಹಿ ಮೂಲಕ ಅವರು ಫೇಮಸ್ ಆದರು. ರಾಗಿಣಿ ಅವರು ‘ಸಸುರಾಲ್ ಗೇಂಡಾ ಫೂಲ್ 2’ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇದರಲ್ಲಿ ಅವರು ಸುಹಾನಾ ಬಾಜ್​ಪಾಯಿ ಕಶ್ಯಪ್ ಪಾತ್ರ ಮಾಡುತ್ತಿದ್ದಾರೆ.  ಇತ್ತೀಚೆಗೆ ಅವರು ತಮ್ಮ ಸಂಬಂಧಿ ಆರ್ತಿ ಸಿಂಗ್ ಮದುವೆಯಲ್ಲಿ ಕಾಣಿಸಿಕೊಂಡಿದ್ದರು. ಅವರು ಕಿರುತೆರೆ ಜೊತೆ ಹಿರಿತೆರೆಯಲ್ಲೂ ಗುರುತಿಸಿಕೊಂಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಒಂದೇ ಓವರ್​ನಲ್ಲಿ 22 ರನ್ ಚಚ್ಚಿದ ಸಂಜು; ವಿಡಿಯೋ
ಒಂದೇ ಓವರ್​ನಲ್ಲಿ 22 ರನ್ ಚಚ್ಚಿದ ಸಂಜು; ವಿಡಿಯೋ
ಅತಿ ಎತ್ತರದ ಮಾನವ ಪಿರಮಿಡ್ ನಿರ್ಮಿಸಿ ಭಾರತೀಯ ಸೇನೆಯಿಂದ ವಿಶ್ವ ದಾಖಲೆ
ಅತಿ ಎತ್ತರದ ಮಾನವ ಪಿರಮಿಡ್ ನಿರ್ಮಿಸಿ ಭಾರತೀಯ ಸೇನೆಯಿಂದ ವಿಶ್ವ ದಾಖಲೆ
ಕುಡಿದ ನಶೆಯಲ್ಲಿ ಏನೇನೋ ಮಾತನಾಡಿದ ಎನ್ನುವ ಕಾರಣಕ್ಕೆ ಹೊಡೆದು ಕೊಂದರು!
ಕುಡಿದ ನಶೆಯಲ್ಲಿ ಏನೇನೋ ಮಾತನಾಡಿದ ಎನ್ನುವ ಕಾರಣಕ್ಕೆ ಹೊಡೆದು ಕೊಂದರು!
ಶ್ರೀರಾಮುಲು-ಜನಾರ್ಧನ ರೆಡ್ಡಿ ಜಗಳದ ಹಿನ್ನೆಲೆಯಲ್ಲಿ ಹಿರಿಯರ ಸಭೆ?
ಶ್ರೀರಾಮುಲು-ಜನಾರ್ಧನ ರೆಡ್ಡಿ ಜಗಳದ ಹಿನ್ನೆಲೆಯಲ್ಲಿ ಹಿರಿಯರ ಸಭೆ?
ನಿಯೋಗ ಹೊತ್ತು ತಂದಿದ್ದ ಕಬ್ಬನ್ನು ಕಚೇರಿಯಲ್ಲೇ ಮುರಿದು ತಿಂದ ಸಿದ್ದರಾಮಯ್ಯ
ನಿಯೋಗ ಹೊತ್ತು ತಂದಿದ್ದ ಕಬ್ಬನ್ನು ಕಚೇರಿಯಲ್ಲೇ ಮುರಿದು ತಿಂದ ಸಿದ್ದರಾಮಯ್ಯ
ಕೆಡಿಪಿ ಸಭೆಗಳನ್ನು ಹಗುರವಾಗಿ ಪರಿಗಣಿಸುವ ಪ್ರವೃತ್ತಿ ನಿಲ್ಲಬೇಕು
ಕೆಡಿಪಿ ಸಭೆಗಳನ್ನು ಹಗುರವಾಗಿ ಪರಿಗಣಿಸುವ ಪ್ರವೃತ್ತಿ ನಿಲ್ಲಬೇಕು
ಸುದೀಪ್ ಬಿಗ್​ಬಾಸ್ ಬಿಡಲು ಅಸಲಿ ಕಾರಣ ಬಿಚ್ಚಿಟ್ಟ ಪ್ರಥಮ್
ಸುದೀಪ್ ಬಿಗ್​ಬಾಸ್ ಬಿಡಲು ಅಸಲಿ ಕಾರಣ ಬಿಚ್ಚಿಟ್ಟ ಪ್ರಥಮ್
ಬೆಂಗಳೂರಿನ ಈ ಮಾರ್ಗದಲ್ಲಿ ಫುಲ್ ಟ್ರಾಫಿಕ್ ಜಾಮ್..!
ಬೆಂಗಳೂರಿನ ಈ ಮಾರ್ಗದಲ್ಲಿ ಫುಲ್ ಟ್ರಾಫಿಕ್ ಜಾಮ್..!
ಮಂತ್ರಾಲಯ ಸಂಸ್ಕೃತ ಶಾಲೆ ವಿದ್ಯಾರ್ಥಿಗಳು ಸಾವು: ಅಪಘಾತಕ್ಕೆ ಕಾರಣವೇನು?
ಮಂತ್ರಾಲಯ ಸಂಸ್ಕೃತ ಶಾಲೆ ವಿದ್ಯಾರ್ಥಿಗಳು ಸಾವು: ಅಪಘಾತಕ್ಕೆ ಕಾರಣವೇನು?
ಒಬ್ಬನಿಗೆ ಮದುವೆಯಾಗಿ ಕೇವಲ 4 ತಿಂಗಳಾಗಿತ್ತು, ಮತ್ತೊಬ್ಬನ ಪತ್ನಿ ಗರ್ಭಿಣಿ!
ಒಬ್ಬನಿಗೆ ಮದುವೆಯಾಗಿ ಕೇವಲ 4 ತಿಂಗಳಾಗಿತ್ತು, ಮತ್ತೊಬ್ಬನ ಪತ್ನಿ ಗರ್ಭಿಣಿ!