ಮದುವೆ ಯಾವಾಗ? ವರ ಯಾರು? ಸ್ಪಷ್ಟ ಉತ್ತರ ಕೊಟ್ಟ ಜಾನ್ಹವಿ ಕಪೂರ್

ಜಾನ್ಹವಿ ಕಪೂರ್, ಸಿನಿಮಾ ಮಾತ್ರವೇ ಅಲ್ಲದೆ ಫ್ಯಾಷನ್, ಮಾಡಲಿಂಗ್​​ನಲ್ಲೂ ಜಾನ್ಹವಿ ಬಲು ಬ್ಯುಸಿ. ಯುವನಟಿ ಜಾನ್ಹವಿ ಸಿನಿಮಾಗಳ ಜೊತೆಗೆ ತಮ್ಮ ಖಾಸಗಿ ಜೀವನದ ಕಾರಣಕ್ಕೂ ಸುದ್ದಿಯಲ್ಲಿರುತ್ತಾರೆ. ವಿಶೇಷವಾಗಿ ಜಾನ್ಹವಿಯ ಲವ್ ಲೈಫ್ ಬಗ್ಗೆ ಚರ್ಚೆ ನಡೆಯುತ್ತಲೇ ಇರುತ್ತದೆ. ಇದೀಗ ಖುದ್ದು ಜಾನ್ಹವಿಯೇ ಆ ಬಗ್ಗೆ ಮನಬಿಚ್ಚಿ ಮಾತನಾಡಿದ್ದಾರೆ.

ಮದುವೆ ಯಾವಾಗ? ವರ ಯಾರು? ಸ್ಪಷ್ಟ ಉತ್ತರ ಕೊಟ್ಟ ಜಾನ್ಹವಿ ಕಪೂರ್
Janhvi Kapoor

Updated on: Oct 29, 2026 | 3:55 PM

ಮುಖ್ಯಾಂಶಗಳು

  • ಜಾನ್ಹವಿ ಕಪೂರ್ ಬಾಲಿವುಡ್​ನ ಸ್ಟಾರ್ ಯುವ ನಟಿ
  • ಜಾನ್ಹವಿ ಕಪೂರ್ ಲವ್ ಸ್ಟೋರಿ ಬಗ್ಗೆ ಮಾತನಾಡಿದ್ದಾರೆ
  • ಜಾನ್ಹವಿ ಕಪೂರ್ ಮದುವೆಯ ಬಗ್ಗೆಯೂ ಮಾತನಾಡಿದ್ದಾರೆ

ಜಾನ್ಹವಿ ಕಪೂರ್ ಬಾಲಿವುಡ್​​ನ ಸ್ಟಾರ್ ಯುವನಟಿ. ಬೋನಿ ಕಪೂರ್, ಶ್ರೀದೇವಿಯ ಪುತ್ರಿ ಜಾನ್ಹವಿ ಕಪೂರ್ ಬಾಲಿವುಡ್​​ನಲ್ಲಿ ಮಾತ್ರವಲ್ಲದೆ ದಕ್ಷಿಣ ಭಾರತ ಸಿನಿಮಾಗಳಲ್ಲಿಯೂ ಬ್ಯುಸಿ ಆಗಿದ್ದಾರೆ. ಭಾರಿ ದೊಡ್ಡ ಹಿಟ್ ಸಿನಿಮಾ ಈವರೆಗೂ ಜಾನ್ಹವಿಗೆ ಸಿಕ್ಕಿಲ್ಲ ಆದರೂ ಸಿನಿಮಾ ಅವಕಾಶಗಳು ಸಹ ಕಡಿಮೆ ಆಗಿಲ್ಲ. ಸಿನಿಮಾ ಮಾತ್ರವೇ ಅಲ್ಲದೆ ಫ್ಯಾಷನ್, ಮಾಡಲಿಂಗ್​​ನಲ್ಲೂ ಜಾನ್ಹವಿ ಬಲು ಬ್ಯುಸಿ. ಯುವನಟಿ ಜಾನ್ಹವಿ ಸಿನಿಮಾಗಳ ಜೊತೆಗೆ ತಮ್ಮ ಖಾಸಗಿ ಜೀವನದ ಕಾರಣಕ್ಕೂ ಸುದ್ದಿಯಲ್ಲಿರುತ್ತಾರೆ. ವಿಶೇಷವಾಗಿ ಜಾನ್ಹವಿಯ ಲವ್ ಲೈಫ್ ಬಗ್ಗೆ ಚರ್ಚೆ ನಡೆಯುತ್ತಲೇ ಇರುತ್ತದೆ. ಇದೀಗ ಖುದ್ದು ಜಾನ್ಹವಿಯೇ ಆ ಬಗ್ಗೆ ಮನಬಿಚ್ಚಿ ಮಾತನಾಡಿದ್ದಾರೆ.

ಜಾನ್ಹವಿ ಕಪೂರ್ ಇತ್ತೀಚೆಗಷ್ಟೆ ಕಾಫಿ ವಿತ್ ಕರಣ್ ಶೋನಲ್ಲಿ ಅತಿಥಿಯಾಗಿ ಭಾಗಿ ಆಗಿದ್ದರು. ಜಾನ್ಹವಿಯ ಜೊತೆಗೆ ಅಣ್ಣ ಅರ್ಜುನ್ ಕಪೂರ್ ಮತ್ತು ಸಹನಟ ವರುಣ್ ಧವನ್ ಸಹ ಬಂದಿದ್ದರು. ಈ ವೇಳೆ ಜಾನ್ಹವಿ ಕಪೂರ್ ಅವರಿಗೆ ಅವರ ಲವ್ ಲೈಫ್ ಬಗ್ಗೆ ಕರಣ್ ಜೋಹರ್ ಪ್ರಶ್ನೆ ಮಾಡಿದರು. ‘ಮದುವೆ ಯಾವಾಗ?’ ಎಂದು ಸಹ ಕೇಳಿದರು. ಅದಕ್ಕೆ ಜಾನ್ಹವಿ ಯಾವುದೇ ಮುಚ್ಚುಮರೆ ಇಲ್ಲದೇ ಉತ್ತರ ನೀಡಿದರು.

ತಾವು ಶಿಖರ್ ಫಾರಿಯಾ ಜೊತೆಗೆ ಪ್ರೇಮದಲ್ಲಿರುವುದಾಗಿ ನೇರವಾಗಿ ಹೇಳಿದ ಜಾನ್ಹವಿ ಕಪೂರ್, ‘ಲವ್ ಲೈಫ್ ಬಗ್ಗೆ ಯಾಕೆ ಹೆಚ್ಚಿನ ನಟಿಯರು ಬಚ್ಚಿಟ್ಟುಕೊಳ್ಳುತ್ತಾರೆ ಗೊತ್ತಿಲ್ಲ’ ಎಂದು ಸಹ ಹೇಳಿದರು. ‘ನನ್ನ ಪ್ರೀತಿಯ ಮೇಲೆ ಯಾರ ದೃಷ್ಟಿಯೂ ಬೀಳಬಾರದೆಂಬ ಕಾಳಜಿ ನನಗೆ ಇದೆ. ಜೊತೆಗೆ ನನ್ನ ಜೀವನದ ಬಗ್ಗೆ ಬೇರೆಯವರು ಅತಿಯಾಗಿ ಮಾತನಾಡುವುದು ಸಹ ಇಷ್ಟವಿಲ್ಲ. ಹಾಗೆಂದು ಯಾರಿಗೂ, ಎಂದಿಗೂ ಪ್ರೀತಿಯ ವಿಷಯ ಗೊತ್ತೇ ಆಗಬಾರದು ಎಂಬಂತೆ ವರ್ತಿಸುವವರ ಬಗ್ಗೆ ನನಗೆ ಬೇಸರ ಇದೆ’ ಎಂದರು.

ಇದನ್ನೂ ಓದಿ:ಫೋಟೊಶೂಟ್​​ಗೆ ರೆಡಿಯಾಗುತ್ತಿರುವ ನಟಿ ಜಾನ್ಹವಿ ಕಪೂರ್: ವಿಡಿಯೋ ನೋಡಿ

ಮದುವೆಯ ಬಗ್ಗೆ ಕೇಳಿದಾಗ ಸ್ಪಷ್ಟ ಉತ್ತರ ಕೊಟ್ಟ ಜಾನ್ಹವಿ, ‘ನಾವು ಇನ್ನೂ ಎರಡು ಮೂರು ವರ್ಷಗಳ ಕಾಲ ಮದುವೆ ಆಗುವುದಿಲ್ಲ. ಈಗ ನಾವು ಬಹಳ ಖುಷಿಯಾಗಿದ್ದೇವೆ. ನಮ್ಮ ಸುತ್ತ-ಮುತ್ತ ಸಾಕಷ್ಟು ಬ್ರೇಕಪ್​​ಗಳು ಆಗುತ್ತಿವೆ ಆದರೂ ನಾವು ಚೆನ್ನಾಗಿದ್ದೇವೆ. ಹೀಗೆಯೇ ಮುಂದುವರೆಯಬೇಕು ಎಂಬುದು ನನ್ನ ಆಸೆ’ ಎಂದಿದ್ದಾರೆ.

ಬಾಯ್​​ಫ್ರೆಂಡ್ ಶಿಖರ್ ಫಾರಿಯಾ​​ ಬಗ್ಗೆ ಮಾತನಾಡಿದ ಜಾನ್ಹವಿ, ‘ನನಗೆ ಶಾಲಾ ದಿನಗಳಿಂದಲೂ ಶಿಖರ್ ಗೊತ್ತು, ನಾವಿಬ್ಬರೂ ಪರಸ್ಪರ ಒಬ್ಬರಿಗೊಬ್ಬರು ಬೆಂಬಲ ನೀಡುತ್ತಾ ಬಂದಿದ್ದೇವೆ. ನನ್ನ ತಾಯಿ ಶ್ರೀದೇವಿ ನಿಧನ ಹೊಂದಿದಾಗ ಶಿಖರ್ ಲಂಡನ್​​ನಲ್ಲಿ ಓದುತ್ತಿದ್ದ, ಆದರೆ ಸೆಮಿಸ್ಟರ್ ಅನ್ನು ಬಿಟ್ಟು ನನ್ನೊಂದಿಗೆ ಇರಲು, ನನಗೆ ಬೆಂಬಲ ನೀಡಲು ಬಂದಿದ್ದ. ಆಗ ನಾವಿನ್ನೂ ಪರಸ್ಪರ ಪ್ರೀತಿಯಲ್ಲಿರಲಿಲ್ಲ. ಆದರೂ ನನಗೆ ಸಾಕಷ್ಟು ಕಾಳಜಿ ತೋರಿಸಿದ್ದ’ ಎಂದಿದ್ದಾರೆ ಜಾನ್ಹವಿ.

ಶಿಖರ್ ಫಾರಿಯಾ, ಮಾಜಿ ಸಿಎಂ ಸುಶೀಲ್ ಕುಮಾರ ಶಿಂಧೆ ಅವರ ಮೊಮ್ಮಗ. ಯುವ ಉದ್ಯಮಿ ಮತ್ತು ಪೋಲೊ ಆಟಗಾರ ಸಹ ಆಗಿದ್ದಾರೆ. ಶಿಖರ್ ಅವರ ಸಹೋದರ ವೀರ್ ಫಾರಿಯಾ ಹಿಂದಿ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಮಂಜುನಾಥ ಸಿ.

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More
Loading...
Unable to load recommendations.
Follow Us