ಮಕ್ಕಳ ಎದುರು ಮುಜುಗರಕ್ಕೊಳಗಾದ ನಟಿ ಕರೀನಾ ಕಪೂರ್: ತೈಮೂರ್ ಪ್ರಶ್ನೆಗೆ ಬೇಸ್ತು ಬಿದ್ದ ನಟಿ

ಬಾಲಿವುಡ್ ನಟಿ ಕರೀನಾ ಕಪೂರ್ ತಮ್ಮ ಜಾಹೀರಾತುಗಳನ್ನು ನೋಡಿ ಮಕ್ಕಳು ಕೇಳುವ ಪ್ರಶ್ನೆಗಳ ಬಗ್ಗೆ ಮಾತನಾಡಿದ್ದಾರೆ. ಏರ್‌ಪೋರ್ಟ್‌ಗಳಲ್ಲಿ ತಮ್ಮ ಪೌಟ್ ಲುಕ್ ಜಾಹೀರಾತು ನೋಡಿ ತೈಮೂರ್ ರಿಯಾಕ್ಟ್ ಮಾಡುವ ರೀತಿ ಹಾಗೂ ಮಕ್ಕಳ ಡಿಜಿಟಲ್ ಫೋನ್ ಬಳಕೆಯ ಬಗ್ಗೆ ನಟಿ ಸುಂದರವಾಗಿ ಹಂಚಿಕೊಂಡ ಸ್ವಾರಸ್ಯಕರ ಸಂಗತಿಗಳು ಇಲ್ಲಿವೆ.

ಮಕ್ಕಳ ಎದುರು ಮುಜುಗರಕ್ಕೊಳಗಾದ ನಟಿ ಕರೀನಾ ಕಪೂರ್: ತೈಮೂರ್ ಪ್ರಶ್ನೆಗೆ ಬೇಸ್ತು ಬಿದ್ದ ನಟಿ
ಕರೀನಾ

Updated on: Sep 16, 2026 | 12:19 PM

ಮುಖ್ಯಾಂಶಗಳು

  • 'ಅಮ್ಮ ನೀನ್ಯಾಕೆ ಹಾಗೆ ಮಾಡ್ತೀಯಾ?'
  • ಕರೀನಾ ಜಾಹೀರಾತು ನೋಡಿ ತೈಮೂರ್ ಪ್ರಶ್ನೆ
  • ಮಕ್ಕಳ ಫೋನ್ ಬಳಕೆಗೆ ಕರೀನಾ ಕಟ್ಟುನಿಟ್ಟಿನ ಬ್ರೇಕ್

ಬಾಲಿವುಡ್ ಖ್ಯಾತ ನಟಿ ಕರೀನಾ ಕಪೂರ್ ತಮ್ಮ ಮಕ್ಕಳಾದ ತೈಮೂರ್ ಮತ್ತು ಜೆಹ್ ಬಗ್ಗೆ ಸ್ವಾರಸ್ಯಕರ ವಿಷಯವೊಂದನ್ನು ಹಂಚಿಕೊಂಡಿದ್ದಾರೆ. ರಸ್ತೆ ಹಾಗೂ ಏರ್‌ಪೋರ್ಟ್‌ಗಳಲ್ಲಿ ಇರುವ ತಮ್ಮ ಬೃಹತ್ ಜಾಹೀರಾತುಗಳನ್ನು ಮಕ್ಕಳು ನೋಡಿದಾಗ ತಮಗೆ ಸಂಕಟ ಮತ್ತು ಮುಜುಗರವಾಗುತ್ತದೆ ಎಂದು ಹೇಳಿದ್ದಾರೆ. ಮಕ್ಕಳ ಪ್ರಶ್ನೆಗಳಿಗೆ ಉತ್ತರಿಸಲು ಆಗದೆ ತಾವು ಪಡುವ ಪಡಿಪಾಟಲನ್ನು ಕರೀನಾ ಇತ್ತೀಚಿನ ಸಂದರ್ಶನದಲ್ಲಿ ಮುಕ್ತವಾಗಿ ಹಂಚಿಕೊಂಡಿದ್ದಾರೆ.

ಎಲ್ಲೆಂದರಲ್ಲಿ ಕರೀನಾ ಜಾಹೀರಾತುಗಳನ್ನು ಹಾಕಿರಲಾಗುತ್ತದೆ. ಇದನ್ನು ಮಕ್ಕಳು ಗಮನಿಸುವುದನ್ನು ನೋಡಿ ಕರೀನಾಗೆ ವಿಚಿತ್ರ ಅನುಭವವಾಗುತ್ತಿದೆಯಂತೆ. ‘ನನ್ನ ಮಕ್ಕಳು ಈಗ ಜಾಹೀರಾತುಗಳನ್ನು ಜಾಸ್ತಿ ಗಮನಿಸುತ್ತಿದ್ದಾರೆ. ನನ್ನ ಜಾಹೀರಾತುಗಳು ಅವರ ಕಣ್ಣಿಗೆ ಬಿದ್ದಾಗ ನನಗೆ ಏನು ಮಾಡಬೇಕೆಂದು ತೋಚುವುದಿಲ್ಲ. ಅವರು ಅದನ್ನು ನೋಡಬೇಕೋ ಬೇಡವೋ ಎಂಬ ಗೊಂದಲ ನನ್ನಲ್ಲಿ ಸದಾ ಇರುತ್ತದೆ’ ಎಂದು ಕರೀನಾ ಹೇಳಿದ್ದಾರೆ.

ಏರ್‌ಪೋರ್ಟ್‌ನಲ್ಲಿ ನಡೆದ ಘಟನೆಯೊಂದನ್ನು ಕರೀನಾ ನೆನಪಿಸಿಕೊಂಡಿದ್ದಾರೆ. ‘ಏರ್‌ಪೋರ್ಟ್‌ನಲ್ಲಿರುವ ನನ್ನ ಜಾಹೀರಾತಿನಲ್ಲಿ ನಾನು ಪೌಟ್ ಮಾಡಿರುವುದನ್ನು ನೋಡಿ ತೈಮೂರ್ ಪ್ರಶ್ನೆ ಮಾಡಿದ್ದನು. ‘ಅಮ್ಮ ನೀನ್ಯಾಕೆ ಆ ರೀತಿ ಮಾಡುತ್ತಿದ್ದೀಯಾ?’ ಎಂದು ಕೇಳಿದನು. ನಾನು ಅದನ್ನು ಬಿಟ್ಟು ಮುಂದಕ್ಕೆ ನಡೆಯಲು ಹೇಳಿದೆ. ಆದರೂ ಅವನು ಮತ್ತೆ ಮತ್ತೆ ಅದನ್ನೇ ಕೇಳುತ್ತಿದ್ದನು’ ಎಂದು ನಟಿ ವಿವರಿಸಿದ್ದಾರೆ.

ಮಕ್ಕಳ ಮೊಬೈಲ್ ಮತ್ತು ಲ್ಯಾಪ್‌ಟಾಪ್ ಬಳಕೆಯ ಬಗ್ಗೆಯೂ ಕರೀನಾ ಮಾತನಾಡಿದ್ದಾರೆ. ‘ನನ್ನ ಮಕ್ಕಳಿಗೆ ಸ್ವಂತ ಫೋನ್ ಇಲ್ಲ. ಆದರೆ ಅವರು ತಮ್ಮ ನ್ಯಾನಿ (ಸಾಕುವಾಕೆ) ಫೋನ್ ಅನ್ನೇ ತಮ್ಮದೆಂದು ಭಾವಿಸುತ್ತಾರೆ. ಗೇಮ್ಸ್ ಆಡುವಾಗ ನಾನು ಫೋನ್ ಕಸಿದುಕೊಳ್ಳುತ್ತೇನೆ. ಆಗ ‘ನೀವು ಮತ್ತು ಅಪ್ಪ ಕೂಡ ಫೋನ್‌ನಲ್ಲೇ ಮಾತನಾಡುತ್ತೀರಲ್ಲ’ ಎಂದು ತೈಮೂರ್ ಎದುರು ಪ್ರಶ್ನೆ ಹಾಕುತ್ತಾನೆ’ ಎಂದಿದ್ದಾರೆ.

ಇದನ್ನೂ ಓದಿ: ‘ಆ ನಿರ್ಧಾರಕ್ಕೆ ಇನ್ನೂ ಕೊರಗಿದೆ’; ನಟಿ ಕರೀನಾ ಕಪೂರ್​ಗೆ ಪಶ್ಚಾತ್ತಾಪ

ಸೈಫ್ ಅಲಿ ಖಾನ್ ಮತ್ತು ಕರೀನಾ ಕಪೂರ್ 2012ರಲ್ಲಿ ವಿವಾಹವಾದರು. ಈ ದಂಪತಿಗೆ ತೈಮೂರ್ ಮತ್ತು ಜೆಹ್ ಎಂಬ ಇಬ್ಬರು ಗಂಡು ಮಕ್ಕಳಿದ್ದಾರೆ. ತೈಮೂರ್‌ಗೆ ಸಿನಿಮಾಗಳ ಮೇಲೆ ಯಾವುದೇ ಆಸಕ್ತಿ ಇಲ್ಲವಂತೆ. ಬದಲಿಗೆ ಕ್ರೀಡಾರಂಗದ ಮೇಲೆ ಒಲವಿದ್ದು, ಭವಿಷ್ಯದಲ್ಲಿ ಜಾಗತಿಕ ಮಟ್ಟದಲ್ಲಿ ಫುಟ್‌ಬಾಲ್ ಅಥವಾ ಕ್ರಿಕೆಟ್ ಆಡುವ ಆಸೆ ಹೊಂದಿದ್ದಾನೆ ಎಂದು ಕರೀನಾ ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

 

 

ರಾಜೇಶ್ ದುಗ್ಗುಮನೆ

ರಾಜೇಶ್ ದುಗ್ಗುಮನೆಯವರು ಮೂಲತಃ ಉತ್ತರ ಕನ್ನಡದ ಶಿರಸಿಯವರು. ಇವರು ಪತ್ರಿಕಾ ರಂಗಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us