‘ಆ ಮೆಸೇಜ್ ಮಿಸ್ ಆಗಿ ಹೋಯ್ತು’; ಸಲ್ಮಾನ್​ ಖಾನ್​ಗೆ ಬೆದರಿಕೆ ಹಾಕಿ ಕ್ಷಮೆ ಕೇಳಿದ ವ್ಯಕ್ತಿ

ಬಾಬಾ ಸಿದ್ಧಿಕಿ ಹತ್ಯೆ ಬಳಿಕ ಸಲ್ಮಾನ್ ಖಾನ್ ಅವರು ಸಿನಿಮಾದ ಕೆಲಸಗಳಿಗೆ ಬ್ರೇಕ್ ನೀಡಿದರು. ಆಪ್ತನ ಅಂತ್ಯಕ್ರಿಯೆಯಲ್ಲಿ ಭಾಗಿಯಾದರು. ಸಲ್ಮಾನ್ ಖಾನ್​ಗೆ ಸಹಾಯ ಮಾಡುತ್ತಾರೆ ಎಂಬ ಕಾರಣದಿಂದಲೇ ಬಾಬಾ ಸಿದ್ಧಿಕಿ ಅವರನ್ನು ಹತ್ಯೆ ಮಾಡಲಾಯಿತು. ಆ ಬಳಿಕ ಸಲ್ಮಾನ್ ಖಾನ್ ಅವರ ಭದ್ರತೆಯನ್ನು ಹೆಚ್ಚಿಸಲಾಯಿತು. ಈಗ ಸಲ್ಮಾನ್ ಖಾನ್ ಬಳಿ ಒಬ್ಬರು ಕ್ಷಮೆ ಕೇಳಿದ್ದಾರೆ.

‘ಆ ಮೆಸೇಜ್ ಮಿಸ್ ಆಗಿ ಹೋಯ್ತು’; ಸಲ್ಮಾನ್​ ಖಾನ್​ಗೆ ಬೆದರಿಕೆ ಹಾಕಿ ಕ್ಷಮೆ ಕೇಳಿದ ವ್ಯಕ್ತಿ
ಸಲ್ಮಾನ್ ಖಾನ್

Updated on: Oct 22, 2024 | 12:52 PM

ಸಲ್ಮಾನ್ ಖಾನ್ ಅವರಿಗೆ ಸಾಕಷ್ಟು ಬೆದರಿಕೆಗಳು ಇವೆ. ಇದಕ್ಕೆಲ್ಲ ಕಾರಣ ಆಗಿರೋದು ಲಾರೆನ್ಸ್ ಬಿಷ್ಣೋಯ್. ಈತ ಸಲ್ಮಾನ್ ಖಾನ್​ನ ಕೊಲೆ ಮಾಡೋದಾಗಿ ನಿರಂತರವಾಗಿ ಬೆದರಿಕೆ ಹಾಕುತ್ತಲೇ ಇದ್ದ. ಈ ಪ್ರಕರಣವನ್ನು ಸೆಟಲ್​ಮೆಂಟ್ ಮಾಡಿಸೋದಾಗಿ ವ್ಯಕ್ತಿಯೋರ್ವ ಮುಂಬೈ ಟ್ರಾಫಿಕ್ ಪೊಲೀಸರಿಗೆ ಸಂದೇಶ ಕಳುಹಿಸಿದ್ದ. ಇದಕ್ಕಾಗಿ ಆತ 5 ಕೋಟಿ ರೂಪಾಯಿಗೆ ಬೇಡಿಕೆ ಇಟ್ಟಿದ್ದ. ಈಗ ಈ ವ್ಯಕ್ತಿ ಕ್ಷಮೆ ಕೇಳಿದ್ದಾನೆ. ‘ಮಿಸ್ ಆಗಿ ಮೆಸೇಜ್ ಹೋಯ್ತು’ ಎಂದಿದ್ದಾನೆ.

‘ಸಲ್ಮಾನ್ ಖಾನ್ ಹತ್ಯೆ ಬಾಬಾ ಸಿದ್ಧಿಕಿ ಹತ್ಯೆಗಿಂತಲೂ ಭೀಕರವಾಗಿರುತ್ತದೆ’ ಎನ್ನುವ ಸಂದೇಶ ಬಂದಿತ್ತು. ಇದನ್ನು ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್​ನವರೇ ಮಾಡಿರಬಹುದು ಎಂದು ಊಹಿಸಲಾಗಿತ್ತು. ಇದಾದ ಬಳಿಕ ಪ್ರಕರಣ ಸೆಟಲ್​ ಮಾಡಲು ಐದು ಕೋಟಿ ರೂಪಾಯಿ ಕೇಳಿದ್ದ. ಈಗ ಇದೇ ವ್ಯಕ್ತಿ ಕ್ಷಮೆ ಕೇಳಿದ್ದಾನೆ.

‘ನನ್ನ ಸಂದೇಶ ಮಿಸ್ ಆಗಿ ಹೋಗಿದೆ. ಈ ಘಟನೆ ಬಗ್ಗೆ ಕ್ಷಮೆ ಕೇಳುತ್ತೇನೆ’ ಎಂದು ಆತ ಈಗ ಸಂದೇಶ ಕಳುಹಿಸಿದ್ದಾನೆ. ಇದಾದ ಬಳಿಕವೂ ಪೊಲೀಸರು ಪ್ರಕರಣವನ್ನು ಹಗುರವಾಗಿ ಸ್ವೀಕರಿಸಿಲ್ಲ. ಅವರು ಈ ಪ್ರಕರಣದ ತನಿಖೆ ನಡೆಸುತ್ತಿದ್ದಾರೆ. ಈ ಸಂದೇಶ ಬಂದಿದ್ದು ಜಾರ್ಖಂಡದಿಂದ ಎನ್ನಲಾಗಿದೆ. ಆ ವ್ಯಕ್ತಿಗಾಗಿ ಹುಡುಕಾಟ ನಡೆಸಲಾಗುತ್ತಿದೆ. ಆತ ಕ್ಷಮೆ ಕೇಳಿದ ಹೊರತಾಗಿಯೂ ಆತನ ಬಂಧನಕ್ಕೆ ಹುಡುಕಾಟ ನಡೆದಿದೆ.

ಸಲ್ಮಾನ್ ಖಾನ್​ಗೆ ಈ ರೀತಿ ಬೆದರಿಕೆ ಬಂದಿರೋದು ಇದೇ ಮೊದಲೇನು ಅಲ್ಲ. ಇದಕ್ಕೆ ಸಂಬಂಧಿಸಿದ ಅನೇಕ ಘಟನೆಗಳು ನಡೆದಿವೆ. ಅದರಲ್ಲೂ ಬಿಷ್ಣೋಯ್ ಗ್ಯಾಂಗ್​ನವರು ಪದೇ ಪದೇ ಟಾರ್ಗೆಟ್ ಮಾಡುತ್ತಿದ್ದಾರೆ. ಆತ ಜೈಲಿನಲ್ಲಿ ಇದ್ದುಕೊಂಡೇ ಎಲ್ಲವನ್ನೂ ಹ್ಯಾಂಡಲ್ ಮಾಡುತ್ತಿದ್ದಾನೆ.

ಇದನ್ನೂ ಓದಿ: ‘ಸಿಂಘಂ ಅಗೇನ್’ ಸಿನಿಮಾದಲ್ಲಿ ಸಲ್ಮಾನ್ ಖಾನ್ ಪಾತ್ರವೇ ಕ್ಯಾನ್ಸಲ್; ಕಾರಣ ಏನು?

ಸಲ್ಮಾನ್ ಖಾನ್ ಅವರು ‘ಸಿಖಂದರ್’ ಸಿನಿಮಾ ಕೆಲಸಗಳಲ್ಲಿ ತೊಡಗಿಕೊಂಡಿದ್ದಾರೆ. ಸಲ್ಲು ಆಪ್ತ ಎನಿಸಿಕೊಂಡಿದ್ದ ಮಹಾರಾಷ್ಟ್ರದ ಮಾಜಿ ಸಚಿವ ಬಾಬಾ ಸಿದ್ಧಿಕಿಯನ್ನು ಬಿಷ್ಣೋಯ್ ಗ್ಯಾಂಗ್​ನವರೇ ಹತ್ಯೆ ಮಾಡಿದ್ದಾರೆ. ಇದಾದ ಬಳಿಕ ಸಲ್ಲು ವಿಚಲಿತರಾಗಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ರಾಜೇಶ್ ದುಗ್ಗುಮನೆ

ರಾಜೇಶ್​ ಹೆಗಡೆಯವರು ಪತ್ರಿಕೋದ್ಯಮಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us