
ಐಪಿಎಲ್ನಲ್ಲಿ ಗುಜರಾತ್ ಟೈಟಾನ್ಸ್ (Gujarat Titans) ಹಾಗೂ ಕೋಲ್ಕತ್ತಾ ನೈಟ್ ರೈಡರ್ಸ್ ಮಧ್ಯೆ ನಡೆದ ಪಂದ್ಯ ಸಾಕಷ್ಟು ರೋಚಕತೆ ಮೂಡಿಸಿತ್ತು. ಕೊನೆಯ ಓವರ್ನಲ್ಲಿ ಕೆಕೆಆರ್ಗೆ 29 ರನ್ಗಳ ಅವಶ್ಯಕತೆ ಇತ್ತು. ಆಗ ಬ್ಯಾಟಿಂಗ್ಗೆ ಇಳಿದ ರಿಂಕು ಸಿಂಗ್ ಬರೋಬ್ಬರಿ 5 ಸಿಕ್ಸ್ ಬಾರಿಸಿ ಕೆಕೆಆರ್ಗೆ ಗೆಲುವನ್ನು ತಂದುಕೊಟ್ಟರು. ಈ ಮೂಲಕ ಕೆಕೆಆರ್ಗೆ ಐತಿಹಾಸಿಕ ಗೆಲುವು ಸಿಕ್ಕಿತು. ರಿಂಕು ಸಿಂಗ್ (Rinku Singh) ನಿಜವಾದ ಹೀರೋ ಎನಿಸಿಕೊಂಡರು. ಕೆಕೆಆರ್ ಮಾಲೀಕ ಶಾರುಖ್ ಖಾನ್, ಅವರ ಮಗ ಆರ್ಯನ್ ಖಾನ್, ರಣವೀರ್ ಸಿಂಗ್ ಹಾಗೂ ಮೊದಲಾದವರು ರಿಂಕು ಆಟವನ್ನು ಕೊಂಡಾಡಿದ್ದಾರೆ.
ಮೊದಲು ಬ್ಯಾಟ್ ಮಾಡಿದ ಗುಜರಾತ್ ಟೈಟಾನ್ಸ್ ಬರೋಬ್ಬರಿ 204ರನ್ ಕಲೆ ಹಾಕಿತು. ಈ ಬೃಹತ್ ಮೊತ್ತ ಬೆನ್ನಟ್ಟಿದ ಕೆಕೆಆರ್ಗೆ ಒಳ್ಳೆಯ ಆರಂಭ ಸಿಕ್ಕಿತು. 40 ಎಸೆತಗಳಲ್ಲಿ ವೆಂಕಟೇಶ್ ಅಯ್ಯರ್ 5 ಸಿಕ್ಸ್ ಹಾಗು 8 ಫೋರ್ನೊಂದಿಗೆ 83 ರನ್ ಗಳಿಸಿ ಔಟಾದರು. ನಿತೀಶ್ ರಾಣಾ ಕೂಡ ತಂಡಕ್ಕೆ ಆಸರೆ ಆದರು. ಇತ್ತ ಜಿಟಿ ಬೌಲರ್ ರಶೀದ್ ಖಾನ್ ಹ್ಯಾಟ್ರಿಕ್ ವಿಕೆಟ್ ತೆಗೆಯುವ ಮೂಲಕ ಗುಜರಾತ್ ಟೈಟಾನ್ಸ್ಗೆ ಗೆಲುವನ್ನು ತಂಡುಕೊಡುವ ಭರವಸೆ ಇತ್ತರು. ಆದರೆ, ರೋಚಕ ಕೊನೆಯ ಓವರ್ನಲ್ಲಿ ಆಟದ ಗತಿಯೇ ಬದಲಾಯಿತು.
ಇದನ್ನೂ ಓದಿ: Rinku Singh: ಕೊನೆಯ ಓವರ್ನಲ್ಲಿ 5 ಸಿಕ್ಸ್ ಸಿಡಿಸಿ ರೋಚಕ ಜಯ ತಂದುಕೊಟ್ಟ ರಿಂಕು ಸಿಂಗ್
ಶಾರುಖ್ ಖಾನ್ ಅವರು ಈ ಬಗ್ಗೆ ಟ್ವೀಟ್ ಮಾಡಿದ್ದಾರೆ. ‘ಜೂಮೆ ಜೋ ಪಠಾಣ್..’ ಬದಲು ‘ಜೂಮೆ ಜೋ ರಿಂಕು..’ ಎಂದು ಬರೆದುಕೊಂಡಿದ್ದಾರೆ. ಅಷ್ಟೇ ಅಲ್ಲ ‘ಮೈ ಬೇಬಿ ರಿಂಕು’ ಎಂದು ಕರೆದಿದ್ದಾರೆ. ರಣವೀರ್ ಸಿಂಗ್ ಕೂಡ ಈ ಬಗ್ಗೆ ಟ್ವೀಟ್ ಮಾಡಿದ್ದು, ‘ರಿಂಕು.. ರಿಂಕು.. ರಿಂಕು..’ ಎಂದು ಚಿಯರ್ ಮಾಡಿದ್ದಾರೆ. ರಿಂಕು ಅವರ ಫೋಟೋ ಅನ್ನು ಸ್ಟೇಟಸ್ನಲ್ಲಿ ಹಾಕಿ ‘ಬೀಸ್ಟ್’ ಎಂದು ಆರ್ಯನ್ ಖಾನ್ ಬರೆದುಕೊಂಡಿದ್ದಾರೆ.
ಇದನ್ನೂ ಓದಿ: IPL 2023: ಹಿಂದೆಂದೂ ಕಂಡರಿಯದ ಚೇಸಿಂಗ್: ಐಪಿಎಲ್ನಲ್ಲಿ ದಾಖಲೆ ನಿರ್ಮಿಸಿದ ರಿಂಕು ಸಿಂಗ್
ಸಿನಿಮಾ ವಿಚಾರಕ್ಕೆ ಬರೋದಾದರೆ, ಶಾರುಖ್ ಖಾನ್ ಅವರು ‘ಪಠಾಣ್’ ಗೆಲುವಿನ ಖುಷಿಯಲ್ಲಿದ್ದಾರೆ. ‘ಜವಾನ್’ ಹಾಗೂ ‘ಡಂಕಿ’ ಸಿನಿಮಾಗಳ ಶೂಟ್ನಲ್ಲಿ ಬ್ಯುಸಿ ಇದ್ದಾರೆ. ಇದರ ಮಧ್ಯೆ ಬಿಡುವು ಮಾಡಿಕೊಂಡುಬಂದು ಕೆಕೆಆರ್ ಮ್ಯಾಚ್ ವೀಕ್ಷಿಸುತ್ತಾರೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ