Salman Khan: ಸಲ್ಮಾನ್ ಖಾನ್ ಸಿನಿಮಾ ಸೆಟ್​ನಲ್ಲಿದೆ ಡ್ರೆಸ್​ಕೋಡ್​; ಇದು ಮಹಿಳೆಯರಿಗೆ ಮಾತ್ರ

ಪಲಕ್ ತಿವಾರಿ ಹಲವು ಕಡೆಗಳಲ್ಲಿ ಸಂದರ್ಶನ ನೀಡುತ್ತಿದ್ದಾರೆ. ಈ ವೇಳೆ ಅವರು ಸೆಟ್ ಅನುಭವ ಹಂಚಿಕೊಂಡಿದ್ದಾರೆ. ಅವರು ರಿವೀಲ್ ಮಾಡಿರುವ ವಿಚಾರದಿಂದ ಅನೇಕರಿಗೆ ಸಲ್ಲು ಮೇಲಿದ್ದ ಗೌರವ ಹೆಚ್ಚಿದೆ.

Salman Khan: ಸಲ್ಮಾನ್ ಖಾನ್ ಸಿನಿಮಾ ಸೆಟ್​ನಲ್ಲಿದೆ ಡ್ರೆಸ್​ಕೋಡ್​; ಇದು ಮಹಿಳೆಯರಿಗೆ ಮಾತ್ರ

Updated on: Apr 13, 2023 | 8:16 AM

ಮುಖ್ಯಾಂಶಗಳು

  • ಬಾಲಿವುಡ್​ಗೆ ಎಂಟ್ರಿ ಕೊಡುತ್ತಿದ್ದಾರೆ ಪಲಕ್ ತಿವಾರಿ
  • ಸಲ್ಲು ಬಗ್ಗೆ ಅಚ್ಚರಿಯ ವಿಚಾರ ಹಂಚಿಕೊಂಡ ನಟಿ
  • ಸಲ್ಮಾನ್ ಖಾನ್​ ಬಗೆಗಿನ ಗೌರವ ಹೆಚ್ಚಿಸಿದ ಆ ಘಟನೆ

ಸಲ್ಮಾನ್ ಖಾನ್ ಅವರು ಬಾಲಿವುಡ್​ನ ಸ್ಟಾರ್ ಹೀರೋ. ಚಿತ್ರರಂಗದಲ್ಲಿ ಅವರು ತಮ್ಮದೇ ಆದ ಕೆಲ ನಿಯಮಗಳನ್ನು ಇಟ್ಟುಕೊಂಡಿದ್ದಾರೆ. ಅವರು ಎಂದಿಗೂ ತೆರೆಮೇಲೆ ಕಿಸ್ ಮಾಡುವುದಿಲ್ಲ. ತಮ್ಮ ಫ್ಯಾಮಿಲಿ ಆಡಿಯನ್ಸ್​ಗೆ ಮುಜುಗರ ಆಗಬಾರದು ಎನ್ನುವುದು ಅವರ ನಂಬಿಕೆ. ವಿಶೇಷ ಎಂದರೆ ಸಲ್ಮಾನ್ ಖಾನ್ (Salman Khan) ತಮ್ಮ ಸೆಟ್​ಗೆ ಬರೋ ಮಹಿಳೆಯರಿಗೆ ಡ್ರೆಸ್​ಕೋಡ್ ಇಟ್ಟಿದ್ದಾರಂತೆ! ಹೀಗೊಂದು ಅಚ್ಚರಿಯ ವಿಚಾರವನ್ನು ನಟಿ ಪಲಕ್ ತಿವಾರಿ ರಿವೀಲ್ ಮಾಡಿದ್ದಾರೆ. ಪುರುಷರ ಮಧ್ಯೆ ಇರುವ ಮಹಿಳೆಯರಿಗೆ ಸೆಟ್​ನಲ್ಲಿ ಯಾವುದೇ ತೊಂದರೆ ಆಗಬಾರದು ಅನ್ನೋದು ಭಾಯಿಜಾನ್​ ಉದ್ದೇಶ.

ಪಲಕ್ ತಿವಾರಿ ಬಾಲಿವುಡ್​ಗೆ ಎಂಟ್ರಿ ಕೊಡುತ್ತಿದ್ದಾರೆ. ಸಲ್ಮಾನ್ ಖಾನ್ ನಟನೆಯ ‘ಕಿಸಿ ಕ ಭಾಯ್ ಕಿಸಿ ಕಿ ಜಾನ್​’ ಸಿನಿಮಾ ರಿಲೀಸ್​ಗೆ ರೆಡಿ ಇದೆ. ಈ ಚಿತ್ರದಲ್ಲಿ ಅವರು ಪಾತ್ರ ಒಂದನ್ನು ಮಾಡಿದ್ದಾರೆ. ಏಪ್ರಿಲ್ 21ರಂದು ಚಿತ್ರ ತೆರೆಗೆ ಬರುತ್ತಿದೆ. ಇದರ ಪ್ರಚಾರದಲ್ಲಿ ತೊಡಗಿರುವ ಪಲಕ್ ತಿವಾರಿ ಹಲವು ಕಡೆಗಳಲ್ಲಿ ಸಂದರ್ಶನ ನೀಡುತ್ತಿದ್ದಾರೆ. ಈ ವೇಳೆ ಅವರು ಸೆಟ್ ಅನುಭವ ಹಂಚಿಕೊಂಡಿದ್ದಾರೆ. ಅವರು ರಿವೀಲ್ ಮಾಡಿರುವ ವಿಚಾರದಿಂದ ಅನೇಕರಿಗೆ ಸಲ್ಲು ಮೇಲಿದ್ದ ಗೌರವ ಹೆಚ್ಚಿದೆ.

‘ಅಂತಿಮ್​: ದಿ ಫೈನಲ್ ಟ್ರುತ್’ ಸಿನಿಮಾದಲ್ಲಿ ಪಲಕ್ ಅವರು ಸಹಾಯಕ ನಿರ್ದೇಶಕಿ ಆಗಿದ್ದರು. ಆಯುಷ್ ಶರ್ಮಾ ನಟನೆಯ ಈ ಚಿತ್ರದಲ್ಲಿ ಸಲ್ಮಾನ್ ಖಾನ್ ಕೂಡ ಕಾಣಿಸಿಕೊಂಡಿದ್ದರು. ಸಲ್ಮಾನ್ ಖಾನ್ ಅವರೇ ಚಿತ್ರವನ್ನು ನಿರ್ಮಾಣ ಮಾಡಿದ್ದರು. ಈ ಕಾರಣಕ್ಕೆ ಸಲ್ಲು ಕೆಲ ನಿಯಮ ತಂದಿದ್ದರು.

ಇದನ್ನೂ ಓದಿ:‘ಏಪ್ರಿಲ್ 30ಕ್ಕೆ ಸಲ್ಮಾನ್ ಖಾನ್​ನ ಮುಗಿಸ್ತೀವಿ’; ಸಲ್ಲುಗೆ ಬಂತು ಮತ್ತೊಂದು ಬೆದರಿಕೆ ಕರೆ

‘ಸಲ್ಮಾನ್ ಖಾನ್ ಅವರು ಸೆಟ್​​ನಲ್ಲಿ ಮಹಿಳೆಯರಿಗೆ ನಿಯಮ ತಂದಿದ್ದರು. ಸರಿಯಾಗಿರೋ ಡ್ರೆಸ್​ನ ಮಾತ್ರ ಹಾಕಬೇಕು. ಕತ್ತಿನ ಬಳಿ ಡ್ರೆಸ್​ ಸರಿಯಾಗಿ ಇರಬೇಕು. ದೇಹದ ಮುಖ್ಯ ಪಾರ್ಟ್ ಕವರ್ ಆಗಿರಬೇಕಿತ್ತು’ ಎಂದಿದ್ದಾರೆ ಪಲಕ್​. ಒಮ್ಮೆ ಪಲಕ್ ಸೆಟ್​ಗೆ ಹೊರಟಿದ್ದರು. ಅವರು ತೊಟ್ಟಿದ್ದ ಸಾಂಪ್ರದಾಯಿಕ ಬಟ್ಟೆ ನೋಡಿ ಅವರ ತಾಯಿ ಶ್ವೇತಾ ತಿವಾರಿಗೆ ಅಚ್ಚರಿ ಆಗಿತ್ತು. ಈ ಬಗ್ಗೆ ಕೇಳಿದಾಗ ಸಲ್ಲು ನಿಯಮದ ಬಗ್ಗೆ ಹೇಳಿದ್ದರು ಪಲಕ್​. ಇದರಿಂದ ಶ್ವೇತಾಗೆ ಸಲ್ಲು ಮೇಲಿದ್ದ ಗೌರವ ಹೆಚ್ಚಿತ್ತು.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

ರಾಜೇಶ್ ಹೆಗಡೆ ದುಗ್ಗುಮನೆ

ರಾಜೇಶ್ ಹೆಗಡೆ ದುಗ್ಗುಮನೆಯವರು ಮೂಲತಃ ಉತ್ತರ ಕನ್ನಡದ ಶಿರಸಿಯವರು. ಇವರು ಪತ್ರಿಕಾ ರಂಗಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us