
ಬಾಲಿವುಡ್ ನಟ ಸಲ್ಮಾನ್ ಖಾನ್ (Salman Khan) ಅವರು ಬಾಲಿವುಡ್ನ ಸ್ಟಾರ್ ಹೀರೋ ಎಂಬುದು ನಿಜ. ಆದರೆ, ಈಗ ಅವರಿಗೆ ಮೊದಲಿನ ಬೇಡಿಕೆ ಉಳಿದುಕೊಂಡಿಲ್ಲ. ಅವರ ವೃತ್ತಿ ಜೀವನ ಡಲ್ ಆಗಿದೆ. ಮೊದಲಿನಷ್ಟು ಖಡಕ್ ಸಿನಿಮಾಗಳನ್ನು ನೀಡಲು ಅವರಿಂದ ಸಾಧ್ಯವಾಗುತ್ತಿಲ್ಲ. ಬಾಲಿಶ ಸ್ಕ್ರಿಪ್ಟ್ಗ ಆಯ್ಕೆ ಕಾರಣಕ್ಕೆ ಸಿನಿಮಾ ಓಡುತ್ತಿಲ್ಲ. ಹೀಗಿರುವಾಗಲೇ ಈಗ ಸಲ್ಮಾನ್ ಖಾನ್ ಅವರು ಸ್ಯಾಂಡ್ವಿಚ್ ಆಗೋದನ್ನು ತಪ್ಪಿಸಿಕೊಳ್ಳಲು ಒಂದು ಪ್ಲ್ಯಾನ್ ರೂಪಿಸಿದ್ದಾರೆ. ಆ ಬಗ್ಗೆ ಇಲ್ಲಿದೆ ವಿವರ.
ಬಾಲಿವುಡ್ ಅಲ್ಲಿ ಸಲ್ಮಾನ್ ಖಾನ್ ಅವರ ಹವಾ ಬಗ್ಗೆ ಹೊಸದಾಗಿ ಹೇಳಬೇಕಿಲ್ಲ. ಅವರ ಸಿನಿಮಾಗಳು ರಿಲೀಸ್ ಆಗುತ್ತವೆ ಎಂದರೆ ದೊಡ್ಡ ಹೀರೋಗಳ ಚಿತ್ರಗಳು ಬದಿಗೆ ಸರಿಯುತ್ತಿದ್ದವು. ಆದರೆ, ಈಗ ಪರಿಸ್ಥಿತಿ ಆ ರೀತಿ ಇಲ್ಲ. ಅವರ ಸಿನಿಮಾ ರಿಲೀಸ್ ಆಗುತ್ತದೆ ಎಂದರೆ ಯಾರೊಬ್ಬರೂ ಹೆಚ್ಚು ತಲೆಕೆಡಿಸಿಕೊಳ್ಳುವುದಿಲ್ಲ. ಇದು ನಿರ್ಮಾಪಕರ ಭಯಕ್ಕೆ ಕಾರಣ ಆಗಿದೆ. ಅವರ ನಟನೆಯ ‘ಬ್ಯಾಟಲ್ ಆಫ್ ಗಲ್ವಾನ್’ ಏಪ್ರಿಲ್ 17ರಂದು ರಿಲೀಸ್ ಆಗಬೇಕಿತ್ತು. ಆದರೆ, ಈಗ ಅದು ಮುಂದಕ್ಕೆ ಹೋಗಿದೆ.
ಮಾರ್ಚ್ 19ಕ್ಕೆ ‘ಟಾಕ್ಸಿಕ್’ ಹಾಗೂ ‘ಧುರಂಧರ್ 2’ ಸಿನಿಮಾಗಳು ತೆರೆಗೆ ಬರುತ್ತಿವೆ. ಇಷ್ಟೇ ಅಲ್ಲ, ಏಪ್ರಿಲ್ 30ಕ್ಕೆ ತೆಲುಗಿನ ಪೆದ್ದಿ, ಕನ್ನಡದ ‘ಕೆಡಿ’ ಚಿತ್ರಗಳು ಬರುತ್ತಿವೆ. ಇದರ ಮಧ್ಯೆ ಬಂದರೆ ಸ್ಯಾಂಡ್ವಿಚ್ ಆಗೋದು ಫಿಕ್ಸ್ ಎಂಬುದು ಸಲ್ಲು ನಿರ್ಮಾಪಕರ ಆತಂಕ. ಇದಲ್ಲದೆ, ಸಿನಿಮಾ ಕೆಲಸ ಕೂಡ ಇನ್ನೂ ಪೂರ್ಣಗೊಂಡಿಲ್ಲ. ಈ ವಿಷಯದಲ್ಲಿ ಆತುರ ಮಾಡೋದು ಬೇಡ ಎಂಬುದು ಅವರ ಆಲೋಚನೆ.
ಈ ಎಲ್ಲಾ ಕಾರಣದಿಂದ ಸಲ್ಮಾನ್ ಖಾನ್ ಅವರ ಚಿತ್ರವನ್ನು ಸ್ವತಂತ್ರ್ಯ ದಿನಾಚರಣೆಗೆ ಮುಂದೂಡಡಲಾಗಿದೆ. ಮೇ ತಿಂಗಳಲ್ಲಿ ಐಪಿಎಲ್ ಅಬ್ಬರ ಜೋರಿರುತ್ತದೆ. ಆ ಬಳಿಕ ಮಳೆಗಾಲ. ಹೀಗಾಗಿ, ಆಗಸ್ಟ್ 15ನ್ನು ತಂಡ ಆಯ್ಕೆ ಮಾಡಿಕೊಂಡಿದೆ.
ಇದನ್ನೂ ಓದಿ: ಪ್ರೇಮಿಗಳಿಗಾಗಿ ಮತ್ತೆ ರಿಲೀಸ್ ಆಗುತ್ತಿದೆ ಸಲ್ಮಾನ್ ಖಾನ್ ಸಿನಿಮಾ ‘ತೇರೆ ನಾಮ್’
‘ಬ್ಯಾಟಲ್ ಆಫ್ ಗಲ್ವಾನ್’ ಸಿನಿಮಾ ದೇಶಭಕ್ತಿ ಕಥೆಯ ಸಿನಿಮಾ. ಚೀನಾ ಹಾಗೂ ಭಾರತದ ಗಡಿ ಗಲ್ವಾನ್ನಲ್ಲಿ ನಡೆದ ಫೈಟ್ ಆಧರಿಸಿ ಈ ಸಿನಿಮಾ ಮಾಡಲಾಗುತ್ತಿದೆ. ಹೀಗಾಗಿ ಆಗಸ್ಟ್ 15 ಒಳ್ಳೆಯ ಆಯ್ಕೆ ಎಂಬುದು ತಂಡದ ಆಲೋಚನೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.