ಅವಕಾಶಕ್ಕಾಗಿ ಅಂಗಲಾಚಿದ ಸಹ ನಟನ ಸಹಾಯಕ್ಕೆ ಧಾವಿಸಿದ ಶಾರುಖ್ ಖಾನ್

ಸಿನಿಮಾ ರಂಗದಲ್ಲಿ ಯಾವಾಗ ಅದೃಷ್ಟ ಕೈಕೊಡುತ್ತದೆಯೋ ಹೇಳಲಾಗದು. ಒಂದು ಸಮಯದಲ್ಲಿ ನಿರ್ದೇಶಕ, ನಿರ್ಮಾಪಕರ ಮೆಚ್ಚಿನ ನಟರಾಗಿದ್ದವರು ಕೆಲವೇ ವರ್ಷಗಳಲ್ಲಿ ಯಾರಿಗೂ ಬೇಡವಾಗಿ ಬಿಡುತ್ತಾರೆ. ಒಂದು ಕಾಲದಲ್ಲಿ ಮಿಂಚಿ ಈಗ ಅವಕಾಶಕ್ಕಾಗಿ ಅಂಗಲಾಚುತ್ತಿರುವ ಹಲವು ಕಲಾವಿದರನ್ನು ನೋಡಿಯೇ ಇದ್ದೇವೆ. ಬಾಲಿವಡ್​​ ನಟ ಶರದ್ ಕಪೂರ್ ಸಹ ಇಂಥಹುದೇ ಪರಿಸ್ಥಿತಿಯಲ್ಲಿದ್ದಾರೆ. ಆದರೆ ಅವರ ನೆರವಿಗೆ ಅವರದ್ದೇ ಮಾಜಿ ಸಹ ನಟ ಶಾರುಖ್ ಖಾನ್ ಬಂದಿದ್ದಾರೆ.

ಅವಕಾಶಕ್ಕಾಗಿ ಅಂಗಲಾಚಿದ ಸಹ ನಟನ ಸಹಾಯಕ್ಕೆ ಧಾವಿಸಿದ ಶಾರುಖ್ ಖಾನ್
Srk Sharadh

Updated on: Nov 20, 2026 | 1:53 PM

ಸಿನಿಮಾ ರಂಗದಲ್ಲಿ ಯಾವಾಗ ಅದೃಷ್ಟ ಕೈಕೊಡುತ್ತದೆಯೋ ಹೇಳಲಾಗದು. ಒಂದು ಸಮಯದಲ್ಲಿ ನಿರ್ದೇಶಕ, ನಿರ್ಮಾಪಕರ ಮೆಚ್ಚಿನ ನಟರಾಗಿದ್ದವರು ಕೆಲವೇ ವರ್ಷಗಳಲ್ಲಿ ಯಾರಿಗೂ ಬೇಡವಾಗಿ ಬಿಡುತ್ತಾರೆ. ಒಂದು ಕಾಲದಲ್ಲಿ ಮಿಂಚಿ ಈಗ ಅವಕಾಶಕ್ಕಾಗಿ ಅಂಗಲಾಚುತ್ತಿರುವ ಹಲವು ಕಲಾವಿದರನ್ನು ನೋಡಿಯೇ ಇದ್ದೇವೆ. ಬಾಲಿವಡ್​​ ನಟ ಶರದ್ ಕಪೂರ್ ಸಹ ಇಂಥಹುದೇ ಪರಿಸ್ಥಿತಿಯಲ್ಲಿದ್ದಾರೆ. ಆದರೆ ಅವರ ನೆರವಿಗೆ ಅವರದ್ದೇ ಮಾಜಿ ಸಹ ನಟ ಶಾರುಖ್ ಖಾನ್ ಬಂದಿದ್ದಾರೆ.

ಸೂಪರ್ ಹಿಟ್ ‘ಜೋಶ್’ ಸಿನಿಮಾನಲ್ಲಿ ಶಾರುಖ್ ಖಾನ್ ಜೊತೆಗೆ ಸಹ ನಾಯಕನಾಗಿ ನಟಿಸಿದ್ದ ಶರದ್ ಕಪೂರ್ ಇದೀಗ ಹೀನಾಯ ಸ್ಥಿತಿಯಲ್ಲಿದ್ದು, ತಮಗೆ ಅವಕಾಶಗಳಿಲ್ಲದೆ ಬಳಲಿರುವುದಾಗಿ ತಮಗೆ ಕೆಲಸ ನೀಡುವಂತೆ ಮನವಿ ಮಾಡಿ ವಿಡಿಯೋ ಹಂಚಿಕೊಂಡಿದ್ದರು. ಇದಾದ ನಂತರ ಸೋನು ಸೂದ್, ಸಲ್ಮಾನ್ ಖಾನ್ ಸೇರಿದಂತೆ ಹಲವು ನಟರು ಕಷ್ಟದ ಸಮಯದಲ್ಲಿ ಶರದ್ ಅವರಿಗೆ ನೆರವು ನೀಡಲು ಮುಂದಾಗಿದ್ದರು. ಇದೀಗ ‘ಜೋಶ್’ ಸಿನಿಮಾನಲ್ಲಿ ಶರದ್ ಜೊತೆ ನಟನೆ ಮಾಡಿದ್ದ ಶಾರುಖ್ ಖಾನ್ ಸಹ ಶರದ್ ಅವರಿಗೆ ಸಹಾಯದ ಹಸ್ತ ಚಾಚಿದ್ದಾರೆ.

Loading...

ಮಾಧ್ಯಮದೊಟ್ಟಿಗೆ ಮಾತನಾಡಿದ ಶರದ್, ತಮ್ಮ ಮನವಿ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆದ ಬಳಿಕ ಶಾರುಖ್ ತಮಗೆ ಕರೆ ಮಾಡಿದ್ದರು ಎಂದಿದ್ದಾರೆ. ‘ನಿಮಗೆ ಯಾವುದು ಇಷ್ಟವೋ, ಯಾವುದನ್ನು ಮಾಡಲು ಬಯಸುತ್ತೀರೋ ಅದನ್ನು ಮಾಡಿ; ನಿಮಗೆ ಸಹಾಯ ಮಾಡಲು ನಾನು ಸಿದ್ಧನಿದ್ದೇನೆ ಎಂದು ಶಾರುಖ್ ಖಾನ್ ಹೇಳಿದರು. ನಾನು ಶೀಘ್ರದಲ್ಲೇ ಆರ್ಯನ್ ಖಾನ್ ಅವರನ್ನು ಭೇಟಿಯಾಗಲಿದ್ದೇನೆ’ ಎಂದು ಶರದ್ ಹೇಳಿದ್ದಾರೆ.

ಇದನ್ನೂ ಓದಿ:ಶೈನ್ ಶೆಟ್ಟಿ ಅಭಿನಯದ ‘ಶಂಕರಾಭರಣ’ ಸಿನಿಮಾ ನೋಡಿ ಮೆಚ್ಚಿದ ಪ್ರೇಕ್ಷಕರು

‘ಜೋಶ್’ ಸಿನಿಮಾದ ಚಿತ್ರೀಕರಣದ ವೇಳೆ ಶಾರುಖ್ ಜೊತೆ ಕೆಲಸ ಮಾಡಿದ ಸವಿನೆನಪುಗಳನ್ನು ಮೆಲುಕು ಹಾಕಿ, ‘ನಮ್ಮ ನಡುವೆ ಉತ್ತಮ ಒಡನಾಟವಿತ್ತು. ಯಾವುದೇ ಸಂಭಾಷಣೆಯಲ್ಲಿ ಅವರು ತಡವರಿಸಿದಾಗ, ಆ ದೃಶ್ಯ ನನ್ನ ವಿರುದ್ಧವೇ ಇದ್ದರೂ ನಾನು ಅವರಿಗೆ ಸಹಾಯ ಮಾಡುತ್ತಿದ್ದೆ, ಏಕೆಂದರೆ ನನಗೆ ಉತ್ತಮ ಸಿನಿಮಾ ಮಾಡಬೇಕಿತ್ತು. ಅಲ್ಲದೆ ಶಾರುಖ್ ಒಬ್ಬ ಆತ್ಮವಿಶ್ವಾಸದ ನಟ, ಅವರು ತುಂಬಾ ದೊಡ್ಡ ವ್ಯಕ್ತಿ’ ಎಂದಿದ್ದಾರೆ.

ಅದೇ ಸಂದರ್ಶನದಲ್ಲಿ, ತಮ್ಮ ಕಾಲಿನ ಗಾಯಕ್ಕೆ ಚಿಕಿತ್ಸೆ ನೀಡಲು ಸೋನು ಸೂದ್ ವೈದ್ಯರ ತಂಡ ಮತ್ತು ವೈದ್ಯಕೀಯ ಸೌಲಭ್ಯಗಳನ್ನು ವ್ಯವಸ್ಥೆ ಮಾಡಿದ್ದಾರೆ ಎಂದು ಶರದ್ ತಿಳಿಸಿದರು. ಚಿಕಿತ್ಸೆಗಾಗಿ ತಾವು ಕರ್ಜತ್‌ಗೆ ತೆರಳುವುದಾಗಿ ಅವರು ಹೇಳಿದರು. ಈ ಹಿಂದೆ ಆಲ್ ಇಂಡಿಯನ್ ಸಿನಿ ವರ್ಕರ್ಸ್ ಅಸೋಸಿಯೇಷನ್ ಕೂಡ ಜೀವನದ ಕಷ್ಟದ ಹಂತದಲ್ಲಿ ಶರದ್ ಅವರಿಗೆ ಸಹಾಯ ಮಾಡಿದ್ದಕ್ಕಾಗಿ ಸಲ್ಮಾನ್ ಮತ್ತು ಸೋನು ಅವರನ್ನು ಶ್ಲಾಘಿಸಿತ್ತು.

ಶರದ್ ಒಂದು ಸಮಯದಲ್ಲಿ ಬಹು ಜನಪ್ರಿಯ ನಟ, 1994ರಲ್ಲಿ ‘ಮೇರಾ ಪ್ಯಾರಾ ಭಾರತ್’ ಚಿತ್ರದ ಮೂಲಕ ನಟನೆಗೆ ಪದಾರ್ಪಣೆ ಮಾಡಿದರು. 1995ರಲ್ಲಿ ಮಹೇಶ್ ಭಟ್ ಅವರ ಟಿವಿ ಧಾರಾವಾಹಿ ‘ಸ್ವಾಭಿಮಾನ್’ನಲ್ಲೂ ಕಾಣಿಸಿಕೊಂಡರು. ಸುಶ್ಮಿತಾ ಸೇನ್ ಎದುರು ನಟಿಸಿದ ಮಹೇಶ್ ಭಟ್ ಅವರ ‘ದಸ್ತಕ್’ (1996) ಚಿತ್ರದಲ್ಲಿ ಸೈಕೋಟಿಕ್ ಸ್ಟಾಕರ್ ಪಾತ್ರದ ಅಭಿನಯಕ್ಕಾಗಿ ಅವರು ಗುರುತಿಸಿಕೊಂಡರು. ಆದರೆ, ಅವರಿಗೆ ದೊಡ್ಡ ಬ್ರೇಕ್ ಸಿಕ್ಕಿದ್ದು ಮನ್ಸೂರ್ ಖಾನ್ ಅವರ ‘ಜೋಶ್’ (2000) ಚಿತ್ರದ ಮೂಲಕ; ಇದರಲ್ಲಿ ಅವರು ಶಾರುಖ್ ಖಾನ್ ಅವರ ಮ್ಯಾಕ್ಸ್ ಪಾತ್ರದ ಎದುರಾಳಿ ಗ್ಯಾಂಗ್ ಲೀಡರ್ ಪ್ರಕಾಶ್ ಶರ್ಮಾ ಪಾತ್ರದಲ್ಲಿ ನಟಿಸಿದ್ದರು. ‘ತಮನ್ನಾ’ (1997), ‘ಖೌಫ್’ (2000), ‘ಕ್ಯೋ ಕಿ… ಮೈಂ ಝೂಠ್ ನಹೀಂ ಬೋಲ್ತಾ’ (2001), ‘ಜಾನಿ ದುಶ್ಮನ್: ಏಕ್ ಅನೋಖಿ ಕಹಾನಿ’ (2002), ‘ಎಲ್‌ಒಸಿ: ಕಾರ್ಗಿಲ್’ (2003), ‘ಲಕ್ಷ್ಯ’ (2004), ‘ಏಕ್ ಖಿಲಾಡಿ ಏಕ್ ಹಸೀನಾ’ (2005) ಮತ್ತು ‘ಜೈ ಹೋ’ (2014) ಸೇರಿದಂತೆ ಹಲವು ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 1:51 pm, Fri, 20 November 26

ಮಂಜುನಾಥ ಸಿ.

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More
Loading...
Unable to load recommendations.
Follow Us