ಗುಂಡಿನ ದಾಳಿ ಬಳಿಕ ಶೂಟಿಂಗ್‌ಗೆ ಮರಳಿದ ಟೈಗರ್ ಶ್ರಾಫ್: ಚಿತ್ರತಂಡಕ್ಕೆ ಕಟ್ಟುನಿಟ್ಟಿನ ನಿಯಮ

‘ಗುಡ್ ನ್ಯೂಸ್’, ‘ಜುಗ್ ಜುಗ್ ಜಿಯೋ’ ಮತ್ತು ‘ಸೆಲ್ಫಿ’ ಚಿತ್ರಗಳನ್ನು ನಿರ್ದೇಶಿಸಿದ್ದ ರಾಜ್ ಮೆಹ್ತಾ ಅವರು ‘ಲಗ್ ಜಾ ಗಲೆ’ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ಈ ಸಿನಿಮಾದಲ್ಲಿ ಟೈಗರ್ ಶ್ರಾಫ್ ಅವರು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಸಿನಿಮಾದ ಚಿತ್ರೀಕರಣದಲ್ಲಿ ಟೈಗರ್ ಶ್ರಾಫ್ ಅವರು ಭಾಗಿಯಾಗಿದ್ದಾರೆ.

ಗುಂಡಿನ ದಾಳಿ ಬಳಿಕ ಶೂಟಿಂಗ್‌ಗೆ ಮರಳಿದ ಟೈಗರ್ ಶ್ರಾಫ್: ಚಿತ್ರತಂಡಕ್ಕೆ ಕಟ್ಟುನಿಟ್ಟಿನ ನಿಯಮ
Janhvi Kapoor, Aryan Navale, Tiger Shroff
Image Credit source: Instagram/aryanavale77

Updated on: Nov 16, 2026 | 9:24 PM

ಅಕ್ಟೋಬರ್ 18ರಂದು ಮುಂಬೈನಲ್ಲಿ ಅಪರಿಚಿತ ದುಷ್ಕರ್ಮಿಗಳು ನಟ ಟೈಗರ್ ಶ್ರಾಫ್ ಅವರ ಕಾರಿನ ಮೇಲೆ ಗುಂಡಿನ ದಾಳಿ ನಡೆಸಿದ್ದರು. ಅದಾದ ಕೆಲವೇ ವಾರಗಳ ಬಳಿಕ ಅವರು ಮತ್ತೆ ಶೂಟಿಂಗ್ ಸೆಟ್‌ಗೆ ಮರಳಿದ್ದಾರೆ. ಭದ್ರತಾ ಆತಂಕಗಳ ನಡುವೆಯೂ, ರಾಜ್ ಮೆಹ್ತಾ ನಿರ್ದೇಶನದ ‘ಲಗ್ ಜಾ ಗಲೆ’ ಚಿತ್ರಕ್ಕಾಗಿ ನಟಿ ಜಾನ್ವಿ ಕಪೂರ್ ಅವರೊಂದಿಗೆ ಪುಣೆಯಲ್ಲಿ ನಡೆದ ನಾಲ್ಕು ದಿನಗಳ ಹಾಡಿನ ಚಿತ್ರೀಕರಣವನ್ನು ಟೈಗರ್ ಯಶಸ್ವಿಯಾಗಿ ಪೂರ್ಣಗೊಳಿಸಿದ್ದಾರೆ.

ಟೈಗರ್ ಶ್ರಾಫ್ ಅವರ ಭದ್ರತೆಯ ದೃಷ್ಟಿಯಿಂದ ತಂಡವು ಅತ್ಯಂತ ಗೌಪ್ಯತೆಯನ್ನು ಕಾಯ್ದುಕೊಳ್ಳುತ್ತಿದೆ. ನಟನ ಆಪ್ತ ಮೂಲಗಳ ಪ್ರಕಾರ, ಟೈಗರ್ ಅವರು ಎಲ್ಲಿದ್ದಾರೆ ಮತ್ತು ಅವರ ಶೂಟಿಂಗ್ ಶೆಡ್ಯೂಲ್‌ಗಳು ಎಲ್ಲಿ ನಡೆಯುತ್ತವೆ ಎಂಬುದನ್ನು ಬಹಿರಂಗಪಡಿಸದಂತೆ ಅವರ ತಂಡ ಹಾಗೂ ಸಹವರ್ತಿಗಳಿಗೆ ಕಟ್ಟುನಿಟ್ಟಿನ ನಿಯಮ ಹಾಕಲಾಗಿದೆ.

Loading...

‘ಪುಣೆಯ ಕಲ್ಯಾಣಿ ನಗರದ ಜನಪ್ರಿಯ ಪಬ್‌ವೊಂದರಲ್ಲಿ ಈ ಹಾಡನ್ನು ಚಿತ್ರೀಕರಿಸಲಾಗಿದ್ದು, ಬಾಸ್ಕೋ ಮಾರ್ಟಿಸ್ ನೃತ್ಯ ಸಂಯೋಜನೆ ಮಾಡಿದ್ದಾರೆ. ಬ್ಲಾಂಡ್ ಹೇರ್ ಸ್ಟೈಲ್‌ನಲ್ಲಿ ಮಿಂಚುತ್ತಿದ್ದ ಟೈಗರ್ ಅವರು ಶೂಟಿಂಗ್ ಬಿಡುವಿನ ವೇಳೆಯಲ್ಲಿ ಡ್ಯಾನ್ಸರ್‌ಗಳು ಮತ್ತು ಸಿಬ್ಬಂದಿಯೊಂದಿಗೆ ಫೋಟೋಗಳಿಗೆ ಪೋಸ್ ನೀಡಿದರು’ ಎಂದು ಸೆಟ್‌ನ ಮೂಲಗಳು ತಿಳಿಸಿವೆ.

ಪಬ್ ಮಾಲೀಕ ಮತ್ತು ಉದ್ಯಮಿ ಆರ್ಯನ್ ನವಲೆ ಅವರು ಟೈಗರ್ ಮತ್ತು ಜಾನ್ವಿ ಅವರೊಂದಿಗಿನ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ‘ಅತ್ಯಂತ ಪ್ರತಿಭಾವಂತ ಜಾನ್ವಿ ಕಪೂರ್ ಮತ್ತು ಸದಾ ಉತ್ಸಾಹಭರಿತರಾಗಿರುವ ಟೈಗರ್ ಶ್ರಾಫ್ ಅವರಿಗೆ ಆತಿಥ್ಯ ನೀಡಿದ್ದು ತುಂಬಾ ಸಂತೋಷ ತಂದಿದೆ. ಚಿತ್ರದ ಶೂಟಿಂಗ್‌ಗಾಗಿ ನಮ್ಮ ಕ್ಲಬ್ ಆಯ್ಕೆ ಮಾಡಿಕೊಂಡಿದ್ದಕ್ಕೆ ಕೃತಜ್ಞತೆಗಳು’ ಎಂದು ಅವರು ಇನ್‌ಸ್ಟಾಗ್ರಾಮ್‌ನಲ್ಲಿ ಬರೆದುಕೊಂಡಿದ್ದಾರೆ.

ಇದನ್ನೂ ಓದಿ: ಗುಂಡಿನ ದಾಳಿ ಘಟನೆ ಬಳಿಕ ಮುಂಬೈನ ಫ್ಲಾಟ್‌ ಮಾರಾಟ ಮಾಡಿದ ನಟ ಟೈಗರ್ ಶ್ರಾಫ್

ಇದೇ ವೇಳೆ ಚಿತ್ರದ ಹೇರ್ ಮತ್ತು ಮೇಕಪ್ ಕಲಾವಿದ ಸೌರವ್ ರಾಯ್ ಕೂಡ ಕೇಕ್ ಫೋಟೋ ಹಂಚಿಕೊಂಡು ಶೂಟಿಂಗ್ ಮುಕ್ತಾಯವಾಗಿರುವುದನ್ನು ಖಚಿತಪಡಿಸಿದ್ದಾರೆ. ಜಾಹ್ನವಿ ಕಪೂರ್ ಕೂಡ ಈ ಸ್ಟೋರಿಯನ್ನು ರೀ-ಶೇರ್ ಮಾಡಿಕೊಂಡಿದ್ದಾರೆ. ಮತ್ತೊಂದೆಡೆ, ಈ ವಾರ ಮ್ಯೂಸಿಕ್ ಕಂಪನಿಯೊಂದರ ಜೊತೆ ಟೈಗರ್ ಅವರ ಹೊಸ ಹಾಡು ಬಿಡುಗಡೆಯಾಗಲಿದ್ದು, ಭದ್ರತೆಯನ್ನು ಗಮನದಲ್ಲಿಟ್ಟುಕೊಂಡು ಪ್ರಚಾರ ಕಾರ್ಯಗಳನ್ನು ಯೋಜಿಸಲಾಗುತ್ತಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಮದನ್​ ಕುಮಾರ್​

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Loading...
Unable to load recommendations.
Follow Us