‘ನಾಳೆ ಇರ್ತೀವೋ ಇಲ್ಲವೋ ಗೊತ್ತಿಲ್ಲ’; ವೇದಿಕೆ ಮೇಲೆ ನಾನಾ ಪಾಟೇಕರ್ ಆಡಿದ ಕೊನೆಯ ಮಾತಿದು

ಹೃದಯಾಘಾತದಿಂದ ನಿಧನರಾದ ಹಿರಿಯ ನಟ ನಾನಾ ಪಾಟೇಕರ್, ಸಾವಿಗೂ ನಾಲ್ಕು ದಿನಗಳ ಮುನ್ನ ಗೋವಾದಲ್ಲಿ ‘ನಾಳೆ ನಾನು ಇರುತ್ತೇನೋ ಇಲ್ಲವೋ, ನಾವೆಲ್ಲರೂ ಒಂದಲ್ಲ ಒಂದು ದಿನ ಹೋಗಲೇಬೇಕು’ ಎಂದು ಆಡಿದ್ದ ಮಾತುಗಳು ಈಗ ನಿಜವಾಗಿದ್ದು, ಅವರ ಅಗಲಿಕೆಯಿಂದ ಇಡೀ ಭಾರತೀಯ ಚಿತ್ರರಂಗ ಮತ್ತು ಅಭಿಮಾನಿ ಬಳಗ ಕಣ್ಣೀರಿಡುತ್ತಿದೆ.

‘ನಾಳೆ ಇರ್ತೀವೋ ಇಲ್ಲವೋ ಗೊತ್ತಿಲ್ಲ’; ವೇದಿಕೆ ಮೇಲೆ ನಾನಾ ಪಾಟೇಕರ್ ಆಡಿದ ಕೊನೆಯ ಮಾತಿದು
ನಾನಾ

Updated on: Oct 08, 2026 | 12:13 PM

ಮುಖ್ಯಾಂಶಗಳು

  • ನಾಳೆ ನಾನು ಇರುತ್ತೇನೋ ಇಲ್ಲವೋ ಗೊತ್ತಿಲ್ಲ
  • ನಾನಾ ಪಾಟೇಕರ್ ಆಡಿದ್ದ ಕೊನೆಯ ಮಾತು ನಿಜವಾಯ್ತು
  • ಸತತ 45 ನಿಮಿಷ ವೈದ್ಯರ ಹೋರಾಟ ವಿಫಲ

ಭಾರತೀಯ ಚಿತ್ರರಂಗದ ಮೇರು ನಟ ನಾನಾ ಪಾಟೇಕರ್ ಅವರು ಗೋವಾದಲ್ಲಿ ತೀವ್ರ ಹೃದಯಾಘಾತದಿಂದ ನಿಧನರಾಗಿದ್ದಾರೆ. ಸಾವಿಗೂ ಕೇವಲ ನಾಲ್ಕು ದಿನಗಳ ಮುನ್ನ ಅವರು ನೀಡಿದ್ದ ಹೇಳಿಕೆಯೊಂದು ಈಗ ಎಲ್ಲರನ್ನು ತೀವ್ರವಾಗಿ ಕಾಡುತ್ತಿದೆ. ಪ್ರತಿಯೊಬ್ಬರೂ ಒಂದಲ್ಲ ಒಂದು ದಿನ ನಿರ್ಗಮಿಸಲೇಬೇಕು ಎಂದು ಅವರು ಅಂದು ಭಾವುಕರಾಗಿ ಮಾತನಾಡಿದ್ದರು. ಈ ಮಾತುಗಳು ಈಗ ನಿಜವಾಗಿರುವುದು ಅವರ ಅಭಿಮಾನಿಗಳಲ್ಲಿ ಅಚ್ಚರಿ ತಂದಿದೆ.

ಗೋವಾದ ದೊನಾ ಪೌಲಾದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ನಾನಾ ಪಾಟೇಕರ್ ಅವರು ಭಾಗವಹಿಸಿದ್ದರು. ಶ್ವೇತವರ್ಣದ ಕುರ್ತಾ ಹಾಗೂ ಗಮ್ಚಾ ಧರಿಸಿ ಆಗಮಿಸಿದ್ದ ಅವರು ಜನರನ್ನು ಉದ್ದೇಶಿಸಿ ಮಾತುಗಳನ್ನಾಡಿದ್ದರು. ಗೋವಾದ ಮಾಜಿ ಮುಖ್ಯಮಂತ್ರಿ ಮನೋಹರ್ ಪರಿಕ್ಕರ್ ಅವರ ಕಾರ್ಯಶೈಲಿಯನ್ನು ಅವರು ಈ ಸಂದರ್ಭದಲ್ಲಿ ಸ್ಮರಿಸಿದ್ದರು. ‘ನಾಳೆ ನಾನು ಇರುತ್ತೇನೋ ಇಲ್ಲವೋ ಗೊತ್ತಿಲ್ಲ’ ಎಂದು ಅವರು ಅಂದು ಆಡಿದ್ದ ಮಾತುಗಳು ಎಲ್ಲರ ಗಮನ ಸೆಳೆದಿದ್ದವು.

‘ಪ್ರತಿಯೊಬ್ಬರ ಜೀವನವೂ ಒಂದಲ್ಲ ಒಂದು ದಿನ ಮುಕ್ತಾಯದ ಹಂತ ತಲುಪುತ್ತದೆ. ಆದರೆ ಆ ಹಂತ ತಲುಪುವ ಮುನ್ನ ನಾವು ಅಂದುಕೊಂಡಿದ್ದನ್ನು ಮಾಡಲು ಸಾಧ್ಯವಾಗಿದೆಯೇ ಎಂದು ನಮಗೆ ನಾವೇ ಕೇಳಿಕೊಳ್ಳಬೇಕು’ ಎಂದಿದ್ದರು. ಇದಾದ ಕೆಲವೇ ದಿನಕ್ಕೆ ಅವರು ಅಸುನೀಗಿದ್ದಾರೆ.

1951ರಲ್ಲಿ ಜನಿಸಿದ ವಿಶ್ವನಾಥ್ ಪಾಟೇಕರ್ ಅವರು ನಾನಾ ಪಾಟೇಕರ್ ಎಂದೇ ಪ್ರಸಿದ್ಧರಾಗಿದ್ದರು. ‘ಗಮನ್’ ಚಿತ್ರದ ಮೂಲಕ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದ ಅವರು ‘ಪರಿಂದಾ’, ‘ಕ್ರಾಂತಿವೀರ’ ಹಾಗೂ ‘ಅಬ್ ತಕ್ ಛಪ್ಪನ್’ ನಂತಹ ಸೂಪರ್ ಹಿಟ್ ಸಿನಿಮಾಗಳನ್ನು ನೀಡಿದ್ದಾರೆ. ಗಂಭೀರ ಪಾತ್ರಗಳ ಜೊತೆಗೆ ‘ವೆಲ್ ಕಮ್’ ಸಿನಿಮಾದಲ್ಲಿ ಉದಯ ಶೆಟ್ಟಿ ಪಾತ್ರದ ಮೂಲಕ ಹಾಸ್ಯ ನಟನೆಯಲ್ಲೂ ಸೈ ಎನಿಸಿಕೊಂಡಿದ್ದರು.

ಇದನ್ನೂ ಓದಿ: ಕನ್ನಡ ಸಿನಿಮಾ, ‘ಮೀಟೂ’ ಗಲಾಟೆ, ಸಮಾಜಸೇವೆ: ನಾನಾ ಪಾಟೇಕರ್ ‘ಕ್ರಾಂತಿಕಾರಿ’ ಜೀವನ ಪಥ

ಅವರ ಅದ್ಭುತ ನಟನೆಗಾಗಿ ಕೇಂದ್ರ ಸರ್ಕಾರ 2013ರಲ್ಲಿ ‘ಪದ್ಮಶ್ರೀ’ ಪ್ರಶಸ್ತಿ ನೀಡಿ ಗೌರವಿಸಿತ್ತು. ಮೂರು ಬಾರಿ ರಾಷ್ಟ್ರ ಪ್ರಶಸ್ತಿ ಪಡೆದಿರುವ ಅವರು ರಂಗಭೂಮಿ ಹಾಗೂ ನಿರ್ದೇಶನದಲ್ಲೂ ತಮ್ಮ ಛಾಪು ಮೂಡಿಸಿದ್ದರು. ಜೊತೆಗೆ ‘ನಾಮ್ ಫೌಂಡೇಶನ್’ ಮೂಲಕ ಸಂಕಷ್ಟದಲ್ಲಿದ್ದ ರೈತರಿಗೆ ಹಾಗೂ ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದ ಯೋಧರ ಕುಟುಂಬಗಳಿಗೆ ನೆರವಾಗುವ ಮೂಲಕ ಸದಾ ಸಮಾಜಸೇವೆಯಲ್ಲಿ ಮುಂಚೂಣಿಯಲ್ಲಿದ್ದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

 

 

Published On - 12:09 pm, Thu, 8 October 26

ರಾಜೇಶ್ ಹೆಗಡೆ ದುಗ್ಗುಮನೆ

ರಾಜೇಶ್ ಹೆಗಡೆ ದುಗ್ಗುಮನೆಯವರು ಮೂಲತಃ ಉತ್ತರ ಕನ್ನಡದ ಶಿರಸಿಯವರು. ಇವರು ಪತ್ರಿಕಾ ರಂಗಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us