ಮೂರೇ ದಿನಕ್ಕೆ 100 ಕೋಟಿ ಬಾಚಿದ ‘ದೃಶ್ಯಂ 3’: ಕರ್ನಾಟಕದಲ್ಲಿ ಗಳಿಸಿದ್ದೆಷ್ಟು?

Drishyam 3 movie: ‘ದೃಶ್ಯಂ’ ಮತ್ತು ‘ದೃಶ್ಯಂ 2’ ಸಿನಿಮಾಗಳು ಭಾರಿ ದೊಡ್ಡ ಯಶಸ್ಸು ಗಳಿಸಿದ್ದು, ಇದೀಗ ‘ದೃಶ್ಯಂ 3’ ಸಿನಿಮಾ ಬಿಡುಗಡೆ ಆಗಿದ್ದು, ಮೊದಲ ದಿನ ಸಿನಿಮಾದ ಬಗ್ಗೆ ಅಷ್ಟೇನೂ ಧನಾತ್ಮಕ ಅಭಿಪ್ರಾಯಗಳು ವ್ಯಕ್ತವಾಗಿರಲಿಲ್ಲ. ಹಾಗಿದ್ದರೂ ಸಹ ಸಿನಿಮಾ ಬಾಕ್ಸ್ ಆಫೀಸ್​​ನಲ್ಲಿ ಯಶಸ್ವಿ ಆಗಿದೆ. ಈ ಸಿನಿಮಾ ಕರ್ನಾಟಕದಲ್ಲಿ ಗಳಿಕೆ ಮಾಡಿರುವುದೆಷ್ಟು?

ಮೂರೇ ದಿನಕ್ಕೆ 100 ಕೋಟಿ ಬಾಚಿದ ‘ದೃಶ್ಯಂ 3’: ಕರ್ನಾಟಕದಲ್ಲಿ ಗಳಿಸಿದ್ದೆಷ್ಟು?
Drishyam 3

Updated on: May 24, 2026 | 4:25 PM

ಮೋಹನ್​​ಲಾಲ್ (Mohanlal) ನಟಿಸಿ, ಜೀತು ಜೋಸೆಫ್ ನಿರ್ದೇಶನ ಮಾಡಿರುವ ‘ದೃಶ್ಯಂ’ ಸರಣಿಯ ಮೂರನೇ ಸಿನಿಮಾ ಕೆಲವು ದಿನಗಳ ಹಿಂದೆಯಷ್ಟೆ ವಿಶ್ವದಾದ್ಯಂತ ಬಿಡುಗಡೆ ಆಗಿದೆ. ‘ದೃಶ್ಯಂ’ ಸರಣಿ ಭಾರತೀಯ ಚಿತ್ರರಂಗದ ಬಹು ಯಶಸ್ವಿ ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾ ಆಗಿದೆ. ‘ದೃಶ್ಯಂ’ ಮತ್ತು ‘ದೃಶ್ಯಂ 2’ ಸಿನಿಮಾಗಳು ಭಾರಿ ದೊಡ್ಡ ಯಶಸ್ಸು ಗಳಿಸಿದ್ದು, ಇದೀಗ ‘ದೃಶ್ಯಂ 3’ ಸಿನಿಮಾ ಬಿಡುಗಡೆ ಆಗಿದ್ದು, ಮೊದಲ ದಿನ ಸಿನಿಮಾದ ಬಗ್ಗೆ ಅಷ್ಟೇನೂ ಧನಾತ್ಮಕ ಅಭಿಪ್ರಾಯಗಳು ವ್ಯಕ್ತವಾಗಿರಲಿಲ್ಲ. ಹಾಗಿದ್ದರೂ ಸಹ ಸಿನಿಮಾ ಬಾಕ್ಸ್ ಆಫೀಸ್​​ನಲ್ಲಿ ಯಶಸ್ವಿ ಆಗಿದೆ.

‘ದೃಶ್ಯಂ 3’ ಸಿನಿಮಾ ಬಿಡುಗಡೆ ಆಗಿ ಕೇವಲ ಮೂರು ದಿನಗಳಷ್ಟೆ ಆಗಿದ್ದು ಕೇವಲ ಈ ಮೂರು ದಿನಗಳಲ್ಲಿಯೇ ಸಿನಿಮಾ 100 ಕೋಟಿ ಗಳಿಕೆ ಮಾಡಿದೆ. ಸಿನಿಮಾವು ಮಲಯಾಳಂ ಮಾತ್ರವಲ್ಲದೆ ಇನ್ನೂ ಕೆಲವು ಭಾಷೆಗಳಿಗೆ ಡಬ್ ಆಗಿ ಬಿಡುಗಡೆ ಆಗಿದ್ದು, ಇದೇ ಕಾರಣಕ್ಕೆ ಕೇರಳ ಮಾತ್ರವಲ್ಲದೆ ತಮಿಳುನಾಡು, ಆಂಧ್ರ, ತೆಲಂಗಾಣಗಳಲ್ಲಿಯೂ ಸಿನಿಮಾಕ್ಕೆ ಭಾರಿ ಪ್ರತಿಕ್ರಿಯೆ ವ್ಯಕ್ತವಾಗಿದೆ. ಇದು ಮಾತ್ರವೇ ಅಲ್ಲದೆ, ದುಬೈ, ಗಲ್ಫ್ ರಾಷ್ಟ್ರಗಳು, ಅಮೆರಿಕ ಇನ್ನೂ ಕೆಲವು ದೇಶಗಳಲ್ಲಿಯೂ ಸಹ ‘ದೃಶ್ಯಂ 3’ ಸಿನಿಮಾಕ್ಕೆ ಭಾರಿ ಗಳಿಕೆ ದೊರೆತಿದೆ.

‘ದೃಶ್ಯಂ 3’ ಸಿನಿಮಾ ಕೇವಲ ಮೂರು ದಿನಗಳಲ್ಲಿ 100 ಕೋಟಿಗೂ ಹೆಚ್ಚು ಮೊತ್ತ ಗಳಿಕೆ ಮಾಡಿದೆ. ಮಲಯಾಳಂ ಚಿತ್ರರಂಗದ ಮಟ್ಟಿಗೆ ಇದೊಂದು ದಾಖಲೆಯಾಗಿದೆ. ಇಷ್ಟು ಕಡಿಮೆ ಅವಧಿಯಲ್ಲಿ 100 ಕೋಟಿ ಗಳಿಕೆ ಮಾಡಿದ ಮಲಯಾಳಂ ಸಿನಿಮಾ ಎನಿಸಿಕೊಂಡಿದೆ ‘ದೃಶ್ಯಂ 3’. ಕರ್ನಾಟಕದಲ್ಲಿ ‘ದೃಶ್ಯಂ 3’ ಸಿನಿಮಾದ ಕನ್ನಡ ಆವೃತ್ತಿ ಬಿಡುಗಡೆ ಆಗಿದೆಯಾದರೂ ಹೆಚ್ಚಿನ ಜನ ಮಲಯಾಳಂ ಸಿನಿಮಾವನ್ನೇ ನೋಡಿ ಖುಷಿ ಪಟ್ಟಿದ್ದಾರೆ.

ಇದನ್ನೂ ಓದಿ:ಪ್ಯಾಟ್ರಿಯಾಟ್ ಸಿನಿಮಾ ಬಗ್ಗೆ ಮಮ್ಮೂಟ್ಟಿ-ಮೋಹನ್​​ಲಾಲ್ ಮಾತುಕತೆ

ಕರ್ನಾಟಕದಲ್ಲಿ ಮೂರು ದಿನಕ್ಕೆ ‘ದೃಶ್ಯಂ 3’ ಸಿನಿಮಾ 6 ಕೋಟಿಗೂ ಹೆಚ್ಚು ಮೊತ್ತದ ಗಳಿಕೆ ಮಾಡಿದೆ. ವೀಕೆಂಡ್​​ನಲ್ಲಿ ಸಿನಿಮಾದ ಗಳಿಕೆ ಹೆಚ್ಚಾಗಿದ್ದು, ಮೂರನೇ ದಿನ 2.50 ಕೋಟಿಗೂ ಹೆಚ್ಚು ಮೊತ್ತವನ್ನು ಗಳಿಸಿದೆ. ಆ ಮೂಲಕ ಸಿನಿಮಾದ ಮೂರು ದಿನದ ಒಟ್ಟು ಗಳಿಕೆ 6 ಕೋಟಿ ದಾಟಿದೆ ಎನ್ನಲಾಗುತ್ತಿದೆ.

‘ದೃಶ್ಯಂ 3’ ಸಿನಿಮಾದ ಹಿಂದಿ ಆವೃತ್ತಿ ಬಿಡುಗಡೆ ಆಗಿಲ್ಲ. ವಿಶೇಷವಾಗಿ ‘ದೃಶ್ಯಂ 3’ ಸಿನಿಮಾ ಉತ್ತರ ಭಾರತದಲ್ಲಿ ಬಿಡುಗಡೆ ಆಗಿಲ್ಲ. ಹಾಗಾಗಿ ಸಿನಿಮಾದ ಗಳಿಕೆಗೆ ತುಸು ಪೆಟ್ಟು ಬಿದ್ದಿದೆ. ‘ದೃಶ್ಯಂ 3’ ಸಿನಿಮಾವನ್ನು ಹಿಂದಿಗೆ ರೀಮೇಕ್ ಮಾಡಲಾಗುತ್ತಿದ್ದು, ಇದೇ ಕಾರಣಕ್ಕೆ ಸಿನಿಮಾವನ್ನು ಹಿಂದಿಗೆ ಡಬ್ ಮಾಡಿ ಉತ್ತರ ಭಾರತದಲ್ಲಿ ಬಿಡುಗಡೆ ಮಾಡಲಾಗಿಲ್ಲ. ಹಾಗಿದ್ದರೂ ಸಹ ಸಿನಿಮಾ ಮೊದಲ ಮೂರು ದಿನಗಳಲ್ಲಿ ಉತ್ತಮ ಗಳಿಕೆಯನ್ನೇ ಮಾಡಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Manjunatha C

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More
Follow Us