AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ದೃಶ್ಯಂ 3’ ದಾಖಲೆಯ ಕಲೆಕ್ಷನ್; 100 ಕೋಟಿ ಸನಿಹದಲ್ಲಿ ಮೋಹನ್​​ಲಾಲ್ ಚಿತ್ರ

ಮೋಹನ್‌ಲಾಲ್ ಮತ್ತು ಜೀತು ಜೋಸೆಫ್ ಅವರ 'ದೃಶ್ಯಂ 3' ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಎರಡೇ ದಿನಗಳಲ್ಲಿ ವಿಶ್ವದಾದ್ಯಂತ ಒಳ್ಳೆಯ ಗಳಿಕೆ ಮಾಡಿ, 100 ಕೋಟಿ ಕ್ಲಬ್‌ಗೆ ಹತ್ತಿರವಾಗಿದೆ. ಮೋಹನ್‌ಲಾಲ್ ಅವರ ಅದ್ಭುತ ನಟನೆ ಮತ್ತು ಜೀತು ಅವರ ಚುರುಕು ನಿರ್ದೇಶನ ಈ ಯಶಸ್ಸಿಗೆ ಕಾರಣ. ಭಾರತೀಯ ಚಿತ್ರರಂಗದಲ್ಲಿ ಹೊಸ ಅಲೆ ಎಬ್ಬಿಸಿರುವ ಈ ಚಿತ್ರ, ಮಲಯಾಳಂ ಸಿನೆಮಾದ ಹೆಮ್ಮೆಯಾಗಿದೆ.

‘ದೃಶ್ಯಂ 3’ ದಾಖಲೆಯ ಕಲೆಕ್ಷನ್; 100 ಕೋಟಿ ಸನಿಹದಲ್ಲಿ ಮೋಹನ್​​ಲಾಲ್ ಚಿತ್ರ
ಮೋಹನ್​ಲಾಲ್
ರಾಜೇಶ್ ದುಗ್ಗುಮನೆ
|

Updated on: May 23, 2026 | 7:08 AM

Share

ಮಲಯಾಳಂ ಚಿತ್ರರಂಗದ ಇತಿಹಾಸದ ಅತ್ಯಂತ ಯಶಸ್ವಿ ಸಸ್ಪೆನ್ಸ್ ಥ್ರಿಲ್ಲರ್ ಫ್ರಾಂಚೈಸಿ ಎಂದರೆ ಅದು ‘ದೃಶ್ಯಂ’. ಈಗ ಈ ಸರಣಿಯಲ್ಲಿ ಮೂರನೇ ಭಾಗ ರಿಲೀಸ್ ಆಗಿ,ಬಾಕ್ಸ್ ಆಫೀಸ್‌ನಲ್ಲಿ ಸುನಾಮಿ ಎಬ್ಬಿಸಿದೆ. ಮಲಯಾಳಂ ಸ್ಟಾರ್ ನಟ ಮೋಹನ್‌ಲಾಲ್ ಮತ್ತು ನಿರ್ದೇಶಕ ಜೀತು ಜೋಸೆಫ್ ಅವರ ಮ್ಯಾಜಿಕಲ್ ಕಾಂಬಿನೇಷನ್ ಮತ್ತೊಮ್ಮೆ ಕಮಾಲ್ ಮಾಡಿದೆ. ‘ದೃಶ್ಯಂ 3’ ಸಿನಿಮಾ (Drishaym 3 Movie) ಕೇವಲ ಎರಡೇ ದಿನಗಳಲ್ಲಿ ವಿಶ್ವಾದ್ಯಂತ ಬ್ಲಾಕ್‌ಬಸ್ಟರ್ ಕಲೆಕ್ಷನ್ ಮಾಡಿದೆ.

ಭಾರತದಾದ್ಯಂತ ಭರ್ಜರಿ ಪ್ರದರ್ಶನ ಕಾಣುತ್ತಿರುವ ಈ ಚಿತ್ರ, ಕೇವಲ ಎರಡನೇ ದಿನದಲ್ಲೇ ಗಲ್ಲಾಪೆಟ್ಟಿಗೆಯನ್ನು ಕೊಳ್ಳೆಹೊಡೆದಿದೆ. ಭಾರತದಲ್ಲಿ ಈ ಸಿನಿಮಾ ಎರಡನೇ ದಿನ 11.05 ಕೋಟಿ ನೆಟ್ ಕಲೆಕ್ಷನ್ ಮಾಡಿದೆ. ಈ ಮೂಲಕ ಭಾರತದ ಗ್ರಾಸ್ ಕಲೆಕ್ಷನ್ 31.18 ಕೋಟಿ ರೂಪಾಯಿ ಆಗಿದೆ.

ವಿಶೇಷ ಎಂದರೆ ವಿದೇಶದಲ್ಲಿ ಈ ಸಿನಿಮಾ ಎರಡನೇ ದಿನ 20 ಕೋಟಿ ರೂಪಾಯಿ ಗಳಿಸಿದೆ. ಈ ಮೂಲಕ ಎರಡೇ ದಿನಕ್ಕೆ ‘ದೃಶ್ಯಂ 3’ ವಿಶ್ವಾದ್ಯಂತ ಬರೋಬ್ಬರಿ 76.18 ಕೋಟಿ ಗ್ರೋಸ್ ಕಲೆಕ್ಷನ್ ಮಾಡುವ ಮೂಲಕ 100 ಕೋಟಿ ಕ್ಲಬ್‌ನತ್ತ ಮುನ್ನುಗ್ಗುತ್ತಿದೆ.

‘ದೃಶ್ಯಂ’ ಸರಣಿಯ ಯಶಸ್ಸಿಗೆ ಮುಖ್ಯ ಕಾರಣ ಚಿತ್ರಕಥೆಯ ಬಲ. ನಿರ್ದೇಶಕ ಜೀತು ಜೋಸೆಫ್ ಅವರ ಡೈರೆಕ್ಷನ್ ಬ್ರಿಲಿಯನ್ಸ್ ಈ ಬಾರಿಯೂ ಎದ್ದು ಕಾಣುತ್ತಿದೆ. ಪ್ರೇಕ್ಷಕರು ಊಹಿಸದಂತಹ ಟ್ವಿಸ್ಟ್ ಹಾಗೂ ಟರ್ನ್‌ಗಳನ್ನು ನೀಡುತ್ತಾ, ಚಿತ್ರದ ಕೊನೆಯವರೆಗೂ ಸೀಟಿನ ತುದಿಗೆ ತಂದು ನಿಲ್ಲಿಸುವಲ್ಲಿ ಜೀತು ಮತ್ತೊಮ್ಮೆ ಗೆದ್ದಿದ್ದಾರೆ.

ಇನ್ನು ಜಾರ್ಜ್‌ಕುಟ್ಟಿ ಪಾತ್ರಕ್ಕೆ ಜೀವ ತುಂಬಿರುವ ಮೋಹನ್‌ಲಾಲ್, ತಮ್ಮ ಅದ್ಭುತ ನಟನೆಯಿಂದ ಪ್ರೇಕ್ಷಕರನ್ನು ಮಂತ್ರಮುಗ್ಧರನ್ನಾಗಿಸಿದ್ದಾರೆ. ಅವರ ಕಣ್ಣಿನಲ್ಲೇ ಕಥೆ ಹೇಳುವ ತಂತ್ರ, ಮುಖದ ಹಾವಭಾವ ಹಾಗೂ ಮೌನದಲ್ಲೇ ಗಂಭೀರತೆ ಮೂಡಿಸುವ ನಟನೆ ಚಿತ್ರದ ತೂಕವನ್ನು ಹೆಚ್ಚಿಸಿದೆ.

ಇದನ್ನೂ ಓದಿ: ‘ದೃಶ್ಯಂ 3’ ಚಿತ್ರಕ್ಕೆ ಸಿಕ್ಕ ರೆಸ್ಪಾನ್ಸ್ ನೋಡಿ ಕಣ್ಣೀರು ಹಾಕಿದ ನಟ ಮೋಹನ್‌ಲಾಲ್

ಮೊದಲ ಭಾಗದಿಂದಲೇ ಭಾರತೀಯ ಚಿತ್ರರಂಗದಲ್ಲಿ ಹೊಸ ಅಲೆ ಎಬ್ಬಿಸಿದ್ದ ‘ದೃಶ್ಯಂ’ ಸರಣಿ, ಈಗ ಮೂರನೇ ಭಾಗದಲ್ಲೂ ಅದೇ ಯಶಸ್ಸನ್ನು ಮುಂದುವರಿಸಿದೆ. ಪ್ರಾದೇಶಿಕ ಭಾಷೆಯ ಗಡಿ ದಾಟಿ ಜಾಗತಿಕ ಮಟ್ಟದಲ್ಲಿ ಸೌಂಡ್ ಮಾಡುತ್ತಿರುವ ಈ ಚಿತ್ರ, ಮಲಯಾಳಂ ಚಿತ್ರರಂಗದ ಹೆಮ್ಮೆಯ ಫ್ರಾಂಚೈಸಿ ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿದೆ. ವೀಕೆಂಡ್‌ನಲ್ಲಿ ಕಲೆಕ್ಷನ್ ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇದ್ದು, ಸಿನಿಮಾ ಹಲವು ದಾಖಲೆಗಳನ್ನು ಮುರಿಯುವುದು ಖಚಿತವಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us
ನೋಡೋಕೆ ಸಮಾಜ ಸೇವೆ: ಆ್ಯಂಬುಲೆನ್ಸ್​ನಲ್ಲಿ ನಡೀತಿದ್ದಿದ್ದು ಡ್ರಗ್ಸ್ ದಂಧೆ!
ನೋಡೋಕೆ ಸಮಾಜ ಸೇವೆ: ಆ್ಯಂಬುಲೆನ್ಸ್​ನಲ್ಲಿ ನಡೀತಿದ್ದಿದ್ದು ಡ್ರಗ್ಸ್ ದಂಧೆ!
ಮಳೆ ಕೊರತೆ: ಶಿವನಸಮುದ್ರದಲ್ಲಿ ವಿದ್ಯುತ್ ಉತ್ಪಾದನೆ ಸ್ಥಗಿತ
ಮಳೆ ಕೊರತೆ: ಶಿವನಸಮುದ್ರದಲ್ಲಿ ವಿದ್ಯುತ್ ಉತ್ಪಾದನೆ ಸ್ಥಗಿತ
ಕಾಂಗ್ರೆಸ್‌ನಲ್ಲಿ ಸಂಪುಟ ವಿಸ್ತರಣೆ ಕಸರತ್ತು: ನವದೆಹಲಿಯತ್ತ ನಾಯಕರ ಪಯಣ!
ಕಾಂಗ್ರೆಸ್‌ನಲ್ಲಿ ಸಂಪುಟ ವಿಸ್ತರಣೆ ಕಸರತ್ತು: ನವದೆಹಲಿಯತ್ತ ನಾಯಕರ ಪಯಣ!
ಜುಲೈ 27 ರಿಂದ ಆಗಸ್ಟ್ 02ರ ವರೆಗಿನ ದ್ವಾದಶ ರಾಶಿಗಳ ಫಲಾಫಲ
ಜುಲೈ 27 ರಿಂದ ಆಗಸ್ಟ್ 02ರ ವರೆಗಿನ ದ್ವಾದಶ ರಾಶಿಗಳ ಫಲಾಫಲ
ಇಂದು ಈ ರಾಶಿಯವರಿಗೆ ಉದ್ಯೋಗಾವಕಾಶ!
ಇಂದು ಈ ರಾಶಿಯವರಿಗೆ ಉದ್ಯೋಗಾವಕಾಶ!
ಕೇಂದ್ರ ಶಿಕ್ಷಣ ಖಾತೆಯ ಹೆಚ್ಚುವರಿ ಹೊಣೆ ಬಗ್ಗೆ ಪ್ರಲ್ಹಾದ್ ಜೋಶಿ ಏನಂದ್ರು?
ಕೇಂದ್ರ ಶಿಕ್ಷಣ ಖಾತೆಯ ಹೆಚ್ಚುವರಿ ಹೊಣೆ ಬಗ್ಗೆ ಪ್ರಲ್ಹಾದ್ ಜೋಶಿ ಏನಂದ್ರು?
ಚಿಕ್ಕಬಳ್ಳಾಪುರದಲ್ಲಿ ಕೈ ಕೈ ಮಿಲಾಹಿಸಿಕೊಂಡ ಕಾಂಗ್ರೆಸ್ ಕಾರ್ಯಕರ್ತರು
ಚಿಕ್ಕಬಳ್ಳಾಪುರದಲ್ಲಿ ಕೈ ಕೈ ಮಿಲಾಹಿಸಿಕೊಂಡ ಕಾಂಗ್ರೆಸ್ ಕಾರ್ಯಕರ್ತರು
ಪೊಲೀಸರಿಂದ ಪಾಕ್ ಮೂಲದ 400ಕ್ಕೂ ಹೆಚ್ಚು ಸೋಷಿಯಲ್ ಮೀಡಿಯಾ ಖಾತೆ ಬ್ಲಾಕ್
ಪೊಲೀಸರಿಂದ ಪಾಕ್ ಮೂಲದ 400ಕ್ಕೂ ಹೆಚ್ಚು ಸೋಷಿಯಲ್ ಮೀಡಿಯಾ ಖಾತೆ ಬ್ಲಾಕ್
ಇದು ಸರ್ಕಾರಕ್ಕೆ ವಿದ್ಯಾರ್ಥಿಗಳು, ವಿಪಕ್ಷದ ಎಚ್ಚರಿಕೆ; ರಾಹುಲ್ ಗಾಂಧಿ
ಇದು ಸರ್ಕಾರಕ್ಕೆ ವಿದ್ಯಾರ್ಥಿಗಳು, ವಿಪಕ್ಷದ ಎಚ್ಚರಿಕೆ; ರಾಹುಲ್ ಗಾಂಧಿ
ಅತ್ತ ಪ್ರಧಾನ್ ರಾಜೀನಾಮೆ: ಇತ್ತ ರಾಜ್ಯದ ಸಂಪುಟ ವಿಸ್ತರಣೆ ಸನ್ನಿಹಿತ
ಅತ್ತ ಪ್ರಧಾನ್ ರಾಜೀನಾಮೆ: ಇತ್ತ ರಾಜ್ಯದ ಸಂಪುಟ ವಿಸ್ತರಣೆ ಸನ್ನಿಹಿತ