
ಪ್ರತಿ ವಾರ ಹಲವು ಭಾಷೆಗಳಲ್ಲಿ ಹಲವು ಸಿನಿಮಾಗಳು ಬಿಡುಗಡೆ ಆಗುತ್ತವೆ. ಪ್ರತಿ ವಾರ ಬೇರೆ ಬೇರೆ ರೀತಿಯ ಸಿನಿಮಾಗಳು ರಿಲೀಸ್ ಆಗುತ್ತವೆ. ಆದರೆ ಈ ವಾರ ಒಂದು ಅಪರೂಪದ ಘಟನೆ ನಡೆಯುತ್ತಿದೆ. ಈ ವಾರ ಒಂದೇ ದಿನ ಎರಡು ಸಿನಿಮಾಗಳು ರಿಲೀಸ್ ಆಗುತ್ತಿದ್ದು, ಎರಡೂ ಸಿನಿಮಾಗಳ ಕತೆ ಒಂದೇ ಆಗಿದೆ. ಹೌದು, ಈ ವಾರ ನವೆಂಬರ್ 30ಕ್ಕೆ ತೆಲುಗಿನ ಎರಡು ಹೊಸ ಸಿನಿಮಾಗಳು ರಿಲೀಸ್ ಆಗುತ್ತಿದ್ದು, ಎರಡೂ ಸಿನಿಮಾಗಳ ಕತೆ ಒಂದೇ ಆಗಿದೆ. ಇದು ಸಣ್ಣ ಮಟ್ಟಿಗಿನ ವಿವಾದಕ್ಕೆ ಸಹ ಕಾರಣ ಆಗಿದೆ.
ಈ ವಾರ ಖ್ಯಾತ ನಟ ದುಲ್ಕರ್ ಸಲ್ಮಾನ್ ನಟನೆಯ ‘ಆಕಾಶಂ ಲೊ ಒಕ ತಾರಾ’ ರಿಲೀಸ್ ಆಗುತ್ತಿದೆ. ಅದೇ ದಿನ ‘ಡಿಯರ್ ಆಸ್ಟ್ರೊನಾಟ್’ ಸಿನಿಮಾ ಸಹ ರಿಲೀಸ್ ಆಗುತ್ತಿದೆ. ಎರಡೂ ಸಿನಿಮಾಗಳ ಕತೆ ಒಂದೇ ಆಗಿದೆ. ಸಿನಿಮಾನಲ್ಲಿ ಪತಿಯೊಬ್ಬ, ತನ್ನ ಪತ್ನಿಯ ಗಗನಯಾತ್ರಿ (ಆಸ್ಟ್ರೊನಾಟ್) ಆಗುವ ಕನಸನ್ನು ಈಡೇರಿಸುವ ಪ್ರಯತ್ನ ಮಾಡುವ ಕತೆಯನ್ನು ಒಳಗೊಂಡಿದೆ. ಎರಡೂ ಸಿನಿಮಾಗಳ ಟ್ರೈಲರ್ ರಿಲೀಸ್ ಆಗಿದ್ದು, ಎರಡೂ ಸಿನಿಮಾಗಳ ಕತೆ ಒಂದೇ ಆಗಿರುವುದನ್ನು ಟ್ರೈಲರ್ ಸಹ ಖಾತ್ರಿ ಪಡಿಸುತ್ತಿದೆ. ಎರಡೂ ಸಿನಿಮಾಗಳಲ್ಲಿ ಪತಿ, ತನ್ನ ಪತ್ನಿಯ ಗಗನಯಾತ್ರಿ ಆಗುವ ಕನಸಿಗೆ ಬೆಂಬಲವಾಗಿ ನಿಲ್ಲುತ್ತಾನೆ.
ದುಲ್ಕರ್ ಸಲ್ಮಾನ್ ನಟನೆ ಮಾಡಿರುವ ‘ಆಕಾಶಂಲೊ ಒಕ ತಾರಾ’ ಸಿನಿಮಾವನ್ನು ಪವನ್ ಸದಿನೇನಿ ನಿರ್ದೇಶನ ಮಾಡಿದ್ದಾರೆ. ‘ಡಿಯರ್ ಆಸ್ಟ್ರೊನಾಟ್’ ಸಿನಿಮಾವನ್ನು ಕಾರ್ತಿಕ್ ಭಾಗ್ಯರಾಜ್ ನಿರ್ದೇಶನ ಮಾಡಿದ್ದಾರೆ. ಲಭ್ಯವಿರು ಮಾಹಿತಿಗಳ ಪ್ರಕಾರ, ಕೆಲ ವರ್ಷಗಳ ಹಿಂದೆ ಕಾರ್ತಿಕ್ ಭಾಗ್ಯರಾಜ್ ಅವರು ಇದೇ ಕತೆ ಆಧರಿಸಿ ‘ಕೌಗಿಲಿ’ ಹೆಸರಿನ ಕಿರುಚಿತ್ರ ಮಾಡಿ, ಯೂಟ್ಯೂಬ್ನಲ್ಲಿ ಶೇರ್ ಮಾಡಿದ್ದರು. ಆ ಕಿರುಚಿತ್ರಕ್ಕೆ ಒಳ್ಳೆಯ ಪ್ರತಿಕ್ರಿಯೆ ಸಿಕಿತ್ತು. ಅದನ್ನು ಸಿನಿಮಾ ಮಾಡುವ ಆಸೆಯಿಂದ ಕಿರುಚಿತ್ರವನ್ನು ಯೂಟ್ಯೂಬ್ನಿಂದ ತೆಗೆದರು. ಬಳಿಕ ಅದೇ ಕತೆಯನ್ನು ಕೆಲವು ನಿರ್ಮಾಪಕರುಗಳಿಗೆ ಹೇಳಿದ್ದರು.
ಇದನ್ನೂ ಓದಿ:‘ರಾಮಾಯಣ’ ಸಿನಿಮಾ ಹಾಡಿನಲ್ಲಿ ತಪ್ಪು ಹುಡುಕಿದ ಗೀತ ಸಾಹಿತಿ
ಈ ಮೊದಲೇ ಸಿನಿಮಾ ಮಾಡಲು ‘ಡಿಯರ್ ಆಸ್ಟ್ರೊನಾಟ್’ ನಿರ್ದೇಶಕ ಕಾರ್ತಿಕ್ ಯತ್ನಿಸಿದ್ದು, ನಟ ವರುಣ್ ಸಂದೇಶ್ ಮತ್ತು ವಿತಿಕಾ ಶೇರು ಅವರನ್ನು ಹಾಕಿಕೊಂಡು ಕೆಲ ಭಾಗದ ಚಿತ್ರೀಕರಣ ಸಹ ಮಾಡಿದರಂತೆ. ಟೀಸರ್ ಸಹ ರಿಲೀಸ್ ಮಾಡಿದ್ದರು. ಆದರೆ ಆ ಸಿನಿಮಾ ನಿಂತು ಹೋಯ್ತು. ಅದಾದ ಬಳಿಕ ಮತ್ತೆ ಹೊಸ ನಟ-ನಟಿಯರನ್ನು ಹಾಕಿಕೊಂಡು ಸಿನಿಮಾ ಮುಗಿಸಿದ್ದು, ಇದೀಗ ರಿಲೀಸ್ ಆಗುತ್ತಿದೆ. ಆದರೆ ಈಗ ಅದೇ ಕತೆಯನ್ನು ಇರಿಸಿಕೊಂಡು ಪವನ್ ಸದಿನೇನಿ ಸಹ ಸಿನಿಮಾ ಮಾಡಿದ್ದಾರೆ. ಎರಡೂ ಸಿನಿಮಾಗಳು ಒಂದೇ ದಿನ ರಿಲೀಸ್ ಆಗುತ್ತಿವೆ. ಮತ್ತೊಂದು ವಿಶೇಷವೆಂದರೆ ಎರಡೂ ಸಿನಿಮಾಗಳಲ್ಲಿ ಖ್ಯಾತ ನಟ ಗೌತಮ್ ವಾಸುದೇವ್ ಮೆನನ್ ಮುಖ್ಯ ಪೋಷಕ ಪಾತ್ರದಲ್ಲಿ ನಟನೆ ಮಾಡಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ