‘ರಾಮಾಯಣ’ ಸಿನಿಮಾ ಹಾಡಿನಲ್ಲಿ ತಪ್ಪು ಹುಡುಕಿದ ಗೀತ ಸಾಹಿತಿ
‘ರಾಮಾಯಣ’ ಸಿನಿಮಾ ರಿಲೀಸ್ ಆಗುವ ಮುಂಚೆಯೇ ಸಿನಿಮಾದ ಕೆಲ ಹಾಡುಗಳನ್ನು ರಿಲೀಸ್ ಮಾಡಲಾಗಿತ್ತು. ಅದರಲ್ಲಿ ‘ಜೈ ಜೈ ರಾಮ್’ ಸಹ ಒಂದು. ಆ ಹಾಡು ಭಾರಿ ಪ್ರಶಂಸೆಗೆ ಪಾತ್ರವಾಗಿತ್ತು. ಆದರೆ ಇದೀಗ ಅದೇ ಹಾಡಿನಲ್ಲಿ ತಪ್ಪೊಂದು ಇರುವುದನ್ನು ತೆಲುಗು ಗೀತ ಸಾಹಿತಿ ರಾಕೇಂದು ಮೌಳಿ ಎತ್ತಿ ತೋರಿಸಿದ್ದಾರೆ. ಯೂಟ್ಯೂಬ್ ಚಾನೆಲ್ ಒಂದಕ್ಕೆ ನೀಡಿರುವ ಸಂದರ್ಶನದಲ್ಲಿ ಈ ಬಗ್ಗೆ ಮಾತನಾಡಿರುವ ಅವರು ಸಿನಿಮಾದ ‘ಜೈ ಜೈ ರಾಮ್’ ಹಾಡಿನಲ್ಲಿ ಅಡಗಿರುವ ಲೋಪದ ಬಗ್ಗೆ ಮಾತನಾಡಿದ್ದಾರೆ.

ಮುಖ್ಯಾಂಶಗಳು
- ‘ರಾಮಾಯಣ’ ಸಿನಿಮಾದ ಹಾಡಿನಲ್ಲಿ ತಪ್ಪು
- ಹಾಡಿನಲ್ಲಿ ತಪ್ಪು ಕಂಡುಹಿಡಿದ ಗೀತ ಸಾಹಿತಿ
- ಯಾವ ಹಾಡಿನಲ್ಲಿ ಏನು ತಪ್ಪು ಆಗಿದೆ?
‘ರಾಮಾಯಣ’ ಸಿನಿಮಾ ಅದ್ಧೂರಿ ಪ್ರದರ್ಶನ ಕಾಣುತ್ತಿದೆ. ಬಾಕ್ಸ್ ಆಫೀಸ್ನಲ್ಲಿ ಹಳೆಯ ದಾಖಲೆಗಳನ್ನೆಲ್ಲ ಈ ಸಿನಿಮಾ ಮುರಿದು ಹಾಕಲಿದೆ ಎನ್ನಲಾಗುತ್ತಿದೆ. ಭಾರಿ ಬಜೆಟ್ ಹಾಕಿ, ಸುಮಾರು ಹತ್ತು ವರ್ಷಗಳ ಕಾಲ ಸಿನಿಮಾಕ್ಕಾಗಿ ಕೆಲಸ ಮಾಡಿ ‘ರಾಮಾಯಣ’ ಸಿನಿಮಾ ಅನ್ನು ತೆರೆಗೆ ತರಲಾಗಿದೆ ಎಂದು ಖುದ್ದು ನಿರ್ದೇಶಕ ನಿತೇಶ್ ತಿವಾರಿ ಹೇಳಿದ್ದಾರೆ. ಸಿನಿಮಾದ ಪ್ರತಿಯೊಂದು ವಿಭಾಗದ ಮೇಲೂ ವಿವರವಾಗಿ ಕೆಲಸ ಮಾಡಲಾಗಿದೆ ಎಂದು ನಿತೇಶ್ ಹೇಳಿದ್ದರು. ಆದರೆ ಇದೀಗ ಸಿನಿಮಾದ ಹಾಡೊಂದರಲ್ಲಿ ತಪ್ಪೊಂದನ್ನು ಗೀತ ಸಾಹಿತಿಯೊಬ್ಬರು ಹುಡುಕಿದ್ದಾರೆ.
‘ರಾಮಾಯಣ’ ಸಿನಿಮಾ ರಿಲೀಸ್ ಆಗುವ ಮುಂಚೆಯೇ ಸಿನಿಮಾದ ಕೆಲ ಹಾಡುಗಳನ್ನು ರಿಲೀಸ್ ಮಾಡಲಾಗಿತ್ತು. ಅದರಲ್ಲಿ ‘ಜೈ ಜೈ ರಾಮ್’ ಸಹ ಒಂದು. ಆ ಹಾಡು ಭಾರಿ ಪ್ರಶಂಸೆಗೆ ಪಾತ್ರವಾಗಿತ್ತು. ಆದರೆ ಇದೀಗ ಅದೇ ಹಾಡಿನಲ್ಲಿ ತಪ್ಪೊಂದು ಇರುವುದನ್ನು ತೆಲುಗು ಗೀತ ಸಾಹಿತಿ ರಾಕೇಂದು ಮೌಳಿ ಎತ್ತಿ ತೋರಿಸಿದ್ದಾರೆ. ಯೂಟ್ಯೂಬ್ ಚಾನೆಲ್ ಒಂದಕ್ಕೆ ನೀಡಿರುವ ಸಂದರ್ಶನದಲ್ಲಿ ಈ ಬಗ್ಗೆ ಮಾತನಾಡಿರುವ ಅವರು ಸಿನಿಮಾದ ‘ಜೈ ಜೈ ರಾಮ್’ ಹಾಡಿನಲ್ಲಿ ಅಡಗಿರುವ ಲೋಪದ ಬಗ್ಗೆ ಮಾತನಾಡಿದ್ದಾರೆ.
‘ಜೈ ಜೈ ರಾಮ್’ ಹಾಡಿನ ಆರಂಭದಲ್ಲಿ ‘ಅಚ್ಯುತ್ತಮ್ ಕೇಶವಂ, ಕೃಷ್ಣ ಧಾಮೋದರಂ’ ಎಂಬ ಸಾಲುಗಳು ಬರುತ್ತವೆ. ಆದರೆ ಈ ಸಾಲುಗಳು ಕೃಷ್ಣನ ಕೊಂಡಾಡುವ ಸಾಲುಗಳಾಗಿವೆ. ಹಿಂದೂ ಪುರಾಣಗಳ ಪ್ರಕಾರ,ತ್ರೇತಾಯುಗ ಮೊದಲು ಬರುತ್ತದೆ ಆ ನಂತರ ಕೃಷ್ಣನ ಅವತಾರದ ದ್ವಾಪರಯುಗ ಬರುತ್ತದೆ. ‘ರಾಮಾಯಣ’ ಕತೆ ತ್ರೇತಾಯುಗದ ಕತೆಯಾಗಿದೆ. ಆದರೆ ಆ ಸಿನಿಮಾದ ಹಾಡಿನಲ್ಲಿ ದ್ವಾಪರಯುಗದ ಮಹಾಪುರುಷ ಕೃಷ್ಣನ ಕುರಿತಾದ ಹಾಡನ್ನು ಬಳಸಲಾಗಿದೆ.
ಇದನ್ನೂ ಓದಿ:ಬಾಕ್ಸ್ ಆಫೀಸ್ನಲ್ಲಿ ಮುಂದುವರಿದ ‘ರಾಮಾಯಣ’ ಅಬ್ಬರ; 13ನೇ ದಿನಕ್ಕೆ ಗಳಿಸಿದ್ದೆಷ್ಟು?
ಈ ಬಗ್ಗೆ ಮಾತನಾಡಿರುವ ತೆಲುಗು ಗೀತ ಸಾಹಿತಿ ರಾಕೇಂದು ಮೌಳಿ, ‘ನಾನು ಅದನ್ನು ಗುರುತಿಸಿ ತೆಲುಗು ಆವೃತ್ತಿಯಲ್ಲಿ ತಮ್ಮನ್ನು ಸರಿ ಮಾಡಿದೆ. ‘ಅಚ್ಯುತ್ತಮ್ ಕೇಶವಂ, ಕೃಷ್ಣ ಧಾಮೋದರಂ’ ಬದಲಿಗೆ, ‘‘ಅಚ್ಯುತ್ತಮ್ ಕೇಶವಂ, ವಾಸುದೇವಂ ಹರಿಂ’ ಎಂಬ ಸಾಲು ಬಳಸಿದೆ’ ಎಂದಿದ್ದಾರೆ. ಚಿತ್ರತಂಡದ ಬಗ್ಗೆ ಆಕ್ಷೇಪವನ್ನೂ ವ್ಯಕ್ತಪಡಿಸಿರುವ ಅವರು, ‘ಸಿನಿಮಾದ ಟೈಟಲ್ ಕಾರ್ಡ್ನಲ್ಲಿ ತೆಲುಗು ಆವೃತ್ತಿಯ ಅನುವಾದಕರು ರಾಕೇಂದು ಮೌಳಿ’ ಎಂದು ಬರೆದಿದ್ದಾರೆ. ಟೈಟಲ್ ಕಾರ್ಡ್ನಲ್ಲಿ ತಮ್ಮನ್ನು ತೆಲುಗು ಗೀತ ಸಾಹಿತಿ ಎಂದು ಅವರು ಗುರುತಿಸಿಲ್ಲ’ ಎಂದು ರಾಕೇಂದು ಹೇಳಿದ್ದಾರೆ.
‘ರಾಮಾಯಣ’ ಸಿನಿಮಾದ ‘ಜೈ ಜೈ ರಾಮ್’ ಮೂಲ ಹಾಡನ್ನು ಡಾ ಕುಮಾರ್ ವಿಶ್ವಾಸ್ ಬರೆದಿದ್ದಾರೆ. ಹಾಡಿಗೆ ಎಆರ್ ರೆಹಮಾನ್ ಸಂಗೀತ ನೀಡಿದ್ದು, ಹಿಂದಿ ಆವೃತ್ತಿಯನ್ನು ಶ್ರೇಯಸ್ ಘೋಷಾಲ್ ಮತ್ತು ಅರಿಜಿತ್ ಸಿಂಗ್ ಹಾಡಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




