‘ರಾಮಾಯಣ’: ರಾವಣನ ಹತ್ತು ತಲೆ ಐಡಿಯಾ ಯಶ್ ಅವರದ್ದೇ
ವಿದೇಶದಲ್ಲೂ ಸಹ ಯಶ್ ಅವರ ನಟನೆಯನ್ನು, ಅವರು ಪಾತ್ರಕ್ಕೆ ತಂದಿರುವ ಆಟಿಟ್ಯೂಡ್ ಅನ್ನು ಕೊಂಡಾಡುತ್ತಿದ್ದಾರೆ. ರಾವಣನ ಪಾತ್ರವನ್ನು ತೆರೆಯ ಮೇಲೆ ತಂದಿರುವ ರೀತಿಯನ್ನು ಕೊಂಡಾಡುತ್ತಿದ್ದಾರೆ. ಯಶ್ ಅವರು ರಾವಣನ ಪಾತ್ರದಲ್ಲಿ ಅದ್ಭುತವಾಗಿ ನಟಿಸಿರುವುದು ಮಾತ್ರವೇ ಅಲ್ಲದೆ, ಪಾತ್ರದ ಕುರಿತಾಗಿ ನಿರ್ದೇಶಕರಿಗೂ ಸಾಕಷ್ಟು ಐಡಿಯಾಗಳನ್ನು ಕೊಟ್ಟಿದ್ದಾರೆ. ಸಿನಿಮಾದ ಪ್ರಚಾರದ ಸಂದರ್ಭದಲ್ಲಿ ಖುದ್ದು ನಟ ರಣ್ಬೀರ್ ಕಪೂರ್ ಅವರು ಈ ವಿಷಯವನ್ನು ಹಂಚಿಕೊಂಡಿದ್ದು, ರಾವಣನ ಹತ್ತು ತಲೆ ಐಡಿಯಾ ಯಶ್ ಅವರದ್ದೇ ಎಂದು ಅವರು ಖಚಿತಪಡಿಸಿದ್ದಾರೆ.

ಮುಖ್ಯಾಂಶಗಳು
- ‘ರಾಮಾಯಣ’ ಸಿನಿಮಾನಲ್ಲಿ ರಾವಣನಾಗಿ ಯಶ್
- ರಾವಣನ ಹತ್ತು ತಲೆ ಐಡಿಯಾ ಯಶ್ ಅವರದ್ದೆ
- ಯಶ್ ಕೊಟ್ಟಿದ್ದ ಐಡಿಯಾ ಏನು?
‘ರಾಮಾಯಣ’ ಸಿನಿಮಾ ಭರ್ಜರಿ ಯಶಸ್ವಿ ಆಗಿದೆ. ಸಿನಿಮಾ 13 ದಿನಕ್ಕೆ ಭಾರತದಲ್ಲಿ ಮಾತ್ರ 850 ಕೋಟಿ ರೂಪಾಯಿ ಹಣ ಗಳಿಕೆ ಮಾಡಿದ್ದು, ವಿಶ್ವದಾದ್ಯಂತ 1500 ಕೋಟಿಯತ್ತ ದಾಪುಗಾಲು ಹಾಕಿದೆ. ಸಿನಿಮಾ ನೋಡಿದವರೆಲ್ಲ ಯಶ್ ಅವರ ರಾವಣನ ಪಾತ್ರಕ್ಕೆ ಮಾರು ಹೋಗಿದ್ದಾರೆ. ವಿದೇಶದಲ್ಲೂ ಸಹ ಯಶ್ ಅವರ ನಟನೆಯನ್ನು, ಅವರು ಪಾತ್ರಕ್ಕೆ ತಂದಿರುವ ಆಟಿಟ್ಯೂಡ್ ಅನ್ನು ಕೊಂಡಾಡುತ್ತಿದ್ದಾರೆ. ರಾವಣನ ಪಾತ್ರವನ್ನು ತೆರೆಯ ಮೇಲೆ ತಂದಿರುವ ರೀತಿಯನ್ನು ಕೊಂಡಾಡುತ್ತಿದ್ದಾರೆ. ಯಶ್ ಅವರು ರಾವಣನ ಪಾತ್ರದಲ್ಲಿ ಅದ್ಭುತವಾಗಿ ನಟಿಸಿರುವುದು ಮಾತ್ರವೇ ಅಲ್ಲದೆ, ಪಾತ್ರದ ಕುರಿತಾಗಿ ನಿರ್ದೇಶಕರಿಗೂ ಸಾಕಷ್ಟು ಐಡಿಯಾಗಳನ್ನು ಕೊಟ್ಟಿದ್ದಾರೆ. ಸಿನಿಮಾದ ಪ್ರಚಾರದ ಸಂದರ್ಭದಲ್ಲಿ ಖುದ್ದು ನಟ ರಣ್ಬೀರ್ ಕಪೂರ್ ಅವರು ಈ ವಿಷಯವನ್ನು ಹಂಚಿಕೊಂಡಿದ್ದು, ರಾವಣನ ಹತ್ತು ತಲೆ ಐಡಿಯಾ ಯಶ್ ಅವರದ್ದೇ ಎಂದು ಅವರು ಖಚಿತಪಡಿಸಿದ್ದಾರೆ.
ಈ ಹಿಂದೆ ರಿಲೀಸ್ ಆಗಿದ್ದ ‘ಆದಿಪುರುಷ್’ ಸಿನಿಮಾನಲ್ಲಿ ರಾವಣನ ಪಾತ್ರದ ಹತ್ತು ತಲೆಯನ್ನು ತೀರಾ ಅನಿಮೇಟೆಡ್ ರೀತಿಯಲ್ಲಿ ತೋರಿಸಲಾಗಿತ್ತು. ಆದರೆ ‘ರಾಮಾಯಣ’ ಸಿನಿಮಾನಲ್ಲಿ ರಾವಣನ ಹತ್ತು ತಲೆಯನ್ನು ರಾವಣನ ಹತ್ತು ಭಿನ್ನ ವ್ಯಕ್ತಿತ್ವದ ರೀತಿಯಲ್ಲಿ ತೋರಿಸಲಾಗಿದ್ದು, ಕಾವ್ಯಾತ್ಮಕವಾಗಿ ಇರುವ ಜೊತೆಗೆ ಅದ್ಧೂರಿಯಾಗಿಯೂ ಇದೆ. ಅದರಲ್ಲೂ ಹತ್ತು ತಲೆಯನ್ನು ಪ್ರೇಕ್ಷಕರಿಗೆ ಪರಿಚಯಿಸುವ ದೃಶ್ಯವೂ ಅದ್ಭುತವಾಗಿದೆ. ಈ ದೃಶ್ಯದ ಐಡಿಯಾ ಅನ್ನು ಯಶ್ ಅವರೇ ನೀಡಿದ್ದರಂತೆ.
‘ರಾಮಾಯಣ’ ಸಿನಿಮಾನಲ್ಲಿ ಮೊದಲ ಬಾರಿ ರಾವಣನ ಹತ್ತು ತಲೆಯನ್ನು ತೋರಿಸುವ ದೃಶ್ಯ ಬಂದಾಗ, ಕ್ಯಾಮೆರಾ ರಾವಣನ ಕಣ್ಣಿನ ಮೂಲಕ ಅವನ ತಲೆಯ ಒಳಗೆ ಹೋಗಿ ಅಲ್ಲಿ ಹತ್ತು ರೂಪಗಳನ್ನು ತೋರಿಸಲಾಗುತ್ತದೆ. ರಾವಣನ ತಲೆಯ ಒಳಗೆ ಹತ್ತು ವಿಭಿನ್ನ ಆಲೋಚನೆಗಳು ಇವೆ ಎಂಬುದನ್ನು ಕಾವ್ಯಾತ್ಮಕವಾಗಿ ತೋರಿಸುವ ರೀತಿ ಇದಾಗಿದೆ. ಆದರೆ ಆ ಸೀನ್ ಮೊದಲು ಹಾಗಿರಲಿಲ್ಲವಂತೆ. ರಾವಣ ಒಂದು ಜಾಗಕ್ಕೆ ಹೋಗುತ್ತಾನೆ ಅಲ್ಲಿ ಆತನ ಹತ್ತು ರೂಪಗಳು ಆತನೊಟ್ಟಿಗೆ ಮಾತನಾಡುತ್ತವೆ ಎಂಬ ರೀತಿಯಲ್ಲಿ ದೃಶ್ಯ ಇತ್ತಂತೆ. ಆದರೆ ಯಶ್ ಅವರು ಕ್ಯಾಮೆರಾ ಪ್ಯಾನ್ ಮೂಲಕ ರಾವಣನ ತಲೆಯ ಒಳಗೆ ಹತ್ತು ಭಿನ್ನ ರೂಪಗಳನ್ನು ತೋರಿಸುವ ಐಡಿಯಾ ಕೊಟ್ಟರಂತೆ ನಿರ್ದೇಶಕ ನಿತೇಶ್ ತಿವಾರಿ ಅವರಿಗೆ. ಅವರಿಗೂ ಸಹ ಐಡಿಯಾ ಇಷ್ಟವಾಗಿ ಯಶ್ ಹೇಳಿದ್ದ ರೀತಿಯಲ್ಲಿಯೇ ಚಿತ್ರೀಕರಣ ಮಾಡಲಾಗಿದೆ.
ಇದನ್ನೂ ಓದಿ: ‘ರಾಮಾಯಣ 2’ ಚಿತ್ರದಲ್ಲಿ ಹನುಮಂತನ ಪಾತ್ರಕ್ಕಾಗಿ ಕಾಯುತ್ತಿರುವ ಅಭಿಮಾನಿಗಳಿಗೆ ಗುಡ್ ನ್ಯೂಸ್
ಯಶ್ ಅವರ ಈ ಐಡಿಯಾ ಅನ್ನು ಕೊಂಡಾಡಿರುವ ನಟ ರಣ್ಬೀರ್ ಕಪೂರ್, ‘ಒಬ್ಬ ಸಿನಿಮಾ ವಿದ್ಯಾರ್ಥಿಯಾಗಿ ನನಗೆ ಯಶ್ ಅವರ ಐಡಿಯಾ ಅದ್ಭುತ ಅನಿಸಿತು. ಕತೆಯನ್ನು ಅದ್ಭುತವಾಗಿ ಹಾಗೂ ಕಾವ್ಯಾತ್ಮಕವಾಗಿ ಜನರಿಗೆ ತಲುಪಿಸುವ ವಿಧಾನ ಎನಿಸಿತು’ ಎಂದಿದ್ದಾರೆ ನಟ.
ಯಶ್ ಅವರು ಮೊದಲಿನಿಂದಲೂ ತಮ್ಮ ಸಿನಿಮಾಗಳ ಕತೆ, ಚಿತ್ರಕತೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುತ್ತಾರೆ. ಖುದ್ದು ಯಶ್ ಅವರೇ ಈ ಬಗ್ಗೆ ಹಿಂದೊಮ್ಮೆ ಹೇಳಿದ್ದಂತೆ, ‘ನಾನು ನಟಿಸುತ್ತಿದ್ದೇನೆಂದರೆ ಅದು ನನ್ನ ಸಿನಿಮಾ, ನನ್ನ ಪಾತ್ರ. ಆ ಸಿನಿಮಾ ಅದ್ಭುತವಾಗಿ ಮೂಡಿ ಬರಬೇಕು ಎಂಬುದು ನನ್ನ ಆಸೆ, ಹಾಗಾಗಿ ನಾನು ಸಂಪೂರ್ಣವಾಗಿ ತೊಡಗಿಕೊಳ್ಳುತ್ತೇನೆ. ಬರೀ ನಟನಾಗಿ ಅಲ್ಲ ಎಲ್ಲ ವಿಭಾಗಗಳಲ್ಲೂ ನಾನು ನನ್ನನ್ನು ತೊಡಗಿಸಿಕೊಳ್ಳುತ್ತೇನೆ’ ಎಂದಿದ್ದರು ಯಶ್. ಅದರಂತೆ ಈಗ ‘ರಾಮಾಯಣ’ ಸಿನಿಮಾನಲ್ಲೂ ತಮ್ಮನ್ನು ತಾವು ಚಿತ್ರಕತೆ, ನಿರ್ದೇಶನದಲ್ಲೂ ತೊಡಗಿಸಿಕೊಂಡಿದ್ದಾರೆ. ಜೊತೆಗೆ ಈ ಸಿನಿಮಾಕ್ಕೆ ಅವರು ಸಹ ನಿರ್ಮಾಪಕ ಹಾಗೂ ಕರ್ನಾಟಕದಲ್ಲಿ ವಿತರಕರೂ ಆಗಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




