ಕೊರಟಾಲ ಶಿವ ನಿರ್ದೇಶನದ, ಜೂನಿಯರ್ ಎನ್‌ಟಿಆರ್ ಮತ್ತು ಜಾನ್ವಿ ಕಪೂರ್ ಅಭಿನಯದ ದೇವರ ಸಿನಿಮಾವು ಶುಕ್ರವಾರ, ಸೆಪ್ಟೆಂಬರ್ 27, 2024 ರಂದು ಬಿಡುಗಡೆಯಾಗಿದೆ. ಈ ಬಹುನಿರೀಕ್ಷಿತ ಚಿತ್ರಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆಯಾದರೂ ಬಾಕ್ಸ್ ಆಫೀಸ್ನಲ್ಲಿ ಭರ್ಜರಿ ಕಲೆಕ್ಷನ್ ಮಾಡುತ್ತಿದೆ. ಇದರ ನಡುವೆ ಜೂನಿಯರ್ ಎನ್ಟಿಆರ್ ಅವರ ಕಟೌಟ್ ಅನ್ನು ತೋರಿಸುವ 14 ಸೆಕೆಂಡುಗಳ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ. ಸಿನಿಮಾ ಚೆನ್ನಾಗಿಲ್ಲ ಎಂದು ಹೈದರಾಬಾದ್‌ನ ಚಿತ್ರಮಂದಿರದಲ್ಲಿ ಜೂ. ಎನ್ಟಿಆರ್ ಕಟೌಟ್ ಸುಟ್ಟು ಹಾಕಲಾಗಿದೆ ಎಂಬ ಹೇಳಿಕೆ ನೀಡಲಾಗಿದೆ.
ಎಕ್ಸ್ ಬಳಕೆದಾರರು ಈ ವೀಡಿಯೊವನ್ನು ಹಂಚಿಕೊಂಡು, “ನಿರಾಶೆಗೊಂಡ ಅಭಿಮಾನಿಗಳು ಎನ್‌ಟಿಆರ್ ಕಟೌಟ್ ಅನ್ನು ಹೊರಗೆ ಸುಟ್ಟುಹಾಕಿದ್ದಾರೆ. ಈ ವಿಚಾರ ತಿಳಿದ ತಕ್ಷಣ ಸುದರ್ಶನ್ 35mm ನಲ್ಲಿ ಸಿನಿಮಾ ವೀಕ್ಷಿಸುತ್ತಿದ್ದ ಕೊರಟಾಲ ಶಿವ ಅಹಿತರ ಘಟನೆಯಿಂದ ತಪ್ಪಿಸಲು ಪ್ರಯತ್ನಿಸಿ ಭಯದಿಂದ ಥಿಯೇಟರ್‌ನಿಂದ ಬೇಗನೆ ಹೋದರು,” ಎಂದು ಬರೆದುಕೊಂಡಿದ್ದಾರೆ.
After knowing that disappointed fans burned the NTR cutout outside , Koratala Siva, who was watching a movie at Sudarshan 35mm, quickly slipped out of the theater in fear, trying to avoid any trouble.#Sudarshan35mm #Devara #DevaraReview pic.twitter.com/Ze9XHhZNPg
— Storm Breaker (@StormBrekerr) September 27, 2024
ಹಲವಾರು ಎಕ್ಸ್ ಬಳಕೆದಾರರು ಇದೇ ಹೇಳಿಕೆಯೊಂದಿಗೆ ವೀಡಿಯೊವನ್ನು ಹಂಚಿಕೊಂಡಿದ್ದಾರೆ.
Fans burned NTR Cutout outside the Theatre, due to poor response for the film. Entra idhi ?? 🤦🏻♂️🤦🏻♂️pic.twitter.com/WGMcnwPdJJ
— Kolly Censor (@KollyCensor) September 27, 2024
ಈ ಸುದ್ದಿಯ ಸತ್ಯಾಸತ್ಯತೆಯನ್ನು ಟಿವಿ9 ಕನ್ನಡ ಪರಿಶೋಧಿಸಿದಾಗ ಸುಳ್ಳು ಹೇಳಿಕೆಯೊಂದಿಗೆ ಈ ವೀಡಿಯೊ ವೈರಲ್ ಆಗಿದೆ ಎಂಬುದು ಕಂಡುಬಂದಿದೆ. ಸಿನಿಮಾ ಬಿಡುಗಡೆ ಸಂಭ್ರಮಾಚರಣೆ ವೇಳೆ ಪಟಾಕಿ ಸಿಡಿಸುವಾಗ ಕಟೌಟ್ಗೆ ಬೆಂಕಿ ಹೊತ್ತಿಕೊಂಡಿದೆ. ಈ ಬಗ್ಗೆ ಸ್ವತಃ ಟಿವಿ9 ಕನ್ನಡ ವರದಿ ಮಾಡಿದೆ.
‘‘ಹೈದರಾಬಾದ್ನ ಸುದರ್ಶನ್ ಚಿತ್ರಮಂದಿರದ ಮುಂದೆ ನಿಲ್ಲಿಸಲಾಗಿದ್ದ ಜೂ ಎನ್ಟಿಆರ್ ಅವರ ಬೃಹತ್ ಕಟೌಟ್ಗೆ ಬೆಂಕಿ ತಗುಲಿದೆ. ಅಭಿಮಾನಿಗಳು ಪಟಾಕಿ ಹೊಡೆದು ಸಂಭ್ರಮಾಚರಣೆ ನಡೆಸುತ್ತಿರುವ ವೇಳೆ ಆಕಸ್ಮಿಕವಾಗಿ ಬೆಂಕಿ ತಗುಲಿದೆ. ಚಿತ್ರಮಂದಿರದ ಸಿಬ್ಬಂದಿ ಮತ್ತು ಅಭಿಮಾನಿಗಳು ಶೀಘ್ರವೇ ಬೆಂಕಿಯನ್ನು ನಂದಿಸಿದ್ದಾರೆ. ಈ ಘಟನೆಯಲ್ಲಿ ಯಾರಿಗೂ ಯಾವುದೇ ಸಮಸ್ಯೆ ಆಗಿಲ್ಲ.’’ ಎಂದು ವರದಿಯಲ್ಲಿದೆ.
ಇದನ್ನೂ ಓದಿ: ‘ದೇವರ’ ಬಿಡುಗಡೆ, ಜೂ ಎನ್ಟಿಆರ್ ಬೃಹತ್ ಕಟೌಟ್ಗೆ ಬೆಂಕಿ: ವಿಡಿಯೋ ನೋಡಿ
ಹೆಚ್ಚಿನ ಮಾಹಿತಿಗಾಗಿ ನಾವು ಗೂಗಲ್ನಲ್ಲಿ ವೈರಲ್ ವೀಡಿಯೊದಿಂದ ಕೀಫ್ರೇಮ್‌ನ ರಿವರ್ಸ್ ಇಮೇಜ್ ಹುಡುಕಾಟವನ್ನು ನಡೆಸಿದಾಗ, ಸೆಪ್ಟೆಂಬರ್ 27, 2024 ರಂದು ಇಂಡಿಯಾ ಟುಡೆಯ ಯೂಟ್ಯೂಬ್ ಚಾನೆಲ್ ಹಂಚಿಕೊಂಡ ವೀಡಿಯೊವನ್ನು ನಾವು ಕಂಡುಕೊಂಡಿದ್ದೇವೆ. “ಹೈದರಾಬಾದ್‌ನ ಸುದರ್ಶನ್ ಥಿಯೇಟರ್‌ನಲ್ಲಿ ದೇವರ ಚಲನಚಿತ್ರ ಆಚರಣೆಗಳು ಬೆಂಕಿಗೆ ಆಹುತಿಯಾಗಿವೆ” ಎಂದು ಶೀರ್ಷಿಕೆ ನೀಡಲಾಗಿದೆ.
ಜೂನಿಯರ್ ಎನ್ಟಿಆರ್ ಅವರ ಕಟೌಟ್‌ನ ಮುಂದೆ ನೆಲದ ಮೇಲೆ ಉದ್ದವಾದ ಪಟಾಕಿಯನ್ನು ಇರಿಸಿರುವುದನ್ನು ದೃಶ್ಯಗಳು ತೋರಿಸುತ್ತವೆ. ಪಟಾಕಿ ಹೊತ್ತಿಸುತ್ತಿದ್ದಂತೆ, ಬೆಂಕಿಯು ಜೂನಿಯರ್ ಎನ್‌ಟಿಆರ್ ಕಟೌಟ್‌ನ ಹಾರಕ್ಕೆ ಹರಡಿತು.
ಇನ್ನಷ್ಟು ಖಚಿತ ಮಾಹಿತಿಗಾಗಿ ನಾವು ಟಿವಿ9 ತೆಲುಗು ಸಿನಿಮಾ ತಂಡವನ್ನು ಸಂಪರ್ಕಿಸಿದ್ದೇವೆ. ಜೂನಿಯರ್ ಎನ್ಟಿಆರ್ ಅವರ ಕಟೌಟ್ ಅನ್ನು ಅಭಿಮಾನಿಗಳು ಉದ್ದೇಶಪೂರ್ವಕವಾಗಿ ಸುಟ್ಟು ಹಾಕಿದ್ದಾರೆ ಎಂಬ ಆರೋಪ ಸುಳ್ಳು ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಅಭಿಮಾನಿಗಳು ಪಟಾಕಿ ಸಿಡಿಸಿದಾಗ ಈ ಘಟನೆ ನಡೆದಿದೆ ಎಂದು ಅವರು ವಿವರಿಸಿದರು. ಜ್ಯೂನಿಯರ್ ಎನ್‌ಟಿಆರ್ ಅವರ ಕಟೌಟ್‌ನಲ್ಲಿದ್ದ ಹಾರಕ್ಕೆ ಬೆಂಕಿ ತಗುಲಿ ಪ್ಲಾಸ್ಟಿಕ್ ಹೂವುಗಳು ಇದ್ದ ಕಾರಣ ಸುಟ್ಟುಹೋಯಿತು, ಅದು ಬೇಗನೆ ಹೊತ್ತಿಕೊಂಡಿತು. ಘಟನೆಗೆ ಸಂಬಂಧಿಸಿದಂತೆ ಯಾವುದೇ ಪ್ರಕರಣ ದಾಖಲಾಗಿಲ್ಲ ಎಂದು ಅವರು ಖಚಿತಪಡಿಸಿದ್ದಾರೆ.
ಹೀಗಾಗಿ ಸಂಭ್ರಮಾಚರಣೆಯ ಸಂದರ್ಭದಲ್ಲಿ ಬೆಂಕಿ ಆಕಸ್ಮಿಕವಾಗಿ ಸಂಭವಿಸಿದೆ. ದೇವರ ಸಿನಿಮಾ ಚೆನ್ನಾಗಿಲ್ಲ ಎಂಬ ಕಾರಣಕ್ಕೆ ಅಭಿಮಾನಿಗಳು ಉದ್ದೇಶಪೂರ್ವಕ ಈ ಕೃತ್ಯವನ್ನು ನಡೆಸಿಲ್ಲ ಎಂದು ನಾವು ಖಚತವಾಗಿ ಹೇಳುತ್ತೇವೆ.
Published On - 9:40 am, Mon, 30 September 24