ಫಹಾದ್ ಫಾಸಿಲ್ ಸಿನಿಮಾ ಆಯ್ಕೆ ಬಗ್ಗೆ ಮೂಡಿದೆ ಎರಡು ರೀತಿಯ ಅಭಿಪ್ರಾಯ  

|

Updated on: Oct 11, 2024 | 2:48 PM

ಫಹಾದ್ ಫಾಸಿಲ್ ಅವರು ಇತ್ತೀಚಿನ ವರ್ಷಗಳಲ್ಲಿ ಮಲಯಾಳಂ ಚಿತ್ರರಂಗದಲ್ಲಿ ಹೆಚ್ಚು ಕಾಣಿಸಿಕೊಂಡಿಲ್ಲ ಎನ್ನವು ಬೇಸರ ಅವರ ಅಭಿಮಾನಿಗಳಿಗೆ ಇದೆ. ‘ಪುಷ್ಪ’ ಬಳಿಕ ಫಹಾದ್ ಅವರು ತಮಿಳಿನಲ್ಲಿ ‘ವಿಕ್ರಮ್’ ಮಾಡಿದರು. ಸದ್ಯ ಅವರು ಐದು ಸಿನಿಮಾಗಳನ್ನು ಮಾಡುತ್ತಿದ್ದು, ಈ ಪೈಕಿ ಮೂರು ಸಿನಿಮಾಗಳು ಪರಭಾಷೆಯವು.

ಫಹಾದ್ ಫಾಸಿಲ್ ಸಿನಿಮಾ ಆಯ್ಕೆ ಬಗ್ಗೆ ಮೂಡಿದೆ ಎರಡು ರೀತಿಯ ಅಭಿಪ್ರಾಯ  
ಫಹಾದ್
Follow us on

ಮಲಯಾಳಂ ನಟ ಫಹಾದ್ ಫಾಸಿಲ್ ಅವರು ಮಾಲಿವುಡ್​ನಲ್ಲಿ ದೊಡ್ಡ ಹೆಸರು ಮಾಡಿದ ಬಳಿಕ ಪರಭಾಷೆಯಲ್ಲಿ ಮಿಂಚಲು ಆರಂಭಿಸಿದರು. ಈಗ ಅವರು ಪರಭಾಷೆಯಲ್ಲಿ ಹೆಚ್ಚು ತೊಡಗಿಕೊಂಡಿದ್ದಾರೆ. ತೆಲುಗಿನಲ್ಲಿ ‘ಪುಷ್ಪ’, ತಮಿಳಿನಲ್ಲಿ ‘ವಿಕ್ರಂ’, ಕನ್ನಡದಲ್ಲಿ ‘ಧೂಮಂ’ ರೀತಿಯ ಸಿನಿಮಾಗಳನ್ನು ಅವರು ಮಾಡಿದ್ದಾರೆ. ಈಗ ಅವರ ಅಭಿಮಾನಿಗಳಿಗೆ ಫಹಾದ್ ಬಗ್ಗೆ ಸಾಕಷ್ಟು ಹೆಮ್ಮೆ ಮೂಡಿದೆ. ಇನ್ನೂ ಕೆಲವರು ಬೇಸರ ಮಾಡಿಕೊಂಡಿದ್ದಾರೆ.

ಬ್ಯಾಟರಿ ಹೆಸರಿನ ಪಾತ್ರವನ್ನು ಫಹಾದ್ ಫಾಸಿಲ್ ಮಾಡಿದ್ದಾರೆ. ಕಥಾ ನಾಯಕ ರಜನಿಕಾಂತ್ ಅವರ ಬಂಟ ಕೂಡ ಹೌದು. ಈ ಪಾತ್ರವು ಕ್ಲೈಮ್ಯಾಕ್ಸ್​ನಲ್ಲಿ ಕೊನೆ ಆಗುತ್ತದೆ. ಫಹಾದ್ ಅವರು ಸಿನಿಮಾ ಉದ್ದಕ್ಕೂ ಕಾಣಿಸಿಕೊಂಡಿರೋದಕ್ಕೆ ಅವರ ಫ್ಯಾನ್ಸ್ ಸಖತ್ ಖುಷಿಪಟ್ಟಿದ್ದಾರೆ. ಆದರೆ, ಈ ಪಾತ್ರ ಕೊನೆ ಆಗಬಾರದಿತ್ತು ಎಂದು ಕೆಲವರು ಅಭಿಪ್ರಾಯ ಹೊರಹಾಕಿದ್ದಾರೆ.

ಫಹಾದ್ ಫಾಸಿಲ್ ಅವರು ಇತ್ತೀಚಿನ ವರ್ಷಗಳಲ್ಲಿ ಮಲಯಾಳಂ ಚಿತ್ರರಂಗದಲ್ಲಿ ಹೆಚ್ಚು ಕಾಣಿಸಿಕೊಂಡಿಲ್ಲ ಎನ್ನವು ಬೇಸರ ಅವರ ಅಭಿಮಾನಿಗಳಿಗೆ ಇದೆ. ‘ಪುಷ್ಪ’ ಬಳಿಕ ಫಹಾದ್ ಅವರು ತಮಿಳಿನಲ್ಲಿ ‘ವಿಕ್ರಮ್’ ಮಾಡಿದರು. ಸದ್ಯ ಅವರು ಐದು ಸಿನಿಮಾಗಳನ್ನು ಮಾಡುತ್ತಿದ್ದು, ಈ ಪೈಕಿ ಮೂರು ಸಿನಿಮಾಗಳು ಪರಭಾಷೆಯವು.

ಫಹಾದ್ ಅವರ ನಟನೆಯ ಬಗ್ಗೆ ಯಾರೂ ಇಲ್ಲಿ ಪ್ರಶ್ನೆ ಮಾಡುವಂತೆಯೇ ಇಲ್ಲ. ಅವರು ಒಂದಾದ ಬಳಿಕ ಒಂದು ಹಿಟ್ ಚಿತ್ರಗಳನ್ನು ನೀಡುತ್ತಿದ್ದಾರೆ. ಮಾಡಿದ ಪ್ರತಿ ಸಿನಿಮಾದಲ್ಲಿ ಅವರ ಪಾತ್ರ ಭಿನ್ನ ಎನಿಸಿಕೊಳ್ಳುತ್ತಿದೆ. ಈ ಕಾರಣಕ್ಕೆ ಅವರು ಸಖತ್ ಇಷ್ಟ ಆಗುತ್ತಾರೆ.

ಸದ್ಯ ಫಹಾದ್ ಅವರು, ‘ಬೌಗೇನ್​ವಿಲ್ಲೈ’, ‘ಪುಷ್ಪ 2’, ‘ಡೋಂಟ್ ಟ್ರಬಲ್​ ದಿ ಟ್ರಬಲ್’, ‘ಮಾರೀಸಂ’ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಇದರ ಜೊತೆಗೆ ಹಲವು ಆಫರ್​ಗಳು ಅವರನ್ನು ಹುಡುಕಿ ಬರುತ್ತಿವೆ.

ಇದನ್ನೂ ಓದಿ: ಬಾಲಿವುಡ್​ಗೆ ಫಹಾದ್ ಫಾಸಿಲ್, ಯಶಸ್ವಿ ನಿರ್ದೇಶಕನೊಟ್ಟಿಗೆ ಮಾತುಕತೆ

‘ಪುಷ್ಪ’ ಚಿತ್ರದಲ್ಲಿ ಫಹಾದ್ ಮಾಡಿದ್ದ ಪಾತ್ರ ಸಾಕಷ್ಟು ಗಮನ ಸೆಳೆದಿತ್ತು. ಅವರು ಮಾಡಿದ್ದು ವಿಲನ್ ಪಾತ್ರ ಆದರೂ ನೆಗೆಟಿವ್ ಶೇಡ್ ಹೊಂದಿತ್ತು. ಎರಡನೇ ಪಾರ್ಟ್​ನಲ್ಲಿ ಅವರ ಪಾತ್ರ ಬಹುಮುಖ್ಯ ಆಗಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.