‘ಅವೇಂಜರ್ಸ್ ಅಸೆಂಬಲ್’ ಮತ್ತೆ ಬರ್ತಿದೆ ‘ಅವೇಂಜರ್ಸ್: ಎಂಡ್​​ಗೇಮ್’

Avengers Endgame movie: ‘ಅವೇಂಜರ್ಸ್’ ಸರಣಿಯ ನಾಲ್ಕು ಸಿನಿಮಾ ಬಿಡುಗಡೆ ಆಗಿವೆ. ಈ ವರೆಗೆ ಬಿಡುಗಡೆ ಆಗಿರುವ ನಾಲ್ಕು ಸಿನಿಮಾಗಳಲ್ಲಿ ‘ಅವೇಂಜರ್ಸ್: ದಿ ಎಂಡ್​​ಗೇಮ್’ ಭಾರಿ ದೊಡ್ಡ ಹಿಟ್ ಆಗಿರುವ ಸಿನಿಮಾ ಹಾಗೂ ದೊಡ್ಡ ಅಭಿಮಾನಿ ವರ್ಗ ಹೊಂದಿರುವ ಸಿನಿಮಾ ಆಗಿದೆ. ಇದೀಗ ಈ ಸಿನಿಮಾ ಮರು ಬಿಡುಗಡೆ ಆಗುತ್ತಿದೆ. ಅದೂ ಕೆಲವು ಬದಲಾವಣೆಗಳು ಹಾಗೂ ಕೆಲ ಹೆಚ್ಚುವರಿ ದೃಶ್ಯಗಳ ಜೊತೆಗೆ.

‘ಅವೇಂಜರ್ಸ್ ಅಸೆಂಬಲ್’ ಮತ್ತೆ ಬರ್ತಿದೆ ‘ಅವೇಂಜರ್ಸ್: ಎಂಡ್​​ಗೇಮ್’
Avengers Endgame

Updated on: Aug 26, 2026 | 7:07 PM

ಅವೇಂಜರ್ಸ್’ (Avengers) ವಿಶ್ವದಾದ್ಯಂತ ಅತಿ ಹೆಚ್ಚು ಜನ ನೋಡುವ ಸಿನಿಮಾ ಸರಣಿಗಳಲ್ಲಿ ಪ್ರಮುಖವಾದುದು. ಈ ವರೆಗೆ ‘ಅವೇಂಜರ್ಸ್’ ಸರಣಿಯ ನಾಲ್ಕು ಸಿನಿಮಾಗಳು ಈಗಾಗಲೇ ಬಿಡುಗಡೆ ಆಗಿದ್ದು, ಐದನೇ ಸಿನಿಮಾ ಇದೇ ವರ್ಷ ಡಿಸೆಂಬರ್​​ನಲ್ಲಿ ಬಿಡುಗಡೆ ಆಗಲಿದೆ. ಈ ವರೆಗೆ ಬಿಡುಗಡೆ ಆಗಿರುವ ನಾಲ್ಕು ಸಿನಿಮಾಗಳಲ್ಲಿ ‘ಅವೇಂಜರ್ಸ್: ದಿ ಎಂಡ್​​ಗೇಮ್’ ಭಾರಿ ದೊಡ್ಡ ಹಿಟ್ ಆಗಿರುವ ಸಿನಿಮಾ ಹಾಗೂ ದೊಡ್ಡ ಅಭಿಮಾನಿ ವರ್ಗ ಹೊಂದಿರುವ ಸಿನಿಮಾ ಆಗಿದೆ. ಇದೀಗ ಈ ಸಿನಿಮಾ ಮರು ಬಿಡುಗಡೆ ಆಗುತ್ತಿದೆ. ಅದೂ ಕೆಲವು ಬದಲಾವಣೆಗಳು ಹಾಗೂ ಕೆಲ ಹೆಚ್ಚುವರಿ ದೃಶ್ಯಗಳ ಜೊತೆಗೆ.

ಮಾರ್ವೆಲ್ ಸ್ಟುಡಿಯೋಸ್ ‘ಅವೇಂಜರ್ಸ್: ಎಂಡ್​​ಗೇಮ್’ ಸಿನಿಮಾ ಅನ್ನು ‘ಅವೇಂಜರ್ಸ್: ಎಂಡ್​​ಗೇಮ್: ಎನ್​​ಕೋರ್’ ಎಂಬ ಹೊಸ ಶೀರ್ಷಿಕೆಯೊಂದಿಗೆ ಮತ್ತೆ ಚಿತ್ರಮಂದಿರಗಳಿಗೆ ತರುತ್ತಿದೆ. ಸೆಪ್ಟೆಂಬರ್ 25 ರಂದು ಈ ಚಿತ್ರವು ಮರುಬಿಡುಗಡೆಯಾಗಲು ಸಜ್ಜಾಗಿದೆ. ಇದೇ ಹಿನ್ನೆಲೆಯಲ್ಲಿ ಮಾರ್ವೆಲ್ ಸ್ಟುಡಿಯೋ ಹೊಸ ಟ್ರೈಲರ್ ಅನ್ನು ಬಿಡುಗಡೆ ಮಾಡಿದೆ.

ಹೊಸದಾಗಿ ಬಿಡುಗಡೆಯಾಗಿರುವ 1.36 ನಿಮಿಷಗಳ ಟ್ರೈಲರ್​​ನಲ್ಲಿ, ‘ಅವೇಂಜರ್ಸ್’ ಸಿನಿಮಾದ ನವೀಕರಿಸಿದ ಕಲರ್ ಗ್ರೇಡಿಂಗ್ ಮತ್ತು ಸಂಭಾಷಣೆಗಳಲ್ಲಿನ ಸಣ್ಣಪುಟ್ಟ ಬದಲಾವಣೆಗಳನ್ನು ತೋರಿಸಲಾಗಿದೆ. ಜೊತೆಗೆ ಚಿತ್ರದ ಅತ್ಯಾಕರ್ಷಕ ಕ್ಲೈಮ್ಯಾಕ್ಸ್ ಸಮಯದಲ್ಲಿ ಚಿತ್ರಮಂದಿರಗಳಲ್ಲಿ ಅಭಿಮಾನಿಗಳು ಹುಚ್ಚೆದ್ದು ಕುಣಿದು ಸಂಭ್ರಮಿಸಿದ ನೈಜ ದೃಶ್ಯಗಳನ್ನು ಸಹ ಒಳಗೊಂಡಿದೆ. ಐಮ್ಯಾಕ್ಸ್ ಮತ್ತು ಇನ್ಫಿನಿಟಿ ವಿಷನ್ ಸೇರಿದಂತೆ ವಿವಿಧ ಸ್ವರೂಪಗಳಲ್ಲಿ ಈ ಚಿತ್ರವು ತೆರೆಕಾಣಲಿದ್ದು, ಮುಂಗಡ ಟಿಕೆಟ್ ಬುಕಿಂಗ್ ಈಗಾಗಲೇ ಲಭ್ಯವಿದೆ. ಈ ‘ಎನ್ಕೋರ್’ ಆವೃತ್ತಿಯು ಡಿಸೆಂಬರ್ 18 ರಂದು ಬಿಡುಗಡೆಯಾಗಲಿರುವ ‘Avengers: Doomsday’ ಚಿತ್ರದ ವಿಶೇಷ ಮುನ್ನೋಟವನ್ನೂ ಒಳಗೊಂಡಿರಲಿದ್ದು, ಇದು ಅಭಿಮಾನಿಗಳಿಗೆ ಮತ್ತಷ್ಟು ಕುತೂಹಲ ಉಂಟಾಗುವಂತೆ ಮಾಡಿದೆ.

ಇದನ್ನೂ ಓದಿ:‘ಅವೇಂಜರ್ಸ್ ಡೂಮ್​​ಸ್ಡೇ’: ಒಬ್ಬನ ಎದುರಿಸಲು ಒಗ್ಗೂಡಿದ ಎಲ್ಲ ಸೂಪರ್​​ ಹೀರೋಗಳು

‘ಅವೇಂಜರ್ಸ್’ ಸರಣಿಯ ಐದನೇ ಸಿನಿಮಾ ‘ಅವೇಂಜರ್ಸ್: ಡೂಮ್ಸ್​ಡೇ’ ಸಿನಿಮಾದ ಚಿತ್ರೀಕರಣ ಪೂರ್ಣಗೊಂಡಿದ್ದು, ಈ ಸಿನಿಮಾ ಇದೇ ವರ್ಷ ಡಿಸೆಂಬರ್​​ನಲ್ಲಿ ಬಿಡುಗಡೆ ಆಗಲಿದೆ. ಮಾರ್ವೆಲ್​​ನ ಐಕಾನಿಕ್ ಪಾತ್ರವಾದ ‘ಐರನ್ ಮ್ಯಾನ್’ನಲ್ಲಿ ನಾಯಕನಾಗಿ ನಟಿಸುತ್ತಿದ್ದ ರಾಬರ್ಟ್ ಡೌನಿ ಜೂನಿಯರ್, ‘ಡೂಮ್ಸ್​​ಡೇ’ ಸಿನಿಮಾನಲ್ಲಿ ಸೂಪರ್ ವಿಲನ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ‘ಅವೇಂಜರ್ಸ್’ ಮಾತ್ರವೇ ಅಲ್ಲದೆ, ಹಾಲಿವುಡ್​​ ಇತಿಹಾಸದಲ್ಲಿಯೇ ಅತಿ ದೊಡ್ಡ ಸ್ಟಾರ್ ಕಾಸ್ಟ್ ಉಳ್ಳ, ಅತಿ ದೊಡ್ಡ ಬಜೆಟ್​​ನ ಸಿನಿಮಾ ಇದಾಗಿದೆ. ಸಿನಿಮಾನಲ್ಲಿ ಮಾರ್ವೆಲ್ ಸಿನಿಮ್ಯಾಟಿಕ್ ಯೂನಿವರ್ಸ್​​ನ ಎಲ್ಲ ಸೂಪರ್ ಹೀರೋಗಳು ಒಟ್ಟಿಗೆ ಒಂದೆಡೆ ಸೇರಿಕೊಂಡಿರುವುದು ವಿಶೇಷ. ಆ ಸಿನಿಮಾದ ಪ್ರಚಾರಕ್ಕಾಗಿಯೇ ಇದೀಗ ‘ಅವೇಂಜರ್ಸ್: ಎಂಡ್​​ಗೇಮ್’ ಸಿನಿಮಾವನ್ನು ರೀ ರಿಲೀಸ್ ಮಾಡಲಾಗುತ್ತಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us