AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಅವೇಂಜರ್ಸ್ ಡೂಮ್​​ಸ್ಡೇ’: ಒಬ್ಬನ ಎದುರಿಸಲು ಒಗ್ಗೂಡಿದ ಎಲ್ಲ ಸೂಪರ್​​ ಹೀರೋಗಳು

Avengers Doomsday movie: ಅವೇಂಜರ್ಸ್ ಎಂಬುದು ಹಲವು ಸೂಪರ್ ಹೀರೋಗಳ ಗುಂಪಾಗಿದ್ದು, ಎಲ್ಲರೂ ಸೇರಿ ವಿಲನ್ ವಿರುದ್ಧ ಹೊಡೆದಾಡುವ ಕತೆಗಳನ್ನು ಈ ಸಿನಿಮಾಗಳು ಹೊಂದಿದ್ದರು. ಈ ಸಿನಿಮಾ ಸರಣಿಯ ಜನಪ್ರಿಯ ವಿಲನ್ ಥ್ಯಾನೋಸ್. ಆದರೆ ಇದೀಗ ‘ಅವೇಂಜರ್ಸ್’ ಸರಣಿಯ ಐದನೇ ಸಿನಿಮಾ ಬರುತ್ತಿದ್ದು, ಮಾರ್ವೆಲ್ ಯೂನಿವರ್ಸ್​​ನಲ್ಲಿರುವ ಎಲ್ಲ ಸೂಪರ್ ಹೀರೋಗಳು ಒಟ್ಟು ಸೇರಿ ಒಬ್ಬ ವಿಲನ್ ವಿರುದ್ಧ ಹೋರಾಟಕ್ಕೆ ನಿಂತಿವೆ.

‘ಅವೇಂಜರ್ಸ್ ಡೂಮ್​​ಸ್ಡೇ’: ಒಬ್ಬನ ಎದುರಿಸಲು ಒಗ್ಗೂಡಿದ ಎಲ್ಲ ಸೂಪರ್​​ ಹೀರೋಗಳು
Avengers Doomsday
ಮಂಜುನಾಥ ಸಿ.
|

Updated on: Jul 21, 2026 | 4:07 PM

Share

‘ಅವೇಂಜರ್ಸ್’ (Avengers), ವಿಶ್ವ ಸಿನಿಮಾ ರಂಗದ ಬಲು ಅದ್ಧೂರಿ ಆಕ್ಷನ್ ಸಿನಿಮಾ. ಈ ವರೆಗೆ ‘ಅವೇಂಜರ್ಸ್’ ಸರಣಿಯ ನಾಲ್ಕು ಸಿನಿಮಾಗಳು ಬಿಡುಗಡೆ ಆಗಿದ್ದು, ಈ ನಾಲ್ಕೂ ಸಿನಿಮಾಗಳು ದಾಖಲೆ ಮೊತ್ತದ ಗಳಿಕೆ ಮಾಡಿವೆ. ಅವೇಂಜರ್ಸ್ ಎಂಬುದು ಹಲವು ಸೂಪರ್ ಹೀರೋಗಳ ಗುಂಪಾಗಿದ್ದು, ಎಲ್ಲರೂ ಸೇರಿ ವಿಲನ್ ವಿರುದ್ಧ ಹೊಡೆದಾಡುವ ಕತೆಗಳನ್ನು ಈ ಸಿನಿಮಾಗಳು ಹೊಂದಿದ್ದರು. ಈ ಸಿನಿಮಾ ಸರಣಿಯ ಜನಪ್ರಿಯ ವಿಲನ್ ಥ್ಯಾನೋಸ್. ಆದರೆ ಇದೀಗ ‘ಅವೇಂಜರ್ಸ್’ ಸರಣಿಯ ಐದನೇ ಸಿನಿಮಾ ಬರುತ್ತಿದ್ದು, ಮಾರ್ವೆಲ್ ಯೂನಿವರ್ಸ್​​ನಲ್ಲಿರುವ ಎಲ್ಲ ಸೂಪರ್ ಹೀರೋಗಳು ಒಟ್ಟು ಸೇರಿ ಒಬ್ಬ ವಿಲನ್ ವಿರುದ್ಧ ಹೋರಾಟಕ್ಕೆ ನಿಂತಿವೆ.

‘ಅವೆಂಜರ್ಸ್: ಡೂಮ್ಸ್‌ಡೇ’ ಹೆಸರಿನ ಸಿನಿಮಾ ನಿರ್ಮಾಗೊಂಡಿದ್ದು, ಬಿಡುಗಡೆಗೆ ರೆಡಿಯಾಗಿದೆ. ಈ ಸಿನಿಮಾನಲ್ಲಿ ಅವೇಂಜರ್ಸ್, ಥ್ಯಾನೋಸ್​​ಗಿಂತಲೂ ನೂರು ಪಟ್ಟು ಶಕ್ತಿಶಾಲಿ ವಿಲನ್ ಅನ್ನು ಎದುರಿಸುತ್ತಿದ್ದಾರೆ. ಸಿನಿಮಾದ ಟ್ರೈಲರ್ ಇದೀಗ ಬಿಡುಗಡೆ ಆಗಿದ್ದು, ಟ್ರೈಲರ್​​ನಲ್ಲಿ ತೋರಿಸಿರುವಂತೆ ಮಾರ್ವೆಲ್ ಯೂನಿವರ್ಸ್​​​ನಲ್ಲಿರುವ ಎಲ್ಲ ಸೂಪರ್ ಹೀರೋಗಳು ಒಟ್ಟಿಗೆ ಸೇರಿದ್ದು, ಒಬ್ಬ ಮಹಾನ್ ಶಕ್ತಿಶಾಲಿ ವಿಲನ್ ವಿರುದ್ಧ ಹೋರಾಡಲು ಸಜ್ಜಾಗಿದ್ದಾರೆ. ವಿಶೇಷವೆಂದರೆ, ‘ಅವೇಂಜರ್ಸ್: ಎಂಡ್​​ಗೇಮ್’ನಲ್ಲಿ ಅವೇಂಜರ್ಸ್ ತಂಡದಿಂದ ನಿವೃತ್ತಿ ಪಡೆದಿದ್ದ ಕ್ಯಾಪ್ಟನ್ ಅಮೆರಿಕ ಸಹ ವಿಲನ್ ವಿರುದ್ಧ ಹೋರಾಡಲು ಮರಳಿ ಬಂದಿದ್ದಾನೆ.

ಈ ಬಾರಿ ಅವೇಂಜರ್ಸ್ ಗುಂಪನ್ನು ಥಾರ್ ಮುನ್ನಡೆಸುತ್ತಿದ್ದು, ಎಲ್ಲ ಸೂಪರ್ ಹೀರೋಗಳನ್ನು ಸಹ ಆತ ಒಟ್ಟಿಗೆ ಸೇರಿಸಿದ್ದಾನೆ. ಲೋಕಿ, ಕ್ಯಾಪ್ಟನ್ ಅಮೆರಿಕ, ಬ್ಲಾಕ್ ಪ್ಯಾಂಥರ್, ಆಂಟ್​ಮ್ಯಾನ್, ಬ್ಲಾಕ್ ಕ್ಯಾಪ್ಟನ್ ಅಮೆರಿಕ, ಬಕಿ, ಫೆಂಟಾಸ್ಟಿಕ್ ಫೈವ್ ತಂಡದ ಎಲ್ಲ ಸದಸ್ಯರು, ಹ್ಯೂಮನ್ ಟಾರ್ಚ್, ಶಾಂಗ್ ಚೀ, ಮೆಗ್ನಿಟೊ, ಡೆಡ್​​ಪೂಲ್ ಇನ್ನೂ ಹಲವಾರು ಸೂಪರ್ ಹೀರೋಗಳು ಕೇವಲ ಒಬ್ಬ ವಿಲನ್ ಎದುರು ಹೊಡೆದಾಲು ಒಂದಾಗಿದ್ದಾರೆ. ಅಂದಹಾಗೆ ಈ ಸೂಪರ್​​ ಹೀರೋಗಳೆಲ್ಲ ಒಂದಾಗಿರುವುದು ವಿಕ್ಟರ್ ವೋಮ್ ಡೂಮ್​​ಸ್ಡೇ ಎಂಬ ವಿಲನ್ ಜೊತೆ ಹೋರಾಡಲು.

ಇದನ್ನೂ ಓದಿ:ಬಿಡುಗಡೆ ಆಯ್ತು ‘ಸ್ಪೈಡರ್ ಮ್ಯಾನ್’ ಟ್ರೈಲರ್, ಗೆಳೆಯರೇ ಈಗ ಶತ್ರುಗಳು

‘ಅವೇಂಜರ್ಸ್: ಡೂಮ್​ಸ್ಡೇ’ ಸಿನಿಮಾನಲ್ಲಿ ಮುಖ್ಯ ವಿಲನ್ ಆಗಿರುವ ವಿಕ್ಟರ್ ವೋಮ್ ಡೂಮ್​​ಸ್ಡೇ ಪಾತ್ರದಲ್ಲಿ ರಾಬರ್ಟ್ ಡೌನಿ ಜೂನಿಯರ್ ನಟಿಸಿದ್ದಾರೆ. ಅವರು ನಟಿಸುತ್ತಿದ್ದ ಐರನ್ ಮ್ಯಾನ್ ಪಾತ್ರ ‘ಅವೇಂಜರ್ಸ್: ಎಂಡ್​​ಗೇಮ್’ ಸಿನಿಮಾನಲ್ಲಿ ಸತ್ತು ಹೋಗಿದ್ದು, ಇದೀಗ ರಾಬರ್ಟ್ ಅವರು ಡೂಮ್​​ಸ್ಡೇ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಈಗ ಬಿಡುಗಡೆ ಆಗಿರುವ ಟ್ರೈಲರ್​​ನಲ್ಲಿ ಥಾರ್ ಪಾತ್ರದ ಹಿನ್ನೆಲೆ ಧ್ವನಿ ಇದ್ದು, ‘ನಾನು ಈ ವರೆಗೆ ಮಹಾನ್ ವಿಲನ್​ಗಳ ಜೊತೆ ಹೋರಾಡಿದ್ದೀನಿ, ನನಗಿಂತಲೂ ಹಲವು ಪಟ್ಟು ಶಕ್ತಿಶಾಲಿಗಳೊಟ್ಟಿಗೆ ಹೋರಾಡಿದ್ದೀನಿ, ಆದರೆ ನನಗೆ ಭಯವಾಗಿಲ್ಲ. ಆದರೆ ಮೊದಲ ಬಾರಿಗೆ ಈತನ ಎದುರಿಸಲು ಭಯವಾಗುತ್ತಿದೆ’ ಎಂದಿದ್ದಾನೆ. ಈ ಸಂಭಾಷಣೆ, ಡೂಮ್​​ಸ್ಡೇ ಪಾತ್ರಕ್ಕಿರುವ ಶಕ್ತಿಯ ಸುಳಿವು ನೀಡುತ್ತಿದೆ. ಸಿನಿಮಾ ಡಿಸೆಂಬರ್ 18ಕ್ಕೆ ಬಿಡುಗಡೆ ಆಗಲಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
ಮಂಜುನಾಥ ಸಿ.
ಮಂಜುನಾಥ ಸಿ.

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More
ಮಂಡ್ಯ ಎಳನೀರು ವ್ಯಾಪಾರಿಗಳಿಗೆ ಮಹಾ ದೋಖಾ: 25 ಲಕ್ಷಕ್ಕೂ ಹೆಚ್ಚು ಹಣ ವಂಚನೆ
ಮಂಡ್ಯ ಎಳನೀರು ವ್ಯಾಪಾರಿಗಳಿಗೆ ಮಹಾ ದೋಖಾ: 25 ಲಕ್ಷಕ್ಕೂ ಹೆಚ್ಚು ಹಣ ವಂಚನೆ
ಸಂಧಾನ ಸಭೆ ಯಶಸ್ವಿ: ಮುನಿಸು ಮರೆತು ಪರಸ್ಪರ ಕೈಲುಕಿದ ಹಾಸನ ಡಿಸಿ-ಎಸ್ಪಿ
ಸಂಧಾನ ಸಭೆ ಯಶಸ್ವಿ: ಮುನಿಸು ಮರೆತು ಪರಸ್ಪರ ಕೈಲುಕಿದ ಹಾಸನ ಡಿಸಿ-ಎಸ್ಪಿ
ನಮ್ಮ ಮೆಟ್ರೋದಲ್ಲಿ ಮತ್ತೊಂದು ಜೀವಂತ ಹೃದಯ ಸಾಗಣೆ: ವಿಡಿಯೋ ನೋಡಿ
ನಮ್ಮ ಮೆಟ್ರೋದಲ್ಲಿ ಮತ್ತೊಂದು ಜೀವಂತ ಹೃದಯ ಸಾಗಣೆ: ವಿಡಿಯೋ ನೋಡಿ
ಯಲಹಂಕ ಬಳಿ ನಿಂತಿದ್ದ ರೈಲು ಬೋಗಿಗಳು ಬೆಂಕಿಗೆ ಆಹುತಿ
ಯಲಹಂಕ ಬಳಿ ನಿಂತಿದ್ದ ರೈಲು ಬೋಗಿಗಳು ಬೆಂಕಿಗೆ ಆಹುತಿ
ಈ ಬಾರಿ ಬಿಗ್​​ಬಾಸ್ ಫಿನಾಲೆಗೆ ಬರುವವರು ಯಾರು? ಮಂಜನ ಉತ್ತರ ಹೀಗಿತ್ತು
ಈ ಬಾರಿ ಬಿಗ್​​ಬಾಸ್ ಫಿನಾಲೆಗೆ ಬರುವವರು ಯಾರು? ಮಂಜನ ಉತ್ತರ ಹೀಗಿತ್ತು
ಅಂಬಾರಿ ಹೊರುವ ಆನೆಯ ಆಯ್ಕೆ ಹೇಗೆ ನಡೆಯುತ್ತದೆ?
ಅಂಬಾರಿ ಹೊರುವ ಆನೆಯ ಆಯ್ಕೆ ಹೇಗೆ ನಡೆಯುತ್ತದೆ?
ರಮೇಶ್​​ ಜಾರಕಿಹೊಳಿ ಭೇಟಿ ರಹಸ್ಯ ಬಿಚ್ಚಿಟ್ಟ ಸಿದ್ದರಾಮಯ್ಯ
ರಮೇಶ್​​ ಜಾರಕಿಹೊಳಿ ಭೇಟಿ ರಹಸ್ಯ ಬಿಚ್ಚಿಟ್ಟ ಸಿದ್ದರಾಮಯ್ಯ
ಪರಿಣಾಮ ನೆಟ್ಟಗೆ ಇರಲ್ಲ: ಕಿಚ್ಚ ಸುದೀಪ್ ಅಭಿಮಾನಿಗಳಿಗೆ ಉಗ್ರಪ್ಪ ಎಚ್ಚರಿಕೆ
ಪರಿಣಾಮ ನೆಟ್ಟಗೆ ಇರಲ್ಲ: ಕಿಚ್ಚ ಸುದೀಪ್ ಅಭಿಮಾನಿಗಳಿಗೆ ಉಗ್ರಪ್ಪ ಎಚ್ಚರಿಕೆ
ಕುಟುಂಬದ ಹಿನ್ನೆಲೆ ಬಗ್ಗೆ ಮಾತನಾಡಿದ ‘ಬಿಗ್ ಬಾಸ್ ಕನ್ನಡ 13’ ಸ್ಪರ್ಧಿ ಮಂಜ
ಕುಟುಂಬದ ಹಿನ್ನೆಲೆ ಬಗ್ಗೆ ಮಾತನಾಡಿದ ‘ಬಿಗ್ ಬಾಸ್ ಕನ್ನಡ 13’ ಸ್ಪರ್ಧಿ ಮಂಜ
ಇಸ್ರೋ ರೋಬೋಟಿಕ್ಸ್ ಚಾಲೆಂಜ್‌ನಲ್ಲಿ ಐಐಐಟಿ ಧಾರವಾಡ ವಿದ್ಯಾರ್ಥಿಗಳ ಸಾಧನೆ
ಇಸ್ರೋ ರೋಬೋಟಿಕ್ಸ್ ಚಾಲೆಂಜ್‌ನಲ್ಲಿ ಐಐಐಟಿ ಧಾರವಾಡ ವಿದ್ಯಾರ್ಥಿಗಳ ಸಾಧನೆ