ಪ್ರಶಾಂತ್ ನೀಲ್-ಜೂನಿಯರ್ ಎನ್​ಟಿಆರ್​ ಸಿನಿಮಾ ಶೂಟಿಂಗ್ ಯಾವಾಗ? ಇಲ್ಲಿದೆ ಅಪ್​ಡೇಟ್

‘ಕೆಜಿಎಫ್​ 2’ ನಿರ್ದೇಶಕ ಪ್ರಶಾಂತ್ ನೀಲ್ ಅವರು ಪ್ರಭಾಸ್ ಜೊತೆ ‘ಸಲಾರ್’ ಸಿನಿಮಾ ಮಾಡಿ ಗೆಲುವು ಕಂಡರು. ಈಗ ಅವರು ಜೂನಿಯರ್​ ಎನ್​ಟಿಆರ್​ ಜೊತೆ ಸಿನಿಮಾ ಮಾಡಲು ಸಕಲ ಸಿದ್ಧತೆ ಮಾಡಿಕೊಂಡಿದ್ದಾರೆ. ಈ ಸಿನಿಮಾದ ಶೂಟಿಂಗ್ ಯಾವಾಗ ಶುರು ಆಗಲಿದೆ ಎಂಬ ಕುರಿತು ಒಂದು ಹೊಸ ನ್ಯೂಸ್ ಕೇಳಿಬಂದಿದೆ.

ಪ್ರಶಾಂತ್ ನೀಲ್-ಜೂನಿಯರ್ ಎನ್​ಟಿಆರ್​ ಸಿನಿಮಾ ಶೂಟಿಂಗ್ ಯಾವಾಗ? ಇಲ್ಲಿದೆ ಅಪ್​ಡೇಟ್
Prashanth Neel, Jr Ntr

Updated on: Feb 19, 2025 | 4:57 PM

ಕನ್ನಡ ಚಿತ್ರರಂಗದ ಸ್ಟಾರ್​ ನಿರ್ದೇಶಕ ಪ್ರಶಾಂತ್ ನೀಲ್ ಅವರಿಗೆ ಟಾಲಿವುಡ್​ನಲ್ಲೂ ಸಖತ್ ಬೇಡಿಕೆ ಇದೆ. ‘ಕೆಜಿಎಫ್​: ಚಾಪ್ಟರ್​ 1’ ಮತ್ತು ‘ಕೆಜಿಎಫ್: ಚಾಪ್ಟರ್​ 2’ ಸಿನಿಮಾಗಳು ಸೂಪರ್​ ಹಿಟ್ ಆದ ನಂತರ ಅವರ ಜೊತೆ ಸಿನಿಮಾ ಮಾಡಲು ಸ್ಟಾರ್​ ಹೀರೋಗಳು ಆಸಕ್ತಿ ತೋರಿಸಿದರು. ಜೂನಿಯರ್​ ಎನ್​ಟಿಆರ್​ ಜೊತೆ ಪ್ರಶಾಂತ್ ನೀಲ್ ಸಿನಿಮಾ ಮಾಡುತ್ತಾರೆ ಎಂಬ ಸುದ್ದಿ ಹೊರಬಿದ್ದಾಗ ಅಭಿಮಾನಿಗಳಿಗೆ ಸಖತ್ ಖುಷಿ ಆಗಿತ್ತು. ಆದರೆ ಆ ಸಿನಿಮಾ ಸೆಟ್ಟೇರಲು ಬಹಳ ಸಮಯ ಹಿಡಿಯಿತು. ಈಗ ಆ ಚಿತ್ರದ ಶೂಟಿಂಗ್​ ಆರಂಭಕ್ಕೆ ಮುಹೂರ್ತ ಕೂಡಿಬಂದಿದೆ.

ವರದಿಗಳ ಪ್ರಕಾರ, ಜೂನಿಯರ್​ ಎನ್​ಟಿಆರ್​ ಹಾಗೂ ಪ್ರಶಾಂತ್ ನೀಲ್ ಕಾಂಬಿನೇಷನ್​ನ ಸಿನಿಮಾಗೆ ಫೆಬ್ರವರಿ 20ರಿಂದ ಚಿತ್ರೀಕರಣ ಆರಂಭ ಆಗಲಿದೆ. ಇದು ಅದ್ದೂರಿ ಆ್ಯಕ್ಷನ್​ ಸಿನಿಮಾ ಆಗಿರಲಿದೆ. ಮೊದಲ ಹಂತದಲ್ಲಿ ಕೇವಲ 10 ದಿನಗಳ ಕಾಲ ಚಿತ್ರೀಕರಣ ಮಾಡಲಾಗುವುದು. ಹಾಗಾಗಿ ಈ ಹಂತದಲ್ಲಿ ಜೂನಿಯರ್​ ಎನ್​ಟಿಆರ್​ ಅವರು ಶೂಟಿಂಗ್​ ಸೆಟ್​ಗೆ ಬರುವುದಿಲ್ಲ. ಮಾರ್ಚ್​ನಲ್ಲಿ 2ನೇ ಹಂತದ ಶೂಟಿಂಗ್ ನಡೆಯಲಿದ್ದು, ಆಗ ಅವರು ಭಾಗಿಯಾಗಲಿದ್ದಾರೆ ಎನ್ನಲಾಗಿದೆ.

ಈ ಸಿನಿಮಾಗೆ ಇನ್ನೂ ಶೀರ್ಷಿಕೆ ಏನು ಎಂಬುದು ಬಹಿರಂಗ ಆಗಿಲ್ಲ. ಜೂನಿಯರ್ ಎನ್​ಟಿಆರ್​ ಅವರಿಗೆ ರುಕ್ಮಿಣಿ ವಸಂತ್ ನಾಯಕಿ ಆಗಲಿದ್ದಾರೆ ಎಂದು ಕೂಡ ವರದಿ ಆಗಿದೆ. ಘಟಾನುಘಟಿಗಳ ಸಿನಿಮಾ ಆದ್ದರಿಂದ ನಿರೀಕ್ಷೆ ಜೋರಾಗಿದೆ. ಸಿನಿಮಾ ಬಗ್ಗೆ ಹೆಚ್ಚಿನ ಅಪ್​ಡೇಟ್​ ತಿಳಿಯಲು ಜೂನಿಯರ್​ ಎನ್​ಟಿಆರ್​ ಅಭಿಮಾನಿಗಳು ಕಾದಿದ್ದಾರೆ. ಶೂಟಿಂಗ್ ಆರಂಭ ಆಗುತ್ತಿದೆ ಎಂಬ ಸುದ್ದಿ ಜೇಳಿ ಅಭಿಮಾನಿಗಳಿಗೆ ಖುಷಿ ಆಗಿದೆ.

ಇದನ್ನೂ ಓದಿ: ‘ವಾರ್ 2’ ಚಿತ್ರದ ಬಗ್ಗೆ ಜೂನಿಯರ್​ ಎನ್​ಟಿಆರ್ ಅಭಿಮಾನಿಗಳ ಅಸಮಾಧಾನ

‘ದೇವರ’ ಸಿನಿಮಾದ ಬಳಿಕ ಜೂನಿಯರ್​ ಎನ್​ಟಿಆರ್​ ಅವರು ‘ವಾರ್​ 2’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಆ ಮೂಲಕ ಅವರು ಬಾಲಿವುಡ್​ಗೆ ಕಾಲಿಟ್ಟಿದ್ದಾರೆ. ಹೃತಿಕ್ ರೋಷನ್​ ಜೊತೆ ಅವರು ತೆರೆ ಹಂಚಿಕೊಳ್ಳುತ್ತಿದ್ದಾರೆ. ‘ದೇವರ 2’ ಕೂಡ ಅವರ ಕೈಯಲ್ಲಿದೆ. ಆದರೆ ಆ ಸಿನಿಮಾದ ಶೂಟಿಂಗ್ ಆರಂಭಕ್ಕೆ ಇನ್ನೂ ಸಮಯ ಬೇಕಿದೆ. ಪ್ರಶಾಂತ್ ನೀಲ್ ಜೊತೆಗಿನ ಸಿನಿಮಾದ ಕೆಲಸಗಳು ಮುಗಿದ ನಂತರವೇ ‘ದೇವರ 2’ ಸೆಟ್ಟೇರಲಿದೆ ಎನ್ನಲಾಗಿದೆ. ಒಟ್ಟಿನಲ್ಲಿ ಜೂನಿಯರ್ ಎನ್​ಟಿಆರ್​ ಅವರು ಸಿಕ್ಕಾಪಟ್ಟೆ ಬ್ಯುಸಿ ಆಗಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Follow Us