ಆ ಒಂದು ಕಾರಣಕ್ಕೆ ಅಭಿಮಾನಿಗಳ ಬಗ್ಗೆ ಅಪ್ಸೆಟ್ ಆದ ಜೂನಿಯರ್ ಎನ್​ಟಿಆರ್

| Updated By: ಮಂಜುನಾಥ ಸಿ.

Updated on: Oct 10, 2024 | 6:45 PM

Jr NTR: ಜೂ ಎನ್​ಟಿಆರ್ ನಟನೆಯ ‘ದೇವರ’ ಸಿನಿಮಾ ಕೆಲ ವಾರದ ಹಿಂದಷ್ಟೆ ಬಿಡುಗಡೆ ಆಗಿದ್ದು, ಮಿಶ್ರ ಪ್ರತಿಕ್ರಿಯೆ ಪಡೆದುಕೊಂಡಿದೆ. ಸಿನಿಮಾದ ಬಗ್ಗೆ ಹಲವರು ನೆಗೆಟಿವ್ ಅಭಿಪ್ರಾಯ ಹಂಚಿಕೊಂಡಿದ್ದರು. ಇದರಿಂದ ಬೇಸರಗೊಂಡಿದ್ದಾರೆ ಜೂ ಎನ್​ಟಿಆರ್.

ಆ ಒಂದು ಕಾರಣಕ್ಕೆ ಅಭಿಮಾನಿಗಳ ಬಗ್ಗೆ ಅಪ್ಸೆಟ್ ಆದ ಜೂನಿಯರ್ ಎನ್​ಟಿಆರ್
Follow us on

ಜೂನಿಯರ್ ಎನ್​ಟಿಆರ್ ನಟನೆಯ ‘ದೇವರ’ ಚಿತ್ರವು ಇತ್ತೀಚೆಗೆ ಬಿಡುಗಡೆ ಕಂಡಿತು. ಈ ಸಿನಿಮಾ ಎಲ್ಲರಿಗೂ ಇಷ್ಟ ಆಗಿಲ್ಲ. ಅವರ ಅಭಿಮಾನಿಗಳೇ ಸಿನಿಮಾದ ಬಗ್ಗೆ ಕೆಟ್ಟ ಕಾಮೆಂಟ್ ಮಾಡಿದ್ದು ಇದೆ. ಹಳೆಯ ಕಾಲದ ಕಥೆಯನ್ನು ಹೇಳುವ ಪ್ರಯತ್ನವನ್ನು ನಿರ್ದೇಶಕರು ಮಾಡಿದ್ದಾರೆ ಎಂದು ಫ್ಯಾನ್ಸ್ ಟೀಕಿಸಿದ್ದರು. ಎರಡು ಭಾಗದಲ್ಲಿ ಸಿನಿಮಾ ಬರುತ್ತಿರುವುದರಿಂದ ಕಥೆಗೆ ಒಂದು ಸರಿಯಾದ ಶೇಪ್ ಕೊಡದೇ ಮುಗಿಸಲಾಗಿದೆ ಎಂದು ಕೂಡ ಹೇಳಿರುವುದು ಇಲ್ಲಿ ಗಮನಿಸಬೇಕಾದ ವಿಚಾರವಾಗಿದೆ. ಸಿನಿಮಾಗೆ ಸಿಕ್ಕ ಮಿಶ್ರ ಪ್ರತಿಕ್ರಿಯೆಯ ಬಗ್ಗೆ ಜೂನಿಯರ್ ಎನ್ಟಿಆರ್ ಅವರಿಗೆ ಬೇಸರ ಆಗಿದೆ.

‘ದೇವರ’ ಬಗ್ಗೆ ಪಾಸಿಟಿವ್ ಟಾಕ್ ನಡೆದಿದ್ದು ಕಡಿಮೆ. ಚಿತ್ರದ ಮ್ಯೂಸಿಕ್ ಹಾಗೂ ಆ್ಯಕ್ಷನ್ ದೃಶ್ಯಗಳನ್ನು ಜನರು ಮೆಚ್ಚಿಕೊಂಡಿದ್ದಾರೆ ಅಷ್ಟೇ. ಅದನ್ನು ಬಿಟ್ಟು ಸಿನಿಮಾನ ಜನರು ಹೊಗಳಿಲ್ಲ. ಸಂದರ್ಶನವೊಂದರಲ್ಲಿ ಮಾತನಾಡಿರುವ ಜೂನಿಯರ್ ಎನ್ಟಿಆರ್ ಅವರು ಪ್ರೇಕ್ಷಕರು ನೆಗಟಿವ್ ಆಗಿದ್ದಾರೆ ಎಂದಿದ್ದಾರಂತೆ.

‘ಇತ್ತೀಚಿನ ದಿನಗಳಲ್ಲಿ ಪ್ರೇಕ್ಷಕರಾಗಿ ನಾವು ತುಂಬಾ ನಕಾರಾತ್ಮಕವಾಗಿ ಚಿಂತಿಸುತ್ತಿದ್ದೇವೆ. ಇನ್ನು ಮುಂದೆ ನಾವು ಮುಗ್ಧವಾಗಿ ಚಿತ್ರವನ್ನು ಆನಂದಿಸಲು ಸಾಧ್ಯವಿಲ್ಲ’ ಎಂದು ಜೂನಿಯರ್ ಎನ್ಟಿಆರ್ ಹೇಳಿದ್ದಾರಂತೆ. ಒಂದು ಚಿತ್ರವನ್ನು ಜಡ್ಜ್ ಮಾಡಬಾರದು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

‘ನಾನು ನನ್ನ ಮಕ್ಕಳನ್ನು ನೋಡುತ್ತೇನೆ. ಅವರು ಯಾವ ನಟ ಅಥವಾ ಯಾವ ಸಿನಿಮಾ ನೋಡುತ್ತಿದ್ದೇನೆ ಎಂಬುದರ ಬಗ್ಗೆ ಅವರು ಕಾಳಜಿ ವಹಿಸುವುದಿಲ್ಲ. ಅವರು ಕೇವಲ ಚಲನಚಿತ್ರಗಳನ್ನು ಆನಂದಿಸುತ್ತಾರೆ. ನಾವು ಏಕೆ ಮುಗ್ಧರಾಗಿರಲು ಸಾಧ್ಯವಿಲ್ಲ ಎಂದು ನಾನು ಆಶ್ಚರ್ಯ ಪಡುತ್ತೇನೆ’ ಎಂದು ಜೂನಿಯರ್ ಎನ್ಟಿಆರ್ ಅವರು ಹೇಳಿದ್ದಾರೆ.

ಇದನ್ನೂ ಓದಿ:ಪ್ರಭಾಸ್ ಪ್ರಕಾರ ಯಾರು ಬೆಸ್ಟ್? ಅಲ್ಲು ಅರ್ಜುನ್, ಜೂ ಎನ್​ಟಿಆರ್, ರಾಮ್ ಚರಣ್

ಇದನ್ನು ಕೆಲವರು ಟೀಕಿಸಿದ್ದಾರೆ. ‘ಆರ್ಆರ್ಆರ್ ಸಿನಿಮಾ ಗೆದ್ದಾಗ ಅನೇಕರು ಹೊಗಳಿದರು. ಅದನ್ನು ಖುಷಿಯಿಂದ ಸ್ವೀಕರಿಸಿದ್ದೀರಿ. ಆದರೆ, ಸಿನಿಮಾ ಸರಿ ಇಲ್ಲ ಎಂದು ಟೀಕೆ ಮಾಡಿದಾಗ ಅದನ್ನೇಕೆ ಅರಗಿಸಿಕೊಳ್ಳುವುದಿಲ್ಲ’ ಎಂದು ಕೆಲವರು ಪ್ರಶ್ನೆ ಮಾಡಿದ್ದಾರೆ. ‘ಸಿನಿಮಾ ಉತ್ತಮವಾಗಿ ಇಲ್ಲದಿರುವಾಗ ಅದನ್ನು ಹಾಗೆಯೇ ಕರೆಯಬೇಕಲ್ಲವೇ’ ಎಂದು ಕೆಲವರು ಹೇಳಿದ್ದಾರೆ.

‘ದೇವರ’ ಚಿತ್ರವು ಭಾರತದ ಬಾಕ್ಸ್ ಆಫೀಸ್ನಲ್ಲಿ ಗಳಿಕೆ ಮಾಡಿದ್ದು 250 ಕೋಟಿ ರೂಪಾಯಿ. ಇದು ಕೂಡ ದೊಡ್ಡ ಮೊತ್ತವೇ. ಆದರೆ, ಈಗ ಟ್ರೆಂಡ್ ಬದಲಾಗಿದೆ. ಸಿನಿಮಾ 500 ಕೋಟಿ ರೂಪಾಯಿ ಗಳಿಸಿದರೆ ಮಾತ್ರ ಮೆಚ್ಚಿಕೊಳ್ಳುತ್ತಾರೆ. ‘ದೇವರ’ ಸಿನಿಮಾ ಭಾರತದ ಬಾಕ್ಸ್ ಆಫೀಸ್​ನಲ್ಲಿ ಕೇವಲ 250 ಕೋಟಿ ರೂಪಾಯಿ ಗಳಿಸಲಷ್ಟೇ ಸಾಧ್ಯವಾಗಿದೆ ಅನ್ನೋದು ಬೇಸರದ ವಿಚಾರ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ