AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪ್ರಭಾಸ್ ಪ್ರಕಾರ ಯಾರು ಬೆಸ್ಟ್? ಅಲ್ಲು ಅರ್ಜುನ್, ಜೂ ಎನ್​ಟಿಆರ್, ರಾಮ್ ಚರಣ್

ಪ್ರಭಾಸ್ ಮಾತನಾಡುವುದೇ ಕಡಿಮೆ, ಸಂದರ್ಶನಗಳಲ್ಲಿಯೂ ಅವರು ಮೌನವಾಗಿಯೇ ಇರುತ್ತಾರೆ. ವಿವಾದಗಳಿಂದ ಅಂತೂ ಕಿ.ಮೀಗಟ್ಟಲೆ ದೂರ. ಆದರೆ ಒಮ್ಮೆ ಮಾತ್ರ ಸಂದರ್ಶನವೊಂದರಲ್ಲಿ, ಮಹೇಶ್ ಬಾಬು, ಅಲ್ಲು ಅರ್ಜುನ್, ಜೂ ಎನ್​ಟಿಆರ್, ರಾಮ್ ಚರಣ್ ಅವರುಗಳಲ್ಲಿ ಯಾರು ಒಳ್ಳೆಯ ನಟರು ಎಂದು ಹೇಳಿದ್ದರು.

ಪ್ರಭಾಸ್ ಪ್ರಕಾರ ಯಾರು ಬೆಸ್ಟ್? ಅಲ್ಲು ಅರ್ಜುನ್, ಜೂ ಎನ್​ಟಿಆರ್, ರಾಮ್ ಚರಣ್
Follow us
ಮಂಜುನಾಥ ಸಿ.
|

Updated on: Oct 02, 2024 | 8:37 AM

ಅತಿ ಹೆಚ್ಚು ಸೂಪರ್ ಸ್ಟಾರ್ ನಟರನ್ನು ಹೊಂದಿರುವ ಚಿತ್ರರಂಗವೆಂದರೆ ಅದು ತೆಲುಗು ಚಿತ್ರರಂಗ. ಮೆಗಾಸ್ಟಾರ್ ಚಿರಂಜೀವಿ, ನಂದಮೂರಿ ಬಾಲಕೃಷ್ಣ, ನಾಗಾರ್ಜುನ, ವೆಂಕಟೇಶ್ ಅದಾದ ಬಳಿಕ ಪ್ರಭಾಸ್, ಜೂ ಎನ್​ಟಿಆರ್, ರಾಮ್ ಚರಣ್, ಮಹೇಶ್ ಬಾಬು, ಅಲ್ಲು ಅರ್ಜುನ್, ರವಿತೇಜ ಅದಾದ ಬಳಿಕ ವಿಜಯ್ ದೇವರಕೊಂಡ, ನಾನಿ, ನಿತಿನ್, ವರುಣ್ ತೇಜ್, ಕಲ್ಯಾಣ್ ರಾಮ್ ಅದಾದ ಬಳಿಕ ಇನ್ನೂ ಕೆಲವು ಯುವನಟರು, ಹೀಗೆ ಒಂದು ಆರ್ಡರ್​ನಲ್ಲಿ ಸ್ಟಾರ್​ಗಳು, ಸೂಪರ್ ಸ್ಟಾರ್​ಗಳು ತೆಲುಗು ಚಿತ್ರರಂಗದಲ್ಲಿ ಇದ್ದಾರೆ.

ಮೊದಲ ಸಾಲಿನಲ್ಲಿರುವ ಸ್ಟಾರ್ ನಟರುಗಳಿಗೆ ಭಾರಿ ಸಂಖ್ಯೆಯ ಅಭಿಮಾನಿಗಳಿದ್ದಾರೆ. ಪ್ರಭಾಸ್, ಅಲ್ಲು ಅರ್ಜುನ್, ಮಹೇಶ್ ಬಾಬು, ರಾಮ್ ಚರಣ್, ಜೂ ಎನ್​ಟಿಆರ್ ಅವರುಗಳ ಮಧ್ಯೆ ಒಂದೊಳ್ಳೆ ಆರೋಗ್ಯಕರ ಸ್ಪರ್ಧೆಯೂ ನಡೆಯುತ್ತಿದೆ. ಎಲ್ಲ ನಟರು ಉತ್ತಮ ಸಿನಿಮಾ ನೀಡಲು, ಬ್ಲಾಕ್ ಬಸ್ಟರ್​ ಸಿನಿಮಾಗಳನ್ನು ನೀಡಲು ಸತತವಾಗಿ ಯತ್ನಿಸುತ್ತಿದ್ದಾರೆ. ಆದರೆ ಈ ಟಾಪ್ ಸ್ಟಾರ್​ ನಟರಲ್ಲಿ ಯಾರು ಉತ್ತಮ? ಸ್ವತಃ ಪ್ರಭಾಸ್​ಗೆ ಈ ಪ್ರಶ್ನೆ ಎದುರಾದಾಗ ಧೈರ್ಯ ಮಾಡಿ ಉತ್ತರ ನೀಡಿಯೇ ಬಿಟ್ಟಿದ್ದರು ಪ್ರಭಾಸ್.

ಇದನ್ನೂ ಓದಿ:ಮತ್ತೆ ರಾಮಾಯಣ ಆಧರಿಸಿದ ಸಿನಿಮಾದಲ್ಲಿ ಪ್ರಭಾಸ್, ಆದರೆ ಈ ಬಾರಿ ರಾಮನಲ್ಲ

ಹೆಚ್ಚಾಗಿ ಮಾತನಾಡದ ನಟ ಪ್ರಭಾಸ್​, ಸಂದರ್ಶನಗಳಿಂದ ತುಸು ದೂರ. ಆದರೆ ಈ ಹಿಂದೆ ಪ್ರಭಾಸ್​, ಜನಪ್ರಿಯ ಹಿಂದಿ ಟಾಕ್ ಶೋ ‘ಕಾಫಿ ವಿತ್ ಕರಣ್​’ನಲ್ಲಿ ಭಾಗವಹಿಸಿದ್ದರು. ಕರಣ್ ಜೋಹರ್ ನಿರೂಪಣೆ ಮಾಡುವ ಆ ಶೋ ವಿವಾದಾತ್ಮಕ ಪ್ರಶ್ನೆಗಳನ್ನು ಕೇಳಿ ಅತಿಥಿಗಳಿಂದ ಉತ್ತರ ಹೇಳಿಸಿ ವಿವಾದಗಳಿಗೆ ಈಡು ಮಾಡಿದ್ದೇ ಹೆಚ್ಚು. ಐವರು ನಟ ಅಥವಾ ನಟಿಯರ ಹೆಸರು ಹೇಳಿ ಇದರಲ್ಲಿ ಒಳ್ಳೆಯ ನಟರು ಯಾರು ಎಂದೆಲ್ಲ ಕೇಳಲಾಗುತ್ತಿತ್ತು. ಪ್ರಭಾಸ್​ಗೂ ಸಹ ಇದೇ ಮಾದರಿಯ ಪ್ರಶ್ನೆ ಎದುರಾಗಿತ್ತು.

ಈ ನಾಲ್ಕು ನಟರನ್ನು ಅವರ ನಟನಾ ಪ್ರತಿಭೆ ಆಧರಿಸಿ ಅನುಕ್ರಮದಲ್ಲಿ ಹೆಸರಿಸಿ ಎಂದು ಹೇಳಿ ಮಹೇಶ್ ಬಾಬು, ಜೂ ಎನ್​ಟಿಆರ್, ಅಲ್ಲು ಅರ್ಜುನ್, ರಾಮ್ ಚರಣ್ ಎಂದು ಆಯ್ಕೆಗಳನ್ನು ನೀಡಲಾಗಿತ್ತು. ಇಂಥಹಾ ವಿವಾದಾತ್ಮಕ ಪ್ರಶ್ನೆಗಳಿಂದ ದೂರವೇ ಇರುವ ಪ್ರಭಾಸ್, ಈ ಪ್ರಶ್ನೆಗೆ ಉತ್ತರ ನೀಡಿದ್ದರು. ಪ್ರಭಾಸ್​ ನೀಡಿದ ಉತ್ತರದ ಪ್ರಕಾರ, ಮಹೇಶ್ ಬಾಬು, ಜೂ ಎನ್​ಟಿಆರ್, ಅಲ್ಲು ಅರ್ಜುನ್, ರಾಮ್ ಚರಣ್ ಅವರುಗಳಲ್ಲಿ ಜೂ ಎನ್​ಟಿಆರ್ ಅತ್ಯುತ್ತಮ ನಟರಂತೆ. ಅದರ ನಂತರದ ಸ್ಥಾನ ಮಹೇಶ್ ಬಾಬು, ಅವರ ಬಳಿಕ ಅಲ್ಲು ಅರ್ಜುನ್, ಕೊನೆಯ ಸ್ಥಾನವನ್ನು ರಾಮ್ ಚರಣ್​ಗೆ ನೀಡಿದ್ದರು ಪ್ರಭಾಸ್.

ಅಸಲಿಗೆ ಪ್ರಭಾಸ್ ಹಾಗೂ ರಾಮ್ ಚರಣ್ ಆತ್ಮೀಯ ಗೆಳೆಯರು, ಜೂ ಎನ್​ಟಿಆರ್ ಸಹ ಪ್ರಭಾಸ್​ಗೆ ಉತ್ತಮ ಗೆಳೆಯರು. ಆದರೆ ಪ್ರಭಾಸ್​ಗೆ ವೈಯಕ್ತಿಕವಾಗಿ ಜೂ ಎನ್​ಟಿಆರ್ ನಟನೆ ಬಹಳ ಇಷ್ಟವಂತೆ. ಪ್ರಭಾಸ್ ಪ್ರಸ್ತುತ ಐದು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಹಾರರ್ ಸಿನಿಮಾ ‘ರಾಜಾಸಾಬ್’ ಸಿನಿಮಾದ ಚಿತ್ರೀಕರಣ ಬಹುತೇಕ ಮುಗಿಸಿದ್ದಾರೆ. ರಘು ಹನುಪುಡಿ ನಿರ್ದೇಶನದ ಸಿನಿಮಾದಲ್ಲಿ ಪ್ರಭಾಸ್ ನಟಿಸುತ್ತಿದ್ದಾರೆ. ಅದಾದ ಬಳಿಕ ‘ಸ್ಪಿರಿಟ್’ ಸಿನಿಮಾ ಪ್ರಾರಂಭವಾಗಲಿದೆ. ಅದರ ಬಳಿಕ ‘ಕಲ್ಕಿ 2’ ಹಾಗೂ ‘ಸಲಾರ್ 2’ ಸಿನಿಮಾಗಳ ಚಿತ್ರೀಕರಣ ಆರಂಭ ಆಗಲಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

VIDEO: ವಿವಾದಕ್ಕೀಡಾದ ಶುಭ್​​ಮನ್ ಗಿಲ್ ರನೌಟ್
VIDEO: ವಿವಾದಕ್ಕೀಡಾದ ಶುಭ್​​ಮನ್ ಗಿಲ್ ರನೌಟ್
Daily Devotional: ಪೂಜೆ ಸಮಯದಲ್ಲಿ ಯಾವ ಬಣ್ಣದ ಬಟ್ಟೆ ಧರಿಸಬೇಕು?
Daily Devotional: ಪೂಜೆ ಸಮಯದಲ್ಲಿ ಯಾವ ಬಣ್ಣದ ಬಟ್ಟೆ ಧರಿಸಬೇಕು?
horoscope: ಈ ರಾಶಿಯವರಿಗೆ ಇಂದು ಆಕಸ್ಮಿಕ ಧನಯೋಗ, ವೃತ್ತಿಯಲ್ಲಿ ಯಶಸ್ಸು
horoscope: ಈ ರಾಶಿಯವರಿಗೆ ಇಂದು ಆಕಸ್ಮಿಕ ಧನಯೋಗ, ವೃತ್ತಿಯಲ್ಲಿ ಯಶಸ್ಸು
6ಕ್ಕೆ ಆರೂ ವಿಷಯದಲ್ಲಿ ಫೇಲಾದ ಮಗನಿಗೆ ಕೇಕ್‌ ತಿನ್ನಿಸಿ ಧೈರ್ಯ ತುಂಬಿದ ಅಪ್ಪ
6ಕ್ಕೆ ಆರೂ ವಿಷಯದಲ್ಲಿ ಫೇಲಾದ ಮಗನಿಗೆ ಕೇಕ್‌ ತಿನ್ನಿಸಿ ಧೈರ್ಯ ತುಂಬಿದ ಅಪ್ಪ
ಬಿಜೆಪಿಯಿಂದ ಉಚ್ಚಾಟಿತ ಯತ್ನಾಳ್ ತನ್ನ ಅಸ್ತಿತ್ವ ಉಳಿಸಿಕೊಳ್ಳಬೇಕಿದೆ: ಸಚಿವ
ಬಿಜೆಪಿಯಿಂದ ಉಚ್ಚಾಟಿತ ಯತ್ನಾಳ್ ತನ್ನ ಅಸ್ತಿತ್ವ ಉಳಿಸಿಕೊಳ್ಳಬೇಕಿದೆ: ಸಚಿವ
ರಸ್ತೆಯಲ್ಲಿ ನಿಲ್ಲಿಸಿದ್ದ ಸ್ಕೂಟಿಯನ್ನೇ ತಳ್ಳಿಕೊಂಡು ಹೋದ ಗೂಳಿ!
ರಸ್ತೆಯಲ್ಲಿ ನಿಲ್ಲಿಸಿದ್ದ ಸ್ಕೂಟಿಯನ್ನೇ ತಳ್ಳಿಕೊಂಡು ಹೋದ ಗೂಳಿ!
ಕ್ಯಾನ್ಸರ್​ಗೀಡಾಗಿದ್ದ ಚಿರಂತ್ ಬಲಗೈ ಮೂಳೆ ಆಪರೇಷನ್ ಮೂಲಕ ತೆಗೆಯಲಾಗಿದೆ!
ಕ್ಯಾನ್ಸರ್​ಗೀಡಾಗಿದ್ದ ಚಿರಂತ್ ಬಲಗೈ ಮೂಳೆ ಆಪರೇಷನ್ ಮೂಲಕ ತೆಗೆಯಲಾಗಿದೆ!
‘ಕಲಾಮಾಧ್ಯಮ’ ಯಶಸ್ಸು ಕಂಡಿದ್ದು ರಾತ್ರೋರಾತ್ರಿ ಅಲ್ಲ; ಪರಮ್ ಕಷ್ಟದ ಹಾದಿ
‘ಕಲಾಮಾಧ್ಯಮ’ ಯಶಸ್ಸು ಕಂಡಿದ್ದು ರಾತ್ರೋರಾತ್ರಿ ಅಲ್ಲ; ಪರಮ್ ಕಷ್ಟದ ಹಾದಿ
ಗಂಗಾ ಎಕ್ಸ್‌ಪ್ರೆಸ್‌ವೇಯಲ್ಲಿ ವಾಯುಪಡೆಯಿಂದ ಯುದ್ಧವಿಮಾನಗಳ ತಾಲೀಮು
ಗಂಗಾ ಎಕ್ಸ್‌ಪ್ರೆಸ್‌ವೇಯಲ್ಲಿ ವಾಯುಪಡೆಯಿಂದ ಯುದ್ಧವಿಮಾನಗಳ ತಾಲೀಮು
ಶಿವಾನಂದ ಪಾಟೀಲ್ ರಾಜೀನಾಮೆ ಅಂಗೀಕರಿಸಲು ಬರಲ್ಲ: ಯುಟಿ ಖಾದರ್
ಶಿವಾನಂದ ಪಾಟೀಲ್ ರಾಜೀನಾಮೆ ಅಂಗೀಕರಿಸಲು ಬರಲ್ಲ: ಯುಟಿ ಖಾದರ್