ನೆಗೆಟಿವ್ ವಿಮರ್ಶೆಗಳ ನಡುವೆಯೂ ಮುಂದುವರೆದ ‘ದೇವರ’ ಅಬ್ಬರ
Jr NTR Movie Box Office: ಜೂ ಎನ್ಟಿಆರ್ ನಟನೆಯ ‘ದೇವರ’ ಸಿನಿಮಾ ಬಿಡುಗಡೆ ಆಗಿ ನಾಲ್ಕು ದಿನಗಳಾಗಿವೆ. ಸಿನಿಮಾದ ಬಗ್ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಆದರೆ ಈ ಮಿಶ್ರ ಪ್ರತಿಕ್ರಿಯೆಯ ನಡುವೆಯೂ ಸಿನಿಮಾ ಕಲೆಕ್ಷನ್ ತೀರಾ ಧಾರುಣವಾಗಿ ಕುಸಿದಿಲ್ಲ.
ಜೂ ಎನ್ಟಿಆರ್ ನಟನೆಯ ‘ದೇವರ’ ಸಿನಿಮಾ ಕೆಲ ದಿನಗಳ ಹಿಂದಷ್ಟೆ ವಿಶ್ವದಾದ್ಯಂತ ಬಿಡುಗಡೆ ಆಗಿದೆ. ಕೊರಟಾಲ ಶಿವ ನಿರ್ದೇಶನದ ಈ ಸಿನಿಮಾ ಬಿಡುಗಡೆ ಆದ ದಿನದಿಂದಲೂ ಸಿನಿಮಾ ಬಗ್ಗೆ ಋಣಾತ್ಮಕ ವಿಮರ್ಶೆಗಳೇ ಕೇಳಿ ಬರುತ್ತಿವೆ. ಎನ್ಟಿಆರ್ ಅಭಿಮಾನಿಗಳೂ ಸಹ ಕೆಲವರು ಸಿನಿಮಾದ ಬಗ್ಗೆ ಮಿಶ್ರ ಪ್ರತಿಕ್ರಿಯೆಯನ್ನೇ ವ್ಯಕ್ತಪಡಿಸಿದ್ದಾರೆ. ಋಣಾತ್ಮಕ ವಿಮರ್ಶೆಗಳ ನಡುವೆಯೂ ಸಹ ಸಿನಿಮಾ ಉತ್ತಮ ಕಲೆಕ್ಷನ್ ಅನ್ನೇ ಮಾಡುತ್ತಿದೆ. ಇದೀಗ ಸಿನಿಮಾ ಬಿಡುಗಡೆ ಆಗಿ ನಾಲ್ಕು ದಿನ ಆಗಿದ್ದು, ಕಲೆಕ್ಷನ್ ಧಾರುಣವಾಗಿ ಏನೂ ಕುಸಿದಿಲ್ಲ.
‘ದೇವರ’ ಸಿನಿಮಾ ಮಂಗಳವಾರ ಸುಮಾರು 12 ಕೋಟಿ ರೂಪಾಯಿಗಳನ್ನು ಗಳಿಕೆ ಮಾಡಿದೆ. ಸೋಮವಾರದ ಕಲೆಕ್ಷನ್ಗೆ ಹೋಲಿಸಿದರೆ ಮಂಗಳವಾರ ತುಸು ಕಲೆಕ್ಷನ್ ಹೆಚ್ಚಾಗಿಯೇ ಆಗಿದೆ. ಇದು ಚಿತ್ರತಂಡದಲ್ಲಿ ಭರವಸೆ ಮೂಡಿಸಿದ್ದು, ಸಿನಿಮಾದ 500 ಕೋಟಿ ಕಲೆಕ್ಷನ್ ಕನಸನ್ನು ಜೀವಂತವಾಗಿರಿಸಿದೆ. ಮಂಗಳವಾರ ಕಲೆಕ್ಷನ್ ಆದ 12 ಕೋಟಿ ಹಣದಲ್ಲಿ ನಾಲ್ಕು ಕೋಟಿ ಹಿಂದಿ ಡಬ್ ಆವೃತ್ತಿಯಿಂದಲೇ ಬಂದಿದೆ. ಉತ್ತರ ಭಾರತದಲ್ಲಿ ಕಲೆಕ್ಷನ್ ಉತ್ತಮಗೊಂಡಿದ್ದು, ಮಂಗಳವಾರ ದಿನ ನಾಲ್ಕು ಕೋಟಿಗೂ ಹೆಚ್ಚು ಹಣ ಗಳಿಕೆ ಆಗಿದೆ.
ಇದನ್ನೂ ಓದಿ:‘ದೇವರ’ ಬಗ್ಗೆ ಮೌನ ತಾಳಿದ ಮಹೇಶ್ ಬಾಬು; ಸಿನಿಮಾ ಇಷ್ಟವಾಗಿಲ್ವಾ?
ನಾಲ್ಕು ದಿನಗಳಲ್ಲಿ ‘ದೇವರ’ ಸಿನಿಮಾದ ಅಂತರಾಷ್ಟ್ರೀಯ ಬಾಕ್ಸ್ ಆಫೀಸ್ ಕಲೆಕ್ಷನ್ 300 ಕೋಟಿ ರೂಪಾಯಿ ದಾಟಿದೆ. ಕೆಲವೇ ದಿನಗಳಲ್ಲಿ 350 ಕೋಟಿ ಕಲೆಕ್ಷನ್ ದಾಟಲಿದ್ದು, ಸಿನಿಮಾದ ಲೈಫ್ ಟೈಮ್ ಕಲೆಕ್ಷನ್ 500 ಕೋಟಿ ಆಗಲಿದೆಯಾ ಎಂಬ ಅನುಮಾನ ಇದೀಗ ಮೂಡಿದೆ. ‘ದೇವರ’ ಸಿನಿಮಾ ವಿಜಯ್ ನಟನೆಯ ‘ವಾರಿಸು’ ಸಿನಿಮಾದ ಓವರ್ಆಲ್ ಕಲೆಕ್ಷನ್ ಅನ್ನು ಈಗಾಗಲೇ ಮೀರಿಸಿದ್ದು, 500 ಕೋಟಿ ಕಲೆಕ್ಷನ್ ಗುರಿ ತಲುಪುವ ನಿರೀಕ್ಷೆಯಲ್ಲಿದೆ. ಆದರೆ ಅದು ಅಷ್ಟು ಸುಲಭ ಅಲ್ಲ ಎಂದಿದ್ದಾರೆ ಬಾಕ್ಸ್ ಆಫೀಸ್ ವಿಶ್ಲೇಷಕರು.
‘ದೇವರ’ ಸಿನಿಮಾ, ಆರು ವರ್ಷಗಳ ಬಳಿಕ ಬಿಡುಗಡೆ ಆಗುತ್ತಿರುವ ಜೂ ಎನ್ಟಿಆರ್ ಅವರ ಸೋಲೊ ಸಿನಿಮಾ ಆಗಿದೆ. ‘ಆರ್ಆರ್ಆರ್’ ಸಿನಿಮಾ ಬಿಡುಗಡೆ ಆಗಿತ್ತಾದರೂ ಆ ಸಿನಿಮಾದಲ್ಲಿ ಜೂ ಎನ್ಟಿಆರ್ ಜೊತೆಗೆ ರಾಮ್ ಚರಣ್ ಸಹ ಇದ್ದರು. ‘ದೇವರ’ ಸಿನಿಮಾವನ್ನು ಕೊರಟಾಲ ಶಿವ ನಿರ್ದೇಶನ ಮಾಡಿದ್ದು, ಸಿನಿಮಾದಲ್ಲಿ ನಾಯಕಿಯಾಗಿ ಜಾನ್ಹವಿ ಕಪೂರ್ ನಟಿಸಿದ್ದಾರೆ. ಸೈಫ್ ಅಲಿ ಖಾನ್ ವಿಲನ್. ಸಿನಿಮಾದ ಮೊದಲ ಭಾಗವಷ್ಟೆ ಈಗ ಬಿಡುಗಡೆ ಆಗಿದ್ದು, ಮುಂದಿನ ಭಾಗ ಮುಂದಿನ ವರ್ಷ ತೆರೆಗೆ ಬರಲಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ