AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ದೇವರ’ ಬಗ್ಗೆ ಮೌನ ತಾಳಿದ ಮಹೇಶ್ ಬಾಬು; ಸಿನಿಮಾ ಇಷ್ಟವಾಗಿಲ್ವಾ?

ತೆಲುಗಿನ ಸ್ಟಾರ್ ನಟ ಮಹೇಶ್ ಬಾಬು ತಮ್ಮ ಸಮಕಾಲೀನ ಹೀರೋಗಳ ಸಿನಿಮಾಗಳ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಂಚಿಕೊಳ್ಳುತ್ತಿರುತ್ತಾರೆ, ಸಿನಿಮಾಗಳ ಬಗ್ಗೆ ಪ್ರಶಂಸೆ ವ್ಯಕ್ತಪಡಿಸುತ್ತಾರೆ. ಆದರೆ ಜೂ ಎನ್​ಟಿಆರ್ ನಟನೆಯ ‘ದೇವರ’ ಸಿನಿಮಾದ ಬಗ್ಗೆ ಮಹೇಶ್ ಬಾಬು ಯಾವುದೇ ಪೋಸ್ಟ್ ಹಂಚಿಕೊಂಡಿಲ್ಲ.

‘ದೇವರ’ ಬಗ್ಗೆ ಮೌನ ತಾಳಿದ ಮಹೇಶ್ ಬಾಬು; ಸಿನಿಮಾ ಇಷ್ಟವಾಗಿಲ್ವಾ?
Follow us
 ಶ್ರೀಲಕ್ಷ್ಮೀ ಎಚ್
| Updated By: ಮಂಜುನಾಥ ಸಿ.

Updated on: Oct 01, 2024 | 5:10 PM

ಮಹೇಶ್ ಬಾಬು ಅವರು ಸ್ಟಾರ್ ಹೀರೋ. ಅವರು ಹಲವು ಸೂಪರ್ ಹಿಟ್ ಚಿತ್ರಗಳನ್ನು ಕೊಟ್ಟಿದ್ದಾರೆ. ಅವರಿಗೆ ಟಾಲಿವುಡ್ನಲ್ಲಿ ಸಾಕಷ್ಟು ಗೌರವ ಇದೆ. ಅವರು ಹೊಸ ಸಿನಿಮಾಗಳನ್ನು ನೋಡಿ ವಿಮರ್ಶೆ ಕೊಡುವ ಅಭ್ಯಾಸ ಇಟ್ಟುಕೊಂಡಿದ್ದಾರೆ. ಸಿನಿಮಾ ರಿಲೀಸ್ ಆದ ತಕ್ಷಣ ಅವರು ಪಾಸಿಟಿವ್ ಆಗಿ ವಿಮರ್ಶೆ ಕೊಡುತ್ತಾರೆ. ಆದರೆ, ಜೂನಿಯರ್ ಎನ್ಟಿಆರ್ ನಟನೆಯ ‘ದೇವರ’ ಚಿತ್ರವನ್ನು ಅವರಿನ್ನೂ ನೋಡಿಲ್ಲವೋ ಅಥವಾ ವಿಮರ್ಶೆ ಕೊಡೋಕೆ ಮನಸ್ಸು ಬಂದಿಲ್ಲವೋ ಎನ್ನುವ ಪ್ರಶ್ನೆ ಮೂಡಿದೆ.

‘ದೇವರ’ 2024ರಲ್ಲಿ ರಿಲೀಸ್ ಆದ ಟಾಲಿವುಡ್​ನ ಬಿಗ್ ರಿಲೀಸ್​ಗಳಲ್ಲಿ ಒಂದು ಎಂದೇ ಹೇಳಬಹುದು. ಈ ಸಿನಿಮಾ ರಿಲೀಸ್ ಆಗಿ ನಾಲ್ಕು ದಿನಗಳು ಕಳೆದಿವೆ. ಆದರೆ, ಮಹೇಶ್ ಬಾಬು ಮಾತ್ರ ಈವರೆಗೆ ಈ ಬಗ್ಗೆ ಯಾವುದೇ ಟ್ವೀಟ್ ಮಾಡಿಲ್ಲ. ಇದು ಅನೇಕರ ಅಚ್ಚರಿಗೆ ಕಾರಣ ಆಗಿದೆ.

ಮಹೇಶ್ ಬಾಬು ಅವರು ‘ಮಾತು ವದಲರ 2’ ಸಿನಿಮಾ ನೋಡಿದ್ದಾರೆ. ರಿಲೀಸ್ ಆದ ಮರುದಿನವೇ ಚಿತ್ರ ನೋಡಿ ವಿಮರ್ಶೆ ಹಾಕಿದ್ದಾರೆ. ಇದು ಅನೇಕರಿಗೆ ಅಚ್ಚರಿ ಮೂಡಿಸಿತ್ತು. ಆದರೆ, ‘ದೇವರ’ ಚಿತ್ರದ ಬಗ್ಗೆ ಅವರ ಕಡೆಯಿಂದ ಯಾವುದೇ ವಿಮರ್ಶೆ ಬಂದಿಲ್ಲ. ಅವರ ಪ್ರತಿಕ್ರಿಯೆಗಾಗಿ ಜೂನಿಯರ್ ಎನ್ಟಿಆರ್ ಫ್ಯಾನ್ಸ್ ಕಾದಿದ್ದಾರೆ.

ಇದನ್ನೂ ಓದಿ:ಬಾಕ್ಸ್ ಆಫೀಸ್ ಗಳಿಕೆಯಲ್ಲಿ ಹಿಂದೆ ಬಿದ್ದ ‘ದೇವರ’; ಒಟ್ಟಾರೆ ಕಲೆಕ್ಷನ್ ಎಷ್ಟು?

ಮಹೇಶ್ ಬಾಬು ಹಾಗೂ ಜೂನಿಯರ್ ಎನ್ಟಿಆರ್ ನಡುವೆ ಒಳ್ಳೆಯ ಗೆಳೆತನ ಇದೆ. ಜೂನಿಯರ್ ಎನ್ಟಿಆರ್ ಅವರು ಮಹೇಶ್ ಬಾಬುನ ‘ಮಹೇಶ್ ಅಣ್ಣ’ ಎಂದು ಕರೆದಿದ್ದು ಇದೆ. ಇನ್ನು ಮಹೇಶ್ ಬಾಬು ಅವರು ‘ದೇವರ’ ನಿರ್ದೇಶಕ ಕೊರಟಾಲ ಶಿವ ಜೊತೆ ‘ಭರತ ಅನೆ ನೇನು’ ಹಾಗೂ ‘ಶ್ರೀಮಂತುಡು’ ಸನಿಮಾ ಮಾಡಿದ್ದಾರೆ. ಹೀಗಾಗಿ, ಮಹೇಶ್ ಬಾಬು ಹಾಗೂ ಕೊರಟಾಲ ಶಿವ ಮಧ್ಯೆ ಫ್ರೆಂಡ್ಶಿಪ್ ಬೆಳೆದಿದೆ. ಹೀಗಾಗಿ, ಮಹೇಶ್ ಬಾಬು ‘ದೇವರ’ ನೋಡಿ ವಿಮರ್ಶೆ ಹಾಕಲಿ ಎಂದು ಕಾಯುತ್ತಿದ್ದಾರೆ.

‘ದೇವರ’ ಸಿನಿಮಾದಲ್ಲಿ ಜೂನಿಯರ್ ಎನ್ಟಿಆರ್, ಸೈಫ್ ಅಲಿ ಖಾನ್, ಜಾನ್ವಿ ಕಪೂರ್ ಮೊದಲಾದವರು ನಟಿಸಿದ್ದಾರೆ. ಈ ಸಿನಿಮಾ ದೊಡ್ಡ ಮಟ್ಟದ ಕಲೆಕ್ಷನ್ ಮಾಡುತ್ತಿದೆ. ಈ ಚಿತ್ರಕ್ಕೆ ಕೆಲವರಿಂದ ಮಿಶ್ರ ಪ್ರತಿಕ್ರಿಯೆ ಕೂಡ ವ್ಯಕ್ತವಾಗಿದೆ. ಮಹೇಶ್ ಬಾಬು ಸಿನಿಮಾ ವಿಚಾರಕ್ಕೆ ಬರೋದಾದರೆ ಅವರು ‘SSMB 29’ ಚಿತ್ರದ ಕೆಲಸಗಳಲ್ಲಿ ಬ್ಯುಸಿ ಇದ್ದಾರೆ. ಈ ಸಿನಿಮಾಗೆ ರಾಜಮೌಳಿ ನಿರ್ದೇಶನ ಇದೆ. ಈ ಚಿತ್ರ ಸೆಟ್ಟೇರಲು ಇನ್ನೂ ಸಮಯ ಬೇಕಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ