ಚೈತ್ರಾ ಕುಂದಾಪುರ ಧ್ಯಾನ, ಮಾನಸ ಅನುಮಾನ, ನರಕದಲ್ಲಿ ಮತ್ತೆ ಅಸಮಾಧಾನ

ಚೈತ್ರಾ ಕುಂದಾಪುರ ಧ್ಯಾನ, ಮಾನಸ ಅನುಮಾನ, ನರಕದಲ್ಲಿ ಮತ್ತೆ ಅಸಮಾಧಾನ

ಮಂಜುನಾಥ ಸಿ.
|

Updated on:Oct 01, 2024 | 3:28 PM

ಬಿಗ್​ಬಾಸ್ ಕನ್ನಡ ಸೀಸನ್ 11 ಶುರುವಾಗಿ ಎರಡು ದಿನಗಳಾಗಿವೆ. ಮೊದಲೆರಡು ದಿನದಲ್ಲೇ ಸಾಕಷ್ಟು ಜಗಳ, ಮನಸ್ಥಾಪಗಳು ಮನೆಯಲ್ಲಿ ನಡೆದಿವೆ. ಮಂಗಳವಾರ ಮಧ್ಯಾಹ್ನ ಬಿಡುಗಡೆ ಆಗಿರುವ ಪ್ರೋಮೋ ಪ್ರಕಾರ, ಚೈತ್ರಾ ಕುಂದಾಪುರ ನರಕವಾಸಿ ಮಾನಸ ಜೊತೆ ಜಗಳವಾಡಿದ್ದಾರೆ. ವಿಡಿಯೋ ಇಲ್ಲಿದೆ.

ಬಿಗ್​ಬಾಸ್ ಕನ್ನಡ ಸೀಸನ್ 11 ಪ್ರಾರಂಭವಾಗಿ ಮೂರು ದಿನವಾಗಿದೆ. ಸ್ಪರ್ಧಿಗಳು, ನಾವು ಬಂದಿರುವುದೇ ಜಗಳವಾಡಲು ಎಂಬಂತೆ ಭಾರಿ ಉತ್ಸಾಹದಲ್ಲಿ ಪರಸ್ಪರ ಜಗಳವಾಡುತ್ತಿದ್ದಾರೆ. ಮೊದಲ ಎರಡು ದಿನದಲ್ಲಿಯೇ ಚೈತ್ರಾ ಕುಂದಾಪುರ ಹಾಗೂ ಇತರರು ತಮ್ಮ ಜಗಳವಾಡುವ ಪ್ರತಿಭೆ ಪ್ರದರ್ಶಿಸಿದ್ದಾರೆ. ಮೂರನೇ ದಿನವೂ ಮನೆಯಲ್ಲಿ ಜಗಳ ಮುಂದುವರೆದಿದೆ. ಜಗದೀಶ್ ಹಾಗೂ ಇತರರ ಮೇಲೆ ಸಿಟ್ಟು ಪ್ರದರ್ಶಿಸಿದ್ದ ಚೈತ್ರಾ ಕುಂದಾಪುರ ಈಗ ಮಾನಸ ಮೇಲೆ ತಮ್ಮ ಮಾತಿನ ಬಾಣಗಳನ್ನು ಪ್ರಯೋಗಿಸಿದ್ದಾರೆ. ಈಗ ಬಿಡುಗಡೆ ಆಗಿರುವ ಪ್ರೋಮೋ ಪ್ರಕಾರ, ಚೈತ್ರಾ ಧ್ಯಾನ ಮಾಡುತ್ತಿರುತ್ತಾರೆ, ಅದನ್ನು ನೋಡಿದ ಮಾನಸ, ಈ ಧ್ಯಾನ ಮಾಡುವವರನ್ನು ನೋಡಿದರೆ ನನಗೆ ಸಣ್ಣ ಅನುಮಾನ, ಅವರು ಧ್ಯಾನ ಮಾಡುತ್ತಾರಾ ಅಥವಾ ನಿದ್ದೆ ಮಾಡುತ್ತಾರಾ ಎಂದು ಎಂದಿದ್ದಾರೆ. ಇದು ಬಹುಷಃ ಚೈತ್ರಾ ಕಿವಿಗೆ ಬಿದ್ದು ಮಾನಸ ಮೇಲೆ ಜಗಳ ಮಾಡಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published on: Oct 01, 2024 03:28 PM