‘ಚೈತ್ರಾಗೆ ನೀನು ರನ್ನ, ಚಿನ್ನ, ಚಂದ್ರ ಅಂದ್ರೆ ಮುಗೀತು’: ಇದು ಗೋಲ್ಡ್ ಸುರೇಶ್ ಲೆಕ್ಕಾಚಾರ
ಚೈತ್ರಾ ಕುಂದಾಪುರ ಅವರು ಬಿಗ್ ಬಾಸ್ ಆಟದ ಆರಂಭದಲ್ಲೇ ರೆಬೆಲ್ ಆಗಿದ್ದಾರೆ. ಜಗಳ ಜೋರಾಗಿದೆ. ಅವರ ಬಗ್ಗೆ ಗೋಲ್ಡ್ ಸುರೇಶ್ ಅವರಿಗೆ ಇರುವ ಅಭಿಪ್ರಾಯವೇ ಬೇರೆ. ಈ ಕುರಿತು ನರಕವಾಸಿಗಳಾದ ಮನಸಾ ಹಾಗೂ ಗೋಲ್ಡ್ ಸುರೇಶ್ ಅವರು ಮಾತುಕಥೆ ಮಾಡಿದ್ದಾರೆ. ಎರಡೇ ದಿನದಲ್ಲಿ ಚೈತ್ರಾ ಕುಂದಾಪುರ ಅವರು ಹೈಲೈಟ್ ಆಗಿದ್ದಾರೆ. ಹಲವರ ಜೊತೆ ಅವರು ಜಗಳ ಮಾಡಿದ್ದಾರೆ.
‘ಬಿಗ್ ಬಾಸ್ ಕನ್ನಡ ಸೀಸನ್ 11’ ಕಾರ್ಯಕ್ರಮದ ಮನೆಯನ್ನು ಸ್ವರ್ಗ ಮತ್ತು ನರಕ ಎಂದು ಎರಡು ಭಾಗ ಮಾಡಲಾಗಿದೆ. ಗೋಲ್ಡ್ ಸುರೇಶ್, ಚೈತ್ರಾ ಕುಂದಾಪುರ, ಮಾನಸಾ ಮುಂತಾದವರು ನರಕದಲ್ಲಿ ಇದ್ದಾರೆ. ಚೈತ್ರಾ ಅವರ ಬಗ್ಗೆ ಮಾನಸಾ ಮತ್ತು ಗೋಲ್ಡ್ ಸುರೇಶ್ ಕುಳಿತು ಮಾತನಾಡಿದ್ದಾರೆ. ‘ಚೈತ್ರಾನ ನಿಜಕ್ಕೂ ಕಂಟ್ರೋಲ್ ಮಾಡೋಕೆ ಆಗಲ್ಲ. ಅವರ ಟ್ಯಾಲೆಂಟ್ ಅರ್ಥ ಮಾಡಿಕೊಳ್ಳಿ. ಚೈತ್ರಾನ ಮೇಲಕ್ಕೆ ಹತ್ತಿಸಬೇಕು. ಮಾತಲ್ಲೇ ಮನೆ ಕಟ್ಟಿದರೆ ಹೌದೋ ಓಹ್ ಅಂತಾರೆ. ನೀನು ರನ್ನ, ಚಿನ್ನ, ಚಂದ್ರ, ಚಂದಮಾಮ ಎಂದರೆ ಮುಗಿಯಿತು. ನಮ್ಮ ಕಡೆ ಚೈತ್ರಾ, ಆ ಕಡೆ ಜಗದೀಶ್. ಇಬ್ಬರೂ ಸರಿಯಾಗಿದ್ದಾರೆ’ ಎಂದು ಗೋಲ್ಡ್ ಸುರೇಶ್ ಹೇಳಿದ್ದಾರೆ. ಅವರ ಮಾತು ಕೇಳಿ ಮಾನಸಾ ನಕ್ಕಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.