ಮನೆಯ ಬಲೆಯೊಳಗೆ ಸಿಕ್ಕಿಬಿದ್ದ 7 ಅಡಿ ಉದ್ದದ ಹಾವು!
7 ಅಡಿ ಉದ್ದದ ಹಾವೊಂದು ಮನೆಯಲ್ಲಿ ಪಕ್ಷಿಗಳು ಬರದಂತೆ ಹಾಕಿದ್ದ ಬಲೆಯೊಳಗೆ ಸಿಕ್ಕಿಬಿದ್ದಿದೆ. ಹಾವಿಗೆ ಬಲೆಯ ದಾರ, ತಂತಿಗಳು ಸುತ್ತಿ ಉಸಿರಾಡಲು ಕಷ್ಟವಾಗಿತ್ತು. ಬಳಿಕ ಆ ಹಾವನ್ನು ರಕ್ಷಿಸಲಾಗಿದೆ. ಸ್ವಲ್ಪ ತಡವಾದರೂ ಹಾವು ಪ್ರಾಣ ಕಳೆದುಕೊಳ್ಳುತ್ತಿತ್ತು.
ಹೈದರಾಬಾದ್: ಆಂಧ್ರ ಪ್ರದೇಶದ ವಿಶಾಖ ಸ್ಟೀಲ್ ಪ್ಲಾಂಟ್ ಪ್ರದೇಶದ ಸೆಕ್ಟರ್ 11 ಪ್ರದೇಶದಲ್ಲಿ ಪಕ್ಷಿಗಳನ್ನು ಹೋಗಲಾಡಿಸಲು ಮನೆಯ ಸುತ್ತಲೂ ಬಲೆ ಹಾಕಲಾಗಿತ್ತು. ಆದರೆ ಇಂದು ಬೆಳಗ್ಗೆ ಆ ನೆಟ್ ಬಳಿಯಿಂದ ವಿಚಿತ್ರ ಶಬ್ದಗಳು ಬರುತ್ತಿದ್ದವು. ಏನೆಂದು ನೋಡಿದಾಗ ಆ ಬಲೆಯೊಳಗೆ ಬೃಹತ್ ಹಾವೊಂದು ಸಿಕ್ಕಿಬಿದ್ದಿತ್ತು. ಅದರ ಬಳಿ ಹೋದರೆ ಜೋರಾಗಿ ಸದ್ದು ಮಾಡುತ್ತ ಬುಸುಗುಟ್ಟುತ್ತಿತ್ತು. ಇದರಿಂದ ಗಾಬರಿಗೊಂಡ ಸ್ಥಳೀಯರು ಹಾವು ಹಿಡಿಯುವವರನ್ನು ಕರೆಸಿ ಹಾವನ್ನು ಕಾಡಿಗೆ ಬಿಡಿಸಿದ್ದಾರೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ