AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

4 ವರ್ಷಗಳ ಬಳಿಕ ಸಿಕ್ಕ ಮಗನನ್ನು ನೋಡಿ ಕಣ್ಣೀರು ಹಾಕಿದ ಅಮ್ಮ, ಇಲ್ಲಿದೆ ನೋಡಿ ವಿಡಿಯೋ

4 ವರ್ಷಗಳ ಬಳಿಕ ಸಿಕ್ಕ ಮಗನನ್ನು ನೋಡಿ ಕಣ್ಣೀರು ಹಾಕಿದ ಅಮ್ಮ, ಇಲ್ಲಿದೆ ನೋಡಿ ವಿಡಿಯೋ

ಅಕ್ಷಯ್​ ಪಲ್ಲಮಜಲು​​
|

Updated on: May 22, 2026 | 5:05 PM

Share

ದೆಹಲಿಯಲ್ಲಿ ನಾಲ್ಕು ವರ್ಷಗಳ ಹಿಂದೆ ನಾಪತ್ತೆಯಾಗಿದ್ದ ಮಗ ಕೊನೆಗೂ ಮನೆಗೆ ಮರಳಿದ್ದಾನೆ. ಮಗನ ಅಗಲಿಕೆಯ ನೋವಿನಲ್ಲಿ ಮುಳುಗಿದ್ದ ತಾಯಿ, ಆತನನ್ನು ಕಂಡೊಡನೆ ಭಾವುಕರಾಗಿ ಕಣ್ಣೀರು ಹಾಕಿದ್ದಾರೆ. ಈ ಹೃದಯಸ್ಪರ್ಶಿ ಪುನರ್ಮಿಲನ ಇಡೀ ಕುಟುಂಬಕ್ಕೆ ಸಂತೋಷ ತಂದಿದೆ. ಬಡ ಹೆತ್ತವರ ಕಾದಾಟ ಕೊನೆಗೊಂಡಿದ್ದು, ಆತಂಕದ ಬದುಕು ಆನಂದಕ್ಕೆ ತಿರುಗಿದೆ.

ದೆಹಲಿ, ಮೇ.22: ಹೆತ್ತ ಕರಳಿಗೆ ತನ್ನ ಮಗನೇ ಸರ್ವಸ್ವ. ಅಂತಹ ಮಗ ಕಣ್ಣೆದುರೇ ಇದ್ದಕ್ಕಿದ್ದಂತೆ ನಾಪತ್ತೆಯಾಗಿ ಬಿಟ್ಟರೆ ಆ ಹೆತ್ತವರ ಒಡಲು ಅನುಭವಿಸುವ ನರಕಯಾತನೆ ಅಷ್ಟಿಷ್ಟಲ್ಲ. ಇಲ್ಲೊಂದು ಕುಟುಂಬ ಕಳೆದ ನಾಲ್ಕು ವರ್ಷಗಳಿಂದ ಮಗನ ಅಗಲಿಕೆಯ ತೀವ್ರ ವೇದನೆಯನ್ನು ಅನುಭವಿಸುತ್ತಿತ್ತು. ಆದರೆ ಇಂದು, ಆ ಕಳೆದುಹೋಗಿದ್ದ ಮಗ ಸಾಕ್ಷಾತ್ ತನ್ನ ಕಣ್ಣೆದುರೇ ಬಂದು ನಿಂತಾಗ, ಆ ತಾಯಿ ನಿಯಂತ್ರಿಸಲಾಗದೆ ಭಾವುಕತೆಯ ಕಣ್ಣೀರಿನ ಮಹಾಪೂರವನ್ನೇ ಹರಿಸಿದ್ದಾಳೆ. ಈ ಹೃದಯಸ್ಪರ್ಶಿ ದೃಶ್ಯಕ್ಕೆ ಸಾಕ್ಷಿಯಾದ ಇಡೀ ವಾತಾವರಣವೇ ಭಾವುಕತೆಯ ಗೂಡಾಗಿ ಮಾರ್ಪಟ್ಟಿತ್ತು. ಕಳೆದ ನಾಲ್ಕು ವರ್ಷಗಳಿಂದ ಈ ಬಡ ಹೆತ್ತವರು ಪ್ರತಿಕ್ಷಣವೂ ಅನುಭವಿಸಿದ ನೋವು, ಪಟ್ಟ ಪಾಡು ಮತ್ತು ಎದೆಯೊಳಗಿನ ಯಾತನೆ ಎಂತವರ ಕಣ್ಣಲ್ಲೂ ನೀರು ತರಿಸುವಂತದ್ದು. ಮಗ ಜೀವಂತವಾಗಿದ್ದಾನೋ ಇಲ್ಲವೋ ಎಂಬ ಆತಂಕದ ಮಧ್ಯೆಯೇ ದಿನ ದೂಡುತ್ತಿದ್ದ ಆ ಪೋಷಕರಿಗೆ ಇಂದು ಜಗತ್ತಿನ ಅತ್ಯಂತ ದೊಡ್ಡ ಸಂತೋಷ ಸಿಕ್ಕಂತಾಗಿದೆ. ಮಗನನ್ನು ಬಿಗಿದಪ್ಪಿ ಅಳುತ್ತಿದ್ದ ಆ ತಾಯಿಯ ಕಣ್ಣೀರು, ಆಕೆ ಇಷ್ಟು ವರ್ಷಗಳ ಕಾಲ ಮನಸ್ಸಿನೊಳಗೆ ಬಚ್ಚಿಟ್ಟುಕೊಂಡಿದ್ದ ಕೋಟಿ ಜನ್ಮಗಳ ನೋವನ್ನು ಹೊರಹಾಕುತ್ತಿತ್ತು.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
Akshay Pallamajalu
Akshay Pallamajalu

ನನ್ನ ಹೆಸರು ಅಕ್ಷಯ್ ಕುಮಾರ್ ಪಲ್ಲಮಜಲು, ನನ್ನ ಊರು ದಕ್ಷಿಣ ಕನ್ನಡ ಜಿಲ್ಲೆ, ಬಂಟ್ವಾಳ ತಾಲ್ಲೂಕು, ಡಿಜಿಟಲ್​ ವಿಭಾಗದಲ್ಲಿ 3 ವರ್ಷಗಳ ಅನುಭವ, ಇದರ ಜತೆಗೆ ಸೋಶಿಯಲ್ ಮೀಡಿಯಾದ ಬಗ್ಗೆ ಹೆಚ್ಚಿನ ಆಸಕ್ತಿಯನ್ನು ಹೊಂದಿದ್ದು, ಟಿವಿ9ನಲ್ಲೂ ಸೋಶಿಯಲ್​​​ ಮೀಡಿಯಾವನ್ನು ನೋಡಿಕೊಳ್ಳುತ್ತಿದ್ದೇನೆ. ಡಿಜಿಟಲ್ ಕ್ಷೇತ್ರದಲ್ಲಿ ಆಸಕ್ತಿಯನ್ನು ಹೊಂದಿದ್ದು, ಸೋಶಿಯಲ್​​​ ಮೀಡಿಯಾದಲ್ಲಿ ಇನ್ನೂ ಹೆಚ್ಚಿನ ವಿಚಾರಗಳನ್ನು ತಿಳಿದುಕೊಳ್ಳವ ಆಸಕ್ತಿ ಇದೆ. ಇದರ ಜತೆಗೆ ರಾಷ್ಟ್ರೀಯ ಲೇಖನಗಳನ್ನು ಬರೆಯುತ್ತೇನೆ.

Read More