ಚಲಿಸುತ್ತಿದ್ದ ಬಸ್ ಚಕ್ರವೇ ಕಿತ್ತೋಯ್ತು, ಮುಂದೇನಾಯ್ತು?
ಸೋಮವಾರವಷ್ಟೇ ಮಂಡ್ಯದಲ್ಲಿ ಬೆಂಗಳೂರು ಮೈಸೂರು ಎಕ್ಸ್ಪ್ರೆಸ್ ವೇನಲ್ಲಿ ಕೆಎಸ್ಆರ್ಟಿಸಿ ಬಸ್ ಪಲ್ಟಿಯಾಗಿ 20ಕ್ಕೂ ಹೆಚ್ಚು ಪ್ರಯಾಣಿಕರು ಗಾಯಗೊಂಡಿದ್ದರು. ಇಂದು ಧಾರವಾಡದಲ್ಲಿ ಚಲಿಸುತ್ತಿದ್ದ ಸಾರಿಗೆ ಸಂಸ್ಥೆಯ ಬಸ್ ಮುಂದಿನ ಟೈರ್ ಕಿತ್ತುಹೋಗಿದೆ. ಅದೃಷ್ಟವಶಾತ್ ದುರಂತವೊಂದು ಕೂದಲೆಳೆ ಅಂತರದಲ್ಲಿ ತಪ್ಪಿಹೋಗಿದೆ. ವಿಡಿಯೋ ಇಲ್ಲಿದೆ ನೋಡಿ.
ಧಾರವಾಡ, ಅಕ್ಟೋಬರ್ 1: ಧಾರವಾಡ ಜಿಲ್ಲೆಯ ನವಲಗುಂದ ತಾಲೂಕಿನ ಕಾಲವಾಡ ಕ್ರಾಸ್ ಬಳಿ ಸಾರಿಗೆ ಬಸ್ ಚಕ್ರ ದಿಢೀರ್ ಕಳಚಿದೆ. ಬಸ್ ಚಾಲಕನ ಸಮಯ ಪ್ರಜ್ಞೆಯಿಂದ ಭಾರಿ ಅನಾಹುತ ತಪ್ಪಿದೆ. ನವಲಗುಂದ ಘಟಕಕ್ಕೆ ಸೇರಿದ ಸಾರಿಗೆ ಬಸ್ ಧಾರವಾಡದಿಂದ ನವಲಗುಂದ ಕಡೆಗೆ ತೆರಳುತ್ತಿತ್ತು. ಬಸ್ನ ಮುಂದಿನ ಚಕ್ರ ಕಳಚುತ್ತಿದ್ದಂತೆಯೇ ಚಾಲಕ ಬಸ್ಸನ್ನು ರಸ್ತೆ ಪಕ್ಕ ನಿಲ್ಲಿಸಿ ಸಂಭಾವ್ಯ ದುರಂತ ತಪ್ಪಿಸಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Latest Videos