ಮುಡಾದಿಂದ 14 ಸೈಟ್ ಪಡೆಯೋದಕ್ಕೂ ಮುನ್ನವೇ ಹಲವು ಸೈಟ್ ಪಡೆದಿದ್ದ ಸಿದ್ದರಾಮಯ್ಯ: ಕುಮಾರಸ್ವಾಮಿ ಗಂಭೀರ ಆರೋಪ
ಲೋಕಾಯುಕ್ತ ಎಡಿಜಿಪಿ ಚಂದ್ರಶೇಖರ್ ವಿರುದ್ಧದ ಆರೋಪಗಳು ಮತ್ತು ಮುಡಾ ಹಗರಣ ಸಂಬಂಧ ದೆಹಲಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಕೇಂದ್ರ ಸಚಿವ ಹೆಚ್ಡಿ ಕುಮಾರಸ್ವಾಮಿ, ಸಿಎಂ ಸಿದ್ದರಾಮಯ್ಯ ಪತ್ನಿ ಪಡೆದಿದ್ದಾರೆ ಎನ್ನಲಾದ 14 ಸೈಟ್ಗಿಂತ ಹಳೆಯ ದೊಡ್ಡ ಕೇಸ್ ಇದೆ ಎಂದು ಹೊಸ ಬಾಂಬ್ ಸಿಡಿಸಿದ್ದಾರೆ. ದಾಖಲೆಯನ್ನೂ ಪ್ರದರ್ಶಿಸಿದ್ದಾರೆ. ಆ ವಿಡಿಯೋ ಇಲ್ಲಿದೆ ನೋಡಿ.
ನವದೆಹಲಿ, ಅಕ್ಟೋಬರ್ 1: ಕರ್ನಾಟಕ ಹೈಕೋರ್ಟ್ ಮತ್ತು ಜನಪ್ರತಿನಿಧಿಗಳ ಕೋರ್ಟ್ ಮುಡಾ ಪ್ರಕರಣ ಸಂಬಂಧ ತನಿಖೆಗೆ ಆದೇಶ ನೀಡಿವೆ. ಮೊದಲಿಗೆ, ನಮ್ಮ ಸೈಟ್ಗಳನ್ನೇ ಮುಡಾ ಸ್ವಾಧೀನಕ್ಕೆ ತಗೊಂಡಿತ್ತು ಎಂದಿದ್ದರು. ನಂತರ 60 ಕೋಟಿ ರೂಪಾಯಿ ಹಣ ನೀಡಿದ್ರೆ ಸೈಟ್ ವಾಪಸ್ ನೀಡುತ್ತೇವೆ ಎಂದಿದ್ದರು ಎಂದು ಸಿಎಂ ಸಿದ್ದರಾಮಯ್ಯ ವಿರುದ್ಧ ಕೇಂದ್ರ ಸಚಿವ ಹೆಚ್ಡಿ ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು. ಜತೆಗೆ, ಮುಡಾದಿಂದ 14 ಸೈಟ್ಗಳನ್ನು ಪಡೆದ ವಿಚಾರ ಹಾಗಿರಲಿ, ಅದಕ್ಕಿಂತ ದೊಡ್ಡ ಪ್ರಕರಣ ಇಲ್ಲಿದೆ ನೋಡಿ ಎಂದು ದಾಖಲೆಗಳನ್ನು ಪ್ರದರ್ಶಿಸಿದರು.
ಮುಡಾ ಹಗರಣಕ್ಕೂ ಮೊದಲೇ ಸಿದ್ದರಾಮಯ್ಯನವರು ಸೈಟ್ಗಳನ್ನು ಪಡೆದ ಬಗ್ಗೆ ಆರೋಪ ಮಾಡಿರುವ ಕುಮಾರಸ್ವಾಮಿ, ಆ ಬಗ್ಗೆ ದಾಖಲೆಗಳನ್ನು ಪ್ರದರ್ಶಿಸಿದ್ದಾರೆ. ವಿವರ ವಿಡಿಯೋದಲ್ಲಿದೆ ನೋಡಿ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 1:09 pm, Tue, 1 October 24