4ನೇ ಮದುವೆ ಆಗಲಿರುವ ನಟಿ ವನಿತಾ ವಿಜಯ್​ಕುಮಾರ್; ಹಳೇ ಗೆಳೆಯನಿಗೆ ಮಂಡಿಯೂರಿ ಪ್ರಪೋಸ್

ನಟಿ ವನಿತಾ ವಿಜಯ್​ಕುಮಾರ್​ ಅವರು ಈಗಾಗಲೇ ಮೂರು ಮದುವೆಯಾಗಿ ವಿಚ್ಛೇದನ ಪಡೆದಿದ್ದಾರೆ. ಈಗ 4ನೇ ಮದುವೆಗೆ ತಯಾರಾಗಿದ್ದಾರೆ. ಬಾಯ್​ಫ್ರೆಂಡ್​ ರಾಬರ್ಟ್​ಗೆ ವನಿತಾ ಅವರೇ ಪ್ರಪೋಸ್​ ಮಾಡಿದ್ದು, ಅವರಿಬ್ಬರ ಫೋಟೋ ವೈರಲ್​ ಆಗುತ್ತಿದೆ. ಅಕ್ಟೋಬರ್​ 5ರಂದು ದೊಡ್ಡ ಸುದ್ದಿ ನೀಡುವುದಾಗಿ ರಾಬರ್ಟ್​ ಅವರು ತಿಳಿಸಿದ್ದಾರೆ. ಇಬ್ಬರ ಬಗ್ಗೆ ಇಲ್ಲಿದೆ ವಿವರ..

4ನೇ ಮದುವೆ ಆಗಲಿರುವ ನಟಿ ವನಿತಾ ವಿಜಯ್​ಕುಮಾರ್; ಹಳೇ ಗೆಳೆಯನಿಗೆ ಮಂಡಿಯೂರಿ ಪ್ರಪೋಸ್
ರಾಬರ್ಟ್​, ವನಿತಾ ವಿಜಯ್​ಕುಮಾರ್
Follow us
|

Updated on: Oct 01, 2024 | 5:21 PM

ಸದಾ ವಿವಾದಗಳಿಂದ ಸುದ್ದಿಯಾಗುವ ನಟಿ ವನಿತಾ ವಿಜಯ್​ಕುಮಾರ್​ ಅವರು ಈಗ ಒಂದು ಅಚ್ಚರಿಯ ವಿಷಯ ಹಂಚಿಕೊಂಡಿದ್ದಾರೆ. ಸದ್ಯ ವನಿತಾ ಅವರಿಗೆ 43 ವರ್ಷ ವಯಸ್ಸು. ಈ ಪ್ರಾಯದಲ್ಲಿ ಅವರು ಮದುವೆ ಆಗಲು ಸಜ್ಜಾಗಿದ್ದಾರೆ. ಇದು ಅವರ ಮೊದಲ ಮದುವೆ ಅಲ್ಲ. ಈಗಾಗಲೇ 3 ಬಾರಿ ಮದುವೆ ಆಗಿ ವಿಚ್ಛೇದನ ಪಡೆದಿರುವ ಅವರಿಗೆ ಇದು 4ನೇ ಮದುವೆ! ಆ ಕಾರಣದಿಂದ ಎಲ್ಲರಿಗೂ ಅಚ್ಚರಿ ಆಗಿದೆ. ಹಳೇ ಗೆಳೆಯ ರಾಬರ್ಟ್​ಗೆ ವನಿತಾ ಅವರು ಪ್ರಪೋಸ್​ ಮಾಡಿದ್ದಾರೆ. ಈ ಫೋಟೋವನ್ನು ಕೂಡ ಅವರು ಹಂಚಿಕೊಂಡಿದ್ದಾರೆ.

ಕಡಲ ತೀರದಲ್ಲಿ ವನಿತಾ ವಿಜಯ್​ಕುಮಾರ್​ ಅವರು ಮಂಡಿಯೂರಿ ಪ್ರಪೋಸ್​ ಮಾಡಿದ್ದಾರೆ. ಈ ಫೋಟೋದಲ್ಲಿ ರಾಬರ್ಟ್​ ಅವರು ನಗು ಬೀರಿದ್ದಾರೆ. ‘ದಿನಾಂಕ ನೆನಪಿಟ್ಟುಕೊಳ್ಳಿ. 5 ಅಕ್ಟೋಬರ್​ 2024. ವನಿತಾ ವಿಜಯ್​ ಕುಮಾರ್​ ಲವ್ಸ್​ ರಾಬರ್ಟ್​’ ಎಂದು ಈ ಫೋಟೋಗೆ ಕ್ಯಾಪ್ಷನ್​ ನೀಡಲಾಗಿದೆ. ಸೋಶಿಯಲ್ ಮೀಡಿಯಾದಲ್ಲಿ ಈ ಫೋಟೋ ವೈರಲ್​ ಆಗಿದೆ. ಈ ಫೋಟೋವನ್ನು ರಾಬರ್ಟ್​ ಕೂಡ ಶೇರ್​ ಮಾಡಿಕೊಂಡಿದ್ದು, ‘ವಿಆರ್​. ದೊಡ್ಡ ಘೋಷಣೆ. 5 ಅಕ್ಟೋಬರ್​ 2024’ ಎಂದು ಬರೆದುಕೊಂಡಿದ್ದಾರೆ.

ವನಿತಾ ವಿಜಯ್​ಕುಮಾರ್​ ಅವರು 2000ನೇ ಇಸವಿಯಲ್ಲಿ ಮೊದಲ ಮದುವೆ ಆಗಿದ್ದರು. ಆದರೆ 2007ರಲ್ಲಿ ಅವರು ವಿಚ್ಛೇದನ ಪಡೆದರು. ಬಳಿಕ 2007ರಲ್ಲಿ ರಾಜನ್​ ಆನಂದ್​ ಜೊತೆ ಅವರ ಎರಡನೇ ಮದುವೆ ನೆರವೇರಿತು. ಆ ವಿವಾಹ ಕೂಡ ಹೆಚ್ಚು ಕಾಲ ಉಳಿಯಲಿಲ್ಲ. 2012ರಲ್ಲಿ ಈ ಮದುವೆ ಕೂಡ ಮುರಿದುಬಿತ್ತು. 2020ರಲ್ಲಿ ಪೀಟರ್​ ಪೌಲ್​ ಜೊತೆ ವನಿತಾ ಅವರು 3ನೇ ಮದುವೆಯಾದರು. ಕೆಲವೇ ದಿನಗಳಲ್ಲಿ ಅವರಿಬ್ಬರ ದಾಂಪತ್ಯ ಹಳಸಿತು.

ಇದನ್ನೂ ಓದಿ: ವಿಚ್ಛೇದನ ಪಡೆಯಲು ಮುಂದಾದ ನಟಿ ಊರ್ಮಿಳಾ; 8 ವರ್ಷದ ದಾಂಪತ್ಯ ಅಂತ್ಯ?

ಜೀವನ ಸಂಗಾತಿಯನ್ನು ಆಯ್ಕೆ ಮಾಡಿಕೊಳ್ಳುವ ವಿಚಾರದಲ್ಲಿ ವನಿತಾ ವಿಜಯ್​ಕುಮಾರ್​ ಅವರಿಗೆ ಉತ್ಸಾಹ ಕಡಿಮೆ ಆಗಿಲ್ಲ. ಈಗ ಕೋರಿಯೋಗ್ರಾಫರ್​ ರಾಬರ್ಟ್​ ಜೊತೆ ಅವರಿಗೆ ಪ್ರೀತಿ ಚಿಗುರಿದೆ. ಅಕ್ಟೋಬರ್ 5ರಂದು ಅವರು ಮದುವೆ ಆಗುವ ಸಾಧ್ಯತೆ ಇದೆ. ಇದು ಪ್ರಚಾರದ ಗಿಮಿಕ್​ ಕೂಡ ಆಗಿರಬಹುದು ಎಂದು ಕೆಲವರು ಅಭಿಪ್ರಾಯಪಟ್ಟಿದ್ದಾರೆ.

ಅಂದಹಾಗೆ, ರಾಬರ್ಟ್​ ಮತ್ತು ವನಿತಾ ಗೆಳೆತನ ಹೊಸದೇನೂ ಅಲ್ಲ. 2013ರಲ್ಲೇ ವನಿತಾ ಮತ್ತು ರಾಬರ್ಟ್​ ಅವರು ಡೇಟಿಂಗ್​ ಮಾಡಿದ್ದರು. ಬಳಿಕ ಬ್ರೇಕಪ್​ ಆಗಿತ್ತು. ಈಗ ಮತ್ತೆ ಹಳೇ ಗೆಳೆಯನ ಜೊತೆಗೆ ವನಿತಾಗೆ ಪ್ರೀತಿ ಚಿಗುರಿದಂತಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

PM Modi Speech Live: ಹರಿಯಾಣ ಗೆದ್ದ ಖುಷಿಯಲ್ಲಿ ಮೋದಿ ಮಾತು
PM Modi Speech Live: ಹರಿಯಾಣ ಗೆದ್ದ ಖುಷಿಯಲ್ಲಿ ಮೋದಿ ಮಾತು
ರಸ್ತೆಬದಿ ಕುಳಿತಿದ್ದ 3 ಮಕ್ಕಳನ್ನು ಎಳೆದೊಯ್ದ ಕಾರು; ವಿಡಿಯೋ ವೈರಲ್
ರಸ್ತೆಬದಿ ಕುಳಿತಿದ್ದ 3 ಮಕ್ಕಳನ್ನು ಎಳೆದೊಯ್ದ ಕಾರು; ವಿಡಿಯೋ ವೈರಲ್
ರಾಜ್ಯದಲ್ಲಿ ಈಗ ಚುನಾವಣೆ ನಡೆದರೆ ಬಿಜೆಪಿ ಸುಲಭವಾಗಿ ಗೆಲ್ಲುತ್ತದೆ: ಜಗದೀಶ್
ರಾಜ್ಯದಲ್ಲಿ ಈಗ ಚುನಾವಣೆ ನಡೆದರೆ ಬಿಜೆಪಿ ಸುಲಭವಾಗಿ ಗೆಲ್ಲುತ್ತದೆ: ಜಗದೀಶ್
ಚನ್ನಪಟ್ಟಣ ಕ್ಷೇತ್ರಕ್ಕೆ ಅಭ್ಯರ್ಥಿ ಯಾರೆಂದು ಕೇಳಿದರೆ ಡಾ ಮಂಜುನಾಥ್ ಉತ್ತರ!
ಚನ್ನಪಟ್ಟಣ ಕ್ಷೇತ್ರಕ್ಕೆ ಅಭ್ಯರ್ಥಿ ಯಾರೆಂದು ಕೇಳಿದರೆ ಡಾ ಮಂಜುನಾಥ್ ಉತ್ತರ!
ನಿಯಮ ಮುರಿದ ಸ್ಪರ್ಧಿಗಳು, ಕಠಿಣ ಶಿಕ್ಷೆ ಕೊಟ್ಟ ಬಿಗ್​ಬಾಸ್
ನಿಯಮ ಮುರಿದ ಸ್ಪರ್ಧಿಗಳು, ಕಠಿಣ ಶಿಕ್ಷೆ ಕೊಟ್ಟ ಬಿಗ್​ಬಾಸ್
ಸಿದ್ದರಾಮಯ್ಯ ಮತ್ತು ಹರಿಯಾಣ ಸೋಲಿನ ನಡುವೆ ಸಂಬಂಧವಿಲ್ಲ: ಡಿಕೆ ಶಿವಕುಮಾರ್
ಸಿದ್ದರಾಮಯ್ಯ ಮತ್ತು ಹರಿಯಾಣ ಸೋಲಿನ ನಡುವೆ ಸಂಬಂಧವಿಲ್ಲ: ಡಿಕೆ ಶಿವಕುಮಾರ್
70ನೇ ರಾಷ್ಟ್ರೀಯ ಸಿನಿಮಾ ಪ್ರಶಸ್ತಿ ಪ್ರದಾನ ಕಾರ್ಯಕ್ರಮದ ಲೈವ್​ ನೋಡಿ..
70ನೇ ರಾಷ್ಟ್ರೀಯ ಸಿನಿಮಾ ಪ್ರಶಸ್ತಿ ಪ್ರದಾನ ಕಾರ್ಯಕ್ರಮದ ಲೈವ್​ ನೋಡಿ..
ದರ್ಶನ್​ ಜಾಮೀನು ಅರ್ಜಿ ವಿಚಾರಣೆ ಲೈವ್; ಇಂದಾದರೂ ದಾಸನಿಗೆ ಸಿಗುತ್ತಾ ಬೇಲ್?
ದರ್ಶನ್​ ಜಾಮೀನು ಅರ್ಜಿ ವಿಚಾರಣೆ ಲೈವ್; ಇಂದಾದರೂ ದಾಸನಿಗೆ ಸಿಗುತ್ತಾ ಬೇಲ್?
ಅಪ್ರಸ್ತುತವಾಗಿದ್ದರೂ ಬಸನಗೌಡ ಯತ್ನಾಳ್ ಹೆಸರು ಉಲ್ಲೇಖಿಸಿದ ಜಮೀರ್
ಅಪ್ರಸ್ತುತವಾಗಿದ್ದರೂ ಬಸನಗೌಡ ಯತ್ನಾಳ್ ಹೆಸರು ಉಲ್ಲೇಖಿಸಿದ ಜಮೀರ್
ಹರಿಯಾಣದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೋಲಾಗಿರೋದು ಶಿವಕುಮಾರ್​​ಗೆ ಗೊತ್ತಿಲ್ಲ
ಹರಿಯಾಣದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೋಲಾಗಿರೋದು ಶಿವಕುಮಾರ್​​ಗೆ ಗೊತ್ತಿಲ್ಲ