‘ಪುಷ್ಪ 2’ ಆಸೆ ತೋರಿಸಿ ಹಿಂದಿ ಸಿನಿಮಾ ಮಾರಾಟ: ವಿತರಕನ ಸಖತ್ ಪ್ಲ್ಯಾನ್

Pushpa 2 Hindi: ಬಾಲಿವುಡ್​ನ ಜನಪ್ರಿಯ ಸಿನಿಮಾ ವಿತರಕ ಅನಿಲ್ ತಂಡಾನಿ, ‘ಪುಷ್ಪ 2’ ಸಿನಿಮಾ ವಿತರಣೆ ಮಾಡುವವರಿದ್ದು, ‘ಪುಷ್ಪ 2’ ಸಿನಿಮಾದ ಆಫರ್ ನೀಡಿ ಹಿಂದಿ ಸಿನಿಮಾ ಒಂದರ ಮಾರುಕಟ್ಟೆ ಮಾಡುತ್ತಿದ್ದಾರೆ.

‘ಪುಷ್ಪ 2’ ಆಸೆ ತೋರಿಸಿ ಹಿಂದಿ ಸಿನಿಮಾ ಮಾರಾಟ: ವಿತರಕನ ಸಖತ್ ಪ್ಲ್ಯಾನ್
Follow us
ಮಂಜುನಾಥ ಸಿ.
|

Updated on: Oct 01, 2024 | 6:29 PM

ದಕ್ಷಿಣ ಭಾರತದ ಸಿನಿಮಾಗಳಿಗೆ ಉತ್ತರ ಭಾರತದಲ್ಲಿ ದೊಡ್ಡ ಮಾರುಕಟ್ಟೆ ಇತ್ತೀಚೆಗೆ ಲಭ್ಯವಾಗಿದೆ. ‘ಪುಷ್ಪ’ ಸಿನಿಮಾದಿಂದ ಆರಂಭಿಸಿ ಇತ್ತೀಚೆಗಿನ ‘ದೇವರ’ ಸಿನಿಮಾದ ವರೆಗೆ ಉತ್ತರ ಭಾರತದಲ್ಲಿ ಭಾರಿ ಸಂಖ್ಯೆಯ ಚಿತ್ರಮಂದಿರಗಳು ಲಭ್ಯವಾಗುತ್ತಿವೆ. ಮಲ್ಟಿಪ್ಲೆಕ್ಸ್​ಗಳಲ್ಲಿ ಮಾತ್ರವಲ್ಲ ಸಿಂಗಲ್ ಸ್ಕ್ರೀನ್ ಚಿತ್ರಮಂದಿರಗಳು ಸಹ ದೊಡ್ಡ ಸಂಖ್ಯೆಯಲ್ಲಿ ಸಿಗುತ್ತಿವೆ. ಇದರ ಹಿಂದಿರುವ ವ್ಯಕ್ತಿ ಅನಿಲ್ ತಂಡಾನಿ. ನಟಿ ರವೀನಾ ಟಂಡನ್​ರ ಪತಿ ಆಗಿರುವ ಅನಿಲ್ ತಂಡಾನಿ ಬಾಲಿವುಡ್​ನ ಬಡಾ ಸಿನಿಮಾ ಸಿನಿಮಾ ವಿತರಕ. ಅದರಲ್ಲೂ ದಕ್ಷಿಣ ಭಾರತದ ಸಿನಿಮಾಗಳು ಉತ್ತರ ಭಾರತದಲ್ಲಿ ದೊಡ್ಡ ಮಟ್ಟದ ಬಿಡುಗಡೆ ಕಾಣಲು ಕಾರಣವಾಗಿರುವುದು ಇವರೇ.

‘ಪುಷ್ಪ’ ಸಿನಿಮಾದಿಂದ ಆರಂಭಿಸಿ ದಕ್ಷಿಣದ ಹಲವಾರು ಸಿನಿಮಾಗಳನ್ನು ವಿತರಣೆ ಮಾಡಿರುವುದು ಇವರೇ. ಇದೀಗ ‘ಪುಷ್ಪ 2’ ಸಿನಿಮಾ ವಿತರಣೆಯೂ ಇವರದ್ದೇ ಆಗಿದೆ. ಆದರೆ ‘ಪುಷ್ಪ 2’ ಸಿನಿಮಾದ ಆಸೆ ತೋರಿಸಿ ಬಾಲಿವುಡ್ ಸಿನಿಮಾ ಒಂದರ ಮಾರುಕಟ್ಟೆ ಮಾಡುತ್ತಿದ್ದಾರೆ ಅನಿಲ್ ತಂಡಾನಿ. ‘ಭೂಲ್ ಭುಲಯ್ಯ 3’ ಸಿನಿಮಾ ‘ಪುಷ್ಪ 2’ ಸಿನಿಮಾಗಿಂತಲೂ ಒಂದು ತಿಂಗಳು ಮುಂಚಿತವಾಗಿ ಬಿಡುಗಡೆ ಆಗಲಿದ್ದು, ಆ ಸಿನಿಮಾದ ಆಫರ್ ನೀಡಿ, ‘ಭೂಲ್ ಭುಲಯ್ಯ 3’ ಸಿನಿಮಾಕ್ಕೆ ಹೆಚ್ಚು ಚಿತ್ರಮಂದಿರಗಳನ್ನು ಪಡೆದುಕೊಂಡಿದ್ದಾರೆ.

‘ಭೂಲ್ ಭುಲಯ್ಯ 3’ ಸಿನಿಮಾ ನವೆಂಬರ್ 1 ರಂದು ಬಿಡುಗಡೆ ಆಗುತ್ತಿದ್ದು, ಅದೇ ದಿನ ರೋಹಿತ್ ಶೆಟ್ಟಿ ನಿರ್ದೇಶನದ ‘ಸಿಂಘಮ್ ಅಗೇನ್’ ಸಿನಿಮಾ ಸಹ ಬಿಡುಗಡೆ ಆಗುತ್ತಿದೆ. ‘ಸಿಂಘಮ್ ಅಗೇನ್’ ಸಿನಿಮಾದಲ್ಲಿ ಅಜಯ್ ದೇವಗನ್, ಕರೀನಾ ಕಪೂರ್, ರಣ್ವೀರ್ ಸಿಂಗ್, ದೀಪಿಕಾ ಪಡುಕೋಣೆ, ಅಕ್ಷಯ್ ಕುಮಾರ್, ಟೈಗರ್ ಶ್ರಾಫ್, ಅರ್ಜುನ್ ಕಪೂರ್ ಅಂಥಹಾ ದೊಡ್ಡ ಸ್ಟಾರ್ ನಟರುಗಳು ನಟಿಸಿದ್ದಾರೆ. ಆ ಸಿನಿಮಾದ ಮುಂದೆ ‘ಭೂಲ್ ಭುಲಯ್ಯ 3’ಗೆ ಭರ್ಜರಿ ಸ್ಪರ್ಧೆ ಇದೆ. ಇದೇ ಕಾರಣಕ್ಕೆ ವಿತರಕ ಅನಿಲ್ ತಂಡಾನಿ ದೊಡ್ಡ ಪ್ಲ್ಯಾನ್ ಹಾಕಿದ್ದಾರೆ.

ಇದನ್ನೂ ಓದಿ:‘ಪುಷ್ಪ 2’ ಕ್ಲೈಮ್ಯಾಕ್ಸ್​ನಲ್ಲಿ ಸ್ಟಾರ್ ಹೀರೋ ಎಂಟ್ರಿ; ಮೂರನೇ ಭಾಗ ಯಾವಾಗ?

ಸಿಂಗಲ್ ಸ್ಕ್ರೀನ್ ಚಿತ್ರಮಂದಿರಗಳ ಮಾಲೀಕರಿಗೆ ಹಾಗೂ ಏರಿಯಾ ವೈಸ್ ವಿತರಕರಿಗೆ ಆಫರ್ ನೀಡಿರುವ ಅನಿಲ್ ತಂಡಾನಿ, ‘ಭೂಲ್ ಭುಲಯ್ಯ 3’ ಸಿನಿಮಾ ಕೊಂಡವರಿಗೆ ‘ಪುಷ್ಪ 2’ ಸಿನಿಮಾವನ್ನೂ ಸಹ ಪ್ರದರ್ಶೀಸಲು ನೀಡುವುದಾಗಿ ಆಫರ್ ನೀಡಿದ್ದಾರೆ. ಹಾಗಾಗಿ ಸಿಂಗಲ್ ಸ್ಕ್ರೀನ್ ಚಿತ್ರಮಂದಿರಗಳ ಮಾಲೀಕರು ‘ಭೂಲ್ ಭುಲಯ್ಯ 3’ ಸಿನಿಮಾವನ್ನು ಪ್ರದರ್ಶಿಸಲು ಮುಂದಾಗಿದ್ದಾರೆ. ಯಾರು ‘ಭೂಲ್ ಭುಲಯ್ಯ 3’ ಪ್ರದರ್ಶಿಸುತ್ತಾರೋ ಅವರಿಗೆ ‘ಪುಷ್ಪ 2’ ಸಿನಿಮಾ ಕೊಡುವುದು ಖಾತ್ರಿ ಎಂದಿದ್ದಾರಂತೆ ಅನಿಲ್.

‘ಭೂಲ್ ಭುಲಯ್ಯ 3’ ಸಿನಿಮಾದಲ್ಲಿ ಕಾರ್ತಿಕ್ ಆರ್ಯನ್ ನಾಯಕ ನಟನಾಗಿ ನಟಿಸಿದ್ದು, ತೃಪ್ತಿ ದಿಮ್ರಿ ನಾಯಕಿಯಾಗಿ ನಟಿಸಿದ್ದಾರೆ. ಈ ಹಿಂದೆ ಬಿಡುಗಡೆ ಆಗಿದ್ದ ‘ಭೂಲ್ ಭುಲಯ್ಯ 2’ ಸಿನಿಮಾನಲ್ಲಿ ಕಾರ್ತಿಕ್ ಜೊತೆಗೆ ಕಿಯಾರಾ ಅಡ್ವಾಣಿ ನಟಿಸಿದ್ದರು. ಆ ಸಿನಿಮಾ ಹಿಟ್ ಎನಿಸಿಕೊಂಡಿತ್ತು. ಇದೀಗ ‘ಭೂಲ್ ಭುಲಯ್ಯ 3’ ಸಿನಿಮಾ ನವೆಂಬರ್ 1 ಕ್ಕೆ ತೆರೆಗೆ ಬರಲಿದೆ. ಇನ್ನು ‘ಪುಷ್ಪ 2’ ಸಿನಿಮಾ ಡಿಸೆಂಬರ್ 6 ಕ್ಕೆ ಬಿಡುಗಡೆ ಆಗಲಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ