ಕಾಲಿಗೆ ಗುಂಡೇಟು ಬಿದ್ದ ಪ್ರಕರಣ; ಮೊದಲ ಬಾರಿ ಪ್ರತಿಕ್ರಿಯೆ ನೀಡಿದ ಗೋವಿಂದ

ನಟ ಗೋವಿಂದ ಅವರು ತಮ್ಮದೇ ಗನ್​ನಿಂದ ಕಾಲಿಗೆ ಶೂಟ್ ಮಾಡಿಕೊಂಡಿದ್ದಾರೆ. ಮುಂಬೈನಲ್ಲಿರುವ ಅವರ ಮನೆಯಲ್ಲಿ ಈ ಘಟನೆ ನಡೆದಿದೆ. ಮುಂಜಾನೆ 5 ಗಂಟೆ ಸುಮಾರಿಗೆ ಈ ಘಟನೆ ಸಂಭವಿಸಿದೆ. ಸದ್ಯ ಅವರನ್ನು ಮುಂಬೈನ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಕಾಲಿಗೆ ಗುಂಡೇಟು ಬಿದ್ದ ಪ್ರಕರಣ; ಮೊದಲ ಬಾರಿ ಪ್ರತಿಕ್ರಿಯೆ ನೀಡಿದ ಗೋವಿಂದ
ಗೋವಿಂದ
Follow us
|

Updated on:Oct 01, 2024 | 11:34 AM

ನಟ ಗೋವಿಂದ ಅವರಿಗೆ ಇಂದು (ಅಕ್ಟೋಬರ್ 1) ಮುಂಜಾನೆ ಕಾಲಿಗೆ ಗುಂಡು ತಗುಲಿದೆ. ಪರವಾನಿಗೆ ಹೊಂದಿರುವ ಗನ್​ನಿಂದ ಮಿಸ್ ಫೈಯರ್ ಆಗಿದೆ. ಅವರನ್ನು ಮುಂಬೈನ ಅಂಧೇರಿಯ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಈ ಘಟನೆ ಬಗ್ಗೆ ಅವರು ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿದ್ದಾರೆ. ಅವರು ಸದ್ಯ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರ ಆರೋಗ್ಯದ ಬಗ್ಗೆ ಇದ್ದ ಆಂತಕ ದೂರ ಮಾಡಿದ್ದಾರೆ.

‘ನಿಮ್ಮ ಆಶೀರ್ವಾದ, ತಂದೆ ತಾಯಿ ಆಶೀರ್ವಾದ, ದೇವರ ಆಶೀರ್ವಾದದಿಂದ ಆರೋಗ್ಯವಾಗಿದ್ದೇನೆ. ಬೆಳಿಗ್ಗೆ ಗುಂಡು ಬಿದ್ದಿತ್ತು. ಅದನ್ನು ತೆಗೆಯಲಾಗಿದೆ. ಆಸ್ಪತ್ರೆಯ ವೈದ್ಯರಿಗೆ ಧನ್ಯವಾದ ಹೇಳುತ್ತೇನೆ. ನಿಮ್ಮ ಪ್ರಾರ್ಥನೆಗಾಗಿ ಧನ್ಯವಾದ’ ಎಂದಿದ್ದಾರೆ ನಟ ಗೋವಿಂದ.

ಗೋವಿಂದ ಅವರು ಇಂದು ಕೋಲ್ಕತ್ತ ತೆರಳುವವರಿದ್ದರು. ಮುಂಜಾನೆ 5 ಗಂಟೆ ಸುಮಾರಿಗೆ ಅವರು ರೆಡಿ ಆಗುವಾಗ ಕೈಯಲ್ಲಿದ್ದ ಗನ್ ಕೈ ಜಾರಿದೆ. ಆಗ ಆಕಸ್ಮಿಕವಾಗಿ ಬುಲೆಟ್ ಫೈಯರ್ ಆಗಿದೆ. ಇದರಿಂದ ಅವರ ಕಾಲಿಗೆ ಬುಲೆಟ್ ತಾಗಿದೆ. ಬುಲೆಟ್ ಶಬ್ದ ವರದಿ ಆದ ಬೆನ್ನಲ್ಲೇ ಪೊಲೀಸರು ಸ್ಥಳಕ್ಕೆ ಧಾವಿಸಿದ್ದು, ಕೇಸ್ ದಾಖಲು ಮಾಡಿಕೊಂಡು ತನಿಖೆ ನಡೆಸುತ್ತಿದ್ದಾರೆ.

ಗೋವಿಂದ ಅವರನ್ನು ಮುಂಜಾನೆಯೇ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಅವರು ಬೇಗ ಚೇತರಿಕೆ ಕಾಣಲಿ ಎಂದು ಫ್ಯಾನ್ಸ್ ಪ್ರಾರ್ಥನೆ ಮಾಡುತ್ತಿದ್ದಾರೆ. ಅವರ ಪ್ರಾಣಕ್ಕೆ ಯಾವುದೇ ತೊಂದರೆ ಇಲ್ಲ ಎನ್ನುವ ವಿಚಾರ ತಿಳಿದು ಫ್ಯಾನ್ಸ್ ನಿಟ್ಟುಸಿರು ಬಿಟ್ಟಿದ್ದಾರೆ.

ಇದನ್ನೂ ಓದಿ: ಗನ್​ನಿಂದ ಕಾಲಿಗೆ ಶೂಟ್ ಮಾಡಿಕೊಂಡ ನಟ ಗೋವಿಂದ, ಐಸಿಯುಗೆ ದಾಖಲು; ನಡೆದಿದ್ದು ಏನು?

ಗೋವಿಂದ ಅವರಿಗೆ ಅನೇಕ ಸೆಲೆಬ್ರಿಟಿಗಳು ಕರೆ ಮಾಡಿ ಆರೋಗ್ಯ ವಿಚಾರಿಸಿದ್ದಾರೆ. ನಡೆದ ಘಟನೆಯ ಬಗ್ಗೆ ಗೋವಿಂದ ಅವರ ಮ್ಯಾನೇಜರ್ ಸ್ಪಷ್ಟನೆ ನೀಡಿದ್ದಾರೆ. ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಘಟನೆ ಬಗ್ಗೆ ಚರ್ಚೆಗಳು ನಡೆಯುತ್ತಿವೆ. ಗೋವಿಂದ ಅವರು ನಟನೆಯಿಂದ  ಅಂತ ಕಾಯ್ದುಕೊಂಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 11:33 am, Tue, 1 October 24

ಶಓಮಿ ರೆಡ್ಮಿ ಸ್ಮಾರ್ಟ್​ವಾಚ್ ಬ್ಯಾಟರಿ 18 ದಿನ ಬಾಳಿಕೆ ಬರುತ್ತೆ!
ಶಓಮಿ ರೆಡ್ಮಿ ಸ್ಮಾರ್ಟ್​ವಾಚ್ ಬ್ಯಾಟರಿ 18 ದಿನ ಬಾಳಿಕೆ ಬರುತ್ತೆ!
ಮುಡಾ 364 ಕೋಟಿ ರೂ. ದುರ್ಬಳಕೆ: ಇಡಿ ದೂರುದಾರರಿಂದ ಶಾಕಿಂಗ್ ಹೇಳಿಕೆ
ಮುಡಾ 364 ಕೋಟಿ ರೂ. ದುರ್ಬಳಕೆ: ಇಡಿ ದೂರುದಾರರಿಂದ ಶಾಕಿಂಗ್ ಹೇಳಿಕೆ
ಮಡಿಕೇರಿಯಂತಾದ ಕೋಲಾರ; ಒಣಗುತ್ತಿರುವ ಬೆಳೆಗೆ ಮಂಜಿನಾಸರೆ, ವಿಡಿಯೋ ನೋಡಿ
ಮಡಿಕೇರಿಯಂತಾದ ಕೋಲಾರ; ಒಣಗುತ್ತಿರುವ ಬೆಳೆಗೆ ಮಂಜಿನಾಸರೆ, ವಿಡಿಯೋ ನೋಡಿ
ನಾಗಮಂಗಲ ಗಲಭೆ ಕೇಸ್; ನ್ಯಾಯಾಂಗ ಬಂಧನದಲ್ಲಿದ್ದ 55 ಆರೋಪಿಗಳು ಬಿಡುಗಡೆ
ನಾಗಮಂಗಲ ಗಲಭೆ ಕೇಸ್; ನ್ಯಾಯಾಂಗ ಬಂಧನದಲ್ಲಿದ್ದ 55 ಆರೋಪಿಗಳು ಬಿಡುಗಡೆ
Daily Devotional: ಮಹಾಲಯ ಅಮಾವಾಸ್ಯೆ ಪಿತೃಪಕ್ಷದ ಮಹತ್ವ ತಿಳಿಯಿರಿ
Daily Devotional: ಮಹಾಲಯ ಅಮಾವಾಸ್ಯೆ ಪಿತೃಪಕ್ಷದ ಮಹತ್ವ ತಿಳಿಯಿರಿ
Nithya Bhavishya: ಈ ರಾಶಿಯವರಿಗೆ ಪ್ರಭಾವಿ ವ್ಯಕ್ತಿಗಳಿಂದ ಕೆಲಸ ಆಗಲಿದೆ
Nithya Bhavishya: ಈ ರಾಶಿಯವರಿಗೆ ಪ್ರಭಾವಿ ವ್ಯಕ್ತಿಗಳಿಂದ ಕೆಲಸ ಆಗಲಿದೆ
ರಾಹುಲ್ ಗಾಂಧಿ ಕಾರಿನ ಪಕ್ಕ ಬೈಕ್​ನಲ್ಲಿ ಕೋಲು ಹಿಡಿದು ಬಂದ ವ್ಯಕ್ತಿ
ರಾಹುಲ್ ಗಾಂಧಿ ಕಾರಿನ ಪಕ್ಕ ಬೈಕ್​ನಲ್ಲಿ ಕೋಲು ಹಿಡಿದು ಬಂದ ವ್ಯಕ್ತಿ
ಪೊಲೀಸ್ ಠಾಣೆ ಮುಂದೆ ಯುವಕನ ಹೈಡ್ರಾಮಾ: ಕೊನೆಗೆ ಪೊಲೀಸ್​ ಮಾಡಿದ್ದೇನು?
ಪೊಲೀಸ್ ಠಾಣೆ ಮುಂದೆ ಯುವಕನ ಹೈಡ್ರಾಮಾ: ಕೊನೆಗೆ ಪೊಲೀಸ್​ ಮಾಡಿದ್ದೇನು?
ಆಂಧ್ರಪ್ರದೇಶದ ಎಟಿಎಂನಲ್ಲಿ ಹಾವು ಕಂಡು ಬೆಚ್ಚಿಬಿದ್ದ ಜನ
ಆಂಧ್ರಪ್ರದೇಶದ ಎಟಿಎಂನಲ್ಲಿ ಹಾವು ಕಂಡು ಬೆಚ್ಚಿಬಿದ್ದ ಜನ
‘ದೇವರು ಬಂದ್ರು, ಹುಲಿ ಬಂತು’: ದರ್ಶನ್ ಕಂಡು ಜೈಕಾರ ಹಾಕಿದ ಫ್ಯಾನ್ಸ್
‘ದೇವರು ಬಂದ್ರು, ಹುಲಿ ಬಂತು’: ದರ್ಶನ್ ಕಂಡು ಜೈಕಾರ ಹಾಕಿದ ಫ್ಯಾನ್ಸ್