ಜೂ ಎನ್ಟಿಆರ್ ಮುಂದಿನ ಸಿನಿಮಾಕ್ಕೆ ಕನ್ನಡತಿ ನಾಯಕಿ
Jr NTR Movie: ಜೂ.ಎನ್ಟಿಆರ್ ನಟನೆಯ‘ದೇವರ’ ಸಿನಿಮಾ ಹಿಟ್ ಎನಿಸಿಕೊಂಡಿದೆ. ಇದೀಗ ಜೂ ಎನ್ಟಿಆರ್ ಹೊಸ ಸಿನಿಮಾದ ಮೇಲೆ ಗಮನ ನೆಟ್ಟಿದ್ದು, ಜೂ ಎನ್ಟಿಆರ್ ನಟನೆಯ ಹೊಸ ಸಿನಿಮಾದಲ್ಲಿ ಕನ್ನಡತಿ ನಾಯಕಿ. ಯಾರಾಕೆ?
‘ಆರ್ಆರ್ಆರ್’ ಸಿನಿಮಾದ ಬಳಿಕ ಜೂ ಎನ್ಟಿಆರ್ ಪ್ಯಾನ್ ವರ್ಲ್ಡ್ ನಟ ಆಗಿದ್ದಾರೆ. ಇತ್ತೀಚೆಗಷ್ಟೆ ಅವರ ‘ದೇವರ’ ಸಿನಿಮಾ ಬಿಡುಗಡೆ ಆಗಿದ್ದು, ಕತೆ ಸಾಧಾರಣವಾಗಿದ್ದರೂ ಸಹ ಜೂ ಎನ್ಟಿಆರ್ ಹೆಸರಿನಿಂದಾಗಿ ಸಿನಿಮಾ 300 ಕೋಟಿಗೂ ಹೆಚ್ಚಿನ ಮೊತ್ತ ಕಲೆಕ್ಷನ್ ಮಾಡಿದೆ ಅದೂ ಕೇವಲ ಮೂರೇ ದಿನಗಳಲ್ಲಿ. ‘ದೇವರ’ ಸಿನಿಮಾ ಬಿಡುಗಡೆ ಆಗುತ್ತಿದ್ದಂತೆ ಜೂ ಎನ್ಟಿಆರ್ ನಟನೆಯ ಮುಂದಿನ ಸಿನಿಮಾದ ಬಗ್ಗೆ ಚರ್ಚೆ ಶುರುವಾಗಿದೆ. ಅಂದಹಾಗೆ ಜೂ ಎನ್ಟಿಆರ್ ನಟಿಸಲಿರುವ ಮುಂದಿನ ಸಿನಿಮಾಕ್ಕೆ ಕನ್ನಡತಿಯೊಬ್ಬಾಕೆ ಅವರ ಜೊತೆ ನಾಯಕಿಯಾಗಿ ನಟಿಸಲಿದ್ದಾರೆ.
ಜೂ ಎನ್ಟಿಆರ್ ‘ದೇವರ’ ಸಿನಿಮಾ ಬಿಡುಗಡೆ ಆಗಿದ್ದು, ಇನ್ನು ಕೆಲವೇ ತಿಂಗಳಲ್ಲಿ ಜೂ ಎನ್ಟಿಆರ್ ನಟನೆಯ ಮೊದಲ ಹಿಂದಿ ಸಿನಿಮಾ ‘ಫೈಟರ್’ ತೆರೆಗೆ ಬರಲಿದೆ. ‘ಫೈಟರ್’ ಸಿನಿಮಾದ ಚಿತ್ರೀಕರಣವನ್ನು ಬಹುತೇಕ ಮುಗಿಸಿದ್ದಾರೆ ಜೂ ಎನ್ಟಿಆರ್. ಇದೀಗ ತಮ್ಮ ಹೊಸ ಸಿನಿಮಾದ ಚಿತ್ರೀಕರಣಕ್ಕೆ ರೆಡಿಯಾಗುತ್ತಿದ್ದಾರೆ. ಪ್ರಶಾಂತ್ ನೀಲ್ ನಿರ್ದೇಶಿಸಲಿರುವ ಹೊಸ ಸಿನಿಮಾದಲ್ಲಿ ಜೂ ಎನ್ಟಿಆರ್ ನಟಿಸಲಿದ್ದಾರೆ. ಈ ಸಿನಿಮಾ ಮುಹೂರ್ತ ಕೆಲ ವಾರಗಳ ಹಿಂದಷ್ಟೆ ಮುಗಿದಿದ್ದು, ಚಿತ್ರೀಕರಣ ಶೀಘ್ರವೇ ಪ್ರಾರಂಭ ಆಗಲಿದೆ. ಈ ಸಿನಿಮಾದಲ್ಲಿ ಜೂ ಎನ್ಟಿಆರ್ ಜೊತೆ ಕನ್ನಡತಿ ನಾಯಕಿಯಾಗಿ ನಟಿಸಲಿದ್ದಾರೆ ಎನ್ನಲಾಗುತ್ತಿದೆ.
ಇದನ್ನೂ ಓದಿ:‘ದೇವರ’ ಬಿಡುಗಡೆ, ಜೂ ಎನ್ಟಿಆರ್ ಬೃಹತ್ ಕಟೌಟ್ಗೆ ಬೆಂಕಿ: ವಿಡಿಯೋ ನೋಡಿ
‘ಸಪ್ತ ಸಾಗರದಾಚೆ ಎಲ್ಲೊ’ ಸಿನಿಮಾದ ಮೂಲಕ ಪ್ಯಾನ್ ಇಂಡಿಯಾ ಮಟ್ಟದಲ್ಲಿ ತನ್ನ ಪ್ರತಿಭೆಯನ್ನು ಸಾರಿರುವ ರುಕ್ಮಿಣಿ ವಸಂತ್, ಜೂ ಎನ್ಟಿಆರ್ ನಟನೆಯ ಮುಂದಿನ ಸಿನಿಮಾಕ್ಕೆ ನಾಯಕಿ. ಜೂ ಎನ್ಟಿಆರ್ ಸಿನಿಮಾದಲ್ಲಿ ನಟಿಸಲು ಟಾಪ್ ಬಾಲಿವುಡ್ ನಟಿಯರೇ ಸಾಲುಗಟ್ಟಿ ನಿಂತಿರುವಾಗ, ನಿರ್ದೇಶಕ ಪ್ರಶಾಂತ್ ನೀಲ್, ಕನ್ನಡದ ನಟಿಗೆ ದೊಡ್ಡ ಅವಕಾಶವನ್ನು ನೀಡಿದ್ದಾರೆ. ರುಕ್ಮಿಣಿ ವಸಂತ್ ಸಹ ಪ್ರೀತಿಯಿಂದ ಈ ಅವಕಾಶವನ್ನು ಒಪ್ಪಿಕೊಂಡಿದ್ದಾರೆ. ಸಿನಿಮಾದಲ್ಲಿ ಅವರದ್ದು ಡೀ-ಗ್ಲಾಮರಸ್ ಪಾತ್ರ ಎನ್ನಲಾಗುತ್ತಿದೆ. ಮಾತ್ರವಲ್ಲದೆ ಜೂ ಎನ್ಟಿಆರ್, ಸಿನಿಮಾದಲ್ಲಿ ಎರಡು ಶೇಡ್ನಲ್ಲಿ ನಟಿಸಲಿದ್ದು, ರುಕ್ಮಿಣಿ ವಸಂತ್ಗೆ ಸಹ ಎರಡು ಷೇಡ್ನ ಪಾತ್ರವಿದೆ ಎನ್ನಲಾಗುತ್ತಿದೆ.
ರುಕ್ಮಿಣಿ ವಸಂತ್, ಪ್ರಸ್ತುತ ಕೆಲವು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಅವರ ನಟನೆಯ ‘ಬಘೀರ’ ಸಿನಿಮಾ ಕೊನೆಗೂ ಬಿಡುಗಡೆ ಕಾಣುತ್ತಿದೆ. ‘ಸಪ್ತ ಸಾಗರದಾಚೆ ಎಲ್ಲೋ’ ಸಿನಿಮಾಕ್ಕೂ ಮುಂಚೆಯೇ ಆ ಸಿನಿಮಾದಲ್ಲಿ ಅವರು ನಟಿಸಿದ್ದರು. ಶಿವರಾಜ್ ಕುಮಾರ್ ನಟನೆಯ ‘ಭೈರತಿ ರಣಗಲ್’ ಸಿನಿಮಾದಲ್ಲಿಯೂ ರುಕ್ಮಿಣಿ ನಟಿಸಿದ್ದು ಆ ಸಿನಿಮಾ ಸಹ ಶೀಘ್ರವೇ ತೆರೆಗೆ ಬರಲಿದೆ. ತಮಿಳಿನ ಸ್ಟಾರ್ ನಟ ವಿಜಯ್ ಸೇತುಪತಿ ಜೊತೆಗೆ ನಟಿಸಿರುವ ‘ಏಸ್’ ಸಿನಿಮಾದ ಚಿತ್ರೀಕರಣ ಮುಗಿಸಿದ್ದು ಸಿನಿಮಾ ಶೀಘ್ರವೇ ತೆರೆಗೆ ಬರಲಿದೆ. ಇತ್ತೀಚೆಗಷ್ಟೆ ತಮಿಳಿನ ಶಿವಕಾರ್ತಿಕೇಯನ್ ನಟನೆಯ ಹೊಸ ಸಿನಿಮಾವನ್ನು ರುಕ್ಮಿಣಿ ಒಪ್ಪಿಕೊಂಡಿದ್ದಾರೆ. ಈ ಸಿನಿಮಾವನ್ನು ಮುರುಗದಾಸ್ ನಿರ್ದೇಶನ ಮಾಡಲಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ