ವಿಚ್ಛೇದನ ಪಡೆಯಲು ಮುಂದಾದ ನಟಿ ಊರ್ಮಿಳಾ; 8 ವರ್ಷದ ದಾಂಪತ್ಯ ಅಂತ್ಯ?

ಮದುವೆಯಾಗಿ 8 ವರ್ಷ ಕಳೆದ ಬಳಿಕ ಊರ್ಮಿಳಾ ಮತ್ತು ಮೋಸಿನ್ ಅಖ್ತರ್​ ಮೀರ್ ಅವರು ಡಿವೋರ್ಸ್​ ಪಡೆಯುತ್ತಿದ್ದಾರೆ. ಉರ್ಮಿಳಾ ಅವರಿಗಿಂತ ಮೋಸಿನ್ ಅವರು 10 ವರ್ಷ ಕಿರಿಯರು. 2016ರಲ್ಲಿ ಅವರಿಬ್ಬರು ಮದುವೆ ಆಗಿದ್ದರು. ಕಾಶ್ಮೀರ ಮೂಲದ ಬಿಸ್ನೆಸ್​ಮ್ಯಾನ್ ಆಗಿರುವ ಮೋಸಿನ್ ಅವರಿಗೆ ವಿಚ್ಛೇದನ ಪಡೆಯುಲು ಒಪ್ಪಿಗೆ ಇಲ್ಲ ಎನ್ನಲಾಗಿದೆ.

ವಿಚ್ಛೇದನ ಪಡೆಯಲು ಮುಂದಾದ ನಟಿ ಊರ್ಮಿಳಾ; 8 ವರ್ಷದ ದಾಂಪತ್ಯ ಅಂತ್ಯ?
ಮೋಸಿನ್ ಅಖ್ತರ್​ ಮೀರ್, ಊರ್ಮಿಳಾ ಮಾತೋಂಡ್ಕರ್​
Follow us
|

Updated on:Sep 24, 2024 | 9:43 PM

ಬಾಲಿವುಡ್​ನ ಖ್ಯಾತ ನಟಿ ಊರ್ಮಿಳಾ ಮಾತೋಂಡ್ಕರ್​ ಅವರು ವಿಚ್ಛೇದನ ಪಡೆಯಲು ಮುಂದಾಗಿದ್ದಾರೆ ಎಂಬ ಮಾಹಿತಿ ಕೇಳಿಬಂದಿದೆ. ಮಾಧ್ಯಮಗಳಲ್ಲಿ ಈ ಬಗ್ಗೆ ವರದಿ ಪ್ರಕಟ ಆಗಿದೆ. ಈಗಾಗಲೇ ಊರ್ಮಿಳಾ ಅವರು ಮುಂಬೈನ ನ್ಯಾಯಾಲಯದಲ್ಲಿ ಡಿವೋರ್ಸ್​ಗೆ ಅರ್ಜಿ ಸಲ್ಲಿಸಿದ್ದಾರೆ. ಪತಿ ಮೋಸಿನ್ ಅಖ್ತರ್ ಮೀರ್​ ಜೊತೆಗಿನ ದಾಂಪತ್ಯಕ್ಕೆ ಅವರು ಅಂತ್ಯ ಹಾಡಲು ನಿರ್ಧರಿಸಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಇನ್ನಷ್ಟೇ ಹೆಚ್ಚಿನ ಮಾಹಿತಿ ಸಿಗಬೇಕಿದೆ. ಉರ್ಮಿಳಾ ಅವರ ವಿಚ್ಛೇದನದ ಬಗ್ಗೆ ತಿಳಿದು ಅವರ ಅಭಿಮಾನಿಗಳಿಗೆ ಬೇಸರ ಆಗಿದೆ.

ಹಲವು ವರ್ಷಗಳಿಂದ ಊರ್ಮಿಳಾ ಅವರು ಚಿತ್ರರಂಗದಲ್ಲಿ ಸಕ್ರಿಯರಾಗಿದ್ದಾರೆ. ಅನೇಕ ಸೂಪರ್​ ಹಿಟ್​ ಸಿನಿಮಾಗಳನ್ನು ಅವರು ನೀಡಿದ್ದಾರೆ. ಹಿಂದಿ, ತೆಲುಗು, ತಮಿಳು ಭಾಷೆಯ ಸಿನಿಮಾಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ. 2016ರಲ್ಲಿ ಕಾಶ್ಮೀರ ಮೂಲದ ಉದ್ಯಮಿ ಮೋಸಿನ್ ಅಖ್ತರ್​ ಮೀರ್​ ಜೊತೆ ಉರ್ಮಿಳಾ ಅವರ ಮದುವೆ ನಡೆದಿತ್ತು. ಕಲವೇ ಕೆಲವು ಮಂದಿಯ ಸಮ್ಮುಖದಲ್ಲಿ ಅವರು ವಿವಾಹವಾಗಿದ್ದರು. ಆದರೆ ಈಗ ಅವರ ಸಂಸಾರದಲ್ಲಿ ಬಿರುಕು ಮೂಡಿದೆ ಎನ್ನಲಾಗಿದೆ.

ಉರ್ಮಿಳಾ ಅವರು ಯಾವ ಕಾರಣಕ್ಕಾಗಿ ವಿಚ್ಛೇದನ ಪಡೆಯುತ್ತಿದ್ದಾರೆ ಎಂಬುದು ತಿಳಿದು ಬಂದಿಲ್ಲ. ಆದರೆ ಪತಿ ಮೋಸಿನ್ ಅಖ್ತರ್​ ಮೋರ್​ ಅವರಿಗೆ ವಿಚ್ಛೇದನ ಪಡೆಯಲು ಇಷ್ಟವಿಲ್ಲ ಎಂಬ ಮಾಹಿತಿ ಇದೆ. ಈ ಬಗ್ಗೆ ಅವರಿಂದ ಅಧಿಕೃತ ಹೇಳಿಕೆ ಹೊರಬೀಳುವುದು ಇನ್ನೂ ಬಾಕಿ ಇದೆ. 8 ವರ್ಷಗಳ ಕಾಲ ಸಂಸಾರ ನಡೆಸಿರುವ ಉರ್ಮಿಳಾ ಮತ್ತು ಮೋಸಿನ್ ಅವರು ಡಿವೋರ್ಸ್​ ಪಡೆಯುತ್ತಿರುವುದು ಯಾಕೆ ಎಂಬುದನ್ನು ತಿಳಿಯುವ ಕೌತುಕ ಮೂಡಿದೆ.

ಇದನ್ನೂ ಓದಿ: 22 ವರ್ಷದ ಹಿಂದೆ ಡಿವೋರ್ಸ್​ ನೀಡಿದ ಮೊದಲ ಪತ್ನಿ ಜತೆ ಈಗ ಆಮಿರ್ ಖಾನ್ ಪಾರ್ಟಿ

ಚಿತ್ರರಂಗದಲ್ಲಿ ಸಾಕಷ್ಟು ಅನುಭವ ಹೊಂದಿರುವ ಊರ್ಮಿಳಾ ಮಾತೋಂಡ್ಕರ್​ ಅವರಿಗೆ ಈಗ 50 ವರ್ಷ ವಯಸ್ಸು. ಇಂದಿಗೂ ಅವರಿಗೆ ಬೇಡಿಕೆ ಇದೆ. ಮೋಸಿನ್ ಅಖ್ತರ್​ ಮೀರ್​ ಅವರಿಗೆ 40 ವರ್ಷ ವಯಸ್ಸು. ಇಬ್ಬರ ನಡುವೆ 10 ವರ್ಷಗಳ ವಯಸ್ಸಿನ ಅಂತರ ಇದೆ. ಈ ಕಾರಣದಿಂದಲೇ ಅವರ ಮದುವೆ ವಿಚಾರ 2016ರಲ್ಲಿ ಸಖತ್ ಸುದ್ದಿ ಆಗಿತ್ತು. ಈಗ ಇಬ್ಬರ ನಡುವೆ ವೈಮನಸ್ಸು ಉಂಟಾಗಿದ್ದು, ವಿಚ್ಛೇದನ ಪಡೆಯುವ ಹಂತಕ್ಕೆ ಬಂದಿದೆ ಎನ್ನಲಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 9:32 pm, Tue, 24 September 24