22 ವರ್ಷದ ಹಿಂದೆ ಡಿವೋರ್ಸ್​ ನೀಡಿದ ಮೊದಲ ಪತ್ನಿ ಜತೆ ಈಗ ಆಮಿರ್ ಖಾನ್ ಪಾರ್ಟಿ

ಆಮಿರ್​ ಖಾನ್​ ಮತ್ತು ರೀನಾ ದತ್ತ ಅವರು ಡಿವೋರ್ಸ್​ ಪಡೆದು ಬರೋಬ್ಬರಿ 22 ವರ್ಷಗಳು ಕಳೆದಿವೆ. ಹಾಗಿದ್ದರೂ ಕೂಡ ಅವರಿಬ್ಬರ ನಡುವೆ ಯಾವುದೇ ಮುನಿಸು ಇಲ್ಲ. ಮಕ್ಕಳ ಭವಿಷ್ಯಕ್ಕಾಗಿ ಅವರು ಕೈ ಜೋಡಿಸಿದ್ದಾರೆ. ಮೊದಲ ಮಗ ಜುನೈದ್​ ಖಾನ್​ ಸಲುವಾಗಿ ಆಮಿರ್​ ಖಾನ್​ ಹಾಗೂ ರೀನಾ ದತ್ತ ಅವರು ಪಾರ್ಟಿ ಮಾಡಲಿದ್ದಾರೆ. ಇದರಲ್ಲಿ ಆಪ್ತರು ಭಾಗವಹಿಸಲಿದ್ದಾರೆ.

22 ವರ್ಷದ ಹಿಂದೆ ಡಿವೋರ್ಸ್​ ನೀಡಿದ ಮೊದಲ ಪತ್ನಿ ಜತೆ ಈಗ ಆಮಿರ್ ಖಾನ್ ಪಾರ್ಟಿ
ಆಮಿರ್ ಖಾನ್​, ರೀನಾ ದತ್ತ
Follow us
ಮದನ್​ ಕುಮಾರ್​
|

Updated on: Jul 27, 2024 | 10:34 PM

ನಟ ಆಮಿರ್ ಖಾನ್​ ಅವರ ವೈಯಕ್ತಿಕ ಜೀವನದ ವಿಚಾರಗಳು ಎಲ್ಲರಿಗೂ ಅಚ್ಚರಿ ಮೂಡಿಸುತ್ತಿವೆ. ಮೊದಲ ಪತ್ನಿ ರೀನಾ ದತ್ತ ಹಾಗೂ ಎರಡನೇ ಪತ್ನಿ ಕಿರಣ್​ ರಾವ್​ ಅವರಿಗೆ ಆಮಿರ್ ಖಾನ್​ ಡಿವೋರ್ಸ್​ ನೀಡಿದ್ದರೂ ಕೂಡ ಮುನಿಸಿ ಮುಂದುವರಿಸಿಲ್ಲ. ಅನೇಕ ಸಂದರ್ಭಗಳಲ್ಲಿ ಅವರು ಮಾಜಿ ಪತ್ನಿಯರ ಜೊತೆ ಆಪ್ತವಾಗಿ ನಡೆದುಕೊಂಡಿದ್ದಾರೆ. ವಿಚ್ಛೇದನ ನೀಡಿದ್ದರೂ ಕೂಡ ಇಷ್ಟು ಕ್ಲೋಸ್​ ಆಗಿ ಕಾಣಿಸಿಕೊಳ್ಳುವ ಮಾಜಿ ದಂಪತಿಗಳು ನಿಜಕ್ಕೂ ಅಪರೂಪ. ಈಗ ಆಮಿರ್ ಖಾನ್​ ಅವರು ಮೊದಲ ಮಾಜಿ ಪತ್ನಿ ಜೊತೆ ಪಾರ್ಟಿ ಆಯೋಜನೆ ಮಾಡಲಿದ್ದಾರೆ ಎಂಬ ಸುದ್ದಿ ಕೇಳಿಬಂದಿದೆ.

ಆಮಿರ್​ ಖಾನ್​ ಮತ್ತು ರೀನಾ ದತ್ತ ಅವರು 1986ರಲ್ಲಿ ಮದುವೆ ಆಗಿದ್ದರು. 2002ರಲ್ಲಿ ವಿಚ್ಛೇದನ ಪಡೆದರು. ಈ ಜೋಡಿಗೆ ಜುನೈದ್​ ಖಾನ್​ ಹಾಗೂ ಇರಾ ಖಾನ್​ ಎಂಬಿಬ್ಬರು ಮಕ್ಕಳು ಇದ್ದಾರೆ. ಮಗಳು ಇರಾ ಖಾನ್​ಗೆ ಚಿತ್ರರಂಗದ ಬಗ್ಗೆ ಆಸಕ್ತಿ ಇಲ್ಲ. ಆದರೆ ಮಗ ಜುನೈದ್​ ಖಾನ್​ ನಟನೆಯಲ್ಲಿ ಆಸಕ್ತಿ ಹೊಂದಿದ್ದಾರೆ. ಅವರ ನಟಿಸಿದ ಮೊದಲ ಸಿನಿಮಾ ‘ಮಹಾರಾಜ್​’ ಒಟಿಟಿಯಲ್ಲಿ ಬಿಡುಗಡೆಯಾಗಿ ಗಮನ ಸೆಳೆದಿದೆ.

ವಿಚ್ಛೇದನ ಪಡೆದಿದ್ದರೂ ಕೂಡ ಮಕ್ಕಳ ಭವಿಷ್ಯಕ್ಕಾಗಿ ಮಾಜಿ ಪತ್ನಿಯರ ಜೊತೆ ಆಮಿರ್​ ಖಾನ್​ ಅವರು ಉತ್ತಮ ಒಡನಾಟವನ್ನು ಹೊಂದಿದ್ದಾರೆ. ಈಗ ಜುನೈದ್​ ಖಾನ್​ ಅವರನ್ನು ಹುರಿದುಂಬಿಸಲು ಆಮಿರ್ ಖಾನ್​ ನಿರ್ಧರಿಸಿದ್ದಾರೆ. ‘ಮಹಾರಾಜ್’ ಸಿನಿಮಾಗೆ ಜನರಿಂದ ಮೆಚ್ಚುಗೆ ಸಿಕ್ಕಿದೆ. ಹಾಗಾಗಿ ಆ ಖುಷಿಯನ್ನು ಸಂಭ್ರಮಿಸಿಲು ಆಮಿರ್​ ಖಾನ್​ ಮತ್ತು ರೀನಾ ದತ್ತ ಅವರು ಆಪ್ತರಿಗಾಗಿ ಪಾರ್ಟಿ ಆಯೋಜನೆ ಮಾಡಲಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ: ಒಂದೇ ಸಿನಿಮಾದಲ್ಲಿ ಶಾರುಖ್​, ಆಮಿರ್​, ಸಲ್ಮಾನ್​; ‘ರಾಜಮೌಳಿ ನಿರ್ದೇಶನ ಮಾಡ್ಬೇಕು’ ಎಂದ ನೆಟ್ಟಿಗರು

ಜುನೈದ್​ ಖಾನ್​ ನಟನೆ ‘ಮಹಾರಾಜ್​’ ಸಿನಿಮಾ ನೆಟ್​ಫ್ಲಿಕ್ಸ್​ನಲ್ಲಿ ಬಿಡುಗಡೆ ಆಗಿದೆ. ಆರಂಭದಲ್ಲಿ ಈ ಚಿತ್ರಕ್ಕೆ ವಿಘ್ನ ಎದುರಾಗಿತ್ತು. ಹಿಂದೂಪರ ಸಂಘಟನೆಗಳು ಈ ಚಿತ್ರಕ್ಕೆ ವಿರೋಧ ವ್ಯಕ್ತಪಡಿಸಿದ್ದವು. ಕೆಲವರು ಸಿನಿಮಾ ತಡೆಗೆ ಕೋರ್ಟ್​ನಲ್ಲಿ ಅರ್ಜಿ ಸಲ್ಲಿಸಿದ್ದರು. ಅದರ ಪರಿಣಾಮವಾಗಿ ಚಿತ್ರದ ಬಿಡುಗಡೆ ದಿನಾಂಕ ಮುಂದೂಡಲ್ಪಟ್ಟಿತ್ತು. ಬಳಿಕ ನ್ಯಾಯಾಲಯದಿಂದ ಸಿನಿಮಾದ ಬಿಡುಗಡೆ ಅನುಮತಿ ಸಿಕ್ಕಿತು. ಒಟಿಟಿಯಲ್ಲಿ ‘ಮಹಾರಾಜ್​’ ಸಿನಿಮಾವನ್ನು ನೋಡಿದ ಪ್ರೇಕ್ಷಕರು ಪಾಸಿಟಿವ್​ ವಿಮರ್ಶೆ ನೀಡಿದ್ದಾರೆ. ಇದರಿಂದ ಚಿತ್ರತಂಡಕ್ಕೆ ಖುಷಿ ಆಗಿದೆ. ಹಲವು ಅವಕಾಶಗಳು ಜುನೈದ್​ ಖಾನ್​ ಅವರನ್ನು ಅರಸಿ ಬರುತ್ತಿವೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಎಐಸಿಸಿ ಕಟ್ಟಡಕ್ಕೆ ಗಾಂಧಿ ಭವನ ಅಂತ ಯಾಕೆ ಹೆಸರಿಟ್ಟಿಲ್ಲ? ಆರ್ ಅಶೋಕ
ಎಐಸಿಸಿ ಕಟ್ಟಡಕ್ಕೆ ಗಾಂಧಿ ಭವನ ಅಂತ ಯಾಕೆ ಹೆಸರಿಟ್ಟಿಲ್ಲ? ಆರ್ ಅಶೋಕ
ಪಕ್ಷದ ವಿದ್ಯಮಾನಗಳಿಂದ ತಳಮಟ್ಟದ ಕಾರ್ಯಕರ್ತ ನೊಂದಿದ್ದಾನೆ: ಸುನೀಲ ಕುಮಾರ್
ಪಕ್ಷದ ವಿದ್ಯಮಾನಗಳಿಂದ ತಳಮಟ್ಟದ ಕಾರ್ಯಕರ್ತ ನೊಂದಿದ್ದಾನೆ: ಸುನೀಲ ಕುಮಾರ್
ಭೈರತಿ ಸುರೇಶ್ ಕಾರಿಗೆ ಎಸ್ಕಾರ್ಟ್ ವಾಹನ ಟಚ್: ಪೊಲೀಸರಿಗೆ ಬೈಯ್ದ ಸಚಿವ
ಭೈರತಿ ಸುರೇಶ್ ಕಾರಿಗೆ ಎಸ್ಕಾರ್ಟ್ ವಾಹನ ಟಚ್: ಪೊಲೀಸರಿಗೆ ಬೈಯ್ದ ಸಚಿವ
Video: ರಿಯಲ್ ಎಸ್ಟೇಟ್ ಬ್ರೋಕರ್​ ಕೆನ್ನೆಗೆ ಬಾರಿಸಿದ ಬಿಜೆಪಿ ಸಂಸದ
Video: ರಿಯಲ್ ಎಸ್ಟೇಟ್ ಬ್ರೋಕರ್​ ಕೆನ್ನೆಗೆ ಬಾರಿಸಿದ ಬಿಜೆಪಿ ಸಂಸದ
ನೆಲಮಂಗಲ: ಚೆನ್ನಾಗಿದ್ದ ರಸ್ತೆಯನ್ನು ಅಗೆದ ಜಮೀನ್ದಾರರು, ಗ್ರಾಮಸ್ಥರ ಆಕ್ರೋಶ
ನೆಲಮಂಗಲ: ಚೆನ್ನಾಗಿದ್ದ ರಸ್ತೆಯನ್ನು ಅಗೆದ ಜಮೀನ್ದಾರರು, ಗ್ರಾಮಸ್ಥರ ಆಕ್ರೋಶ
ದಲಿತ ಕಾಂಗ್ರೆಸ್ ನಾಯಕರು ಪ್ರತ್ಯೇಕ ಬಣವಾಗಿ ಗುರುತಿಸಿಕೊಳ್ಳುತ್ತಿದ್ದಾರೆ
ದಲಿತ ಕಾಂಗ್ರೆಸ್ ನಾಯಕರು ಪ್ರತ್ಯೇಕ ಬಣವಾಗಿ ಗುರುತಿಸಿಕೊಳ್ಳುತ್ತಿದ್ದಾರೆ
Live: ಬೆಳಗಾವಿ ಗಾಂಧಿ ಭಾರತ ಸಮಾವೇಶ ನೇರ ಪ್ರಸಾರ
Live: ಬೆಳಗಾವಿ ಗಾಂಧಿ ಭಾರತ ಸಮಾವೇಶ ನೇರ ಪ್ರಸಾರ
ಮೈಸೂರಿನ ಶಿಲ್ಪಿ ಅರುಣ್ ಯೋಗಿರಾಜ್ ಗಾಂಧಿ ಪುತ್ಥಳಿಯನ್ನು ಕೆತ್ತಿದ್ದಾರೆ
ಮೈಸೂರಿನ ಶಿಲ್ಪಿ ಅರುಣ್ ಯೋಗಿರಾಜ್ ಗಾಂಧಿ ಪುತ್ಥಳಿಯನ್ನು ಕೆತ್ತಿದ್ದಾರೆ
ಅಮೆರಿಕ ಅಧ್ಯಕ್ಷರಾಗಿ ಪದಗ್ರಹಣ ಬಳಿಕ ಸಖತ್​ ಸ್ಟೆಪ್​​​ ಹಾಕಿದ ಟ್ರಂಪ್
ಅಮೆರಿಕ ಅಧ್ಯಕ್ಷರಾಗಿ ಪದಗ್ರಹಣ ಬಳಿಕ ಸಖತ್​ ಸ್ಟೆಪ್​​​ ಹಾಕಿದ ಟ್ರಂಪ್
ಬೆಳಗಾವಿ ಅಧಿವೇಶನ ನಿಸ್ಸಂದೇಹವಾಗಿ ಕಾಂಗ್ರೆಸ್ ಪಕ್ಷದ ಜಾತ್ರೆ: ಶಿವಕುಮಾರ್
ಬೆಳಗಾವಿ ಅಧಿವೇಶನ ನಿಸ್ಸಂದೇಹವಾಗಿ ಕಾಂಗ್ರೆಸ್ ಪಕ್ಷದ ಜಾತ್ರೆ: ಶಿವಕುಮಾರ್