AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಡ್ರಗ್ಸ್​ ತೆಗೆದುಕೊಳ್ಳುವುದು ನಿಲ್ಲಿಸಿ’: ಲೈವ್​ನಲ್ಲೇ ಆಮಿರ್​ ಖಾನ್​ಗೆ ಟ್ರೋಲ್​; ನಟನ ಉತ್ತರ ಏನು?

ಲೈವ್​ ಬಂದಾಗ ಆಮಿರ್​ ಖಾನ್​ ಅವರ ಮುಖ ಬಾಡಿದಂತೆ ಕಾಣಿಸಿದೆ. ಹಾಗಾಗಿ ಅವರನ್ನು ಕೆಲವರು ಟ್ರೋಲ್​ ಮಾಡಿದ್ದಾರೆ. ‘ಡ್ರಗ್ಸ್​ ಸೇವನೆ ನಿಲ್ಲಿಸಿ’ ಎಂದು ವ್ಯಕ್ತಿಯೊಬ್ಬರು ಆಮಿರ್​ ಖಾನ್​ಗೆ ಬುದ್ಧಿ ಹೇಳಿದ್ದಾರೆ. ಈ ಕಮೆಂಟ್​ ಅನ್ನು ಆಮಿರ್ ಖಾನ್​ ನಿರ್ಲಕ್ಷಿಸಬಹುದಿತ್ತು. ಆದರೆ ಅವರು ಹಾಗೆ ಮಾಡಿಲ್ಲ. ಇಂಥ ಕಮೆಂಟ್​ಗಳಿಗೂ ಕೂಡ ಅವರು ಉತ್ತರ ನೀಡಿದ್ದಾರೆ.

‘ಡ್ರಗ್ಸ್​ ತೆಗೆದುಕೊಳ್ಳುವುದು ನಿಲ್ಲಿಸಿ’: ಲೈವ್​ನಲ್ಲೇ ಆಮಿರ್​ ಖಾನ್​ಗೆ ಟ್ರೋಲ್​; ನಟನ ಉತ್ತರ ಏನು?
ಆಮಿರ್ ಖಾನ್​
ಮದನ್​ ಕುಮಾರ್​
|

Updated on: Mar 07, 2024 | 5:05 PM

Share

ಬಾಲಿವುಡ್​ ನಟ ಆಮಿರ್​ ಖಾನ್​ (Aamir Khan) ಅವರು ‘ಲಾಲ್​ ಸಿಂಗ್​ ಚಡ್ಡಾ’ ಸಿನಿಮಾದ ಬಳಿಕ ಕೊಂಚ ಸೈಲೆಂಟ್​ ಆಗಿದ್ದಾರೆ. ಆ ಸಿನಿಮಾ ಹೀನಾಯವಾಗಿ ಸೋತಿದ್ದರಿಂದ ಮುಂದಿನ ಚಿತ್ರಗಳ ಆಯ್ಕೆಯಲ್ಲಿ ಅವರು ತುಂಬಾ ಕಾಳಜಿ ವಹಿಸುತ್ತಿದ್ದಾರೆ. ಸದ್ಯಕ್ಕೆ ಅವರು ‘ಸಿತಾರೆ ಜಮೀನ್​ ಪರ್​’ ಸಿನಿಮಾದ ಕೆಲಸಗಳಲ್ಲಿ ತೊಡಗಿಕೊಂಡಿದ್ದಾರೆ. ಇದರ ನಡುವೆ ಅಭಿಮಾನಿಗಳ ಜೊತೆ ಸಂಪರ್ಕದಲ್ಲಿ ಇರಬೇಕು ಎಂಬ ಕಾರಣಕ್ಕೆ ಆಮಿರ್​ ಖಾನ್​ ಅವರು ಸೋಶಿಯಲ್​ ಮೀಡಿಯಾ (Aamir Khan Instagram Live) ಮೂಲಕ ಪ್ರಶ್ನೋತ್ತರ ನಡೆಸಿದ್ದಾರೆ. ಈ ವೇಳೆ ಅವರಿಗೆ ಅನೇಕ ಪ್ರಶ್ನೆಗಳು ಎದುರಾಗಿವೆ. ಕೆಲವರು ಟ್ರೋಲ್​ ಮಾಡಿದ್ದಾರೆ. ಡ್ರಗ್ಸ್​ (Drugs) ಬಗ್ಗೆಯೂ ಆಮಿರ್​ ಖಾನ್​ಗೆ ಪ್ರಶ್ನೆ ಕೇಳಲಾಗಿದೆ. ಅದಕ್ಕೆ ಆಮಿರ್​ ಖಾನ್​ ಉತ್ತರ ಪ್ರತಿಕ್ರಿಯೆ ನೀಡಿದ್ದಾರೆ.

ಇನ್​ಸ್ಟಾಗ್ರಾಮ್​ನಲ್ಲಿ ಆಮಿರ್​ ಖಾನ್​ ಅವರು ಲೈವ್​ ಬಂದಿದ್ದಾರೆ. ಈ ವೇಳೆ ಅಭಿಮಾನಿಗಳು ಮಾಡಿದ ಕಮೆಂಟ್​ಗಳಿಗೆ ಅವರು ಉತ್ತರಿಸಿದ್ದಾರೆ. ಲೈವ್​ನಲ್ಲಿ ಮಾತನಾಡುವಾಗ ಆಮಿರ್​ ಖಾನ್​ ಅವರ ಮುಖ ಬಾಡಿದ ಹಾಗೆ ಕಾಣಿಸಿದೆ. ಅದೇ ಕಾರಣಕ್ಕೋ ಏನೋ ಕೆಲವರು ಟ್ರೋಲ್​ ಮಾಡಿದ್ದಾರೆ. ‘ಸರ್​, ನೀವು ಡ್ರಗ್ಸ್​ ತೆಗೆದುಕೊಂಡಿದ್ದೀರಿ ಎನಿಸುತ್ತಿದೆ. ಡ್ರಗ್ಸ್​ ಸೇವಿಸುವುದನ್ನು ನಿಲ್ಲಿಸಿ’ ಎಂದು ನೆಟ್ಟಿಗರೊಬ್ಬರು ಕಮೆಂಟ್​ ಮಾಡಿದ್ದಾರೆ.

ಇದನ್ನೂ ಓದಿ: ಬೆಚ್ಚಿ ಬೀಳಿಸುತ್ತಿದೆ ಆಮಿರ್​ ಖಾನ್​ ಹೊಸ ಲುಕ್​; ಅಭಿಮಾನಿಗಳಲ್ಲಿ ಹೆಚ್ಚಿದೆ ಕೌತುಕ

ಆಮಿರ್​ ಖಾನ್​ ಅವರು ಬೇಕಿದ್ದರೆ ಈ ಕಮೆಂಟ್​ ನಿರ್ಲಕ್ಷಿಸಬಹುದಿತ್ತು. ಆದರೆ ಅವರು ಹಾಗೆ ಮಾಡಿಲ್ಲ. ಇಂಥ ನೆಗೆಟಿವ್​ ಕಮೆಂಟ್​ಗಳನ್ನು ಕೂಡ ಅವರು ಓದಿದ್ದಾರೆ. ‘ನೀವು ಏನು ಹೇಳುತ್ತಿದ್ದೀರಿ’ ಎಂದು ಆಮಿರ್​ ಖಾನ್​ ಮರುಪ್ರಶ್ನೆ ಹಾಕಿದ್ದಾರೆ. ಆ ಮೂಲಕ ತಾವು ಡ್ರಗ್ಸ್ ತೆಗೆದುಕೊಳ್ಳುವುದಿಲ್ಲ ಎಂದು ತಿಳಿಸಿದ್ದಾರೆ. ನಿಮ್ಮ ಸ್ಟೈಲಿಸ್ಟ್​ನ ಬದಲಿಸಿ ಎಂದು ಕೂಡ ಕೆಲವರು ಸಲಹೆ ನೀಡಿದ್ದಾರೆ. ‘ನನ್ನ ಸ್ಟೈಲ್​ ಭಿನ್ನವಾಗಿರುತ್ತದೆ. ಹಾಗಾಗಿ ಅನೇಕರಿಗೆ ಇಷ್ಟ ಆಗುವುದಿಲ್ಲ’ ಎಂದು ಆಮಿರ್ ಖಾನ್​ ಹೇಳಿದ್ದಾರೆ.

ಕೆಲವೇ ದಿನಗಳ ಹಿಂದೆ ಅನಂತ್​ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್​ ಅವರ ಪ್ರೀ-ವೆಡ್ಡಿಂಗ್​ ಸಮಾರಂಭ ನಡೆಯಿತು. ಆ ಸಮಾರಂಭದಲ್ಲಿ ಆಮಿರ್​ ಖಾನ್​, ಸಲ್ಮಾನ್​ ಖಾನ್​, ಶಾರುಖ್​ ಮುಂತಾದವರು ಡ್ಯಾನ್ಸ್​ ಮಾಡಿದ್ದಕ್ಕೆ ಕೆಲವರಿಂದ ಟೀಕೆ ವ್ಯಕ್ತವಾಗುತ್ತಿದೆ. ಲೈವ್​ ಸೆಷನ್​ ವೇಳೆ ಆ ಬಗ್ಗೆಯೂ ಪ್ರಶ್ನೆ ಎದುರಾಗಿದೆ. ‘ನಿಮ್ಮ ಮಗಳ ಮದುವೆಯಲ್ಲಿಯೇ ಕುಣಿಯದ ನೀವು ಅಂಬಾನಿ ಕುಟುಂಬದ ಸಮಾರಂಭದಲ್ಲಿ ಡ್ಯಾನ್ಸ್​ ಮಾಡಿದ್ದು ಯಾಕೆ’ ಎಂದು ನೆಟ್ಟಿಗರು ಪ್ರಶ್ನಿಸಿದ್ದಾರೆ.

ಇದನ್ನೂ ಓದಿ: ನಾಟು ನಾಟು ಸ್ಟೆಪ್​ ಹಾಕಲಾಗದೇ ಸೋತ ಆಮಿರ್​, ಸಲ್ಲು, ಶಾರುಖ್​; ಮುಜುಗರ ತಪ್ಪಿಸಲು ಮಾಡಿದ್ದೇನು?

‘ನಾನು ನನ್ನ ಮಗಳ ಮದುವೆಯಲ್ಲೂ ಡ್ಯಾನ್ಸ್​ ಮಾಡಿದ್ದೇನೆ’ ಎಂದು ಹೇಳಿ ಆಮಿರ್​ ಖಾನ್​ ನಕ್ಕಿದ್ದಾರೆ. ‘ಮುಖೇಶ್​ ಅವರ ಸಮಾರಂಭದಲ್ಲಿ ನಾನು ಡ್ಯಾನ್ಸ್​ ಮಾಡಿದ್ದು ಯಾಕೆಂದರೆ ಅವರು ನನ್ನ ಆತ್ಮೀಯ ಸ್ನೇಹಿತರು. ಮುಖೇಶ್​, ನೀತಾ ಮತ್ತು ಅವರ ಮಕ್ಕಳು ನಮ್ಮ ಕುಟುಂಬ ಇದ್ದಂತೆ. ಅವರ ಸಮಾರಂಭದಲ್ಲಿ ನಾನು ಡ್ಯಾನ್ಸ್​ ಮಾಡುತ್ತೇನೆ. ನಮ್ಮ ಸಮಾರಂಭದಲ್ಲಿ ಅವರು ಡ್ಯಾನ್ಸ್ ಮಾಡುತ್ತಾರೆ’ ಎಂದು ಆಮಿರ್ ಖಾನ್​ ಉತ್ತರ ನೀಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ನಿಧಿ ಸಂಗ್ರಹ ಮಾಡೋದೇ ಈ ಅಜ್ಜನ ಕಾಯಕ; ಸರ್ಕಾರಕ್ಕೆ ನೀಡಿಲ್ಲ ಎಂದ ತೋಟಯ್ಯ
ನಿಧಿ ಸಂಗ್ರಹ ಮಾಡೋದೇ ಈ ಅಜ್ಜನ ಕಾಯಕ; ಸರ್ಕಾರಕ್ಕೆ ನೀಡಿಲ್ಲ ಎಂದ ತೋಟಯ್ಯ
ಕಾಡ್ಗಿಚ್ಚಿನಿಂದ ನಾಶವಾಯ್ತು ನಂದಾ ದೇವಿ ಅರಣ್ಯದ ಅಪರೂಪದ ಸಸ್ಯ ಸಂಪತ್ತು
ಕಾಡ್ಗಿಚ್ಚಿನಿಂದ ನಾಶವಾಯ್ತು ನಂದಾ ದೇವಿ ಅರಣ್ಯದ ಅಪರೂಪದ ಸಸ್ಯ ಸಂಪತ್ತು
ತಮಿಳುನಾಡಿನ ಮಧುರೈನಲ್ಲಿ ಜಲ್ಲಿಕಟ್ಟು ಸ್ಪರ್ಧೆ ಆರಂಭ
ತಮಿಳುನಾಡಿನ ಮಧುರೈನಲ್ಲಿ ಜಲ್ಲಿಕಟ್ಟು ಸ್ಪರ್ಧೆ ಆರಂಭ
ಸಾವಿನಿಂದ ಕೂದಲೆಳೆ ಅಂತರದಲ್ಲಿ ಪಾರಾದ ಕ್ರಿಕೆಟಿಗ
ಸಾವಿನಿಂದ ಕೂದಲೆಳೆ ಅಂತರದಲ್ಲಿ ಪಾರಾದ ಕ್ರಿಕೆಟಿಗ
ಹತ್ಯೆಗೈದು ಎಲ್ಲರ ಮುಂದೆ ನಾಟಕವಾಡಿದ್ದ ಆರೋಪಿಗಳು ಸಿಕ್ಕಿಬಿದ್ದಿದ್ದೇಗೆ?
ಹತ್ಯೆಗೈದು ಎಲ್ಲರ ಮುಂದೆ ನಾಟಕವಾಡಿದ್ದ ಆರೋಪಿಗಳು ಸಿಕ್ಕಿಬಿದ್ದಿದ್ದೇಗೆ?
ವೈಭವ್ ಸೂರ್ಯವಂಶಿ ವಿಕೆಟ್ ಹಾರಿಸಿದ ಕೊಹ್ಲಿಯ ಅಪ್ಪಟ ಅಭಿಮಾನಿ
ವೈಭವ್ ಸೂರ್ಯವಂಶಿ ವಿಕೆಟ್ ಹಾರಿಸಿದ ಕೊಹ್ಲಿಯ ಅಪ್ಪಟ ಅಭಿಮಾನಿ
ಗವಿಗಂಗಾಧರೇಶ್ವರ ಸನ್ನಿಧಿಯಲ್ಲಿ ವಿಸ್ಮಯ: ಶಿವಲಿಂಗಕ್ಕೆ ಸೂರ್ಯರಶ್ಮಿ ಸ್ಪರ್ಶ
ಗವಿಗಂಗಾಧರೇಶ್ವರ ಸನ್ನಿಧಿಯಲ್ಲಿ ವಿಸ್ಮಯ: ಶಿವಲಿಂಗಕ್ಕೆ ಸೂರ್ಯರಶ್ಮಿ ಸ್ಪರ್ಶ
ತರಕಾರಿ ಮಾರಿದ ಹಣದಲ್ಲಿ ಬೆಳ್ಳಿ ಬಾಗಿಲು ಮಾಡಿಸಿದ್ದ ದಾನಜ್ಜಿ ಭೀಕರ ಹತ್ಯೆ
ತರಕಾರಿ ಮಾರಿದ ಹಣದಲ್ಲಿ ಬೆಳ್ಳಿ ಬಾಗಿಲು ಮಾಡಿಸಿದ್ದ ದಾನಜ್ಜಿ ಭೀಕರ ಹತ್ಯೆ
ಮೊದಲ ಪಂದ್ಯದಲ್ಲೇ 5 ವಿಕೆಟ್ ಉರುಳಿಸಿದ ಹೆನಿಲ್ ಪಟೇಲ್
ಮೊದಲ ಪಂದ್ಯದಲ್ಲೇ 5 ವಿಕೆಟ್ ಉರುಳಿಸಿದ ಹೆನಿಲ್ ಪಟೇಲ್
ಶ್ರೀರಾಮನಿಗೆ ಮುಸ್ಲಿಂ ಶಾಸಕ ಪೂಜೆ , ಹಿಂದೂ ಧರ್ಮದ ಬಗ್ಗೆ ಹೇಳಿದ್ದಿಷ್ಟು
ಶ್ರೀರಾಮನಿಗೆ ಮುಸ್ಲಿಂ ಶಾಸಕ ಪೂಜೆ , ಹಿಂದೂ ಧರ್ಮದ ಬಗ್ಗೆ ಹೇಳಿದ್ದಿಷ್ಟು