AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಿಜಯ್-ರಶ್ಮಿಕಾ ಮದುವೆ ಉಡುಗೆ ವಿನ್ಯಾಸ ಮಾಡಿದ್ಯಾರು? ಉಡುಗೆಯ ಬೆಲೆ ಎಷ್ಟು?

Vijay Deverakonda and Rashmika: ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಮದುವೆ ಚಿತ್ರಗಳು ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿವೆ. ಮದುವೆ ಸಮಯದಲ್ಲಿ ಇಬ್ಬರೂ ಧರಿಸಿದ್ದ ಉಡುಗೆಗಳ ಬಗ್ಗೆ ಭರಪೂರ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಇಬ್ಬರ ಉಡುಗೆಗೆ ಡಿವೈನ್ ಲುಕ್ (ದೈವೀಕಳೆ) ಇದೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಅಂದಹಾಗೆ ಈ ಇಬ್ಬರ ಮದುವೆ ಉಡುಗೆಗಳನ್ನು ವಿನ್ಯಾಸ ಮಾಡಿರುವ ವಿನ್ಯಾಸಕಿ ಒಬ್ಬರೇ ಅದುವೇ ಡಿಸೈನರ್​​ಗಳ ಡಿಸೈನರ್ ಎನಿಸಿಕೊಂಡಿರುವ ಅನಾಮಿಕಾ ಖನ್ನಾ. ಯಾರು ಈ ವಿನ್ಯಾಸಕಿ?

ವಿಜಯ್-ರಶ್ಮಿಕಾ ಮದುವೆ ಉಡುಗೆ ವಿನ್ಯಾಸ ಮಾಡಿದ್ಯಾರು? ಉಡುಗೆಯ ಬೆಲೆ ಎಷ್ಟು?
Anamika Khanna
ಮಂಜುನಾಥ ಸಿ.
|

Updated on: Feb 27, 2026 | 9:13 AM

Share

ವಿಜಯ್ ದೇವರಕೊಂಡ (Vijay Deverakonda) ಮತ್ತು ರಶ್ಮಿಕಾ ಮಂದಣ್ಣ ಮದುವೆ ಅದ್ಧೂರಿಯಾಗಿ ನಡೆದಿದೆ. ಇಬ್ಬರ ಮದುವೆಯ ಚಿತ್ರಗಳು ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿವೆ. ಮದುವೆ ಸಮಯದಲ್ಲಿ ಇಬ್ಬರೂ ಧರಿಸಿದ್ದ ಉಡುಗೆಗಳ ಬಗ್ಗೆ ಭರಪೂರ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಇಬ್ಬರ ಉಡುಗೆಗೆ ಡಿವೈನ್ ಲುಕ್ (ದೈವೀಕಳೆ) ಇದೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಅಂದಹಾಗೆ ಈ ಇಬ್ಬರ ಮದುವೆ ಉಡುಗೆಗಳನ್ನು ವಿನ್ಯಾಸ ಮಾಡಿರುವ ವಿನ್ಯಾಸಕಿ ಒಬ್ಬರೇ ಅದುವೇ ಡಿಸೈನರ್​​ಗಳ ಡಿಸೈನರ್ ಎನಿಸಿಕೊಂಡಿರುವ ಅನಾಮಿಕಾ ಖನ್ನಾ.

ಅನಾಮಿಕಾ ಖನ್ನಾ, ಭಾರತದ ಮಾತ್ರವಲ್ಲದ ಹಾಲಿವುಡ್​​ನ ಸ್ಟಾರ್ ನಟ-ನಟಿಯರು ಮತ್ತು ಪಾಪ್ ತಾರೆಗಳೊಟ್ಟಿಗೆ ಕೆಲಸ ಮಾಡುತ್ತಾರೆ. ಅವರು ವಿನ್ಯಾಸ ಮಾಡಿರುವ ಉಡುಗೆಯನ್ನು ಶಕಿರಾ, ಜೆನಿಫರ್ ಲೋಪೆಜ್, ಓಪ್ರಾ ವಿನ್​​ಫ್ರೆ, ಕೆಲ್ಲಿ ರೋಲಂಡ್, ಬಿಯಾನ್ಸೆ, ಕರ್ದಾಶಿಯನ್ಸ್ ಇನ್ನೂ ಹಲವರು ಉಟ್ಟಿದ್ದಾರೆ. ಅಂಬಾನಿ ಮದುವೆಗೆ ಬಂದ ಬಹುತೇಕ ವಿದೇಶಿ ಸೆಲೆಬ್ರಿಟಿಗಳು ಅನಾಮಿಕಾ ವಿನ್ಯಾಸ ಮಾಡಿದ್ದ ಉಡುಗೆಯನ್ನೇ ತೊಟ್ಟಿದ್ದರು. ಮಾತ್ರವಲ್ಲದೆ, ಅಂಬಾನಿ ಸೊಸೆ ರಾಧಿಕಾ ಮರ್ಚೆಂಟ್, ಹಳದಿ ಶಾಸ್ತ್ರದ ಉಡುಗೆಯನ್ನು ವಿನ್ಯಾಸ ಮಾಡಿದ್ದು ಸಹ ಅನಾಮಿಕಾ ಅವರೇ. ಮುಖೇಶ್ ಅಂಬಾನಿ ಪುತ್ರಿ ಇಶಾ ಅಂಬಾನಿ ಮೆಟ್ ಗಾಲಾದ ರೆಡ್ ಕಾರ್ಪೆಟ್ ಮೇಲೆ ಅನಾಮಿಕಾ ವಿನ್ಯಾಸ ಮಾಡಿದ್ದ ಉಡುಗೆ ತೊಟ್ಟೇ ನಡೆದಿದ್ದರು.

ಅನಾಮಿಕಾ ಖನ್ನಾ, ಭಾರತದ ಖ್ಯಾತ ವಸ್ತ್ರ ವಿನ್ಯಾಸಕಿಯರಲ್ಲಿ ಒಬ್ಬರು. ಪಶ್ಚಿಮ ಬಂಗಾಳ ಮೂಲಕ ಅನಾಮಿಕ ಮೂಲತಃ ಭರತನಾಟ್ಯ ಕಲಾವಿದೆ ಜೊತೆಗೆ ಚಿತ್ರಕಲಾ ನಿಪುಣೆ ಸಹ. ಅವರು ಫ್ಯಾಷನ್ ಡಿಸೈನ್ ಅನ್ನು ಶಾಸ್ತ್ರೀಯವಾಗಿ ಕಲಿತವರಲ್ಲ. ಆದರೆ ಅವರು ಆಸಕ್ತಿಯಿಂದ ವಸ್ತ್ರವಿನ್ಯಾಸದ ಕಡೆಗೆ ಬಂದವರು. ವಿನ್ಯಾಸಗಳನ್ನು ಅಭ್ಯಾಸ ಮಾಡುತ್ತಾ, ಸ್ವಂತ ಕಲಿಕೆಯ ಮೂಲಕ ಫ್ಯಾಷನ್ ಡಿಸೈನರ್ ಆದವರು ಅನಾಮಿಕಾ ಖನ್ನಾ.

ಇದನ್ನೂ ಓದಿ:Photo Gallery: ಮದುವೆ ಫೋಟೋ ಜೊತೆ ರಶ್ಮಿಕಾ ಮಂದಣ್ಣ ಎಮೋಷನಲ್ ಮಾತು

1990ರಲ್ಲಿ ತಮ್ಮದೇ ಫ್ಯಾಷನ್ ಬ್ರ್ಯಾಂಡ್ ಪ್ರಾರಂಭಿಸಿದ ಅನಾಮಿಕಾ ಖನ್ನಾ, ಫ್ಯಾಷನ್ ವೀಕ್​​​ನಲ್ಲಿ ತಮ್ಮ ಕಲೆಕ್ಷನ್​​ಗಳನ್ನು ಪ್ರದರ್ಶನಕ್ಕೆ ಇರಿಸಿದ ಭಾರತದ ಮೊಟ್ಟ ಮೊದಲ ಮಹಿಳಾ ಡಿಸೈನರ್ ಎನಿಸಿಕೊಂಡಿದ್ದಾರೆ. ಮಾತ್ರವಲ್ಲದೆ ಬ್ಯುಸಿನೆಸ್ ಆಫ್ ಫ್ಯಾಷನ್ (ಬಿಒಎಫ್) 500 ನಲ್ಲಿ ಸಹ ಅನಾಮಿಕಾ ಖನ್ನಾ ಕಾಣಿಸಿಕೊಂಡಿದ್ದಾರೆ. ಇವರ ವಿನ್ಯಾಸಗಳು ಅಪರೂಪದ್ದಾಗಿದ್ದು, ಭಾರತೀಯ ವಿನ್ಯಾಸಗಳನ್ನು ವಿದೇಶಿ ಉಡುಗೆ ಮಾದರಿಗಳ ಜೊತೆಗೆ ಬ್ಲೆಂಡ್ ಮಾಡಿ ಪ್ರೆಸೆಂಟ್ ಮಾಡುವ ಅಪರೂಪದ ಸ್ಟೈಲ್ ಅನ್ನು ಹೊಂದಿದ್ದಾರೆ. ಇದೇ ಕಾರಣಕ್ಕೆ ಅವರ ವಿನ್ಯಾಸಗಳು ಬಹಳ ಜನಪ್ರಿಯತೆ ಹೊಂದಿವೆ.

‘ವಾರಣಾಸಿ’ ಇವೆಂಟ್​​ನಲ್ಲಿ ಪ್ರಿಯಾಂಕಾ ಧರಿಸಿದ್ದ ಉಡುಗೆಯನ್ನು ಅನಾಮಿಕಾ ಅವರೇ ವಿನ್ಯಾಸ ಮಾಡಿದ್ದರು. ದೀಪಿಕಾ ಪಡುಕೋಣೆ, ಸೋನಂ ಕಪೂರ್, ಆಲಿಯಾ ಭಟ್, ಜಾನ್ಹವಿ ಕಪೂರ್ ಇನ್ನೂ ಹಲವು ಬಾಲಿವುಡ್ ಸೆಲೆಬ್ರಿಟಿಗಳ ಮೆಚ್ಚಿನ ವಿನ್ಯಾಸಕಿ ಅನಾಮಿಕಾ ಖನ್ನಾ. ಖ್ಯಾತ ವಿದೇಶಿ ಫ್ಯಾಷನ್ ಬ್ರ್ಯಾಂಡ್ ಆಗಿರುವ ಎಚ್​​ ಆಂಡ್ ಎಂ (H n M) ಮತ್ತು ಸ್ಯಾಕ್ಸ್ ಫಿಫ್ತ್ ಅವೆನ್ಯೂ ಜೊತೆಗೆ ಅವರು ಪಾರ್ಟನ್ ಆಗಿದ್ದು, ತಮ್ಮ ವಿನ್ಯಾಸಗಳನ್ನು ಅವರೊಟ್ಟಿಗೆ ಹಂಚಿಕೊಳ್ಳುತ್ತಾರೆ.

ಅನಾಮಿಕಾ ಖನ್ನಾ ಭಾರತದ ದುಬಾರಿ ವಿನ್ಯಾಸಕಿ. ಅವರ ಸಾಮಾನ್ಯ ವಿನ್ಯಾಸಗಳು ಸಹ 1 ಲಕ್ಷದಿಂದ 3 ಲಕ್ಷದ ವರೆಗೆ ಮಾರಾಟ ಆಗುತ್ತವೆ. ಇನ್ನು ಅವರ ವಿಶೇಷ ವಿನ್ಯಾಸದ ಉಡುಗೆಗಳಿಗೆ 50 ಲಕ್ಷದವರೆಗೆ ಬೆಲೆ ಇದೆ. ಕೋಟಿ ಬೆಲೆಯ ಉಡುಗೆಗಳು ಸಹ ಅವರ ಕಲೆಕ್ಷನ್​​ನಲ್ಲಿವೆ ಎನ್ನಲಾಗುತ್ತದೆ. ಅನಾಮಿಕಾ ಅವರದ್ದು ಎಕೆ-ಒಕೆ ಹೆಸರಿನ ಬ್ರ್ಯಾಂಡ್ ಇದೆ. ಕೊಲ್ಕತ್ತ, ಹೈದರಾಬಾದ್, ಮುಂಬೈ, ದೆಹಲಿಗಳಲ್ಲಿ ತಮ್ಮ ಔಟ್​​ಲೆಟ್​​ಗಳನ್ನು ಅನಾಮಿಕಾ ಹೊಂದಿದ್ದಾರೆ. ಈಗ ವಿಜಯ್ ಮತ್ತು ರಶ್ಮಿಕಾ ಉಡುಗೆಯ ನಿಖರ ಬೆಲೆ ತಿಳಿದಿಲ್ಲವಾದರೂ ಆಭರಣಗಳನ್ನು ಹೊರತುಪಡಿಸಿ, ಕೇವಲ ಉಡುಗೆಗೆ ಸುಮಾರು 50 ಲಕ್ಷ ರೂಪಾಯಿ ಆಗಿದೆ ಎನ್ನಲಾಗುತ್ತಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
ಬಲಗೈಯಿಂದಲೇ ಆಶೀರ್ವಾದ ಮಾಡುವುದು ಯಾಕೆ ಗೊತ್ತಾ?
ಬಲಗೈಯಿಂದಲೇ ಆಶೀರ್ವಾದ ಮಾಡುವುದು ಯಾಕೆ ಗೊತ್ತಾ?
ಇಂದು ಈ ರಾಶಿಯವರ ಹಳೆಯ ಹೂಡಿಕೆಯಿಂದ ಲಾಭ
ಇಂದು ಈ ರಾಶಿಯವರ ಹಳೆಯ ಹೂಡಿಕೆಯಿಂದ ಲಾಭ
ಮುಂದಿನ 30 ದಿನಗಳಲ್ಲಿ 56,432 ಹುದ್ದೆ ಭರ್ತಿಗೆ ಅನುಮೋದನೆ
ಮುಂದಿನ 30 ದಿನಗಳಲ್ಲಿ 56,432 ಹುದ್ದೆ ಭರ್ತಿಗೆ ಅನುಮೋದನೆ
ಯುವಕನ ಶವ ತಂದು ಹೆದ್ದಾರಿಯಲ್ಲಿ ಹಾಕಿದ್ದ ಕೇಸ್: ಕೊಲೆ ರಹಸ್ಯ ಬಿಚ್ಚಿಟ್ಟ SP
ಯುವಕನ ಶವ ತಂದು ಹೆದ್ದಾರಿಯಲ್ಲಿ ಹಾಕಿದ್ದ ಕೇಸ್: ಕೊಲೆ ರಹಸ್ಯ ಬಿಚ್ಚಿಟ್ಟ SP
ಅಧಿಕಾರ ಹಂಚಿಕೆ ತಿಕ್ಕಾಟ ಮಧ್ಯೆ ಬೆಂಗಳೂರಿನಲ್ಲಿ ರಾಬರ್ಟ್ ವಾದ್ರ ಪ್ರತ್ಯಕ್ಷ
ಅಧಿಕಾರ ಹಂಚಿಕೆ ತಿಕ್ಕಾಟ ಮಧ್ಯೆ ಬೆಂಗಳೂರಿನಲ್ಲಿ ರಾಬರ್ಟ್ ವಾದ್ರ ಪ್ರತ್ಯಕ್ಷ
9 ರೂ 34 ಪೈಸೆ ಸಾಲಕ್ಕಾಗಿ ಬೆನ್ನುಬಿದ್ದ ಬ್ಯಾಂಕ್​​ಗೆ ಚಳಿ ಬಿಡಿಸಿದ ಗ್ರಾಹಕ
9 ರೂ 34 ಪೈಸೆ ಸಾಲಕ್ಕಾಗಿ ಬೆನ್ನುಬಿದ್ದ ಬ್ಯಾಂಕ್​​ಗೆ ಚಳಿ ಬಿಡಿಸಿದ ಗ್ರಾಹಕ
ಕಾಲೇಜಿನ ಅವ್ಯವಸ್ಥೆ ಬಗ್ಗೆ ಪ್ರಶ್ನಿಸಿದ್ದಕ್ಕೆ ಪ್ರಾಂಶುಪಾಲೆ ಸಸ್ಪೆಂಡ್
ಕಾಲೇಜಿನ ಅವ್ಯವಸ್ಥೆ ಬಗ್ಗೆ ಪ್ರಶ್ನಿಸಿದ್ದಕ್ಕೆ ಪ್ರಾಂಶುಪಾಲೆ ಸಸ್ಪೆಂಡ್
ಕೋಲಾರದಲ್ಲಿ ಹಾಲು ಕಲಬೆರೆಕೆ ಅಡ್ಡೆಗಳ ಮೇಲೆ ದಾಳಿ: 8 ಜನರ ಬಂಧನ
ಕೋಲಾರದಲ್ಲಿ ಹಾಲು ಕಲಬೆರೆಕೆ ಅಡ್ಡೆಗಳ ಮೇಲೆ ದಾಳಿ: 8 ಜನರ ಬಂಧನ
ರೈಲು ಹತ್ತುವಾಗ ಜಾರಿ ಬಿದ್ದ ವೃದ್ಧನ ಜೀವ ಉಳಿಸಿದ ಮಹಿಳಾ ಕಾನ್​ಸ್ಟೆಬಲ್
ರೈಲು ಹತ್ತುವಾಗ ಜಾರಿ ಬಿದ್ದ ವೃದ್ಧನ ಜೀವ ಉಳಿಸಿದ ಮಹಿಳಾ ಕಾನ್​ಸ್ಟೆಬಲ್
ಸಂಕಷ್ಟದಿಂದ ದರ್ಶನ್ ಪಾರಾಗುತ್ತಾರಾ? ಕೋಡಿಮಠದ ಸ್ವಾಮೀಜಿ ಪ್ರತಿಕ್ರಿಯೆ
ಸಂಕಷ್ಟದಿಂದ ದರ್ಶನ್ ಪಾರಾಗುತ್ತಾರಾ? ಕೋಡಿಮಠದ ಸ್ವಾಮೀಜಿ ಪ್ರತಿಕ್ರಿಯೆ