ಒಂಟಿಯಾಗಿ ಪ್ಯಾರಿಸ್ ಸುತ್ತಾಡಿದ ಅಭಿಷೇಕ್ ಬಚ್ಚನ್; ಹೆಚ್ಚಾಯ್ತು ಡಿವೋರ್ಸ್ ಗುಮಾನಿ
ಸೆಲೆಬ್ರಿಟಿಗಳ ವಲಯದಲ್ಲಿ ಮದುವೆ ಮತ್ತು ವಿಚ್ಛೇದನ ತುಂಬ ಕಾಮನ್ ಎಂಬಂತಾಗಿದೆ. ಐಶ್ವರ್ಯಾ ರೈ ಬಚ್ಚನ್ ಹಾಗೂ ಅಭಿಷೇಕ್ ಬಚ್ಚನ್ ಕೂಡ ಈಗ ಡಿವೋರ್ಸ್ ಪಡೆಯುವ ಸಾಧ್ಯತೆ ಇದೆ ಎಂಬುದು ಗಾಸಿಪ್ ಮಂದಿಯ ವಾದ. ಅದಕ್ಕೆ ಕಾರಣ ಆಗುವಂತಹ ಕೆಲವು ಘಟನೆಗಳು ನಡೆಯುತ್ತಿವೆ. ಈ ಬಗ್ಗೆ ಇಲ್ಲಿದೆ ಇನ್ನಷ್ಟು ಮಾಹಿತಿ..
ಬಾಲಿವುಡ್ನ ಕ್ಯೂಟ್ ಕಪಲ್ ಆಗಿರುವ ಅಭಿಷೇಕ್ ಬಚ್ಚನ್ ಮತ್ತು ಐಶ್ವರ್ಯಾ ರೈ ಅವರ ಸಂಸಾರದಲ್ಲಿ ಬಿರುಕು ಮೂಡಿರಬಹುದು ಎಂಬ ಅನುಮಾನ ಇದೆ. ಅದಕ್ಕೆ ಪೂರಕ ಎನ್ನುವಂತಹ ಅನೇಕ ಸಂಗತಿಗಳು ನಡೆಯುತ್ತಿವೆ. ಡಿವೋರ್ಸ್ ಪಡೆಯಲು ಈ ದಂಪತಿ ನಿರ್ಧರಿಸಿದ್ದಾರೆ ಎಂಬ ಗಾಸಿಪ್ ಹಬ್ಬಿದೆ. ಆದರೆ ಈ ವಿಷಯದ ಬಗ್ಗೆ ಐಶ್ವರ್ಯಾ ರೈ ಅವರಾಗಲೀ, ಅಭಿಷೇಕ್ ಬಚ್ಚನ್ ಅವರಾಗಲಿ ಯಾವುದೇ ಹೇಳಿಕೆ ನೀಡಿಲ್ಲ. ಹಾಗಿದ್ದರೂ ಕೂಡ ಜನರ ಗುಮಾನಿ ಹೆಚ್ಚಾಗುತ್ತಲೇ ಇದೆ. ಅಭಿಷೇಕ್ ಬಚ್ಚನ್ ಅವರ ಇತ್ತೀಚೆಗಿನ ಸೋಶಿಯಲ್ ಮೀಡಿಯಾ ಪೋಸ್ಟ್ ಕೂಡ ಒಂದಷ್ಟು ಅನುಮಾನಗಳನ್ನು ಹುಟ್ಟುಹಾಕಿದೆ.
ಅಭಿಷೇಕ್ ಬಚ್ಚನ್ ಅವರು ಫ್ಯಾಮಿಲಿ ಮ್ಯಾನ್. ಆದರೆ ಇತ್ತೀಚಿನ ದಿನಗಳಲ್ಲಿ ಅವರು ಪತ್ನಿಯಿಂದ ಅಂತರ ಕಾಯ್ದುಕೊಳ್ಳುತ್ತಿದ್ದಾರೆ ಎಂಬುದು ಅಚ್ಚರಿಯ ಸಂಗತಿ. ಈ ಮೊದಲು ರಾಧಿಕಾ ಮರ್ಚೆಂಟ್ ಹಾಗೂ ಅನಂತ್ ಅಂಬಾನಿಯ ಮದುವೆಗೆ ಐಶ್ವರ್ಯಾ ರೈ ಮತ್ತು ಅಭಿಷೇಕ್ ಬಚ್ಚನ್ ಅವರು ಪ್ರತ್ಯೇಕವಾಗಿ ಆಗಮಿಸಿದ್ದರು. ಇದರಿಂದ ಜನರ ಅನುಮಾನ ಜಾಸ್ತಿ ಆಗಿತ್ತು. ಈಗ ಅಭಿಷೇಕ್ ಬಚ್ಚನ್ ಅವರು ಒಂಟಿಯಾಗಿ ಪ್ಯಾರಿಸ್ನಲ್ಲಿ ಸುತ್ತಾಟ ನಡೆಸಿದ್ದಾರೆ.
ಇದನ್ನೂ ಓದಿ: ‘ಐಶ್ವರ್ಯಾನ ಅಮಿತಾಭ್ ಸೊಸೆಯಂತೆ ಎಂದೂ ನೋಡಿಲ್ಲ’; ಜಯಾ ಬಚ್ಚನ್
ಒಲಂಪಿಕ್ಸ್ ನೋಡುವ ಸಲುವಾಗಿ ಅಭಿಷೇನ್ ಬಚ್ಚನ್ ಅವರು ಪ್ಯಾರಿಸ್ಗೆ ತೆರಳಿದ್ದರು. ನೀರಜ್ ಚೋಪ್ರಾ ಜಾವೆಲಿನ್ ಎಸೆತದಲ್ಲಿ ಪದಕ ಗೆದ್ದಿದ್ದನ್ನು ಅಭಿಷೇಕ್ ಬಚ್ಚನ್ ಕಣ್ತುಂಬಿಕೊಂಡಿದ್ದಾರೆ. ಪದಕ ಗೆದ್ದ ಅವರನ್ನು ಅಭಿಷೇಕ್ ತಬ್ಬಿಕೊಂಡಿದ್ದಾರೆ. ಸ್ಟೇಡಿಯಂನಲ್ಲಿ ತ್ರಿವರ್ಣ ಧ್ವಜವನ್ನು ಹಿಡಿದು ಅವರು ಸಂಭ್ರಮಿಸಿದ್ದಾರೆ. ಬಳಿಕ ಐಫೆಲ್ ಟವರ್ಗೆ ಭೇಟಿ ನೀಡಿ ಎಂಜಾಯ್ ಮಾಡಿದ್ದಾರೆ.
View this post on Instagram
ಪ್ಯಾರಿಸ್ನಲ್ಲಿ ಅಭಿಷೇಕ್ ಬಚ್ಚನ್ ಅವರು ಸುತ್ತಾಟ ನಡೆಸಿದಾಗ ಐಶ್ವರ್ಯಾ ರೈ ಇರಲಿಲ್ಲ. ಜನರು ಈ ಬಗ್ಗೆ ಖಂಡಿತವಾಗಿಯೂ ಪ್ರಶ್ನೆ ಕೇಳುತ್ತಾರೆ ಎಂಬುದು ಸ್ವತಃ ಅಭಿಷೇಕ್ ಅವರಿಗೂ ಗೊತ್ತು. ಹಾಗಾಗಿ ಸೋಶಿಯಲ್ ಮೀಡಿಯಾದಲ್ಲಿ ಈ ಫೋಟೋಗಳನ್ನು ಹಂಚಿಕೊಂಡಾಗ ಅವರು ಕಮೆಂಟ್ ಮಾಡುವ ಆಯ್ಕೆಯನ್ನು ಆಫ್ ಮಾಡಿದ್ದಾರೆ. ಜನರು ಎತ್ತಬಹುದಾದ ಡಿವೋರ್ಸ್ ವದಂತಿ ಬಗೆಗಿನ ಪ್ರಶ್ನೆಗಳಿಂದ ತಪ್ಪಿಕೊಳ್ಳಲು ಅಭಿಷೇಕ್ ಬಚ್ಚನ್ ಈ ರೀತಿ ಮಾಡಿದ್ದಾರೆ ಎಂಬುದು ನೆಟ್ಟಿಗರ ಅಭಿಪ್ರಾಯ. ಈ ಬಗ್ಗೆ ಅವರಿಂದಲೇ ಸ್ಪಷ್ಟನೆ ಸಿಗಬೇಕಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.