ಮದುವೆಗೆ ಮೊದಲೇ ಪ್ರೆಗ್ನೆಂಟ್ ಆಗಿದ್ದ ನಟಿ ಶ್ರೀದೇವಿ? ಅಂದುಕೊಂಡಿದ್ದೇ ಒಂದು ಆಗಿದ್ದೇ ಇನ್ನೊಂದು
ಶ್ರೀದೇವಿ ಅವರಿಗೆ ಇಂದು (ಆಗಸ್ಟ್ 13) ಜನ್ಮದಿನ. ಅವರು ಇಲ್ಲ ಎನ್ನುವ ನೋವು ಫ್ಯಾನ್ಸ್ಗೆ ಈಗಲೂ ಕಾಡುತ್ತದೆ. ಶ್ರೀದೇವಿ ಅವರನ್ನು ಮಗಳು ಜಾನ್ವಿ ಕಪೂರ್ ಅವರು ಸೋಶಿಯಲ್ ಮೀಡಿಯಾದಲ್ಲಿ ನೆನಪಿಸಿಕೊಂಡಿದ್ದಾರೆ. ಶ್ರೀದೇವಿ ಸಾವು ಈಗಲೂ ಅನೇಕರಿಗೆ ಶಾಕಿಂಗ್ ಎನಿಸಿದೆ.
ನಟಿ ಶ್ರೀದೇವಿ ಹಾಗೂ ನಿರ್ಮಾಪಕ ಬೋನಿ ಕಪೂರ್ ಅವರದ್ದು ಪ್ರೇಮ ವಿವಾಹ. ಅವರ ಲವ್ ಮ್ಯಾರೇಜ್ ವಿಚಾರ ಸಾಕಷ್ಟು ವಿವಾದಗಳನ್ನು ಹುಟ್ಟುಹಾಕಿದೆ. ಶ್ರೀದೇವಿ ಮದುವೆಗೆ ಮೊದಲೇ ಪ್ರೆಗ್ನೆಂಟ್ ಆಗಿದ್ದರು ಎನ್ನುವ ಸುದ್ದಿ ಇದೆ. ಇನ್ನು, ಬೋನಿ ಕಪೂರ್ ಅವರು ಮೊದಲ ಪತ್ನಿ ಜೊತೆ ಸಂಸಾರ ನಡೆಸುವಾಗಲೇ ಶ್ರೀದೇವಿಯನ್ನು ಪ್ರೀತಿಸುತ್ತಿದ್ದರು ಎಂದು ಹೇಳಲಾಗುತ್ತಿದೆ. ಇವರ ದಾಂಪತ್ಯದ ಬಗೆಗಿನ ಕೆಲವು ಅಪರೂಪದ ವಿಚಾರಗಳು ಇಲ್ಲಿವೆ.
ಶ್ರೀದೇವಿ ಹಾಗೂ ಬೋನಿ ಕಪೂರ್ ಅವರು 70ರ ದಶಕದಲ್ಲಿ ಭೇಟಿ ಆದರು. ಶ್ರೀದೇವಿ ತಮಿಳು ಸಿನಿಮಾ ನೋಡಿ ಬೋನಿ ಕಪೂರ್ ಇಂಪ್ರೆಸ್ ಆಗಿದ್ದರು. ಇಂಥ ನಟಿಯ ಜೊತೆ ಸಿನಿಮಾ ಮಾಡಬೇಕು ಎಂದು ಅವರು ಅಂದುಕೊಂಡಿದ್ದರು. ಇದಕ್ಕಾಗಿ ಅವರು ಏನು ಬೇಕಾದರೂ ಮಾಡಲು ರೆಡಿ ಇದ್ದರು.
ಬೋನಿ ಕಪೂರ್ ಅವರು ‘ಮಿಸ್ಟರ್ ಇಂಡಿಯಾ’ ಸಿನಿಮಾ ನಿರ್ಮಾಣ ಮಾಡುತ್ತಿದ್ದರು. ಈ ಚಿತ್ರಕ್ಕೆ ಶ್ರೀದೇವಿ ಅವರನ್ನು ಕಾಸ್ಟ್ ಮಾಡಬೇಕು ಎಂದು ಕನಸು ಕಂಡಿದ್ದರು. ಈ ಸಿನಿಮಾದಲ್ಲಿ ಅನಿಲ್ ಕಪೂರ್ ಮುಖ್ಯಭೂಮಿಕೆ ಮಾಡಿದ್ದರು. ಅಂದು ಶ್ರೀದೇವಿ ಅವರ ತಾಯಿ ಮಗಳ ಕಾಲ್ಶೀಟ್ಗಳನ್ನು ಮ್ಯಾನೇಜ್ ಮಾಡುತ್ತಿದ್ದರು. ವೇತನದ ಬಗ್ಗೆಯೂ ಅವರೇ ಮಾತುಕತೆ ನಡೆಸುತ್ತಿದ್ದರು. ಶ್ರೀದೇವಿ ಅಂದಿನ ಕಾಲಕ್ಕೆ ಪ್ರತಿ ಸಿನಿಮಾಗೆ ತೆಗೆದುಕೊಳ್ಳುತ್ತಿದ್ದುದು 8-8.5 ಲಕ್ಷ. ಆದರೆ, ಅವರು 10 ಲಕ್ಷ ಕೇಳಿದರು. ಬೋನಿ 11 ಲಕ್ಷ ರೂಪಾಯಿ ನೀಡಿದ್ದರು.
ಬೋನಿ ಕಪೂರ್ ಮೊದಲ ಪತ್ನಿ ಹೆಸರು ಮೋನಾ ಶೌರಿ. ಶ್ರೀದೇವಿ ಹಾಗೂ ಮೋನಾ ಮಧ್ಯೆ ಒಳ್ಳೆಯ ಗೆಳೆತನ ಇತ್ತು. ಮೋನಾ ಅವರು ಬೋನಿ ಜೊತೆ ಪ್ರೀತಿಯಲ್ಲಿ ಬೀಳುವಾಗ ಅವರಿಗೆ ಕೇವಲ 19 ವರ್ಷ. ನಂತರ ಅವರನ್ನು ತೊರೆದು ಶ್ರೀದೇವಿಯನ್ನು ಬೋನಿ ಮದುವೆ ಆದರು.
ಬೋನಿ ಕಪೂರ್ ಅವರು ಪತ್ನಿ ಮೋನಾ ಜೊತೆ ಹಾಯಾಗಿ ಸಂಸಾರ ನಡೆಸುತ್ತಿದ್ದರು. ಆಗಲೇ ಅವರಿಗೆ ಶ್ರೀದೇವಿ ಜೊತೆ ಪ್ರೀತಿ ಮೂಡಿತ್ತು. ಇಬ್ಬರೂ ಮದುವೆ ಆಗೋ ನಿರ್ಧಾರ ತೆಗೆದುಕೊಂಡರು. 1996ರಲ್ಲಿ ಮೋನಾ ಹಾಗೂ ಬೋನಿ ಬೇರೆ ಆದರು. ಅದೇ ವರ್ಷ ಬೋನಿ ಹಾಗೂ ಶ್ರೀದೇವಿ ವಿವಾಹ ಆದರು.
ಇದನ್ನೂ ಓದಿ: ಶ್ರೀದೇವಿ ನಿಧನದ ಬಗ್ಗೆ ಇರೋ ಅನುಮಾನ ದೂರವಾಗುವಂಥದ್ದಲ್ಲ; ಕಾರಣ?
ಬೋನಿ ಕಪೂರ್ನ ಮದುವೆ ಆಗುವುದಕ್ಕೂ ಮೊದಲು ಶ್ರೀದೇವಿ ಹೆಸರು ಮಿಥುನ್ ಚಕ್ರವರ್ತಿ ಜೊತೆ ತಳುಕು ಹಾಕಿಕೊಂಡಿತ್ತು. ಶ್ರೀದೇವಿ ಹಾಗೂ ಮಿಥುನ್ ಒಟ್ಟಾಗಿ ನಟಿಸಿದ್ದರು. ಇಬ್ಬರ ಮಧ್ಯೆ ಬಾಂಧವ್ಯ ಬೆಳೆಯಿತು. ಆದರೆ ಆಗಲೇ ಮಿಥುನ್ ಅವರು ಯೋಗಿತಾ ಬಾಲಿ ಜೊತೆ ವಿವಾಹ ಆಗಿದ್ದರು. ಮಿಥುನ್ ಅವರು ಸಂಕಷ್ಟಕ್ಕೆ ಸಿಲುಕಿದ್ದರು. ಯೋಗಿತಾ ಅವರು ಪತಿಯನ್ನು ಬಿಟ್ಟುಕೊಡಲ್ಲ ಎಂದಿದ್ದರು. ಆಗಲೇ ಮಿಥುನ್ ಅವರನ್ನು ತೊರೆಯುವ ನಿರ್ಧಾರವನ್ನು ಶ್ರೀದೇವಿ ಮಾಡಿದರು. ಮದುವೆ ಆದ ವ್ಯಕ್ತಿಯ ಜೊತೆ ನಾನು ಇರಲ್ಲ ಎಂದು ಶ್ರೀದೇವಿ ಹೇಳಿದ್ದರು. ಆದರೆ, ವಿಧಿ ಇದ್ದಿದ್ದೇ ಬೇರೆ. ಶ್ರೀದೇವಿ ಅವರು ಮದುವೆಗೂ ಮೊದಲೇ ಪ್ರೆಗ್ನೆಂಟ್ ಆಗಿದ್ದರು ಎನ್ನುವ ಮಾತಿದೆ. ಆದರೆ, ಇದನ್ನು ಅವರ ಒಪ್ಪುವುದಿಲ್ಲ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.