‘ಐಶ್ವರ್ಯಾನ ಅಮಿತಾಭ್ ಸೊಸೆಯಂತೆ ಎಂದೂ ನೋಡಿಲ್ಲ’; ಜಯಾ ಬಚ್ಚನ್

ಐಶ್ವರ್ಯಾ ರೈ ಬಚ್ಚನ್ ಹಾಗೂ ಅಭಿಷೇಕ್ ಬಚ್ಚನ್ ಬೇರೆ ಆಗಿದ್ದಾರೆ ಎಂದು ವರದಿ ಆಗಿದೆ. ಇವರು ಶೀಘ್ರವೇ ಡಿವೋರ್ಸ್ ಘೋಷಿಸೋ ಸಾಧ್ಯತೆ ಇದೆ. ಅಮಿತಾಭ್ ಅವರೇ ಇದಕ್ಕೆಲ್ಲ ಕಾರಣ ಎನ್ನಲಾಗಿತ್ತು. ಹೀಗಿರುವಾಗಲೇ ಈ ಮೊದಲು ಜಯಾ ಅವರು ಅಮಿತಾಭ್ ಬಚ್ಚನ್ ಬಗ್ಗೆ ನೀಡಿದ ಹೇಳಿಕೆ ಒಂದು ಈಗ ವೈರಲ್ ಆಗುತ್ತಿದೆ.

‘ಐಶ್ವರ್ಯಾನ ಅಮಿತಾಭ್ ಸೊಸೆಯಂತೆ ಎಂದೂ ನೋಡಿಲ್ಲ’; ಜಯಾ ಬಚ್ಚನ್
‘ಐಶ್ವರ್ಯಾ ಹಾಗೂ ಅಮಿತಾಭ್ ಬಚ್ಚನ್ ಸಂಬಂಧ ಎಂಥದ್ದು? ವಿವರಿಸಿದ ಜಯಾ ಬಚ್ಚನ್
Follow us
ರಾಜೇಶ್ ದುಗ್ಗುಮನೆ
|

Updated on: Aug 05, 2024 | 7:03 AM

ಅಮಿತಾಭ್ ಬಚ್ಚನ್ ಕುಟುಂಬ ಐಶ್ವರ್ಯಾ ರೈ ಅವರನ್ನು ಬಿಟ್ಟು ತಾವಷ್ಟೇ ಅನಂತ್ ಅಂಬಾನಿ ಮದುವೆಗೆ ಬಂದಿದ್ದು ಸಾಕಷ್ಟು ಚರ್ಚೆ ಹುಟ್ಟುಹಾಕಿತ್ತು. ಬಚ್ಚನ್ ಕುಟುಂಬದ ಜೊತೆ ಐಶ್ವರ್ಯಾ ಅವರ ಸಂಬಂಧ ಸರಿ ಇಲ್ಲ ಎನ್ನುವ ಮಾತು ಕೇಳಿಬಂತು. ಈಗ ಐಶ್ವರ್ಯಾ ಹಾಗೂ ಅಭಿಷೇಕ್ ಬಚ್ಚನ್ ವಿಚ್ಛೇದನ ಪಡೆಯುತ್ತಾರೆ ಎನ್ನುವ ಮಾತು ಜೋರಾಗಿದೆ. ಹೀಗಿರುವಾಗಲೇ ಐಶ್ವರ್ಯಾ ಹಾಗೂ ಅಮಿತಾಭ್ ಸಂಬಂಧ ಎಂಥದ್ದು ಎಂಬುದನ್ನು ಜಯಾ ಈ ಮೊದಲು ವಿವರಿಸಿದ್ದರು. ಇಬ್ಬರೂ ತಂದೆ-ಮಗಳಂತೆ ಇದ್ದಾರೆ ಎಂದು ಜಯಾ ಹೇಳಿದ್ದರು.

ಕಾಫಿ ವಿತ್ ಕರಣ್ ಶೋಗೆ ಜಯಾ ಬಚ್ಚನ್ ಈ ಮೊದಲು ಬಂದಿದ್ದರು. ಈ ವೇಳೆ ಅವರು ಅಮಿತಾಭ್ ಅವರನ್ನು ಹೊಗಳಿದ್ದರು. ‘ಯಾವಾಗೆಲ್ಲ ಅಮಿತಾಭ್ ಅವರು ಐಶ್ವರ್ಯಾ ಅವರನ್ನು ನೋಡುತ್ತಾರೋ ಆಗ ಖುಷಿ ಆಗುತ್ತಾರೆ. ಅವರು ಐಶ್ವರ್ಯಾ ಅವರನ್ನು ಸೊಸೆಯಂತೆ ಯಾವಾಗಲೂ ಕಾಣಲಿಲ್ಲ, ಅವರನ್ನು ಮಗಳಂತೆ ನೋಡಿಕೊಂಡರು. ಐಶ್ವರ್ಯಾ ಬರುತ್ತಿದ್ದರೆ, ಶ್ವೇತಾನೇ (ಮಗಳು) ಬರುತ್ತಿದ್ದಾರೆ ಎಂಬ ರೀತಿಯಲ್ಲಿ ನೋಡುತ್ತಾರೆ. ಶ್ವೇತಾ ಮದುವೆ ಆಗಿ ಹೋದ ಬಳಿಕ ಆ ಜಾಗವನ್ನು ಐಶ್ವರ್ಯಾ ತುಂಬಿದರು’ ಎಂದಿದ್ದರು ಜಯಾ.

ಐಶ್ವರ್ಯಾ ರೈ ಹಾಗೂ ಅವರ ಮಾವ ಅಮಿತಾಭ್ ಬಚ್ಚನ್ ಮಧ್ಯೆ ಕಲಹ ಬಂದಿದೆ ಎಂದು ವರದಿ ಆಗಿತ್ತು. ಈ ಕಾರಣಕ್ಕೆ ಐಶ್ವರ್ಯಾ ಅವರು ಪತಿ ಅಭಿಷೇಕ್ ಜೊತೆ ಜಗಳ ಮಾಡಿದ್ದಾರೆ ಎನ್ನಲಾಗಿದೆ. ಆದರೆ, ಈ ವಿಚಾರವನ್ನು ಇವರು ಒಪ್ಪಿಕೊಂಡಿಲ್ಲ. ಹಾಗಂತ ಈ ವಿಚಾರವನ್ನು ತಳ್ಳಿ ಹಾಕುತ್ತಲೂ ಇಲ್ಲ. ಇವರ ನಡೆ ಅನೇಕರಿಗೆ ಅಚ್ಚರಿ ಮೂಡಿಸಿದೆ. ಈ ಮೊದಲು ಅನಂತ್ ಅಂಬಾನಿ ಮದುವೆಗೆ ಐಶ್ವರ್ಯಾ ಹಾಗೂ ಮಗಳು ಆರಾಧ್ಯಾ ಪ್ರತ್ಯೇಕವಾಗಿ ಆಗಮಿಸಿದ್ದರು.

ಇದನ್ನೂ ಓದಿ: ನಿಜಕ್ಕೂ ಐಶ್ವರ್ಯಾ ರೈ ವಿರುದ್ಧ ದ್ವೇಷ ಸಾಧಿಸಿದ್ದರಾ ಸಲ್ಲು? ತಮ್ಮ ಕೊಟ್ಟಿದ್ದ ಸ್ಪಷ್ಟನೆಯಲ್ಲಿ ಏನಿತ್ತು?

ಮದುವೆ ಮುಗಿದ ಬಳಿಕ ಮಗಳ ಜೊತೆ ಐಶ್ವರ್ಯಾ ರೈ ವಿದೇಶಕ್ಕೆ ತೆರಳಿದ್ದಾರೆ. ಈ ಸಂದರ್ಭದಲ್ಲಿ ಅಭಿಷೇಕ್ ಇರಲಿಲ್ಲ. ಇದು ಸಾಕಷ್ಟು ಕುತೂಹಲ ಹುಟ್ಟುಹಾಕಿದೆ. ಈ ಮಧ್ಯೆ ಅಭಿಷೇಕ್ ಬಚ್ಚನ್ ಅವರು ಡಿವೋರ್ಸ್ ಬಗ್ಗೆ ಮಾಡಿದ ಪೋಸ್ಟ್​ನ ಲೈಕ್ ಮಾಡಿ ಸುದ್ದಿ ಆಗಿದ್ದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಪ್ರೀತಿಯಿಂದ ಸಂಭಾವನೆ ಕೊಟ್ಟರು: ಬಿಗ್ ಬಾಸ್ ಪೇಮೆಂಟ್ ಬಗ್ಗೆ ಗೌತಮಿ ಮಾತು
ಪ್ರೀತಿಯಿಂದ ಸಂಭಾವನೆ ಕೊಟ್ಟರು: ಬಿಗ್ ಬಾಸ್ ಪೇಮೆಂಟ್ ಬಗ್ಗೆ ಗೌತಮಿ ಮಾತು
ಅಮೆರಿಕ ಅಧ್ಯಕ್ಷ ಟ್ರಂಪ್​ಗೂ ಮೊದಲೇ ಪ್ರಮಾಣವಚನ ಸ್ವೀಕರಿಸಿದ ಉಪಾಧ್ಯಕ್ಷ
ಅಮೆರಿಕ ಅಧ್ಯಕ್ಷ ಟ್ರಂಪ್​ಗೂ ಮೊದಲೇ ಪ್ರಮಾಣವಚನ ಸ್ವೀಕರಿಸಿದ ಉಪಾಧ್ಯಕ್ಷ
ಅಮೆರಿಕದ 47ನೇ ಅಧ್ಯಕ್ಷರಾಗಿ ಡೊನಾಲ್ಡ್ ಟ್ರಂಪ್​ ಪ್ರಮಾಣ ವಚನದ ನೇರಪ್ರಸಾರ
ಅಮೆರಿಕದ 47ನೇ ಅಧ್ಯಕ್ಷರಾಗಿ ಡೊನಾಲ್ಡ್ ಟ್ರಂಪ್​ ಪ್ರಮಾಣ ವಚನದ ನೇರಪ್ರಸಾರ
ಟ್ರಂಪ್ ಪ್ರಮಾಣವಚನ ಸ್ವೀಕಾರಕ್ಕೆ ಕ್ಷಣಗಣನೆ; ವೇದಿಕೆ ಸುತ್ತ ಜನವೋ ಜನ
ಟ್ರಂಪ್ ಪ್ರಮಾಣವಚನ ಸ್ವೀಕಾರಕ್ಕೆ ಕ್ಷಣಗಣನೆ; ವೇದಿಕೆ ಸುತ್ತ ಜನವೋ ಜನ
ಚಾರ್ಮಾಡಿ ಘಾಟಿಯಲ್ಲಿ ಭಾರಿ ಕಾಡ್ಗಿಚ್ಚು: ನೂರಾರು ಎಕರೆ ಅರಣ್ಯಕ್ಕೆ ಬೆಂಕಿ
ಚಾರ್ಮಾಡಿ ಘಾಟಿಯಲ್ಲಿ ಭಾರಿ ಕಾಡ್ಗಿಚ್ಚು: ನೂರಾರು ಎಕರೆ ಅರಣ್ಯಕ್ಕೆ ಬೆಂಕಿ
ನನ್ನ ವಿರುದ್ಧ ವರಿಷ್ಠರಿಗೆ ಯಾರೇ ದೂರು ನೀಡಿದರೂ ಹೆದರಲ್ಲ: ಯತ್ನಾಳ್
ನನ್ನ ವಿರುದ್ಧ ವರಿಷ್ಠರಿಗೆ ಯಾರೇ ದೂರು ನೀಡಿದರೂ ಹೆದರಲ್ಲ: ಯತ್ನಾಳ್
ಮಂಗಳೂರು ಬ್ಯಾಂಕ್ ದರೋಡೆಕೋರರು ಸಿಕ್ಕಿಬಿದ್ದಿದ್ಹೇಗೆ?
ಮಂಗಳೂರು ಬ್ಯಾಂಕ್ ದರೋಡೆಕೋರರು ಸಿಕ್ಕಿಬಿದ್ದಿದ್ಹೇಗೆ?
ಫಿನಾಲೆ ವೀಕ್ ತಲುಪದೆ ಹೋಗಿದ್ದು ನನ್ನ ಪತಿಗೆ ನಿರಾಶೆ ತಂದಿದೆ: ಗೌತಮಿ ಜಾಧವ್
ಫಿನಾಲೆ ವೀಕ್ ತಲುಪದೆ ಹೋಗಿದ್ದು ನನ್ನ ಪತಿಗೆ ನಿರಾಶೆ ತಂದಿದೆ: ಗೌತಮಿ ಜಾಧವ್
ಮಂಜು ಮನೆಯವರ ಮಾತುಗಳು ಬೇಸರ ತರಿಸಿತು: ಗೌತಮಿ
ಮಂಜು ಮನೆಯವರ ಮಾತುಗಳು ಬೇಸರ ತರಿಸಿತು: ಗೌತಮಿ
ಟ್ರಂಪ್ ಪ್ರಮಾಣವಚನಕ್ಕೆ ಮುಂಜಾನೆಯಿಂದಲೇ ಕಿಕ್ಕಿರಿದು ಸೇರುತ್ತಿರುವ ಜನ
ಟ್ರಂಪ್ ಪ್ರಮಾಣವಚನಕ್ಕೆ ಮುಂಜಾನೆಯಿಂದಲೇ ಕಿಕ್ಕಿರಿದು ಸೇರುತ್ತಿರುವ ಜನ