‘ಹನುಮಾನ್’, ‘ಕಲ್ಕಿ 2898 ಎಡಿ’, ‘ಅನಿಮಲ್’ ಮುಂತಾದ ಸಿನಿಮಾಗಳನ್ನು ಹಿಂದಿಕ್ಕಿದ ‘ಲಾಪತಾ ಲೇಡೀಸ್’
ಕಿರಣ್ ರಾವ್ ನಿರ್ದೇಶನದ ‘ಲಾಪತಾ ಲೇಡೀಸ್’ ಸಿನಿಮಾ ಆಸ್ಕರ್ಗೆ ಎಂಟ್ರಿ ಪಡೆದಿರುವುದು ಗೊತ್ತೇ ಇದೆ. ಭಾರತದಿಂದ ಅಧಿಕೃತವಾಗಿ ಆಯ್ಕೆಯಾಗಲು ಇನ್ನೂ ಹಲವು ಸಿನಿಮಾಗಳು ರೇಸ್ನಲ್ಲಿ ಇದ್ದವು. ‘ಹನುಮಾನ್’, ‘ಅನಿಮಲ್’, ‘ಕಲ್ಕಿ 2898 ಎಡಿ’ ಮುಂತಾದ ಸಿನಿಮಾಗಳನ್ನು ಹಿಂದಿಕ್ಕಿ ‘ಲಾಪತಾ ಲೇಡೀಸ್’ ಚಿತ್ರ ಆಸ್ಕರ್ ಕಣಕ್ಕೆ ಪ್ರವೇಶ ಪಡೆದಿದೆ.
ಆಮಿರ್ ಖಾನ್ ನಿರ್ಮಾಣ ಮಾಡಿರುವ ಸಿನಿಮಾಗಳು ವಿಶ್ವಮಟ್ಟದಲ್ಲಿ ಸದ್ದು ಮಾಡುತ್ತವೆ ಎಂಬುದು ‘ಲಾಪತಾ ಲೇಡೀಸ್’ ಸಿನಿಮಾ ಮೂಲಕ ಮತ್ತೊಮ್ಮೆ ಸಾಬೀತಾಗಿದೆ. ಇತ್ತೀಚೆಗೆ ಈ ಸಿನಿಮಾ ಆಸ್ಕರ್ ಸ್ಪರ್ಧೆಗೆ ಭಾರತದಿಂದ ಅಧಿಕೃತವಾಗಿ ಆಯ್ಕೆ ಆಗಿದೆ. ಪ್ರತಿಭಾ ರಂಟಾ, ನಿತಾಂಶಿ ಗೋಯಲ್, ಸ್ಪರ್ಶ್ ಶ್ರೀವಾಸ್ತವ್, ರವಿ ಕಿಶನ್ ಮುಂತಾದ ಕಲಾವಿದರು ನಟಿಸಿದ ಈ ಸಿನಿಮಾ 2025ರ ಅಕಾಡೆಮಿ ಅವಾರ್ಡ್ಸ್ ಸ್ಪರ್ಧೆಯ ‘ಅತ್ಯುತ್ತಮ ವಿದೇಶಿ ಸಿನಿಮಾ’ ವಿಭಾಗದಲ್ಲಿ ಪೈಪೋಟಿ ನೀಡಲಿದೆ. ಬೇರೆ ಬೇರೆ ದೇಶಗಳ ಅನೇಕ ಸಿನಿಮಾಗಳ ಜೊತೆ ‘ಲಾಪತಾ ಲೇಡೀಸ್’ ಸ್ಪರ್ಧಿಸಲಿದೆ. ಈ ಅವಕಾಶ ಕಳೆದುಕೊಂಡ ಭಾರತದ ಸಿನಿಮಾಗಳ ಬಗ್ಗೆ ಇಲ್ಲಿದೆ ಮಾಹಿತಿ..
2023-2024ರಲ್ಲಿ ಅನೇಕ ಸಿನಿಮಾಗಳು ಸದ್ದು ಮಾಡಿವೆ. ಹನುಮಾನ್, ಕಲ್ಕಿ 2898 ಎಡಿ, ಅನಿಮಲ್ ಮುಂತಾದ ಸಿನಿಮಾಗಳು ಬಾಕ್ಸ್ ಆಫೀಸ್ನಲ್ಲಿ ಅಬ್ಬರಿಸಿದ್ದವು. ಆದರೆ ಆಸ್ಕರ್ ಸ್ಪರ್ಧೆಗೆ ಭಾರತದಿಂದ ಅಧಿಕೃತವಾಗಿ ಆಯ್ಕೆಯಾಗಲು ಈ ಸಿನಿಮಾಗಳಿಗೆ ಸಾಧ್ಯವಾಗಿಲ್ಲ. ಹೆಚ್ಚು ರಿಯಲಿಸ್ಟಿಕ್ ಆಗಿರುವ ‘ಲಾಪತಾ ಲೇಡೀಸ್’ ಸಿನಿಮಾಗೆ ಅವಕಾಶ ಸಿಕ್ಕಿದೆ. ಇನ್ನೂ ಹಲವು ಸಿನಿಮಾಗಳು ‘ಲಾಪತಾ ಲೇಡೀಸ್’ ಜೊತೆ ರೇಸ್ನಲ್ಲಿದ್ದವು.
ಇದನ್ನೂ ಓದಿ: ಸುಪ್ರೀಂ ಕೋರ್ಟ್ನಲ್ಲಿ ‘ಲಾಪತಾ ಲೇಡೀಸ್’ ಪ್ರದರ್ಶನ; ಆಮಿರ್ ಖಾನ್, ಕಿರಣ್ ರಾವ್ಗೆ ಗೌರವ
ಚೋಟಾ ಭೀಮ್ ಆ್ಯಂಡ್ ದಿ ಕರ್ಸ್ ಆಫ್ ದಮಯಾನ್, ಗುಡ್ಲಕ್, ಘರತ್ ಗಣಪತಿ, ಕಿಲ್, ಶ್ರೀಕಾಂತ್, ಆಟ್ಟಂ, ಚಂದು ಚಾಂಪಿಯನ್, ಕೊಟ್ಟುಕ್ಕಾಲಿ, ಮಹಾರಾಜ, ಜೋರಾಮ್, ಮೈದಾನ್, ಸ್ಯಾಮ್ ಬಹದ್ದೂರ್, ಉಲ್ಲೋಳುಕ್ಕು, ಮಂಗಳವಾರಂ, ಆಡುಜೀವಿತಂ, ಜಿಗರ್ಥಂಡ ಡಬಲ್ ಎಕ್ಸ್, ಸ್ವಾತಂತ್ರ್ಯ ವೀರ್ ಸಾವರ್ಕರ್, ತಂಗಲಾನ್, ಜಾಮಾ, ವಾಳೈ, ಸ್ವರಗಂಧರ್ವ ಸುಧೀರ್ ಫಡ್ಕೆ, ಆರ್ಟಿಕಲ್ 370, ಘಾತ್, ಆಭಾ, ಆಲ್ ವಿ ಇಮ್ಯಾಜಿನ್ ಆ್ಯಸ್ ಲೈಟ್ ಮುಂತಾದ ಸಿನಿಮಾಗಳು ಸ್ಪರ್ಧೆಯಲ್ಲಿದ್ದವು.
ಇದನ್ನೂ ಓದಿ: ಆಸ್ಕರ್ ಎಂಟ್ರಿ ಬಳಿಕ ‘ಲಾಪತಾ ಲೇಡೀಸ್’ ನಿರ್ದೇಶಕಿ ಕಿರಣ್ ರಾವ್ ಮೊದಲ ಪ್ರತಿಕ್ರಿಯೆ ಏನು?
‘ಲಾಪತಾ ಲೇಡೀಸ್’ ಸಿನಿಮಾದಲ್ಲಿ ಅನೇಕ ಗಂಭೀರವಾದ ವಿಚಾರಗಳನ್ನು ಹಾಸ್ಯದ ದಾಟಿಯಲ್ಲಿ ಹೇಳಲಾಗಿದೆ. ಹೆಣ್ಣು ಮಕ್ಕಳಿಗೆ ಶಿಕ್ಷಣ ನೀಡುವುದರ ಅವಶ್ಯಕತೆಯ ಬಗ್ಗೆ ಈ ಸಿನಿಮಾ ಬೆಳಕು ಚೆಲ್ಲುತ್ತದೆ. ಹೊಸ ಕಲಾವಿದರ ನಟನೆಗೆ ಪ್ರೇಕ್ಷಕರು ಫುಲ್ ಮಾರ್ಕ್ಸ್ ನೀಡಿದ್ದಾರೆ. ನೆಟ್ಫ್ಲಿಕ್ಸ್ ಒಟಿಟಿಯಲ್ಲಿ ಈ ಸಿನಿಮಾವನ್ನು ವೀಕ್ಷಿಸಬಹುದು. 2025ನೇ ಸಾಲಿನ ಆಸ್ಕರ್ ಪ್ರಶಸ್ತಿಯಲ್ಲಿ ಭಾರತಕ್ಕೆ ಈ ಚಿತ್ರದಿಂದ ಅಕಾಡೆಮಿ ಅವಾರ್ಡ್ ಸಿಗಲಿ ಎಂದು ಎಲ್ಲರೂ ಆಶಿಸುತ್ತಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.