AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಆಸ್ಕರ್​ ಪ್ರಶಸ್ತಿ ನೀಡುವ ಸಂಸ್ಥೆಗೂ ಇಷ್ಟವಾಯ್ತು ‘3 ಈಡಿಯಟ್ಸ್​’ ಸಿನಿಮಾದ ಈ ದೃಶ್ಯ

ಆಮಿರ್​ ಖಾನ್​, ಆರ್​. ಮಾಧವನ್​, ಶರ್ಮನ್​ ಜೋಶಿ, ಕರೀನಾ ಕಪೂರ್​ ಮುಂತಾದವರು ನಟಿಸಿದ ‘3 ಈಡಿಯಟ್ಸ್​’ ಸಿನಿಮಾದ ಒಂದು ದೃಶ್ಯವನ್ನು ‘ಅಕಾಡೆಮಿ’ ಹಂಚಿಕೊಂಡಿದೆ. ಆಮಿರ್​ ಖಾನ್​ ಫ್ಯಾನ್ಸ್​ಗೆ ಇದು ಹೆಮ್ಮೆ ತಂದಿದೆ. ಈ ದೃಶ್ಯವನ್ನು ‘ಅಕಾಡೆಮಿ’ ಗುರುತಿಸಿದ್ದರ ಬಗ್ಗೆ ನೆಟ್ಟಿಗರು ವಿವಿಧ ರೀತಿಯಲ್ಲಿ ಕಮೆಂಟ್ ಮಾಡಿದ್ದಾರೆ. ಸೋಶಿಯಲ್​ ಮೀಡಿಯಾದಲ್ಲಿ ಇದು ವೈರಲ್​ ಆಗುತ್ತಿದೆ.

ಆಸ್ಕರ್​ ಪ್ರಶಸ್ತಿ ನೀಡುವ ಸಂಸ್ಥೆಗೂ ಇಷ್ಟವಾಯ್ತು ‘3 ಈಡಿಯಟ್ಸ್​’ ಸಿನಿಮಾದ ಈ ದೃಶ್ಯ
3 ಈಡಿಯಟ್ಸ್​
ಮದನ್​ ಕುಮಾರ್​
|

Updated on: Jul 12, 2024 | 6:38 PM

Share

ನಟ ಆಮಿರ್​ ಖಾನ್​ ಅವರು ತಮ್ಮ ವೃತ್ತಿಜೀವನದಲ್ಲಿ ಗಮನಾರ್ಹ ಸಿನಿಮಾಗಳನ್ನು ನೀಡಿದ್ದಾರೆ. ಅವರ ಪ್ರತಿ ಸಿನಿಮಾದಲ್ಲಿ ಒಂದಿಲ್ಲೊಂದು ವಿಶೇಷತೆ ಇದ್ದೇ ಇರುತ್ತದೆ. 2009ರಲ್ಲಿ ಬಿಡುಗಡೆ ಆದ ‘3 ಈಡಿಯಟ್ಸ್​’ ಸಿನಿಮಾ ಸೂಪರ್​ ಹಿಟ್​ ಆಗಿದ್ದೂ ಅಲ್ಲದೇ, ವಿಮರ್ಶಕರಿಂದ ಮೆಚ್ಚುಗೆ ಪಡೆದುಕೊಂಡಿತ್ತು. ರಾಜ್​ಕುಮಾರ್​ ಹಿರಾನಿ ನಿರ್ದೇಶನ ಮಾಡಿದ್ದ ಆ ಸಿನಿಮಾ ಈಗಲೂ ಅಭಿಮಾನಿಗಳ ಫೇವರಿಟ್​ ಲಿಸ್ಟ್​ನಲ್ಲಿ ಇದೆ. ಅಲ್ಲದೇ, ಆಸ್ಕರ್​ ಪ್ರಶಸ್ತಿ ನೀಡುವ ‘ಅಕಾಡೆಮಿ ಆಫ್​ ಮೋಷನ್​ ಪಿಕ್ಚರ್ಸ್​ ಆರ್ಟ್ಸ್​ ಆ್ಯಂಡ್​ ಸೈನ್ಸಸ್​’ ಸಂಸ್ಥೆಯು ಈ ಸಿನಿಮಾದ ಒಂದು ದೃಶ್ಯವನ್ನು ಮೆಚ್ಚಿಕೊಂಡಿದೆ.

‘3 ಈಡಿಯಟ್ಸ್​’ ಸಿನಿಮಾದಲ್ಲಿ ಶಿಕ್ಷಣ ವ್ಯವಸ್ಥೆಯ ಬಗ್ಗೆ ವಿಡಂಬನೆ ಇದೆ. ಆ ಚಿತ್ರದಲ್ಲಿ ಬರುವ ಒಂದು ಎಕ್ಸಾಂ ದೃಶ್ಯವನ್ನು ‘ಅಕಾಡೆಮಿ’ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ಪರೀಕ್ಷೆ ನಡೆಯುತ್ತಿರುವಾಗ ಆಮಿರ್​ ಖಾನ್​, ಶರ್ಮನ್​ ಜೋಶಿ ಮತ್ತು ಆರ್​. ಮಾಧವನ್​ ಅವರು 30 ನಿಮಷ ತಡವಾಗಿ ಎಕ್ಸಾಂ ಹಾಲ್​ಗೆ ಬರುತ್ತಾರೆ. ಅವಧಿ ಮುಗಿದ ಬಳಿಕವೂ ಪರೀಕ್ಷೆ ಬರುತ್ತಾರೆ. ಹಾಗಾಗಿ ಉತ್ತರ ಪತ್ರಿಕೆಯನ್ನು ಸ್ವೀಕರಿಸಲು ಮೇಲ್ವಿಚಾರಕರು ಒಪ್ಪುವುದಿಲ್ಲ. ಆಗ ಆಮಿರ್ ಖಾನ್​ ಒಂದು ಉಪಾಯ ಮಾಡ್ತಾರೆ. ‘ನಿಮಗೆ ನಾವು ಯಾರು ಅಂತ ಗೊತ್ತಾ? ನಮ್ಮ ರೋಲ್​ ನಂಬರ್​ ಗೊತ್ತಾ’ ಎಂದು ಎಚ್ಚರಿಕೆ ನೀಡುವ ಧ್ವನಿಯಲ್ಲಿ ಪ್ರಶ್ನಿಸುತ್ತಾರೆ. ‘ಇಲ್ಲ’ ಎಂಬ ಉತ್ತರ ಮೇಲ್ವಿಚಾರಕರ ಕಡೆಯಿಂದ ಬರುತ್ತದೆ. ಆಗ ಬೇರೆಯವರ ಉತ್ತರ ಪತ್ರಿಕೆಗಳ ಜೊತೆಗೆ ತಮ್ಮ ಉತ್ತರ ಪತ್ರಿಕೆಯನ್ನು ಮಿಕ್ಸ್​ ಮಾಡಿ ಈ ಸ್ನೇಹಿತರು ಓಡಿ ಹೋಗುತ್ತಾರೆ. ಈ ಸೀನ್​ ಸಖತ್​ ಫನ್ನಿ ಆಗಿದೆ.

View this post on Instagram

A post shared by The Academy (@theacademy)

‘ಇಲ್ಲಿ ರಾಂಚೋ ಸಮಯಪ್ರಜ್ಞೆ ಶೇಕಡ ನೂರರಷ್ಟಿದೆ’ ಎಂಬ ಕ್ಯಾಪ್ಷನ್​ನೊಂದಿಗೆ ಈ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ. ಜೊತೆಗೆ ಸಿನಿಮಾದ ಬಗ್ಗೆ ವಿವರಗಳನ್ನು ಬರೆಯಲಾಗಿದೆ. ಇದು ಆಮಿರ್​ ಖಾನ್​ ಅಭಿಮಾನಿಗಳಿಗೆ ಖುಷಿ ನೀಡಿದೆ. ‘ಈ ಸಿನಿಮಾಗೆ ಆಸ್ಕರ್​ ಪಡೆಯುವ ಅರ್ಹತೆ ಇತ್ತು’ ಎಂದು ನೆಟ್ಟಿಗರು ಕಮೆಂಟ್​ ಮಾಡಿದ್ದಾರೆ. ‘ಆಮಿರ್​ ಖಾನ್​ ಸಿನಿಮಾಗಳು ಯಾವಾಗಲೂ ಚೆನ್ನಾಗಿರುತ್ತವೆ’, ‘ಬಾಲಿವುಡ್​ನಲ್ಲಿ ನಿರ್ಮಾಣವಾದ ಅತ್ಯುತ್ತಮ ಸಿನಿಮಾಗಳಲ್ಲಿ ಇದು ಕೂಡ ಒಂದು’ ಎಂಬ ಕಮೆಂಟ್​ಗಳು ಕೂಡ ಬಂದಿವೆ.

ಇದನ್ನೂ ಓದಿ: ಆಮಿರ್​ ಖಾನ್​ ಮಗ ಜುನೈದ್​ ಖಾನ್​ಗೆ ಶ್ರೀದೇವಿಯ 2ನೇ ಮಗಳು ಖುಷಿ ಕಪೂರ್​ ಜೋಡಿ

ಈ ಮೊದಲು ‘ಅಕಾಡೆಮಿ’ ಇನ್​ಸ್ಟಾಗ್ರಾಮ್​ ಖಾತೆಯಿಂದ ‘ಕಳಂಕ್​’, ‘ಬಾಜಿರಾವ್​ ಮಸ್ತಾನಿ’ ಸಿನಿಮಾಗಳ ದೃಶ್ಯಗಳನ್ನು ಕೂಡ ಹಂಚಿಕೊಳ್ಳಲಾಗಿತ್ತು. ‘ಭಾರತದ ಸಿನಿಮಾಗಳ ಬಗ್ಗೆ ಅಕಾಡೆಮಿಗೆ ಗೀಳು ಹಿಡಿದಿದೆ’ ಎಂದು ನೆಟ್ಟಿಗರೊಬ್ಬರು ಕಮೆಂಟ್​ ಮಾಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us
ಮದನ್​ ಕುಮಾರ್​
ಮದನ್​ ಕುಮಾರ್​

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
ದೇವನಹಳ್ಳಿ ಬಳಿ ಕಾರಿಗೆ ಲಾರಿ ಡಿಕ್ಕಿ; ಬಿಜೆಪಿ ಮುಖಂಡ ಶಿವಕುಮಾರ್ ಸಾವು!
ದೇವನಹಳ್ಳಿ ಬಳಿ ಕಾರಿಗೆ ಲಾರಿ ಡಿಕ್ಕಿ; ಬಿಜೆಪಿ ಮುಖಂಡ ಶಿವಕುಮಾರ್ ಸಾವು!
ಕಬ್ಬು ಬೆಳೆಗಾರರ ಅಹೋರಾತ್ರಿ ಧರಣಿ: ಹೆದ್ದಾರಿಯಲ್ಲೇ ಅಡುಗೆ, ಊಟ-ನಿದ್ದೆ!
ಕಬ್ಬು ಬೆಳೆಗಾರರ ಅಹೋರಾತ್ರಿ ಧರಣಿ: ಹೆದ್ದಾರಿಯಲ್ಲೇ ಅಡುಗೆ, ಊಟ-ನಿದ್ದೆ!
ಇಂದು ಕೂಷ್ಮಾಂಡ ದೇವಿಯ ಆರಾಧನೆಯಿಂದ ಚೈತನ್ಯ ವೃದ್ಧಿ
ಇಂದು ಕೂಷ್ಮಾಂಡ ದೇವಿಯ ಆರಾಧನೆಯಿಂದ ಚೈತನ್ಯ ವೃದ್ಧಿ
ಮುಖ್ಯರಸ್ತೆಗೆ ವೈದ್ಯಕೀಯ ತ್ಯಾಜ್ಯ ಸುರಿದ ಕ್ಲಿನಿಕ್‌ಗೆ 15 ಸಾವಿರ ರೂ.ದಂಡ
ಮುಖ್ಯರಸ್ತೆಗೆ ವೈದ್ಯಕೀಯ ತ್ಯಾಜ್ಯ ಸುರಿದ ಕ್ಲಿನಿಕ್‌ಗೆ 15 ಸಾವಿರ ರೂ.ದಂಡ
ಹನಿಟ್ರ್ಯಾಪ್ ವಿಡಿಯೋ ಭೀತಿ: ಮಾಧ್ಯಮಗಳ ವಿರುದ್ಧ ಮಾಜಿ ಸಿಎಂ ನಿರ್ಬಂಧಕಾಜ್ಞೆ
ಹನಿಟ್ರ್ಯಾಪ್ ವಿಡಿಯೋ ಭೀತಿ: ಮಾಧ್ಯಮಗಳ ವಿರುದ್ಧ ಮಾಜಿ ಸಿಎಂ ನಿರ್ಬಂಧಕಾಜ್ಞೆ
ಚಿತ್ರದುರ್ಗಕ್ಕೆ ಸುದೀಪ್ ಭೇಟಿ: ಚಪ್ಪಲಿ ಧರಿಸದೇ ನಡೆದುಬಂದ ನಟ
ಚಿತ್ರದುರ್ಗಕ್ಕೆ ಸುದೀಪ್ ಭೇಟಿ: ಚಪ್ಪಲಿ ಧರಿಸದೇ ನಡೆದುಬಂದ ನಟ
ಸೌಜನ್ಯ ಪ್ರಕರಣ ಮರು ತನಿಖೆ ಬಗ್ಗೆ ಎಸ್​​ಐಟಿಯಿಂದ ಹೈವೋಲ್ಟೇಜ್ ಸಭೆ
ಸೌಜನ್ಯ ಪ್ರಕರಣ ಮರು ತನಿಖೆ ಬಗ್ಗೆ ಎಸ್​​ಐಟಿಯಿಂದ ಹೈವೋಲ್ಟೇಜ್ ಸಭೆ
ಗಗನ್ ಬಳಿ ಕ್ಷಮೆ ಕೇಳಿದ ಗಾನವಿ, ಇಬ್ಬರ ನಡುವೆ ಭಾವುಕ ಚರ್ಚೆ: ವಿಡಿಯೋ
ಗಗನ್ ಬಳಿ ಕ್ಷಮೆ ಕೇಳಿದ ಗಾನವಿ, ಇಬ್ಬರ ನಡುವೆ ಭಾವುಕ ಚರ್ಚೆ: ವಿಡಿಯೋ
ಸುದೀಪ್ ಅನ್ನೇ ಎಳೆದಾಡಲು ಅಭಿಮಾನಿಗಳು: ವಿಡಿಯೋ ನೋಡಿ
ಸುದೀಪ್ ಅನ್ನೇ ಎಳೆದಾಡಲು ಅಭಿಮಾನಿಗಳು: ವಿಡಿಯೋ ನೋಡಿ
ಗಮನಸೆಳೆದ ಮೈ ಹೋಮ್ ವ್ಯೋಮ: ಅಪಾರ್ಟ್​​​ಮೆಂಟ್​​ ಖರೀದಿಗೆ ಮುಗಿಬಿದ್ದ ಜನ
ಗಮನಸೆಳೆದ ಮೈ ಹೋಮ್ ವ್ಯೋಮ: ಅಪಾರ್ಟ್​​​ಮೆಂಟ್​​ ಖರೀದಿಗೆ ಮುಗಿಬಿದ್ದ ಜನ