AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಾಜ್ಯ ಸರ್ಕಾರಿ ಪಿಂಚಣಿದಾರರಿಗೆ ಸಿಹಿ ಸುದ್ದಿ:‘ಸಂಧ್ಯಾ ಕಿರಣ’ ಯೋಜನೆಗೆ ಸಂಪುಟ ಒಪ್ಪಿಗೆ, ಏನಿದು ಸ್ಕೀಮ್?

ವಯಸ್ಸಾದ ಕಾಲದಲ್ಲಿ ಕಾಡುವ ಅನಾರೋಗ್ಯ (Disease) ಹಾಗೂ ಹೆಚ್ಚುತ್ತಿರುವ ಆಸ್ಪತ್ರೆ ವೆಚ್ಚಗಳಿಂದ ಕಂಗೆಟ್ಟಿರುವ ರಾಜ್ಯದ ನಿವೃತ್ತ ಸರ್ಕಾರಿ ನೌಕರರಿಗೆ (Retired Government Worker) ಭರ್ಜರಿ ಸಿಹಿಸುದ್ದಿಯೊಂದು ಸಿಕ್ಕಿದೆ. ರಾಜ್ಯ ಸರಕಾರಿ ನೌಕರರಿಗೆ 'ಸಂಧ್ಯಾ ಕಿರಣ' ನಗದು ರಹಿತ ಚಿಕಿತ್ಸೆ ಸೌಲಭ್ಯ ಯೋಜನೆಗೆ ಸಚಿವ ಸಂಪುಟ ಅನುಮೋದನೆ ನೀಡಿದೆ. ಹಾಗಾದ್ರೆ, ಏನಿದು ಸಂಧ್ಯಾ ಕಿರಣ ಯೋಜನೆ? ಎನ್ನುವ ಡಿಟೇಲ್ಸ್ ಇಲ್ಲಿದೆ.

ರಾಜ್ಯ ಸರ್ಕಾರಿ ಪಿಂಚಣಿದಾರರಿಗೆ ಸಿಹಿ ಸುದ್ದಿ:‘ಸಂಧ್ಯಾ ಕಿರಣ’ ಯೋಜನೆಗೆ ಸಂಪುಟ ಒಪ್ಪಿಗೆ, ಏನಿದು ಸ್ಕೀಮ್?
ವಿಧಾನಸೌಧImage Credit source: Getty Image
ರಮೇಶ್ ಬಿ. ಜವಳಗೇರಾ
|

Updated on: Aug 13, 2026 | 10:26 PM

Share

ಬೆಂಗಳೂರು, (ಆಗಸ್ಟ್ 13): “ಸಂಧ್ಯಾ ಕಿರಣ” ವಂತಿಕೆ ಆಧಾರಿತ ನಗದುರಹಿತ ಆರೋಗ್ಯ ಯೋಜನೆಗೆ (sandhya kiran health scheme) ಕರ್ನಾಟಕ ಸಚಿವ ಸಂಪುಟ (karnataka Cabinet) ಅನುಮೋದನೆ. ರಾಜ್ಯ ಸರ್ಕಾರಿ ಪಿಂಚಣಿದಾರರು ಹಾಗೂ ಅವರ ಅರ್ಹ ಅವಲಂಬಿತರಿಗೆ (Retired Government Worker) ಸಮಗ್ರ ಆರೋಗ್ಯ ಭದ್ರತೆ ಒದಗಿಸುವ ಉದ್ದೇಶದಿಂದ, AB-ArK ಯೋಜನೆಯ ನಿಯಮಾವಳಿಗಳನ್ವಯ “ಸಂಧ್ಯಾ ಕಿರಣ” ವಂತಿಕೆ ನಗದುರಹಿತ ಆರೋಗ್ಯ ಯೋಜನೆಯನ್ನು ಜಾರಿಗೊಳಿಸಲು ಡಿಕೆ ಶಿವಕುಮಾರ್ (DK Shivakumar) ಸಂಪುಟ ಇಂದು (ಆಗಸ್ಟ್ 13) ಒಪ್ಪಿಗೆ ನೀಡಿದೆ.

ಯಾರಿಗೆ ಅನ್ವಯ

70 ವರ್ಷಕ್ಕಿಂತ ಕಡಿಮೆ ವಯಸ್ಸಿನ ರಾಜ್ಯ ಸರ್ಕಾರಿ ಪಿಂಚಣಿದಾರರು, ಕುಟುಂಬ ಪಿಂಚಣಿದಾರರು ಹಾಗೂ ಅರ್ಹ ಅವಲಂಬಿತ ದಿವ್ಯಾಂಗ ಮಕ್ಕಳಿಗಾಗಿ “ಸಂಧ್ಯಾ ಕಿರಣ” ವಂತಿಕೆ ಆಧಾರಿತ ನಗದುರಹಿತ ಆರೋಗ್ಯ ಯೋಜನೆ ಅನ್ವಯವಾಗಲಿದೆ. ಇನ್ನು ಈ ಯೋಜನೆಯು ರಾಜ್ಯ ಸರ್ಕಾರಿ ಪಿಂಚಣಿದಾರರು ಮತ್ತು ಅವರ ಕುಟುಂಬಗಳಿಗೆ ಗುಣಮಟ್ಟದ, ಕೈಗೆಟುಕುವ ಹಾಗೂ ನಗದುರಹಿತ ಆರೋಗ್ಯ ಸೇವೆಯನ್ನು ಖಚಿತಪಡಿಸುವ ಮಹತ್ವದ ಸಾಮಾಜಿಕ ಭದ್ರತಾ ಕ್ರಮವಾಗಿದ್ದು, ಆರೋಗ್ಯ ವೆಚ್ಚದಿಂದ ಉಂಟಾಗಬಹುದಾದ ಆರ್ಥಿಕ ಹೊರೆಯನ್ನು ಕಡಿಮೆ ಮಾಡಲು ಸಹಕಾರಿಯಾಗಲಿದೆ.

ಇದನ್ನೂ ಓದಿ: ಹೊಸ ಕಾಯ್ದೆಯೊಂದಿಗೆ ಕರ್ನಾಟಕದಲ್ಲಿ RSS ಚಟುವಟಿಕೆಗೆ ಬ್ರೇಕ್ ಹಾಕಲು ಸರ್ಕಾರ ಮುಂದಾಗಿದ್ಯಾ?

ಯೋಜನೆಯ ಪ್ರಮುಖ ಅಂಶಗಳು

  • ಪ್ರಾರಂಭಿಕ ಹಂತದಲ್ಲಿ 70 ವರ್ಷಕ್ಕಿಂತ ಕಡಿಮೆ ವಯಸ್ಸಿನ ಸುಮಾರು 3.11 ಲಕ್ಷ ರಾಜ್ಯ ಸರ್ಕಾರಿ ಪಿಂಚಣಿದಾರರು ಹಾಗೂ ಅವರ ಅರ್ಹ ಅವಲಂಬಿತರನ್ನು ಒಳಗೊಂಡಂತೆ ಒಟ್ಟು ಸುಮಾರು 4.93 ಲಕ್ಷ ಫಲಾನುಭವಿಗಳು ಯೋಜನೆಯ ವ್ಯಾಪ್ತಿಗೆ ಬರಲಿದ್ದಾರೆ.
  • ಯೋಜನೆಯು ಸ್ವಯಂಪ್ರೇರಿತ ವಂತಿಕೆ ಆಧಾರಿತ ನಗದುರಹಿತ ಆರೋಗ್ಯ ಯೋಜನೆಯಾಗಿದ್ದು, ಅರ್ಹ ಕುಟುಂಬಕ್ಕೆ ವರ್ಷಕ್ಕೆ ಗರಿಷ್ಠ 25.00 ಲಕ್ಷದವರೆಗೆ ಫ್ಲೋಟರ್ ಆಧಾರದ ಮೇಲೆ ದ್ವಿತೀಯ, ತೃತೀಯ ಹಾಗೂ ತುರ್ತು ಚಿಕಿತ್ಸಾ ಸೌಲಭ್ಯಗಳನ್ನು ನಗದುರಹಿತವಾಗಿ ಪಡೆಯಲು ಅವಕಾಶ ಕಲ್ಪಿಸಲಾಗುತ್ತದೆ.
  • ಯೋಜನೆಯಡಿ AB-ArK ಅಡಿಯಲ್ಲಿ ಅನ್ವಯವಾಗುವ ಆರೋಗ್ಯ ಪ್ರಯೋಜನ ಪ್ಯಾಕೇಜ್‌ಗಳು ಮತ್ತು ಪರಿಷ್ಕೃತ ಪ್ಯಾಕೇಜ್ ದರಗಳು ಅನ್ವಯವಾಗಲಿವೆ. ಯೋಜನೆಯಡಿ ಫಲಾನುಭವಿಗಳು ನೋಂದಾಯಿತ/ಅನುಮೋದಿತ ಆಸ್ಪತ್ರೆಗಳಲ್ಲಿ ನಗದುರಹಿತ ಚಿಕಿತ್ಸಾ ಸೌಲಭ್ಯ ಪಡೆಯಬಹುದಾಗಿದೆ.
  • ನಿಯಮಿತ ಪಿಂಚಣಿದಾರರು ಮೂಲ ಪಿಂಚಣಿಯ ಶೇ.1.25ರಷ್ಟು ಹಾಗೂ ಕುಟುಂಬ ಪಿಂಚಣಿದಾರರು ಮೂಲ ಕುಟುಂಬ ಪಿಂಚಣಿಯ ಶೇ.0.75ರಷ್ಟು ವಂತಿಕೆಯನ್ನು ಪಾವತಿಸಬೇಕಾಗುತ್ತದೆ.

ಆರ್ಥಿಕ ಪರಿಣಾಮ (ಚಿಕಿತ್ಸಾ ವೆಚ್ಚ):

ಯೋಜನೆಯಡಿ ವಾರ್ಷಿಕವಾಗಿ ಅಂದಾಜು 117 ಕೋಟಿ ರೂ. ವಂತಿಕೆ ಸಂಗ್ರಹವಾಗುವ ನಿರೀಕ್ಷೆಯಿದ್ದು, ವಾರ್ಷಿಕ ಚಿಕಿತ್ಸಾ ವೆಚ್ಚವು ಸುಮಾರು 81.75 ಕೋಟಿ ರೂ. ಎಂದು ಅಂದಾಜಿಸಲಾಗಿದೆ. AB-ArK ನೀತಿಯನ್ವಯ, ಚಿಕಿತ್ಸಾ ವೆಚ್ಚದ 70% ಫಲಾನುಭವಿಗಳ ವಂತಿಕೆಯಿಂದ ಮತ್ತು 30% ರಾಜ್ಯ ಸರ್ಕಾರದ ಪಾಲಿನಿಂದ ಭರಿಸಲಾಗುತ್ತದೆ. ಈ ಹಿನ್ನೆಲೆಯಲ್ಲಿ ವಾರ್ಷಿಕವಾಗಿ ಸುಮಾರು 57.22 ಕೋಟಿ ರೂ. ಫಲಾನುಭವಿಗಳ ಪಾಲು ಹಾಗೂ 24.53 ಕೋಟಿ ರೂ. ರಾಜ್ಯ ಸರ್ಕಾರದ ಪಾಲು ಇರಲಿದೆ.

ಯೋಜನೆಯ ದೀರ್ಘಕಾಲೀನ ಆರ್ಥಿಕ ಸ್ಥಿರತೆ ಮತ್ತು ನಿಧಿಯ ಸಮರ್ಪಕ ನಿರ್ವಹಣೆಯನ್ನು ಖಚಿತಪಡಿಸಿಕೊಳ್ಳಲು, corpus ಬಳಕೆ ಪ್ರಮಾಣವು ಶೇ.85ಕ್ಕಿಂತ ಹೆಚ್ಚಾದಲ್ಲಿ ವಂತಿಕೆ ದರವನ್ನು 0.05% (5 basis points) ರಷ್ಟು ಸ್ವಯಂಚಾಲಿತವಾಗಿ ಹೆಚ್ಚಿಸುವ ವ್ಯವಸ್ಥೆಯನ್ನು ಅಳವಡಿಸಲು ಪ್ರಸ್ತಾಪಿಸಲಾಗಿದೆ.

“ಸಂಧ್ಯಾ ಕಿರಣ” ಯೋಜನೆಯನ್ನು ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ (SAST) ಮೂಲಕ ಯೋಜನಾ ಅನುಷ್ಠಾನ ಸಂಸ್ಥೆಯಾಗಿ ಜಾರಿಗೊಳಿಸಲಾಗುವುದು. ಫಲಾನುಭವಿಗಳ ನೋಂದಣಿ, ವಂತಿಕೆ ಸಂಗ್ರಹ, ಆಸ್ಪತ್ರೆಗಳ ಜಾಲ, ನಗದುರಹಿತ ಚಿಕಿತ್ಸಾ ಸೌಲಭ್ಯ, ಕ್ಷೇಮ್ ನಿರ್ವಹಣೆ ಹಾಗೂ ಯೋಜನೆಯ ಮೇಲ್ವಿಚಾರಣೆಯನ್ನು AB-ArK ವ್ಯವಸ್ಥೆಯೊಂದಿಗೆ ಸಮನ್ವಯಗೊಳಿಸಿ ಕೈಗೊಳ್ಳಲಾಗುತ್ತದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us