ಆಸ್ಕರ್​ ಅಕಾಡೆಮಿಯ ಸದಸ್ಯತ್ವ ಪಡೆಯಲು ರಾಜಮೌಳಿಗೆ ಆಹ್ವಾನ; ಸಿಗೋ ಸವಲತ್ತುಗಳೇನು?

‘ಆರ್​ಆರ್​ಆರ್’ ಚಿತ್ರದ ಗೆಲುವಿನ ಬಳಿಕ ರಾಜಮೌಳಿ ಅವರ ಖ್ಯಾತಿ ಹೆಚ್ಚಿದೆ. ಈಗ ಅವರಿಗೆ ಆಸ್ಕರ್ ಅಕಾಡೆ​ಮಿ ಕಡೆಯಿಂದ ವಿಶೇಷ ಆಹ್ವಾನ ಸಿಕ್ಕಿದೆ. ಅವರು ಇದರ ಸದಸ್ಯತ್ವ ಪಡೆಯಲಿದ್ದಾರೆ. ಸ್ವತಃ ಅಕಾಡೆಮಿ ಕಡೆಯಿಂದ ಆಹ್ವಾನ ಸಿಕ್ಕಿದೆ. ಈ ವೇಳೆ ಹಲವು ಸವಲತ್ತುಗಳನ್ನು ಅವರು ಅನುಭವಿಸಲಿದ್ದಾರೆ.

ಆಸ್ಕರ್​ ಅಕಾಡೆಮಿಯ ಸದಸ್ಯತ್ವ ಪಡೆಯಲು ರಾಜಮೌಳಿಗೆ ಆಹ್ವಾನ; ಸಿಗೋ ಸವಲತ್ತುಗಳೇನು?
ರಾಜಮೌಳಿ
Follow us
ರಾಜೇಶ್ ದುಗ್ಗುಮನೆ
|

Updated on: Jun 26, 2024 | 7:31 AM

ನಿರ್ದೇಶಕ ಎಸ್​ಎಸ್​ ರಾಜಮೌಳಿ ಅವರು ‘ಆರ್​ಆರ್​ಆರ್’ ಚಿತ್ರದಿಂದ (RRR Movie) ವಿಶ್ವಾದ್ಯಂತ ಖ್ಯಾತಿ ಪಡೆದಿದ್ದಾರೆ. ಅವರ ಜನಪ್ರಿಯತೆ ಸಾಕಷ್ಟು ಹೆಚ್ಚಿದೆ. ಅವರು ವಿವಿಧ ರೀತಿಯ ಗೌರವಗಳನ್ನು ಪಡೆದಿದ್ದಾರೆ. ವಿಶೇಷ ಎಂದರೆ ಈ ಬಾರಿ ಅವರಿಗೆ ಆಸ್ಕರ್​ ಅಕಾಡೆಮಿಯಲ್ಲಿ ಸದಸ್ಯತ್ವ ಪಡೆಯೋ ಅವಕಾಶ ಸಿಕ್ಕಿದೆ. ಇದನ್ನು ಅವರು ಖುಷಿಯಿಂದ ಸ್ವೀಕರಿಸಿದ್ದಾರೆ. ಈ ವೇಳೆ ಹಲವು ಸವಲತ್ತುಗಳನ್ನು ಅವರು ಅನುಭವಿಸಲಿದ್ದಾರೆ.

ಸಂಗೀತ ಸಂಯೋಜಕ ಎಆರ್ ರೆಹಮಾನ್ ಸೇರಿದಂತೆ ಅನೇಕರು ಅಕಾಡೆಮಿ ಆಫ್ ಮೋಷನ್ ಪಿಕ್ಚರ್ಸ್​ ಆರ್ಟ್ಸ್ ಆ್ಯಂಡ್ ಸೈನ್ಸ್​ನ (ಆಸ್ಕರ್ ಅಕಾಡೆಮಿ) ಸದಸ್ಯತ್ವ ಹೊಂದಿದ್ದಾರೆ. ಈ ಬಾರಿ ರಾಜಮೌಳಿಗೆ ಆಹ್ವಾನ ಸಿಕ್ಕಿದೆ. ರಾಜಮೌಳಿ ಅವರು ಸದಸ್ಯತ್ವ ಪಡೆಯಲು ಒಪ್ಪಿದ್ದಾರೆ ಎನ್ನಲಾಗಿದೆ. ಇವರ ಜೊತೆ ಶಬಾನಾ ಆಜ್ಮಿ, ಸಿನಿಮಾಟೋಗ್ರಾಫರ್ ರವಿ ವರ್ಮನ್, ನಿರ್ಮಾಪಕ ರಿತೇಶ್ ಸಿಧ್ವಾನಿ ಹಾಗೂ ಡಾಕ್ಯುಮೆಂಟರಿ ಡೈರೆಕ್ಟರ್ ನಿಶಾ ಪಹುಜಾಗೂ ಈ ಬಾರಿ ಆಹ್ವಾನ ಸಿಕ್ಕಿದೆ. ರಾಜಮೌಳಿ ಪತ್ನಿ ಹಾಗೂ ಕಾಸ್ಟ್ಯೂಮ್ ಡಿಸೈನರ್ ರಮಾ ರಾಜಮೌಳಿಗೂ ಸದಸ್ಯತ್ವ ಸಿಕ್ಕಿದೆ ಎನ್ನಲಾಗುತ್ತಿದೆ.

ಈ ಸದಸ್ಯತ್ವ ಸಿಕ್ಕರೆ ಹಲವು ಲಾಭಗಳಾಗಲಿವೆ. ಪ್ರತಿ ವರ್ಷ ಆಸ್ಕರ್​ ಸಿನಿಮಾಗಳಿಗೆ ವೋಟ್ ಮಾಡುವ ಅವಕಾಶ ಇವರಿಗೆ ಸಿಗಲಿದೆ. ಇವರಿಗಾಗಿ ವಿಶೇಷ ಸ್ಕ್ರೀನಿಂಗ್ ಕೂಡ ಇರುತ್ತದೆ. ವರ್ಕ್​ಶಾಪ್, ಸೆಮಿನಾರ್ ಹಾಗೂ ಗ್ರಂಥಾಲಯವನ್ನು ಬಳಕೆ ಮಾಡುವ ಅವಕಾಶ ಇವರಿಗೆ ಸಿಗುತ್ತದೆ. ಎಲ್ಲಕ್ಕಿಂತ ಮುಖ್ಯವಾಗಿ ಪ್ರತಿಷ್ಠಿತ ಸಂಸ್ಥೆಯ ಸದಸ್ಯತ್ವ ಸಿಕ್ಕ ಖುಷಿ ಇವರಿಗೆ ಇರುತ್ತದೆ.

ಇದನ್ನೂ ಓದಿ: ಯಾವಾಗ ಸೆಟ್ಟೇರಲಿದೆ ಮಹೇಶ್ ಬಾಬು-ರಾಜಮೌಳಿ ಸಿನಿಮಾ? ಇಲ್ಲಿದೆ ವಿವರ

ಸತ್ಯಜಿತ್ ರೇ, ಮೀರಾ ನಾಯರ್, ಕರಣ್ ಜೋಹರ್​ ಮೊದಲಾದವರು ಅಕಾಡೆಮಿ ಸೇರಿದ್ದಾರೆ. ‘ಆರ್​ಆರ್​ಆರ್’ ರಿಲೀಸ್ ಆದ ಬಳಿಕ ರಾಮ್ ಚರಣ್, ಜೂನಿಯರ್ ಎನ್​ಟಿಆರ್​, ಎಂಎಂ ಕೀರವಾಣಿ ಮೊಲಾದವರಿಗೆ ಆಹ್ವಾನ ನೀಡಲಾಗಿತ್ತು. ಈಗ ರಾಜಮೌಳಿಗೂ ಆಹ್ವಾನ ಸಿಕ್ಕಿದೆ. ಅವರು ಸದ್ಯ ಮಹೇಶ್ ಬಾಬು ನಿರ್ದೇಶನದ ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಇದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.