AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಎಲ್ಲರಿಗೂ ಹೊಟ್ಟೆ ಉರಿ ಸರ್​’: ದರ್ಶನ್​ ನೋಡಲು ಬಂದ ಅಭಿಮಾನಿಯ ಮಾತು ಕೇಳಿ..

‘ಎಲ್ಲರಿಗೂ ಹೊಟ್ಟೆ ಉರಿ ಸರ್​’: ದರ್ಶನ್​ ನೋಡಲು ಬಂದ ಅಭಿಮಾನಿಯ ಮಾತು ಕೇಳಿ..

ರಾಮು, ಆನೇಕಲ್​
| Edited By: |

Updated on: Jun 25, 2024 | 11:00 PM

Share

ದೂರದ ಶಹಾಪುರದಿಂದ ಬೆಂಗಳೂರಿಗೆ ಬಂದಿರುವ ಅಭಿಮಾನಿಯೊಬ್ಬರು ದರ್ಶನ್​ ಪರ ಮಾತನಾಡಿದ್ದಾರೆ. ‘ನನಗೆ ದರ್ಶನ್​ 50 ಸಾವಿರ ರೂಪಾಯಿ ನೀಡಿದ್ದರು’ ಎಂದು ಅವರು ಹೇಳಿದ್ದಾರೆ. ‘ದರ್ಶನ್​ ಅವರಿಗೆ ಶಿಕ್ಷೆ ಆಗಬಾರದು’ ಎಂದು ಅಭಿಮಾನಿಯು ಹೇಳಿಕೆ ನೀಡಿದ್ದಾರೆ. ಪರಪ್ಪನ ಅಗ್ರಹಾರದ ಬಳಿ ಅನೇಕ ಅಭಿಮಾನಿಗಳು ಬಂದು ಜಮಾಯಿಸುತ್ತಿದ್ದಾರೆ.

ಪರಪ್ಪನ ಅಗ್ರಹಾರದಲ್ಲಿ ಇರುವ ನಟ ದರ್ಶನ್​ ಅವರನ್ನು ನೋಡಬೇಕು ಎಂಬ ಉದ್ದೇಶದಿಂದ ಅನೇಕ ಅಭಿಮಾನಿಗಳು (Darshan Fans) ಬರುತ್ತಿದ್ದಾರೆ. ಎಲ್ಲರೂ ದರ್ಶನ್​ ಪರವಾಗಿ ಮಾತನಾಡುತ್ತಿದ್ದಾರೆ. ತಪ್ಪು ಮಾಡಿದ್ದರೆ ಶಿಕ್ಷೆ ಆಗಲಿ ಎಂಬುವವರು ಒಂದು ಕಡೆಯಾದರೆ, ದರ್ಶನ್​ (Darshan) ತಪ್ಪು ಮಾಡಿದ್ದರೂ ಕೂಡ ಶಿಕ್ಷೆ ಆಗಬಾರದು ಅಂತ ಹೇಳುವ ಅಭಿಮಾನಿಗಳು ಇನ್ನೊಂದು ಕಡೆ ಇದ್ದಾರೆ. ಶಹಾಪುರದಿಂದ ಬಂದಿರುವ ಅಭಿಮಾನಿಯೊಬ್ಬರು ಆ ರೀತಿಯಾಗಿ ಮಾತನಾಡಿದ್ದಾರೆ. ‘ಡಿ ಬಾಸ್​ ಮಾತ್ರವಲ್ಲ. ಎಲ್ಲರೂ ತಪ್ಪು ಮಾಡುತ್ತಾರೆ. ಪದೇ ಪದೇ ಡಿ ಬಾಸ್​ ಹೆಸರು ಹೇಳ್ತಾರೆ. ಯಾಕೆಂದರೆ ಎಲ್ಲರಿಗೂ ಅವರನ್ನು ಕಂಡರೆ ಹೊಟ್ಟೆ ಉರಿ’ ಎಂದಿದ್ದಾರೆ ಶಹಾಪುರದಿಂದ ಬಂದಿರುವ ಈ ಅಭಿಮಾನಿ. ಆ ಸಂದರ್ಭದ ವಿಡಿಯೋ ಇಲ್ಲಿದೆ. ಚಿತ್ರದುರ್ಗದ ರೇಣುಕಾ ಸ್ವಾಮಿ (Renuka Swamy) ಕೊಲೆ ಆರೋಪದಲ್ಲಿ ದರ್ಶನ್​ಗೆ ನ್ಯಾಯಾಂಗ ಬಂಧನ ಆಗಿದೆ. ಪವಿತ್ರಾ ಗೌಡ ಹಾಗೂ ಇನ್ನುಳಿದ ಸಹಚರರ ಮೇಲೂ ಕೊಲೆ ಆರೋಪ ಎದುರಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us
Ramu Ram
Ramu Ram

ರಾಮು, ಟಿವಿ9 ವಾಹಿನಿ ಮುಖ್ಯ ಕಚೇರಿಯ ಬೆಂಗಳೂರಿನಲ್ಲಿ11 ವರ್ಷದಿಂದ ಕೆಲಸ ನಿರ್ವಹಿಸುತ್ತಿದ್ದು,2023 ಜುಲೈ ತಿಂಗಳಿಂದ ಆನೇಕಲ್ ತಾಲೂಕು ವರದಿಗಾರನಾಗಿ ಕಾರ್ಯನಿರ್ವಹಿಸುತ್ತಿದ್ದೇನೆ, ನಾನು ಕ್ರೈಂ ಪೊಲಿಟಿಕಲ್ ಸಿನಿಮಾ ಮತ್ತು ಮೆಟ್ರೋ ಸ್ಟೋರೀಸ್ ಗಳನ್ನು ಕವರೇಜ್ ಮಾಡುತ್ತೇನೆ .

Read More