ಕಬಾಬ್​ಗೆ ಕಲರ್​ ಬಳಸಿದ್ರೆ 7 ವರ್ಷ ಜೈಲು, 10 ಲಕ್ಷ ರೂ.ದಂಡ

ಕಬಾಬ್​ನಲ್ಲಿ ಕಲರ್ ಬ್ಯಾನ್ ಹಿನ್ನಲೆ ನ್ಯಾಚುರಲ್ ಕಲರ್ ಬಳಕೆಗೆ ವ್ಯಾಪಾರಸ್ಥರು ಮುಂದಾಗಿದ್ದಾರೆ. ಇನ್ನೂ ಕೆಲವೆಡೆ ಎಚ್ಚೆತ್ತ ಗ್ರಾಹಕರು ಚಿಕನ್ ಕಬಾಬ್‌ಗಳಲ್ಲಿ ಕಲರ್ ಬಳಕೆ ಮಾಡದೇ ಇರುವ ಅಂಗಡಿಗಳತ್ತ ಮುಖ ಮಾಡುತ್ತಿದ್ದಾರೆ. ಇದೀಗ ಕಲರ್ ಇಲ್ಲದ ಕಬಾಬ್ ಅದೇ ಟೆಸ್ಟ್ ಇದೆ. ಸರ್ಕಾರ ಆರೋಗ್ಯ ದೃಷ್ಟಿಯಿಂದ ಕಲರ್ ಬ್ಯಾನ್ ಮಾಡಿರೋದು ಒಳ್ಳೆಯದು ಎಂದು ಕಬಾಬ್ ಪ್ರೀಯರು ಹೇಳುತ್ತಿದ್ದಾರೆ.

ಕಬಾಬ್​ಗೆ ಕಲರ್​ ಬಳಸಿದ್ರೆ 7 ವರ್ಷ ಜೈಲು, 10 ಲಕ್ಷ ರೂ.ದಂಡ
|

Updated on: Jun 25, 2024 | 9:49 PM

ಬೆಂಗಳೂರು, ಜೂ.25: ಫಿಷ್, ಕಬಾಬ್ ಕಲರ್ ಬ್ಯಾನ್ ವಿಚಾರಕ್ಕೆ ಸಂಬಂಧಿಸಿದಂತೆ ಇನ್ನು ಮುಂದೆ ಕಬಾಬ್​ಗೆ ಕಲರ್​ ಬಳಸಿದ್ರೆ 7 ವರ್ಷ ಜೈಲು ಹಾಗೂ 10 ಲಕ್ಷ ರೂ.ದಂಡ ವಿಧಿಸಲಾಗುತ್ತದೆ. ಇದೀಗ ಕಬಾಬ್​ನಲ್ಲಿ ಕಲರ್ ಬ್ಯಾನ್ ಹಿನ್ನಲೆ ನ್ಯಾಚುರಲ್ ಕಲರ್ ಬಳಕೆಗೆ ವ್ಯಾಪಾರಸ್ಥರು ಮುಂದಾಗಿದ್ದಾರೆ. ಇನ್ನೂ ಕೆಲವೆಡೆ ಎಚ್ಚೆತ್ತ ಗ್ರಾಹಕರು ಚಿಕನ್ ಕಬಾಬ್‌ಗಳಲ್ಲಿ ಕಲರ್ ಬಳಕೆ ಮಾಡದೇ ಇರುವ ಅಂಗಡಿಗಳತ್ತ ಮುಖ ಮಾಡುತ್ತಿದ್ದಾರೆ. ಇದೀಗ ಕಲರ್ ಇಲ್ಲದ ಕಬಾಬ್ ಅದೇ ಟೆಸ್ಟ್ ಇದೆ. ಸರ್ಕಾರ ಆರೋಗ್ಯ ದೃಷ್ಟಿಯಿಂದ ಕಲರ್ ಬ್ಯಾನ್ ಮಾಡಿರೋದು ಒಳ್ಳೆಯದು ಎಂದು ಕಬಾಬ್ ಪ್ರೀಯರು ಹೇಳುತ್ತಿದ್ದಾರೆ.
ಕಬಾಬ್‌ಗೆ ಕಲರ್ ಬ್ಯಾನ್ ತರಹ ಟೆಸ್ಟಿಂಗ್ ಪೌಡರ್ ಸಹ ಬ್ಯಾನ್ ಮಾಡುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ. ಇನ್ನು ಕಾಯಿಗಳನ್ನ ಹಣ್ಣು ಮಾಡಲು ಕೆಮಿಕಲ್ ಬಳಕೆ ಮಾಡಲಾಗುತ್ತಿದೆ. ಜನರ ಆರೋಗ್ಯ ದೃಷ್ಟಿಯಿಂದ ಕಾಯಿಗಳನ್ನ ಹಣ್ಣು ಮಾಡಲು ಬಳಕೆ ಮಾಡುವ ಕೆಮಿಕಲ್ ಬಳಕೆಗೂ ಆಗ್ರಹಿಸಿದ್ದಾರೆ.

ರಾಜ್ಯದ ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow us